Homeಅಂತರಾಷ್ಟ್ರೀಯಅಮೆರಿಕಾ ಚುನಾವಣೆ: ಟ್ರಂಪ್ ಕುರಿತು ಬರ್ನಿ ಸ್ಯಾಂಡರ್ಸ್ ನುಡಿದಿದ್ದ ಭವಿಷ್ಯ ಸತ್ಯವಾದಾಗ!

ಅಮೆರಿಕಾ ಚುನಾವಣೆ: ಟ್ರಂಪ್ ಕುರಿತು ಬರ್ನಿ ಸ್ಯಾಂಡರ್ಸ್ ನುಡಿದಿದ್ದ ಭವಿಷ್ಯ ಸತ್ಯವಾದಾಗ!

ಡೆಮಾಕ್ರಟಿಕ್ ಪಕ್ಷದ ಹಿರಿಯ ಸೆನೆಟರ್ ಬರ್ನಿ ಸ್ಯಾಂಡರ್ಸ್ ವಿಡಿಯೋ ಇದೀಗ ವೈರಲ್ ಆಗಿದ್ದು, ಅವರು ಹೇಳಿದಂತೆಯೇ ಈಗ ಟ್ರಂಪ್ ಪ್ರತಿಕ್ರಿಯಿಸುತ್ತಿದ್ದಾರೆ.

- Advertisement -
- Advertisement -

ಈ ಬಾರಿಯ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಹೇಗೆ ನಡೆಯುತ್ತದೆ ಮತ್ತು ಅದಕ್ಕೆ ಡೊನಾಲ್ಡ್ ಟ್ರಂಪ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಬಗ್ಗೆ ಸುಮಾರು ಎರಡು ವಾರಗಳ ಹಿಂದೆ ಡೆಮಾಕ್ರಟಿಕ್ ಪಕ್ಷದ ಹಿರಿಯ ಸೆನೆಟರ್ ಬರ್ನಿ ಸ್ಯಾಂಡರ್ಸ್ ಹೇಳಿದ ಮಾತುಗಳಂತೆ ಪ್ರಸ್ತುತ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸುತ್ತಿದ್ದು, ಅವರ ವಿಡಿಯೋ ಇದೀಗ ವೈರಲ್ ಆಗಿದೆ.

ಕಳೆದ ತಿಂಗಳು ’ದಿ ಟುನೈಟ್ ಶೋ’ನಲ್ಲಿ ಕಾಣಿಸಿಕೊಂಡ 79 ವರ್ಷದ ಬರ್ನಿ ಸ್ಯಾಂಡರ್ಸ್ “ಈ ಚುನಾವಣೆಯಲ್ಲಿ ಮೇಲ್-ಇನ್ ಮತಪತ್ರಗಳ ಪ್ರವಾಹ ಉಂಟಾಗಲಿದ್ದು, ಈ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವಾಗ ವಿಳಂಬವಾಗಬಹುದು” ಎಂದು ಅವರು ಊಹಿಸಿದ್ದರು.

ಇದನ್ನೂ ಓದಿ: ಅಮೆರಿಕಾ ಚುನಾವಣೆ: ಟ್ರಂಪ್ ಪಾರುಪತ್ಯದ ರಾಜ್ಯಗಳಲ್ಲಿ ಜೋ ಬೈಡೆನ್ ಗೆಲುವು!

“ಫ್ಲೋರಿಡಾ ಅಥವಾ ವರ್ಮೊಂಟ್‌ನಂತಹ ರಾಜ್ಯಗಳಿಗೆ ಭಿನ್ನವಾಗಿ ಪೆನ್ಸಿಲ್ವೇನಿಯಾ, ಮಿಷಿಗನ್, ವಿಸ್ಕಾನ್ಸಿನ್ ಇತರ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಮೇಲ್-ಇನ್ ಮತಪತ್ರಗಳನ್ನು ಚಲಾವಣೆಯಾಗುತ್ತದೆ” ಎಂದು ಅವರು ಹೇಳಿದ್ದರು.

ಡೆಮೋಕ್ರಾಟ್‌ಗಳು ಮೇಲ್-ಇನ್ ಮತಪತ್ರಗಳನ್ನು ಬಳಸುವ ಸಾಧ್ಯತೆ ಹೆಚ್ಚಿದ್ದು, ಚುನಾವಣಾ ದಿನದಂದು ರಿಪಬ್ಲಿಕನ್ನರು ಮತದಾನ ಕೇಂದ್ರಗಳಿಗೆ ಕಾಲಿಡುವ ಸಾಧ್ಯತೆ ಹೆಚ್ಚು ಎಂದು ಅವರು ಹೇಳಿದ್ದಾರೆ.

