Homeಚಳವಳಿಉಪಚುನಾವಣೆ ಫಲಿತಾಂಶ ಬಿಜೆಪಿಗೆ ನೀಡಿದ ಉತ್ತರವಾಗಿದೆ: ಎಸ್‌ಕೆಎಂ

ಉಪಚುನಾವಣೆ ಫಲಿತಾಂಶ ಬಿಜೆಪಿಗೆ ನೀಡಿದ ಉತ್ತರವಾಗಿದೆ: ಎಸ್‌ಕೆಎಂ

- Advertisement -
- Advertisement -

14 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 30 ವಿಧಾನಸಭಾ ಕ್ಷೇತ್ರಗಳು, ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶವು ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ನೀಡಿದ ಉತ್ತರವಾಗಿದೆ.

ರೈತ ವಿರೋಧಿ ಕಾಯ್ದೆಗಳಿಗೆ ಉತ್ತರವನ್ನು ಉಪಚುನಾವಣೆಯ ಮೂಲಕ ಜನತೆ ನೀಡಿದ್ದಾರೆ. ಇದು ಬಿಜೆಪಿಗೆ ಎಚ್ಚರಿಕೆಯ ಕರೆಘಂಟೆಯಾಗಿದೆ. ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ತಾನದ ಫಲಿತಾಂಶಗಳು ಬಿಜೆಪಿಯ ವಿರುದ್ಧವಾಗಿ ಬಂದಿವೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿದೆ.

ಮೂರು ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಒಂದನ್ನು ಮಾತ್ರ ಬಿಜೆಪಿ ಗೆದ್ದಿದೆ. ರಾಜಸ್ಥಾನ, ಹಿಮಾಚಲ ಪ್ರದೇಶ, ಹರಿಯಾಣ ಥರದ ರಾಜ್ಯಗಳು ವಿಧಾನಸಭಾ ಉಪಚುನಾಣೆಯಲ್ಲಿ ತಕ್ಕ ಉತ್ತರವನ್ನು ಬಿಜೆಪಿಗೆ ನೀಡಿವೆ. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ನಡೆಸುತ್ತಿರುವ ಚಳವಳಿಗೆ ಜನತೆ ಬೆಂಬಲ ನೀಡಿದ್ದಾರೆ.

“ಎಲ್ಲದಕ್ಕೂ ಮಾತುಕತೆಯೊಂದೇ ಪರಿಹಾರ, ಇದು ರೈತರ ಹೋರಾಟಕ್ಕೂ ಅನ್ವಯಿಸುತ್ತದೆ” ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೀಡಿರುವ ಹೇಳಿಕೆಗೆ ಎಸ್‌ಕೆಎಂ ಸಹಮತ ವ್ಯಕ್ತಪಡಿಸಿದೆ.

ಆದರೆ, ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಬಿಜೆಪಿ ಸಿದ್ಧವಿಲ್ಲ. ಕೊನೆಯ ಸುತ್ತಿನ ಮಾತುಕತೆಯು ಜನವರಿ 22, 2021ರಂದು ‌ಆಯಿತು. ಇದರ ನಂತರದಲ್ಲಿ ಮತ್ತೆ ಮಾತುಕತೆ ನಡೆಸಲು ಸರ್ಕಾರ ನಿರಾಕರಿಸಿದೆ.

ಇದನ್ನೂ ಓದಿರಿ: ಶೃಂಗಸಭೆ: ಮೋದಿ ಭೇಟಿ ವಿರೋಧಿಸಿ ಅನಿವಾಸಿ ಭಾರತೀಯರ ಪ್ರತಿಭಟನೆ

ಅಷ್ಟೇ ಅಲ್ಲದೆ ಖಟ್ಟರ್ ಸೇರಿದಂತೆ ಹಲವಾರು ಬಿಜೆಪಿ ನಾಯಕರು ರೈತರ ವಿರುದ್ಧ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಸಾಧ್ಯವಿರುವ ಎಲ್ಲ ರೀತಿಯಲ್ಲಿ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ.

