Homeಮುಖಪುಟಅಸ್ಸಾಂ: ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಸೋಲು; ಆಪರೇಷನ್‌ ಕಮಲಕ್ಕೆ ಜಯ!

ಅಸ್ಸಾಂ: ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಸೋಲು; ಆಪರೇಷನ್‌ ಕಮಲಕ್ಕೆ ಜಯ!

- Advertisement -
- Advertisement -

ದೇಶದಾದ್ಯಂತ ಇತ್ತೀಚೆಗೆ ನಡೆದ 30 ವಿಧಾನಸಭೆ ಮತ್ತು ಮೂರು ಲೋಕಸಭಾ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಇವುಗಳಲ್ಲಿ ಅಸ್ಸಾಂನಲ್ಲಿ ಐದು ಸ್ಥಾನಗಳಿಗೆ ನಡೆದಿದ್ದ ವಿಧಾನಸಭಾ ಉಪಚುನಾವಣೆಯಲ್ಲಿ, ಐದೂ ಸ್ಥಾನಗಳಲ್ಲೂ ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಗೆಲುವು ಸಾಧಿಸಿವೆ.

ಬಿಜೆಪಿ ಅಭ್ಯರ್ಥಿಗಳಾದ ಫಣಿಧರ್ ತಾಲೂಕ್ದಾರ್, ರೂಪಜ್ಯೋತಿ ಕುರ್ಮಿ ​​ಮತ್ತು ಸುಶಾಂತ ಬೊರ್ಗೊಹೈನ್ ಅವರು ಕ್ರಮವಾಗಿ ಭಬಾನಿಪುರ, ಮರಿಯಾನಿ ಮತ್ತು ಥೌರಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂವರು ಈ ವರ್ಷದ ಮಾರ್ಚ್-ಏಪ್ರಿಲ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಟಿಕೆಟ್‌ನಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ನಂತರ, ಅವರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು.

ಬಿಜೆಪಿ ಮಿತ್ರ ಪಕ್ಷವಾದ ಯುಪಿಪಿಎಲ್‌ನ ಅಭ್ಯರ್ಥಿಗಳಾದ ಜಿರಾನ್ ಬಸುಮತರಿ ಮತ್ತು ಜೋಲೆನ್ ಡೈಮರಿ ಕ್ರಮವಾಗಿ ಗೋಸಾಯಿಗಾಂವ್‌ ಮತ್ತು ತಮುಲ್‌ಪುರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

 ಇದನ್ನೂ ಓದಿ: ಬಂಗಾಳ ಉಪಚುನಾವಣೆ: ಎಲ್ಲಾ ಕ್ಷೇತ್ರಗಳಲ್ಲಿ ಲಕ್ಷಕ್ಕೂ ಅಧಿಕ ಅಂತರಗಳಲ್ಲಿ ಸೋತ ಬಿಜೆಪಿ; ಭಾರಿ ಮುಖಭಂಗ!

ಬಬಾನಿಪುರ್‌ ಕ್ಷೇತ್ರದಲ್ಲಿ ಬಿಜೆಪಿಯ ಫಣಿಧರ್ ತಾಲೂಕ್ದಾರ್ 64 ಸಾವಿರ ಮತಗಳೊಂದಿಗೆ, ಕಾಂಗ್ರೆಸ್‌ನ ಸೈಲೇಂದ್ರನಾಥ್‌ ದಾಸ್ ಅವರನ್ನು ಸೋಲಿಸಿದ್ದಾರೆ. ಇಲ್ಲಿ 38 ಸಾವಿರ ಮತಗಳು ಸೈಲೈಂದ್ರನಾಥ್‌ ಅವರ ಪರವಾಗಿ ಚಲಾವಣೆಯಾಗಿದ್ದವು. ಫಣಿಧರ್‌ ತಾಲೂಕ್ದಾರ್‌ ಈ ಹಿಂದೆ AIUDF ಪಕ್ಷದಿಂದ ಸ್ಪರ್ಧಿಸಿ ಗೆದ್ದುಕೊಂಡಿದ್ದರು. ನಂತರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.

ಮರಿಯಾನಿ ಕ್ಷೇತ್ರದಲ್ಲಿ ಬಿಜೆಪಿಯ ರೂಪಜ್ಯೋತಿ ಕುರ್ಮಿ ಅವರ ಪರವಾಗಿ 55 ಸಾವಿರ ಮತಗಳು ಚಲಾವಣೆಯಾಗಿದ್ದು, ಕಾಂಗ್ರೆಸ್‌ನ ಲೋಹಿತ್‌ ಕೋನ್ವರ್‌ 15 ಸಾವಿರ ಮತಗಳನ್ನು ಪಡೆದು ಹೀನಾಯವಾಗಿ ಸೋಲುಂಡಿದ್ದಾರೆ. ಇಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಸಂಜೀಜ್‌ ಗೋಗಯ್‌ ಕೂಡಾ 15 ಸಾವಿರ ಮತಗಳನ್ನು ಪಡೆದಿದ್ದಾರೆ.

