Homeಮುಖಪುಟಲಸಿಕೆ ಸರ್ಟಿಫಿಕೇಟ್‌ನಲ್ಲಿ ಮೋದಿ ಫೋಟೋ ತೆಗೆಯಿರಿ ಎಂದು ಕೇಳುವುದು ಅಪಾಯಕಾರಿ: ಕೇರಳ ಹೈಕೋರ್ಟ್

ಲಸಿಕೆ ಸರ್ಟಿಫಿಕೇಟ್‌ನಲ್ಲಿ ಮೋದಿ ಫೋಟೋ ತೆಗೆಯಿರಿ ಎಂದು ಕೇಳುವುದು ಅಪಾಯಕಾರಿ: ಕೇರಳ ಹೈಕೋರ್ಟ್

ಪ್ರಧಾನಿ ಮೋದಿಯವರ ಭಾವಚಿತ್ರದ ಸಂಬಂಧ ವಿಚಾರಿಸುವಾಗ ರಾಷ್ಟ್ರಪಿತ ಮಹಾತ್ಮಗಾಂಧಿಯವರ ಭಾವಚಿತ್ರದ ಕುರಿತು ಉಲ್ಲೇಖಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

- Advertisement -

ಕೋವಿಡ್‌ ಲಸಿಕೆ ಸರ್ಟಿಫಿಕೇಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ತೆಗೆಯುವುದು ಅಪಾಯಕಾರಿ ಎಂದು ಹೇಳಿರುವ ಕೇರಳ ಹೈಕೋರ್ಟ್, “ಇಂದು ಮೋದಿ ಫೋಟೋ ತೆಗೆಯಿರಿ ಎಂದು ಕೇಳುತ್ತಾರೆ. ನಾಳೆ ಮಹಾತ್ಮಗಾಂಧಿಯವರ ಫೋಟೋವನ್ನು ಕರೆನ್ಸಿ ನೋಟಿನಿಂದ ತೆಗೆಯಿರಿ ಎಂದು ಯಾರಾದರೂ ಬಂದರೆ?” ಎಂದು ಕೇಳಿದೆ.

“ಮೋದಿಯವರ ಫೋಟೋವನ್ನು ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಹಾಕಿರುವುದು ಸರಿಯೇ” ಎಂದು ಪ್ರಶ್ನಿಸಿ ನಾಗರಿಕರೊಬ್ಬರು ಅರ್ಜಿ ಸಲ್ಲಿಸಿದ್ದರು. “ನಾನು ಎರಡು ಡೋಸ್‌ಗಳನ್ನು ಖಾಸಗಿ ಆಸ್ಪತ್ರೆಯಿಂದ ತೆಗೆದುಕೊಂಡು ಹಣ ಪಾವತಿಸಿದ್ದೇನೆ. ಮೋದಿ ಫೋಟೋವನ್ನು ದೃಢೀಕರಣ ಪತ್ರದ ಮೇಲೆ ಹಾಕುವುದು ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ” ಎಂದು ಅರ್ಜಿದಾರರು ವಾದಿಸಿದ್ದರು ಎಂದು ಲೈವ್‌ಲಾ ವರದಿ ಮಾಡಿದೆ.

ವಿಚಾರಣೆ ಕೈಗೆತ್ತಿಕೊಂಡ ಜಸ್ಟೀಸ್‌ ಎನ್‌.ನಗರೇಶ್‌‌ ಅವರಿದ್ದ ಪೀಠವು, “ಲಸಿಕೆ ಸರ್ಟಿಫಿಕೇಟ್‌ನಿಂದ ಮೋದಿ ಫೋಟೋವನ್ನು ತೆಗೆಯುವುದು ಅಪಾಯಕಾರಿ ಪ್ರತಿಪಾದನೆ” ಎಂದು ಅಭಿಪ್ರಾಯಪಟ್ಟಿದೆ.

