ಹೊಸ ವರ್ಷದ ಮೊದಲ ದಿನದಂದು ಬಾಹ್ಯಾಕಾಶದ ಅತ್ಯಂತ ನಿಗೂಢ ರಹಸ್ಯಗಳಲ್ಲಿ ಒಂದಾದ ಕಪ್ಪು ಕುಳಿಗಳ ಕುತೂಹಲವನ್ನು ಬಯಲಿಗೆಳೆಯಲು ಭಾರತ ಮುಂದಾಗಿದೆ.
ಇಂದು (ಜ.1) ಬೆಳಿಗ್ಗೆ 9.10 ಗಂಟೆಗೆ ಸರಿಯಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಕ್ಸ್‌ಪೋಸ್ಯಾಟ್ ಅಥವಾ ಎಕ್ಸ್-ರೇ ಪೋಲರಿ ಮೀಟರ್ ಉಪಗ್ರಹವನ್ನು ಉಡಾವಣೆ ಮಾಡಿದೆ.
ISRO begins New Year with another success, XPoSat precisely placed into intended orbit
Read @ANI Story | https://t.co/wb5B0rYvmy#ISRO #XPoSat #Space #Sriharikota pic.twitter.com/TCDUHciUoi
— ANI Digital (@ani_digital) January 1, 2024
ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಎಕ್ಸ್‌ಪೋಸ್ಯಾಟ್ ಸೇರಿದಂತೆ ವಿದ್ಯಾ ಸಂಸ್ಥೆಗಳು ಮತ್ತು ಸ್ಟಾರ್ಟ್ ಅಪ್‌ಗಳಿಗೆ ಸಂಬಂಧಿಸಿದ ಇನ್ನೂ 10 ಉಪಗ್ರಹಗಳನ್ನು ಹೊತ್ತು ನಭಕ್ಕೆ ಚಿಮ್ಮಿದೆ.
ಎಕ್ಸ್‌ಪೋಸ್ಯಾಟ್ ಮೂಲಕ ಇಸ್ರೋದ ಪಿಎಸ್‌ಎಲ್‌ವಿ 60ನೇ ಉಪಗ್ರಹವನ್ನು ಹೊತ್ತು ಆಕಾಶಕ್ಕೆ ಹಾರಿದೆ. ಒಟ್ಟು 260 ಟನ್ ಭಾರದ ರಾಕೆಟ್ ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳನ್ನು ಅಧ್ಯಯನ ಮಾಡಲು ಸುಧಾರಿತ ಖಗೋಳ ವೀಕ್ಷಣಾಲಯವನ್ನು ಹೊಂದಿದೆ. ಇದರೊಂದಿಗೆ, ಯುಎಸ್ ಬಳಿಕ ಭಾರತ ಕಪ್ಪು ಕುಳಿಗಳನ್ನು ಅಧ್ಯಯನ ಮಾಡಲು ‘ವೀಕ್ಷಣಾಲಯ’ ಹೊಂದಿರುವ ರಾಕೆಟ್ ಉಡಾವಣೆ ಮಾಡಿದ ಎರಡನೇ ರಾಷ್ಟ್ರವೆನಿಸಿಕೊಂಡಿದೆ.
ಎಕ್ಸ್-ರೇ ಫೋಟಾನ್‌ಗಳು ಮತ್ತು ಅವುಗಳ ಧ್ರುವೀಕರಣವನ್ನು ಬಳಸಿಕೊಂಡು ಎಕ್ಸ್‌ಪೋಸ್ಯಾಟ್ ಕಪ್ಪು ರಂಧ್ರಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳ ವಿಕಿರಣವನ್ನು ಅಧ್ಯಯನ ಮಾಡಲು ಸಹಾಯ ಮಾಡಲಿದೆ. ಇದು ಪಾಲಿಕ್ಸ್ (ಎಕ್ಸ್-ರೇಗಳಲ್ಲಿ ಪೋಲರಿ ಮೀಟರ್ ಉಪಕರಣ) ಮತ್ತು ಎಕ್ಸ್‌ಸೆಪ್ಟ್ (ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್) ಎಂಬ ಎರಡು ಪೆಲೋಡ್‌ಗಳನ್ನು ಹೊತ್ತೊಯ್ದಿದೆ.
ಚಂದ್ರಯಾನ-3 ಮತ್ತು ಆದಿತ್ಯ ಎಲ್1 ಮಿಷನ್ ನಂತರ, ಎಕ್ಸ್‌ಪೋಸ್ಯಾಟ್ ಇಸ್ರೋ ಉಡಾಯಿಸಿದ ಅತ್ಯಂತ ಮಹತ್ವದ ಉಪಗ್ರಹವಾಗಿದೆ.
ಜುಲೈ 14, 2023ರಂದು ಮಹತ್ವದ ಚಂದ್ರಯಾನ 3 ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಿತ್ತು. ಇದು ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗರಿಮೆ ಮೂಡಿಸಿತ್ತು. ಬಳಿಕ ಸೂರ್ಯನ ಅಧ್ಯಯನ ದೃಷ್ಠಿಯಿಂದ 2 ಸೆಪ್ಟೆಂಬರ್ 2023ರಂದು ಇಸ್ರೋ ಆದಿತ್ಯ ಎಲ್-1 ಮಿಷನ್ ಉಪಗ್ರಹ ಉಡಾವಣೆ ಮಾಡಿತ್ತು.