ಥೌರಾ ಕ್ಷೇತ್ರದಲ್ಲಿ ಬಿಜೆಪಿಯ ಸುಶಾಂತ ಬೊರ್ಗೊಹೈನ್ 54 ಸಾವಿರ ಮತಗಳನ್ನು ಪಡೆದು ಗೆಲುವಿನ ದಡ ಸೇರಿದ್ದಾರೆ. ಇಲ್ಲಿ  ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮನೊರಂಜನ್‌ ಕೊನ್ವಾರ್‌ 5,818 ಮತಗಳನ್ನು ಮಾತ್ರ ಪಡೆದಿದ್ದು, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸಿದ್ದ ಧಾಜಿಯಾ ಕೋನ್ವರ್‌ ಅವರು 24 ಸಾವಿರ ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿ ಇದ್ದಾರೆ.

ಇದನ್ನೂ ಓದಿ: ನಾಲ್ಕೂ ಸ್ಥಾನ ಕಾಂಗ್ರೆಸ್ ಪಾಲು: ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಹೀನಾಯ ಸೋಲು

ಗೋಸಾಯಿಗಾಂವ್‌ ಕ್ಷೇತ್ರದಲ್ಲಿ 58 ಸಾವಿರ ಮತಗಳನ್ನು ಪಡೆದು ಬಿಜೆಪಿ ಮಿತ್ರ ಪಕ್ಷವಾದ ಯುಪಿಪಿಎಲ್‌ನ ಜಿರಾನ್ ಬಸುಮತರಿ ವಿಜಯಿಯಾಗಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ಜೊವೆಲ್ ತುಡು ಅವರು ಸ್ಪರ್ಧಿಸಿದ್ದು 30 ಸಾವಿರ ಮತಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಭಾರಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ. AIUDF ಯಿಂದ ಖೈರುಲ್‌ ಅನಾಮ್‌ ಖಾನ್‌ದಾರ್‌ ಸ್ಫರ್ಧಿಸಿ 19 ಸಾವಿರ ಮತಗಳನ್ನು ಪಡೆದಿದ್ದರೆ, ಬೋಡೋಲ್ಯಾಂಡ್‌ ಪೀಪಲ್ಸ್‌ ಫ್ರಂಟ್‌ನಿಂದ ಧ್ರುಭ ಕುಮಾರ್‌ ಬ್ರಹ್ಮ ಅವರು ಸ್ಪರ್ಧಿಸಿ 20 ಸಾವಿರ ಮತಗಳನ್ನು ಪಡೆದ್ದಾರೆ. ಜೊತೆಗೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಒಸ್ಮಾನ್‌ ಗೊನಿ ಅವರು 15 ಸಾವಿರ ಮತಗಳನ್ನು ಪಡೆದಿದ್ದಾರೆ.

ತಮುಲ್‌ಪುರ ಕ್ಷೇತ್ರದಲ್ಲಿ ಜೋಲೆನ್ ಡೈಮರಿ ಅವರು ಬಿಜೆಪಿ ಮಿತ್ರ ಪಕ್ಷವಾದ ಯುಪಿಪಿಎಲ್‌ನಿಂದ ಸ್ಪರ್ಧಿಸಿದ್ದು ಅಲ್ಲಿ ಅವರು 82,462 ಮತಗಳನ್ನು ಪಡೆದಿದ್ದಾರೆ. ಕ್ಷೇತ್ರದಲ್ಲಿ ಇನ್ನೂ ಒಂದು ಸುತ್ತಿನ ಮತ ಎಣಿಕೆ ಬಾಕಿಯಿದೆ. ಇಲ್ಲಿ ಕಾಂಗ್ರೆಸ್ ನಾಲ್ಕನೇ ಸ್ಥಾನದಲ್ಲಿದ್ದು ಹೀನಾಯ ಸೋಲನ್ನು ಅನುಭವಿಸಿದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಭಾಸ್ಕರ್‌ ದಹಲ್‌ 7 ಸಾವಿರ ಮತಗಳನ್ನು ಪಡೆದಿದ್ದಾರೆ. ಇಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಗಣೇಶ್‌ ಕಚಾರಿ 28,546 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಗಣ ಸುರಕ್ಷಾ ಪಕ್ಷದ ಬ್ರಜೇಂದ್ರನಾಥ್‌ ಥೇಕಾ ಅವರಿದ್ದು, 12952 ಮತಗಳನ್ನು ಪಡೆದಿದ್ದಾರೆ. ಅಲ್ಲಿ ಇನ್ನೂ ಒಂದು ಹಂತದ ಮತ ಎಣಿಕೆ ಬಾಕಿಯಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಮೂರು ಶಾಸಕರ ರಾಜೀನಾಮೆ ಮತ್ತು ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದ ಇಬ್ಬರು ಹಾಲಿ ಶಾಸಕರ ಸಾವಿನಿಂದಾಗಿ ಉಪಚುನಾವಣೆ ಅಕ್ಟೋಬರ್ 30 ರಂದು ನಡೆದಿತ್ತು. ಚುನಾವಣಾ ಪೂರ್ವದಲ್ಲಿ, ಅಧಿಕಾರಿಗಳು ಕ್ಷೇತ್ರಗಳಾದ್ಯಂತ ವಿವಿಧ ಸ್ಥಳಗಳಲ್ಲಿ 1.71 ಕೋಟಿ ರೂಪಾಯಿ ಮೌಲ್ಯದ ನಗದು, ಮದ್ಯ ಮತ್ತು ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಸ್ಸಾಂ ಮುಖ್ಯ ಚುನಾವಣಾಧಿಕಾರಿ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ತವರು ಜಿಲ್ಲೆಯಲ್ಲಿಯೇ ಮುಖಭಂಗ: ಹಾನಗಲ್‌ನಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...