“ಇದು ಅತ್ಯಂತ ಅಪಾಯಕಾರಿ ಪ್ರತಿಪಾದನೆ. ನಾಳೆ ಮತ್ತೊಬ್ಬ ಬಂದು ಪ್ರತಿಭಟನೆ ನಡೆಸಿ, ನನಗೆ ಮಹಾತ್ಮ ಗಾಂಧಿಯವರನ್ನು ಕಂಡರೆ ಇಷ್ಟವಿಲ್ಲ. ನನ್ನ ಬೆವರು ಮತ್ತು ರಕ್ತದಿಂದ ಸಂಪಾದಿಸಿದ ಹಣದಲ್ಲಿ ಗಾಂಧೀಜಿಯರ ಫೋಟೋವನ್ನು ಹಾಕಬೇಡಿ. ಅದನ್ನು ತೆಗೆಯಿರಿ ಎಂದರೆ ಏನು ಮಾಡುವುದು?” ಎಂದು ಕೋರ್ಟ್ ಕೇಳಿದೆ. ಪ್ರಧಾನಿ ಮೋದಿಯವರ ಭಾವಚಿತ್ರದ ಸಂಬಂಧ ವಿಚಾರಿಸುವಾಗ ರಾಷ್ಟ್ರಪಿತ ಮಹಾತ್ಮಗಾಂಧಿಯ ಭಾವಚಿತ್ರದ ಕುರಿತು ಉಲ್ಲೇಖಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿರಿ: ಉಪಚುನಾವಣೆ ಫಲಿತಾಂಶ ಬಿಜೆಪಿಗೆ ನೀಡಿದ ಉತ್ತರವಾಗಿದೆ: ಎಸ್‌ಕೆಎಂ

ಅರ್ಜಿದಾರರ ವಕೀಲ ಅಜಿತ್ ರಾಯ್ ಪ್ರತಿಕ್ರಿಯಿಸಿ, “ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾವಳಿಗಳ ಪ್ರಕಾರ ಕರೆನ್ಸಿಯಲ್ಲಿ ಗಾಂಧಿಯವರ ಮುಖವನ್ನು ಮುದ್ರಿಸಲಾಗಿದೆ. ಆದರೆ ಲಸಿಕೆ ಪ್ರಮಾಣಪತ್ರಗಳಲ್ಲಿ ಮೋದಿಯವರ ಮುಖದ ಅಗತ್ಯವಿರುವ ಯಾವುದೇ ರೀತಿಯ ಶಾಸನಬದ್ಧ ನಿಬಂಧನೆಗಳಿಲ್ಲ” ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಲು ನ್ಯಾಯಾಲಯ ಹೆಚ್ಚಿನ ಸಮಯವನ್ನು ನೀಡಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೋರಿದರು. ಹೀಗಾಗಿ ಪೀಠವು ನವೆಂಬರ್ 23ಕ್ಕೆ ಪ್ರಕರಣವನ್ನು ಮುಂದೂಡಿತು.

ದಿ ವೈರ್ ವಿಶ್ಲೇಷಿಸಿದಂತೆ, “ತನ್ನದೇ ಆದ ರಾಜಕೀಯ ಮತ್ತು ವ್ಯಕ್ತಿತ್ವದ ಆರಾಧನೆಯನ್ನು ಉತ್ತೇಜಿಸಲು” ಒಬ್ಬ ನಾಯಕ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಬಳಸುತ್ತಿರುವ ಏಕೈಕ ದೇಶ ಬಹುಶಃ ಭಾರತ ಮಾತ್ರ. ಯುಎಸ್, ಇಸ್ರೇಲ್ ಮತ್ತು ಇತರ ಕೆಲವು ದೇಶಗಳು ಲಸಿಕೆ ಸ್ವೀಕರಿಸಿದವರಿಗೆ ನೀಡಿದ ಪ್ರಮಾಣಪತ್ರ ಅಥವಾ ಕಾರ್ಡ್‌ಗಳಿಗೆ ಹೋಲಿಸಿದರೆ ಭಾರತದ ಪ್ರಮಾಣಪತ್ರ ಸಂಪೂರ್ಣ ಭಿನ್ನವಾಗಿದೆ.