ಹತ್ತಿ ಬೆಳೆಗೆ ಭಾರೀ ಕೀಟಗಳ ಹಾವಳಿಯಿಂದ ಉಂಟಾದ ಹಾನಿಯು ಪಂಜಾಬ್ ಮತ್ತು ಹರಿಯಾಣದ ಹಲವಾರು ಜಿಲ್ಲೆಗಳಲ್ಲಿ ಹತ್ತಿ ರೈತರಿಗೆ ವ್ಯಾಪಕ ನಷ್ಟವನ್ನು ತಂದಿವೆ. ಇಂತಹ ನಷ್ಟ ಅನುಭವಿಸುತ್ತಿರುವ ರೈತರ ಹಲವಾರು ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಎಕರೆಗೆ 60,000 ರೂ. ನಷ್ಟವಾಗಿದೆ. ಹಾನಿಯ ಪ್ರಮಾಣವನ್ನು ವರ್ಗೀಕರಿಸಿ ಎಕರೆಗೆ ₹ 2000ರಿಂದ ₹ 12,000ರವರೆಗೆ ಸರ್ಕಾರ ಪರಿಹಾರ ನೀಡುತ್ತದೆ. ನಷ್ಟದ ಒಂದು ಭಾಗವನ್ನೂ ಪರಿಹಾರದ ಹಣ ಭರಿಸುವುದಿಲ್ಲ.

ನಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ಪ್ಯಾಕೇಜ್‌ಗಾಗಿ ಪಂಜಾಬ್ ರೈತ ಸಂಘಗಳು ಹೋರಾಟ ಮುಂದುವರಿಸಿವೆ. ಡಿಎಪಿಯಂತಹ ರಸಗೊಬ್ಬರದ ಕೊರತೆಯೂ ತಲೆದೋರಿದೆ. ಈ ಬಿಕ್ಕಟ್ಟನ್ನು ಬಗೆಹರಿಸಲು ಎಸ್‌ಕೆಎಂ ಒತ್ತಾಯಿಸಿದೆ. ಬಿಕ್ಕಟ್ಟನ್ನು ನಿವಾರಿಸಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್‌ಕೆಎಂ ಒತ್ತಾಯಿಸುತ್ತದೆ.

ಉಪಚುನಾವಣೆಯ ಫಲಿತಾಂಶ ಹೀಗಿದೆ:

1. ಆಂಧ್ರಪ್ರದೇಶ

  • ಬದ್ವೇಲ್‌ ಕ್ಷೇತ್ರ – ವೈಎಸ್‌ಆರ್‌‌ ಕಾಂಗ್ರೆಸ್‌

ಕ್ಷೇತ್ರವು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಹಿಡಿತದಲ್ಲಿತ್ತು. ಉಪಚುನಾವಣೆಯಲ್ಲಿ ತನ್ನಲ್ಲೇ ಉಳಿಸಿಕೊಂಡಿದೆ.

2. ಅಸ್ಸಾಂ

  • ಭನಾನಿಪುರ್‌ – ಬಿಜೆಪಿ
  • ಗೋಸಾಯಿಗಾಂವ್ –  ಯುಪಿಪಿಎಲ್‌ – (ಬಿಜೆಪಿ ಮೈತ್ರಿ ಪಕ್ಷ)
  • ಮರಿಯಾನಿ – ಬಿಜೆಪಿ
  • ತಮುಲ್‌ಪುರ್‌ – ಯುಪಿಪಿಎಲ್‌ – (ಬಿಜೆಪಿ ಮೈತ್ರಿ ಪಕ್ಷ)
  • ಥೌರಾ – ಬಿಜೆಪಿ

ಬಿಜೆಪಿ ಗೆದ್ದ ಮೂರು ಕ್ಷೇತ್ರಗಳಲ್ಲಿ ಎರಡು ಕಾಂಗ್ರೆಸ್‌‌ನ ಹಿಡಿತದಲ್ಲಿದ್ದ ಕ್ಷೇತ್ರಗಳಾಗಿದ್ದು, ಒಂದು ಕ್ಷೇತ್ರ AIUDF ಹಿಡಿತದಲ್ಲಿದ್ದವು. ಯುಪಿಪಿಎಲ್‌ ಗೆದ್ದ ಎರಡು ಕ್ಷೇತ್ರಗಳಲ್ಲಿ ಒಂದು ತನ್ನದೇ ಕ್ಷೇತ್ರವನ್ನು ಉಳಿಸಿಕೊಂಡಿದ್ದರೆ, ಮತ್ತೊಂದನ್ನು ಬೇರೆ ಪಕ್ಷದಿಂದ ತನ್ನ ತೆಕ್ಕೆಗೆ ಪಡೆದು ಕೊಂಡಿದೆ.