“ಚುನಾವಣಾ ಮತ ಎಣಿಕೆಯ ರಾತ್ರಿ 10 ಗಂಟೆಗೆ ಟ್ರಂಪ್ ಮಿಷಿಗನ್, ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್‌ನಲ್ಲಿ ಗೆಲ್ಲುತ್ತಿದ್ದಂತೆ, ’ನನ್ನನ್ನು ಮರು ಆಯ್ಕೆ ಮಾಡಿದ ಅಮೆರಿಕನ್ನರಿಗೆ ಧನ್ಯವಾದಗಳು, ಎಣಿಕೆ ಮುಗಿಯಿತು ಶುಭದಿನ’ ಎಂದು ಹೇಳುತ್ತಾರೆ” ಎಂದು ಬರ್ನಿ ಸ್ಯಾಂಡರ್ಸ್ ಭವಿಷ್ಯ ನುಡಿದಿದ್ದರು.

ಇದನ್ನೂ ಓದಿ:: ಸ್ನೇಹಿತರೊಂದಿಗೆ ಮಾತನಾಡುವ ವಿಧಾನವಲ್ಲ: ಭಾರತವನ್ನು ಹೊಲಸು ಎಂದಿದ್ದ ಟ್ರಂಪ್ ಮೇಲೆ ಜೋ ಬಿಡೆನ್ ವಾಗ್ದಾಳಿ

ಮುಂದುವರೆದು ಮಾತನಾಡಿರುವ ಬರ್ನಿ ಸ್ಯಾಂಡರ್ಸ್, “ಆದರೆ, ಮರುದಿನ ಎಲ್ಲಾ ಮೇಲ್-ಇನ್ ಮತಪತ್ರಗಳ ಎಣಿಕೆ ಪ್ರಾರಂಭವಾಗಿ ಬಿಡೆನ್ ಆ ರಾಜ್ಯಗಳನ್ನು ಗೆದ್ದಿದ್ದಾರೆ ಎಂದು ತಿಳಿಯುತ್ತಿದ್ದಂತೆ ಟ್ರಂಪ್ ಹೇಳುತ್ತಾರೆ, ‘ನೋಡಿ? ನಾನು ಹೇಳಿದ್ದೇನೆ ಇಡೀ ಪ್ರಕ್ರಿಯೆ ಮೋಸದಿಂದ ಕೂಡಿದೆ. ಮೇಲ್-ಇನ್ ಮತಪತ್ರಗಳು ತಿರುಚಲಾಗಿದೆ’ ಎಂದು ಹೇಳುತ್ತಾರೆ” ಎಂದು ಹೇಳಿದ್ದರು.

ಬರ್ನಿ ಸ್ಯಾಂಡರ್ಸ್ ಹೇಳಿದಂತೆ ನಿನ್ನೆ ನಡೆದಿದ್ದು ಮೊದಲಿಗೆ ಟ್ರಂಪ್ ತಾನು ಗೆದ್ದಿರುವುದಾಗಿ ಹೇಳಿಕೊಂಡಿದ್ದರು, ನಂತರ ಫಲಿತಾಂಶ ಜೋ ಬಿಡೆನ್ ಪರವಾಗಿ ಬದಲಾಗುತ್ತಿದ್ದಂತೆ ಪತ್ರಿಕಾಗೋಷ್ಠಿ ನಡೆಸಿದ ಟ್ರಂಪ್ “ನಾವು ಹಲವು ರಾಜ್ಯಗಳಲ್ಲಿ ಗೆದ್ದಿದ್ದೇವೆ ಮತ್ತು ಅದನ್ನು ಘೋಷಿಸಲು ಹೊರಟಿದ್ದೇವೆ. ಆದರೆ ನಂತರ ಇದ್ದಕ್ಕಿದ್ದಂತೆ ವಂಚನೆ ಸಂಭವಿಸಿದೆ. ಅಮೆರಿಕಾದ ಜನರಿಗೆ ಮೋಸ ಮಾಡಲು ನಾವು ಬಿಡುವುದಿಲ್ಲ, ನಾವು ಸುಪ್ರೀಂ ಕೋರ್ಟ್‌ಗೆ ಹೋಗಲಿದ್ದೇವೆ. ಎಲ್ಲ ಮತ ಎಣಿಕೆ ನಿಲ್ಲಿಸಬೇಕೆಂದು ನಾವು ಬಯಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮತದಾನದಲ್ಲಿ ವಂಚನೆ, ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇವೆ: ಡೊನಾಲ್ಡ್ ಟ್ರಂಪ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...