ಕೇಂದ್ರ ಸರ್ಕಾರವು ದೇಶದಾದ್ಯಂತ ಬೀದಿಗಳಲ್ಲಿ, ಭಾರತದ ಸಾಮೂಹಿಕ ಲಸಿಕೆ ಅಭಿಯಾನಕ್ಕಾಗಿ ಮೋದಿಯವರಿಗೆ “ಧನ್ಯವಾದ” ಸಲ್ಲಿಸುವ ಪೋಸ್ಟರ್‌ಗಳನ್ನು ಹಾಕಿದೆ. ವಿದೇಶಗಳಿಗೆ ತೆರಳಿದ ಭಾರತೀಯರು  ಆ ದೇಶಗಳಿಗೆ ಸಲ್ಲಿಸುವ ವ್ಯಾಕ್ಸಿನೇಷನ್ ಸರ್ಟಿಫಿಕೇಟ್‌ ನೋಡಿ ಅಲ್ಲಿನ ಆಡಳಿತ ಸಿಬ್ಬಂದಿ ಗೊಂದಲಕ್ಕೊಳಗಾಗುತ್ತಿದ್ದಾರೆ ಎಂಬ ವರದಿಗಳಾಗಿವೆ.

ಹೈಕೋರ್ಟ್ ನಿಲುವನ್ನು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸಿದ್ದಾರೆ.”ನ್ಯಾಯಾಧೀಶರು ಲಸಿಕೆ ಪ್ರಮಾಣಪತ್ರ ಮತ್ತು ಸರ್ಕಾರ ನೀಡಿದ ಕರೆನ್ಸಿ ನೋಟುಗಳ ನಡುವೆ ವ್ಯತ್ಯಾಸವನ್ನು ಮಾಡಲು ಸಾಧ್ಯವಾಗದಿರುವುದು ದುಃಖಕರವಾಗಿದೆ. ಯಾವ ನಿಯಮಗಳ ಪ್ರಕಾರ ಪ್ರಮಾಣಪತ್ರದಲ್ಲಿ ಪ್ರಧಾನ ಮಂತ್ರಿಯ ಫೋಟೋ ಇದೆ..” ಎಂದು ಕೆ.ಎಸ್.ನರೇಂದ್ರನ್‌ ಎಂಬವರು ಕೇಳಿದ್ದಾರೆ.


ಇದನ್ನೂ ಓದಿರಿ: ಹಿಂದಿ ಹೇರಿಕೆಗೆ ಕಪಾಳ ಮೋಕ್ಷ: ’ಜೈ ಭೀಮ್’ ದೃಶ್ಯಕ್ಕೆ ದ್ರಾವಿಡ ಭಾಷಿಗರ ಮೆಚ್ಚುಗೆ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯೋಗಿ ವಿರುದ್ಧ ಗೋರಕ್‌ಪುರ ಕ್ಷೇತ್ರದಿಂದ ಭೀಮ್‌ ಆರ್ಮಿಯ ಚಂದ್ರಶೇಖರ್‌ ಆಜಾದ್‌ ಸ್ಪರ್ಧೆ

0
ಉತ್ತರ ಪ್ರದೇಶದ ಗೋರಖ್‌ಪುರದಿಂದ ಕಣಕ್ಕಿಳಿದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ರಾವಣ್‌ ಕಣಕ್ಕಿಳಿಯಲಿದ್ದಾರೆ. ಚಂದ್ರಶೇಖರ್‌ ಆಜಾದ್‌ ಸ್ಪರ್ಧೆಯಿಂದಾಗಿ ಗೋರಕ್‌ಪುರ ವಿಧಾನಸಭಾ ಕ್ಷೇತ್ರ ಉತ್ತರ ಪ್ರದೇಶದ...
Wordpress Social Share Plugin powered by Ultimatelysocial