ಇದನ್ನೂ ಓದಿ: ನಾನೇಕೆ ಆರ್ ಎಸ್ ಎಸ್ ತೊರೆದೆ ಸರಣಿ; ದೇಶಕ್ಕಾಗಿ ಸಂಘದ ಸಖ್ಯ ಬಿಟ್ಟೆ!

3. ಬಿಹಾರ

  • ಕುಶೇಶ್ವರ ಆಸ್ಥಾನ – JDU
  • ತಾರಾಪುರ – JDU

ಕುಶೇಶ್ವರ ಆಸ್ಥಾನ ಕ್ಷೇತ್ರದಲ್ಲಿ ಜೆಡಿಯು ತನ್ನ ಕ್ಷೇತ್ರವನ್ನು ಉಳಿಕೊಂಡರೆ, ತಾರಾಪುರದಲ್ಲಿ ಕಳೆದುಕೊಂಡಿದೆ.

4. ಹರಿಯಾಣ

  • ಎಲ್ಲೇನಾಬಾದ್ – INLD ತನ್ನದೇ ಕ್ಷೇತ್ರವನ್ನು ಮತ್ತೇ ಗೆದ್ದುಕೊಂಡಿದೆ.

5. ಹಿಮಾಚಲ ಪ್ರದೇಶ

  • ಅರ್ಕಿ – ಕಾಂಗ್ರೆಸ್
  • ಫತೇಪುರ್ – ಕಾಂಗ್ರೆಸ್
  • ಜುಟ್ಟಬ್ – ಕಾಂಗ್ರೆಸ್

ಅರ್ಕಿ ಮತ್ತು ಫೆತೇಪುರ್‌ನಲ್ಲಿ ಕಾಂಗ್ರೆಸ್ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದ್ದರೆ, ಜುಟ್ಟಬ್‌ನಲ್ಲಿ ಹೊಸದಾಗಿ ಕ್ಷೇತ್ರವನ್ನು ಗೆದ್ದುಕೊಂಡಿದೆ.

6. ಕರ್ನಾಟಕ

  • ಹಾನಗಲ್‌ – ಕಾಂಗ್ರೆಸ್
  • ಸಿಂದಗಿ – ಬಿಜೆಪಿ

ಕರ್ನಾಟಕದಲ್ಲಿ ಬಿಜೆಪಿ ವಶದಲ್ಲಿ ಇದ್ದ ಹಾನಗಲ್‌ ಕ್ಷೇತ್ರವನ್ನು ಕಾಂಗ್ರೆಸ್ ವಶಪಡಿಸಿಕೊಂಡರೆ, ಜೆಡಿಎಸ್‌ ವಶದಲ್ಲಿದ್ದ ಸಿಂದಗಿಯನ್ನು ಬಿಜೆಪಿ ಗೆದ್ದುಕೊಂಡಿದೆ.

ಇದನ್ನೂ ಓದಿ: ಅಸ್ಸಾಂ: ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಸೋಲು; ಆಪರೇಷನ್‌ ಕಮಲಕ್ಕೆ ಜಯ!

7. ಮಧ್ಯಪ್ರದೇಶ

  • ಜೋಬತ್ – ಬಿಜೆಪಿ
  • ಪೃಥ್ವಿಪುರ – ಬಿಜೆಪಿ
  • ರಾಯಗಾಂವ್ – ಕಾಂಗ್ರೆಸ್

ಜೋಬತ್ ಮತ್ತು ಪೃಥ್ವಿಪುರ ಕ್ಷೇತ್ರವನ್ನು ಬಿಜೆಪಿ ಬೇರೆ ಪಕ್ಷದಿಂದ ವಶಪಡಿಸಿಕೊಂಡರೆ, ಕಾಂಗ್ರೆಸ್‌ ರಾಯಗಾಂವ್ ಕ್ಷೇತ್ರವನ್ನು ಅನ್ನು ಹೊಸದಾಗ ಗೆದ್ದುಕೊಂಡಿದೆ.

8. ಮಹಾರಾಷ್ಟ್ರ

  • ದೆಗ್ಲೂರ್ – ಕಾಂಗ್ರೆಸ್

ಈ ಕ್ಷೇತ್ರವನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ತನ್ನಲ್ಲೇ ಉಳಿಸಕೊಂಡಿದೆ.

