Homeಅಂತರಾಷ್ಟ್ರೀಯಸ್ನೇಹಿತರೊಂದಿಗೆ ಮಾತನಾಡುವ ವಿಧಾನವಲ್ಲ: ಭಾರತವನ್ನು ಹೊಲಸು ಎಂದಿದ್ದ ಟ್ರಂಪ್ ಮೇಲೆ ಜೋ ಬಿಡೆನ್ ವಾಗ್ದಾಳಿ

ಸ್ನೇಹಿತರೊಂದಿಗೆ ಮಾತನಾಡುವ ವಿಧಾನವಲ್ಲ: ಭಾರತವನ್ನು ಹೊಲಸು ಎಂದಿದ್ದ ಟ್ರಂಪ್ ಮೇಲೆ ಜೋ ಬಿಡೆನ್ ವಾಗ್ದಾಳಿ

ಇದು ಸ್ನೇಹಿತರೊಂದಿಗೆ ಮಾತನಾಡುವ ವಿಧಾನವಲ್ಲ ಮತ್ತು ಈ ರೀತಿಯಾಗಿ ಹವಾಮಾನ ಬದಲಾವಣೆಯಂತಹ ಜಾಗತಿಕ ಸವಾಲುಗಳನ್ನು ಪರಿಹರಿಸಲು ಸಾಧ್ಯವಿಲ್ಲ..

- Advertisement -
- Advertisement -

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮೇಲೆ ಡೆಮಾಕ್ರೆಟಿಕ್ ಪಾರ್ಟಿಯ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್  ವಾಗ್ದಾಳಿ ನಡೆಸಿದ್ದಾರೆ. ಕಳೆದ ಅಧ್ಯಕ್ಷೀಯ ಚರ್ಚೆಯಲ್ಲಿ ಉಭಯ ನಾಯಕರ ಎರಡನೇ ಸುತ್ತಿನ ಸಂವಾದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತವನ್ನು “ಹೊಲಸು” ಎಂದು ಕರೆದಿದ್ದುದ್ದಕ್ಕೆ ಪ್ರಜಾಪ್ರಭುತ್ವವಾದಿ ಜೋ ಬಿಡನ್ ಟೀಕಿಸಿದ್ದಾರೆ.

ಅಧ್ಯಕ್ಷೀಯ ಸಂವಾದದ ಮಧ್ಯೆ ಅಮೆರಿಕಾ ಅಧ್ಯಕ್ಷ ಟೊನಾಲ್ಡ್‌ ಟ್ರಂಪ್, “ಭಾರತದ ಕಡೆ ನೋಡಿ, ಅದು ತುಂಬಾ ಹೊಲಸಾಗಿದೆ” ಎಂದು ಹೇಳಿದ್ದರು. ಈ ಮೂಲಕ ಟ್ರಂಪ್ ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದ್ದರು. ಈಗ ಪ್ರತಿಸ್ಫರ್ಧಿ ಜೋ ಬಿಡೆನ್ ಕೂಡ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ’ಮೈ ಫ್ರೆಂಡ್ ಭಾರತವನ್ನಷ್ಟೇ ಹೊಲಸು ಎಂದರು; ನನ್ನನ್ನು ಇನ್ನೂ ಪ್ರೀತಿಸುತ್ತಿದ್ದಾರೆ’

ಈ ಕುರಿತು ಟ್ವೀಟ್ ಮಾಡಿರುವ ಜೋ ಬಿಡೆನ್ “ಅಧ್ಯಕ್ಷ ಟ್ರಂಪ್ ಭಾರತವನ್ನು ‘ಹೊಲಸು’ ಎಂದಿದ್ದಾರೆ. ಇದು ಸ್ನೇಹಿತರೊಂದಿಗೆ ಮಾತನಾಡುವ ವಿಧಾನವಲ್ಲ ಮತ್ತು ಈ ರೀತಿಯಾಗಿ ಹವಾಮಾನ ಬದಲಾವಣೆಯಂತಹ ಜಾಗತಿಕ ಸವಾಲುಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಕಮಲ ಹ್ಯಾರಿಸ್ ಮತ್ತು ನಾನು ನಮ್ಮ ಸಹಭಾಗಿತ್ವವನ್ನು ಗೌರವಿಸುತ್ತೇವೆ ಮತ್ತು ವಿದೇಶಾಂಗ ನೀತಿಯ ಗೌರವವನ್ನು ಮತ್ತೆ ಮುನ್ನೆಲೆಗೆ ತರುತ್ತೇವೆ” ಎಂದು ಹೇಳಿದ್ದಾರೆ.

ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರಿಂದ, “ಚೀನಾ, ರಷ್ಯಾ, ಭಾರತವನ್ನು ನೋಡಿ. ಆ ದೇಶಗಳು ಎಷ್ಟು ಹೊಲಸಾಗಿವೆ. ಭಾರತದಲ್ಲಂತೂ ವಾಯು ಮಾಲಿನ್ಯ ಮಿತಿಮೀರಿದೆ. ವಾತಾವರಣದಲ್ಲಿನ ಬದಲಾವಣೆ ಅಧಿಕವಾಗುತ್ತಿದೆ. ಅದೊಂದು ಹೊಲಸಿನಿಂದ ತುಂಬಿರುವ ದೇಶ. ಇದೇ ಕಾರಣಕ್ಕೆ ನಾನು ಪ್ಯಾರಿಸ್ ಒಪ್ಪಂದದಿಂದ ಹೊರ ನಡೆದಿದ್ದೆ ಎಂದು ಟ್ರಂಪ್ ಹೇಳಿದ್ದರು.

ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಭಾರತದಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಅವರ ಹೇಳಿಕೆಗೆ ಖಂಡನೆ ವ್ಯಕ್ತಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಲಾಗಿತ್ತು. ಆದರೆ ಪ್ರಧಾನಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಇದನ್ನೂ ಓದಿ: ಸೋಶಿಯಲಿಸಂ-ಕಮ್ಯುನಿಸಂ ವಿರುದ್ಧದ ಹೋರಾಟದಲ್ಲಿ ಭಾರತ-ಅಮೇರಿಕಾ ಒಂದಾಗಬೇಕು: Jr. ಟ್ರಂಪ್

ಜೋ ಬಿಡೆನ್ ಭಾರತೀಯ ಅಮೆರಿಕನ್ ಸಮುದಾಯದೊಂದಿಗಿನ ತಮ್ಮ ಸಂಪರ್ಕವನ್ನು ತಮ್ಮ ಬ್ಲಾಗ್‌ನಲ್ಲಿ ವಿವರಿಸಿದ್ದಾರೆ. ಜೊತೆಗೆ ಈಗಿನ ವಿನಾಶಕಾರಿ ಮತ್ತು ಕರಾಳ ಚುನಾವಣೆಯ ನೆರಳಿನಲ್ಲಿ, ನಾವು ದೀಪಗಳ ಹಬ್ಬ ಮತ್ತು ಹೊಸ ಆರಂಭಕ್ಕಾಗಿ ಒಟ್ಟುಗೂಡಿದ್ದೇವೆ “ಎಂದು ಹೇಳಿದ್ದಾರೆ.

“ನಾಲ್ಕು ವರ್ಷಗಳ ಹಿಂದೆ ನವೆಂಬರ್‌ನಲ್ಲಿ, ಉಪಾಧ್ಯಕ್ಷರ ನಿವಾಸದಲ್ಲಿ ನಾನು ಆಯೋಜಿಸಿದ್ದ ಕೊನೆಯ ಕಾರ್ಯಕ್ರಮವೆಂದರೆ ದೀಪಾವಳಿ ಸ್ವಾಗತ. ಇಲ್ಲಿನ ಐರಿಶ್ ಕ್ಯಾಥೊಲಿಕ್ ಉಪಾಧ್ಯಕ್ಷರು ಹಿಂದೂಗಳು, ಬೌದ್ಧರು, ಸಿಖ್ಖರು ಮತ್ತು ಜೈನರು ಸಾಂಪ್ರದಾಯಿಕವಾಗಿ ಆಚರಿಸುವ ರಜಾದಿನಕ್ಕಾಗಿ ನನ್ನ ಮನೆಯನ್ನು ಮುಕ್ತವಾಗಿಸುತ್ತಿದ್ದರು. ಆ ರಾತ್ರಿ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಭಾರತೀಯ ಅಮೆರಿಕನ್ನರು ತಮ್ಮ ​​ವೈವಿಧ್ಯತೆಯನ್ನು ಪ್ರತಿನಿಧಿಸುತ್ತಿದ್ದರು” ಎಂದು ನೆನಪಿಸಿಕೊಂಡಿದ್ದಾರೆ.

ಅಮೆರಿಕ-ಇಂಡಿಯಾ ಸಂಬಂಧಗಳಿಗೆ “ಒಬಾಮಾ-ಬಿಡೆನ್ ಆಡಳಿತದ ಕೆಲವು ವರ್ಷಗಳು ಅತ್ಯುತ್ತಮವಾದವು” ಎಂದು ಹಂಚಿಕೊಂಡಿದ್ದಾರೆ. “ಬಿಡೆನ್-ಹ್ಯಾರಿಸ್ ಆಡಳಿತವು ಆ ಮಹತ್ತರವಾದ ಪ್ರಗತಿಯನ್ನು ನಿರ್ಮಿಸುತ್ತದೆ” ಎಂದಿದ್ದಾರೆ.

ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಾರ್ಟಿ ಗೆದ್ದರೆ ಭಾರತೀಯ-ಅಮೆರಿಕನ್ ಕಮಲಾ ಹ್ಯಾರಿಸ್ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷರಾಗಲಿದ್ದಾರೆ.  ಅಮೆರಿಕದಲ್ಲಿ ನವೆಂಬರ್ 3 ರಂದು ಚುನಾವಣೆ ನಡೆಯಲಿದೆ.


ಇದನ್ನೂ ಓದಿ: ನಾನು ಚುನಾವಣೆಯಲ್ಲಿ ಸೋತರೆ ದೇಶ ಬಿಡಬಹುದು: ಡೊನಾಲ್ಡ್ ಟ್ರಂಪ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ

0
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಕಾರಣವಿಲ್ಲದೆ ತನ್ನ ನಾಮಪತ್ರ...