10 ಉಪಗ್ರಹಗಳ ಯಶಸ್ವಿ ಉಡಾವಣೆ :
ಸ್ಟಾರ್ಟ್‌ಅಪ್ಸ್, ಶೈಕ್ಷಣಿಕ ಸಂಸ್ಥೆಗಳು ಮತ್ತು ಇಸ್ರೋ ಕೇಂದ್ರಗಳು ಅಭಿವೃದ್ಧಿಪಡಿಸಿರುವ ಇತರ 10 ಉಪಗ್ರಹಗಳನ್ನೂ ಪಿಎಸ್‌ಎಲ್‌ವಿ ಹೊತ್ತೊಯ್ದಿದೆ. ಟೇಕ್‌ಮೀ2ಸ್ಪೇಸ್‌ನ ರೇಡಿಯೇಶನ್ ಶೀಲ್ಡಿಂಗ್ ಎಕ್ಸ್‌ಪೆರಿಮೆಂಟಲ್ ಮಾಡ್ಯೂಲ್ (RSEM),ಮಹಿಳೆಯರಿಗಾಗಿ ಎಲ್‌ಬಿಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ತಯಾರಿಸಲಾಗಿರುವ ವುಮೆನ್ ಇಂಜಿನಿಯರ್ಡ್ ಸ್ಯಾಟಲೈಟ್ (ವೆಸ್ಯಾಟ್), ಕೆ.ಜೆ.ಸೋಮಯ್ಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅವರ ಬಿಲೀಫ್‌ಸಾ-ಟಿ0 ಹವ್ಯಾಸಿ ರೇಡಿಯೋ ಉಪಗ್ರಹ, ಇನ್ಸ್‌ಪೆಕ್ಟಿಟಿ ಸ್ಪೇಸ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್‌ನ ಗ್ರೀನ್ ಇಂಪಲ್ಸ್ ಟ್ರಾನ್ಸ್ಮಿಟರ್ (GITA),ಧ್ರುವಾ ಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನಿಂದ ಲಾಂಚಿಂಗ್ ಎಸ್ಪಿಎಡಿಷನ್ಸ್ ಫಾರ್ ಅಸ್ಪಿರಿನ್ಗ್ ಟೆಕ್ನಾಲಜೀಸ್ -ಟೆಕ್ನಾಲಜಿ ಡೆಮೋನ್ಸ್ಟ್ರಾಟೋರ್ (LEAP-TD),ಬೆಲಟ್ರಿಕ್ಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನಿಂದ ರುದ್ರ 0.3 ಮತ್ತು ಅರ್ಕಾ-200, ಪಿಆರ್‌ಎಲ್‍ನಿಂದ ಡಸ್ಟ್ ಎಕ್ಸ್‌ಪರಿಮೆಂಟ್ (DEX),ವಿಎಸ್‌ಎಸ್‌ಸಿ ಮ್ತತು ಇಸ್ರೋದಿಂದ ಇಸ್ರೋ ಫುಯೆಲ್ ಸೆಲ್ ಪವರ್ ಸಿಸ್ಟಮ್ (ಎಫ್‌ಸಿಪಿಎಸ್) ಹಾಗೂ ಹೈ ಎನರ್ಜಿ ಸೆಬ್ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಹೊತ್ತೊಯ್ದಿದೆ.
ಏನಿದು ಎಕ್ಸ್‌ಪೋಸ್ಯಾಟ್ :
ಎಕ್ಸ್‌ಪೋಸ್ಯಾಟ್ ಮಿಷನ್ ಅನ್ನು ತೀವ್ರವಾದ ಎಕ್ಸ್-ರೇ ಮೂಲಗಳ ಧ್ರುವೀಕರಣವನ್ನು ತನಿಖೆ ಮಾಡಲು ವಿನ್ಯಾಸಗೊಳಿಸಲಾಗಿದ್ದು, 2021ರಲ್ಲಿ ಬಿಡುಗಡೆಯಾದ ನಾಸಾದ ಇಮೇಜಿಂಗ್ ಎಕ್ಸ್-ರೇ ಪೊಲರಿಮೆಟ್ರಿ ಎಕ್ಸ್‌ಪ್ಲೋರರ್ (IXPE) ನಂತರ ಈ ಮಿಷನ್ ಭಾರತದ ಮೊದಲ ಮೀಸಲಾದ ಪೋಲರಿಮೀಟರ್ ಮಿಷನ್ ಮಾತ್ರವಲ್ಲದೆ ವಿಶ್ವದ ಎರಡನೆಯ ಉಪಗ್ರಹವಾಗಿದೆ.
ಇದನ್ನೂ ಓದಿ : ‘ಸಬ್‌ಮರ್ಸಿಬಲ್ ವಾಹನ ಯೋಜನೆ’ ಗುಜರಾತಿಗೆ ಸ್ಥಳಾಂತರ; ಉದ್ಧವ್ ಬಣದ ಆರೋಪ ತಳ್ಳಿಹಾಕಿದ ಶಿಂಧೆ