9. ಮೇಘಾಲಯ

  • ಮಾವ್‌ಫ್ಲಾಂಗ್‌ – ಯುನೈಟೆಡ್‌ ಡೆಮಾಕ್ರಟಿಕ್ ಪಾರ್ಟಿ
  • ಮೌರಿಂಗ್‌ಕೆಂಗ್ – ಯುನೈಟೆಡ್‌ ಡೆಮಾಕ್ರಟಿಕ್ ಪಾರ್ಟಿ
  • ರಾಜಬಾಲಾ – ನ್ಯಾಶನಲ್‌ ಪೀಪಲ್ಸ್‌ ಪಾರ್ಟಿ

10. ಮಿಜೋರಾಂ

  • ಟುಯಿರಿಯಲ್ – ಮಿಜೋ ನ್ಯಾಶನಲ್ ಫ್ರಂಟ್

ಬೇರೆ ಪಕ್ಷದಿಂದ ಕ್ಷೇತ್ರವನ್ನು ಗೆದ್ದುಕೊಂಡಿದೆ.

ಇದನ್ನೂ ಓದಿ: ಹರಿಯಾಣ ಉಪಚುನಾವಣೆ: ಕೃಷಿ ಕಾನೂನುಗಳನ್ನು ವಿರೋಧಿಸಿ ರಾಜೀನಾಮೆ ಕೊಟ್ಟಿದ್ದ ಅಭಯ್ ಚೌಟಾಲಾಗೆ ಗೆಲುವು

11. ನಾಗಾಲ್ಯಾಂಡ್

  • ಶಮ್ಟೋರ್ – ನ್ಯಾಶನಲಿಸ್ಟಿಕ್‌ ಡೆಮಾಕ್ರಟಿಕ್ ಪ್ರೊಗ್ರೇಸಿವ್ ಪಾರ್ಟಿ

ಅವಿರೋಧ ಆಯ್ಕೆ!

12. ರಾಜಸ್ಥಾನ

  • ಧರಿಯಾವಾಡ – ಕಾಂಗ್ರೆಸ್
  • ವಲ್ಲಭನಗರ – ಕಾಂಗ್ರೆಸ್

ಇಲ್ಲಿ ಕಾಂಗ್ರೆಸ್ ಒಂದು ತನ್ನದೇ ಕ್ಷೇತ್ರನ್ನು ಉಳಿಸಿಕೊಂಡು, ಮತ್ತೊಂದು ಕ್ಷೇತ್ರವನ್ನು ಬೇರೆ ಪಕ್ಷದಿಂದ ವಶಕ್ಕೆ ಪಡೆದಿದೆ.

13. ತೆಲಂಗಾಣ

  • ಹುಜೂರಾಬಾದ್ – ಬಿಜೆಪಿ

ಟಿಆರ್‌ಎಸ್‌ ಪಕ್ಷದಿಂದ ಬಿಜೆಪಿಯು ಈ ಕ್ಷೇತ್ರವನ್ನು ಗೆದ್ದುಕೊಂಡಿದೆ.

14. ಪಶ್ಚಿಮ ಬಂಗಾಳ

  • ದೀನ್‌ಹಟಾ – ಟಿಎಂಸಿ
  • ಗೋಸಾಬ – ಟಿಎಂಸಿ
  • ಖಾರ್ದಹೊ – ಟಿಎಂಸಿ
  • ಶಾಂತಿಪುರ – ಟಿಎಂಸಿ

ಇಲ್ಲಿ ಎರಡು ಕ್ಷೇತ್ರಗಳನ್ನು ಟಿಎಂಸಿ ತನ್ನದೇ ಕ್ಷೇತ್ರವನ್ನು ಗೆದ್ದುಕೊಂಡು, ಮತ್ತೆರೆಡು ಕ್ಷೇತ್ರವನ್ನು ಬಿಜೆಪಿಯಿಂದ ಗೆದ್ದುಕೊಂಡಿದೆ.

ಇದನ್ನೂ ಓದಿ: ಚುನಾವಣೆ ವಿಶ್ಲೇಷಣೆ: ಹಾನಗಲ್‌ನಲ್ಲಿ ಬಿಜೆಪಿ ಸೋತಿದ್ದೇಕೆ? ಕ್ಷೇತ್ರದ ಮತದಾರರ ವೈಶಿಷ್ಟ್ಯವೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...