Homeಅಂತರಾಷ್ಟ್ರೀಯಇಸ್ರೇಲ್ ವಿರುದ್ಧ ಹಮಾಸ್ ದಾಳಿಗೆ ವಿರೋಧ: ಪ್ಯಾಲೆಸ್ಟೈನ್ ಬೆಂಬಲಿಸಿದ ಭಾರತ ಸರ್ಕಾರ

ಇಸ್ರೇಲ್ ವಿರುದ್ಧ ಹಮಾಸ್ ದಾಳಿಗೆ ವಿರೋಧ: ಪ್ಯಾಲೆಸ್ಟೈನ್ ಬೆಂಬಲಿಸಿದ ಭಾರತ ಸರ್ಕಾರ

- Advertisement -
- Advertisement -

ಮಧ್ಯಪ್ರಾಚ್ಯ ಪರಿಸ್ಥಿತಿಯ ಬಗ್ಗೆ ಒಂದು ಸೂಕ್ಷ್ಮ ಹೇಳಿಕೆಯಲ್ಲಿ, ಇಸ್ರೇಲ್‌ನಲ್ಲಿ ನಾಗರಿಕರನ್ನು ಗುರಿಯಾಗಿಸಲು ಗಾಜಾದಿಂದ ಹಮಾಸ್ ನಡೆಸಿದ “ವಿವೇಚನೆಯಿಲ್ಲದ ರಾಕೆಟ್ ಗುಂಡಿನ ದಾಳಿಯನ್ನು” ಭಾರತ ವಿರೋಧಿಸಿದೆ. ಜೊತೆಗೆ ಪ್ಯಾಲೆಸ್ಟೈನ್ ಎತ್ತುತ್ತ ಬಂದಿರುವ ಹಕ್ಕನ್ನು ಬೆಂಬಲಿಸಿದೆ ಮತ್ತು ಮತ್ತು ಎರಡು ದೇಶಗಳ ಪರಿಹಾರಕ್ಕೆ ಬೆಂಬಲಿಸಿದೆ ಭಾರತ ಸರ್ಕಾರ.

ಭಾರತದ ಪರಂಪರಾಗತ ವಿದೇಶಿ ನೀತಿಯು ದಮನಕ್ಕೆ ಒಳಗಾದ ದೇಶ/ಸಮುದಾಯಗಳನ್ನು ಬೆಂಬಲಿಸುತ್ತ ಬಂದಿದೆ. ಇದರಂತೆಯೇ ಭಾರತ ಪ್ಯಾಲೆಸ್ಟೇನ್ ಹಕ್ಕುಗಳನ್ನು ಬೆಂಬಲಿಸುತ್ತ ಬಂದಿದೆ.

ಈಗಲೂ ಭಾರತ ಸರ್ಕಾರ ಅದನ್ನು ಪುನರುಚ್ಚರಿಸಿದೆ, ಆದರೆ ಅದು ಪರೋಕ್ಷವಾಗಿ ಹೋರಾಟನಿರತ ಹಮಾಸ್ ಸಂಘಟನೆಯನ್ನು ಟೀಕಿಸಿದೆ.

ಇಲ್ಲಿ ಭಾರತ ಸರ್ಕಾರದ ಅಭಿಮಾನಿಗಳು ಮತ್ತು ಸರ್ಕಾರದ ಹಿಂದಿರುವ ಸಂಘಟನೆಗಳು ಇಸ್ರೇಲ್ ಪರ ಹ್ಯಾಷ್‌ಟ್ಯಾಗ್ ಮಾಡುತ್ತಿವೆ. ಆದರೆ ಭಾರತ ಸರ್ಕಾರ ಪ್ಯಾಲೆಸ್ಟೈನ್ ಪರ ನಿಂತಿದೆ.

ಇಸ್ರೇಲಿ ಆಡಳಿತ ತಮ್ಮ ಪರ ಹ್ಯಾಷ್‌ಟ್ಯಾಗ್ ಅಭಿಯಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳುತ್ತದೆ. ಇಸ್ರೇಲ್ ಪ್ರಧಾನಿ ತಮ್ಮನ್ನು ಬೆಂಬಲಿಸಿದ ರಾಷ್ಟ್ರಗಳ ಧ್ವಜಗಳ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಭಾರತದ ಧ್ವಜ ಇಲ್ಲ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಿನ ಚರ್ಚೆಗಳು ನಡೆಯುತ್ತಿವೆ.


ಇದನ್ನೂ ಓದಿ: ಪ್ಯಾಲೆಸ್ಟೈನ್ v/s ಇಸ್ರೇಲ್ ಸಂಘರ್ಷ: ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆ ಹೀಗಿದೆ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ...

0
'ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...