ಸಾಂಕ್ರಾಮಿಕ ಸಮಯದಲ್ಲಿ ಚೀನಾ ನಮ್ಮ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ ಎಂಬುದು ಸ್ಪಷ್ಟ. ಅದು ಈಗಲೂ ವಿಸ್ತರಣೆಯಲ್ಲಿ ತೊಡಗಿದೆ. ಚೀನಾದ ವಿಸ್ತರಣೆಗೆ ಭಾರತದ ಪ್ರತಿಕ್ರಿಯೆಯು ಅದನ್ನು ತಬ್ಬಿಬ್ಬುಗೊಳಿಸಿದೆ. ಚೀನಾದಾ ವಿಸ್ತರಣಾವಾದಿ ನೀತಿಯನ್ನು ಇಡೀ ಪ್ರಪಂಚವೇ ನೋಡಿದೆ. ಈಗ ಅದು ತೈವಾನ್ ಮತ್ತು ವಿಯೆಟ್ನಾಂ ಮೇಲೆ ದಾಳಿ ಮಾಡುತ್ತಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಈಗಲೂ ಚೀನಾ ದೇಶವು ತನ್ನ ವಿಸ್ತರಣೆಯನ್ನು ಮುಂದುವರೆಸುತ್ತಿದೆ. ಹಲವು ದೇಶಗಳು ಅದರ ಪರ ಇವೆ. ಇಂತಹ ಸಂದರ್ಭದಲ್ಲಿ ಭಾರತವು ಶಕ್ತಿ ಮತ್ತು ವ್ಯಾಪ್ತಿಯಲ್ಲಿ ಚೀನಾವನ್ನು ಮೀರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
Rising above China economically & strategically. Securing cooperative ties with our neighbours and at international relations is the only way to neutralise the expansionsit aspirations of China and our present policies seem to be charting those very horizons. #RSSVijayaDashami pic.twitter.com/YYntRzwokj
— RSS (@RSSorg) October 25, 2020
ವಿಜಯದಶಮಿ ಪ್ರಯುಕ್ತ ದಸರಾ ಭಾಷಣದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ವಿಧಿ 370ನ್ನು ರದ್ದುಗೊಳಿಸಲಾಯಿತು. ನಂತರ ರಾಮಮಂದಿರದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ಬಂದಿತ್ತು. ಸಿಎಎ ಕಾನೂನು ಜಾರಿಗೊಳಿಸಲಾಗಿತ್ತು. ಹಲವು ಅಭಿವೃದ್ದಿಗಳನ್ನು ಸಾಧಿಸಿದ್ದೇವು. ಆದರೆ ಕೊರೊನಾ ಸಾಂಕ್ರಾಮಿಕ ಅವೆಲ್ಲವನ್ನು ಅಳಿಸಿಹಾಕಿಬಿಟ್ಟಿತು ಎಂದರು.
ನಾವು ಎಲ್ಲರೊಂದಿಗೆ ಸ್ನೇಹದಿಂದ ಇದ್ದೇವೆ. ಇದು ನಮ್ಮ ಸ್ವಭಾವ. ಈ ನಮ್ಮ ನಡೆಯನ್ನು ದೌರ್ಬಲ್ಯ ಎಂದು ಭಾವಿಸಿ ಚೀನಾ ನಮ್ಮ ಮೇಲೆ ದಾಳಿ ಮಾಡುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಹಾಗಾಗಿ ನಾವು ಶಕ್ತಿ ಮತ್ತು ವ್ಯಾಪ್ತಿಯಲ್ಲಿ ಚೀನಾವನ್ನು ಮೀರಿಸಿ ಬೆಳೆಯಬೇಕಾಗಿದೆ. ನೆರೆ ಹೊರೆಯ ದೇಶಗಳೊಂದಿಗೆ ಸ್ನೇಹ ಸಂಪಾದಿಸಬೇಕಾಗಿದೆ ಎಂದು ಹೇಳಿದ್ದಾರೆ.
ಸಿಎಎ ಯಾವುದೇ ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ವಿರೋಧಿಸುವುದಿಲ್ಲ. ಆದರೆ ಕೆಲವರು ಇದು ಮುಸ್ಲಿಂ ಸಮುದಾಯದ ವಿರುದ್ಧವಿದೆ ಎಂಬ ಸುಳ್ಳು ಕಲ್ಪನೆಯನ್ನು ಪ್ರಚಾರ ಮಾಡುವ ಮೂಲಕ ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸಿದರು. ಸಿಎಎ ಬಳಸಿ, ಅವಕಾಶವಾದಿಗಳು ಪ್ರತಿಭಟನೆಯ ಹೆಸರಿನಲ್ಲಿ ಸಂಘಟಿತ ಹಿಂಸಾಚಾರವನ್ನು ಬಿಚ್ಚಿಟ್ಟರು. ಸಿಎಎ ವಿರೋಧಿ ಪ್ರತಿಭಟನೆಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ಇನ್ನೂ ಮುಂದುವರೆದಿದೆ ಎಂದಿದ್ದಾರೆ.
ಭಾಗವತ್ ಹೇಳಿಕೆ ಬೆನ್ನಲ್ಲೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಜೆಪಿ, ಆರ್‌ಎಸ್‌ಎಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. “ಬಹಳ ಆಳವಾಗಿ ಮೋಹನ್ ಭಾಗವತ್ ಸತ್ಯವನ್ನು ಅರ್ಥ ಮಾಡಿಕೊಂಡಿದ್ದಾರೆ. ಆದರೆ ಅವರಿಗೆ ಅದನ್ನು ಎದುರಿಸಲು ಭಯವಾಗುತ್ತಿದೆ. ಸತ್ಯವೆಂದರೆ ಚೀನಾ ನಮ್ಮ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಮತ್ತು ಮೋದಿ ಹಾಗೂ ಆರ್‌ಎಸ್‌ಎಸ್ ಅದಕ್ಕೆ ಅವಕಾಶ ನೀಡಿವೆ” ಎಂದು ಟ್ವೀಟ್ ಮಾಡಿದ್ದಾರೆ.
Deep inside, Mr Bhagwat knows the truth. He is just scared to face it.
The truth is China has taken our land and GOI & RSS have allowed it. pic.twitter.com/20GRNDfEvD
— Rahul Gandhi (@RahulGandhi) October 25, 2020
ಚೀನಾ ಭಾರತದ ಒಂದಿಂಚು ಭೂಮಿಯನ್ನು ವಶಪಡಿಸಿಕೊಂಡಿಲ್ಲ ಎಂಬ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಮೋಹನ್ ಭಾಗವತ್ ಚೀನಾ ನಮ್ಮ ಭೂಮಿ ವಶಪಡಿಸಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಚೀನಾ ಯಾವುದೇ ಭಾರತೀಯ ಭೂಪ್ರದೇಶ ವಶಪಡಿಸಿಕೊಂಡಿಲ್ಲ, ಗಡಿಯೊಳಗೆ ಕಾಲಿಟ್ಟಿಲ್ಲ: ನರೇಂದ್ರ ಮೋದಿ


