Homeಮುಖಪುಟಗುಲಾಬ್ ಚಂಡಮಾರುತ: ಆಂಧ್ರ, ಒಡಿಶಾದಲ್ಲಿ ಭಾರಿ ಕಟ್ಟೆಚ್ಚರ, ರಾಜ್ಯದಲ್ಲಿ 2 ದಿನ ಮಳೆ

ಗುಲಾಬ್ ಚಂಡಮಾರುತ: ಆಂಧ್ರ, ಒಡಿಶಾದಲ್ಲಿ ಭಾರಿ ಕಟ್ಟೆಚ್ಚರ, ರಾಜ್ಯದಲ್ಲಿ 2 ದಿನ ಮಳೆ

- Advertisement -
- Advertisement -

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ’ಗುಲಾಬ್’ ಚಂಡಮಾರುತದಿಂದಾಗಿ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳು ಮತ್ತು ನೆರೆಯ ಒಡಿಶಾ ಒಡಿಶಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ.

ಗುಲಾಬ್ ಚಂಡಮಾರುತವು ಗೋಪಾಲಪುರ (ಒಡಿಶಾ) ಮತ್ತು ಆಂಧ್ರಪ್ರದೇಶದ ಕಳಿಂಗಪಟ್ಟಣದ ನಡುವೆ ಗಂಟೆಗೆ 95 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ. ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆಂಧ್ರಪ್ರದೇಶ, ಒಡಿಶಾದಲ್ಲಿ ಭೂಕುಸಿತವೂ ಉಂಟಾಗುವ ಸಾಧ್ಯತೆಗಳು ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.

ಪಾಕಿಸ್ತಾನವು ‘ಗುಲಾಬ್’ ಎಂದು ಹೆಸರಿಸಿರುವ ಈ ಚಂಡಮಾರುತವು ಒಡಿಶಾದ ಗೋಪಾಲಪುರದ ಪೂರ್ವ ಆಗ್ನೇಯಕ್ಕೆ 180 ಕಿಮೀ ಮತ್ತು ಆಂಧ್ರಪ್ರದೇಶದ ಕಳಿಂಗಪಟ್ಟಣದಿಂದ 240 ಕಿಮೀ ಪೂರ್ವದಲ್ಲಿದೆ ಚಂಡಮಾರುತವು ಗಂಟೆಗೆ 18 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ ಎಂದು ಐಎಂಡಿ ತನ್ನ ಇತ್ತೀಚಿನ ಅಪ್‌ಡೇಟ್‌ನಲ್ಲಿ ತಿಳಿಸಿದೆ.  

ಇದನ್ನೂ ಓದಿ: ಮಧ್ಯಪ್ರದೇಶ: ಮಹಿಳಾ ಕಾನ್‌ಸ್ಟೇಬಲ್ ಮೇಲೆ ಅತ್ಯಾಚಾರ-ಇಬ್ಬರ ಬಂಧನ

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (NDRF) 13 ತಂಡಗಳನ್ನು ಒಡಿಶಾದಲ್ಲಿ ಮತ್ತು ಐದು ತಂಡಗಳನ್ನು ಆಂಧ್ರಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು NDRF ಮಹಾನಿರ್ದೇಶಕ ಸತ್ಯ ನಾರಾಯಣ್ ಪ್ರಧಾನ್ ಹೇಳಿದ್ದಾರೆ. ಒಂದು ತಂಡದಲ್ಲಿ 47 ಮಂದಿ ಸಿಬ್ಬಂದಿಯಿರಲಿದ್ದಾರೆ. ಮರ, ಪೋಲ್‌ಗಳನ್ನು ಕತ್ತರಿಸುವ ಸಾಧನಗಳು, ದೋಣಿಗಳು, ತುರ್ತು ವೈದ್ಯಕೀಯ ಸೌಲಭ್ಯ ಇರಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಒಡಿಶಾ ಸರ್ಕಾರವು ರಾಜ್ಯದ ದಕ್ಷಿಣ ಭಾಗದ ಏಳು ಜಿಲ್ಲೆಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆಗಳನ್ನು ಆರಂಭಿಸಿದೆ.

ಗುಲಾಬ್‌ ಚಂಡಮಾರುತದ ಹಿನ್ನೆಲೆ ಒಡಿಶಾದ ಗೋಪಾಲ್‌ಪುರದಲ್ಲಿ ಹಾಗೂ ಆಂಧ್ರ ಪ್ರದೇಶದ ಕಾಳಿಂಗ ಪಟ್ಟಣಂನಲ್ಲಿ ಹಲವಾರು ರೈಲುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಪೂರ್ವ ಕರಾವಳಿಯ ರೈಲು ಸೇವೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ರದ್ದುಗೊಳಿಸಲಾಗಿದೆ. ಮೀನುಗಾರರಿಗೂ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ರಾಜ್ಯದಲ್ಲಿಯೂ ಗುಲಾಬ್ ಚಂಡಮಾರುತದ ಪ್ರಭಾವವಿದ್ದು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸೆಪ್ಟೆಂಬರ್‌ 28 ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಎರಡು ದಿನಗಳ ಕಾಲ ಕರಾವಳಿ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್ ಘೋಷಣೆ ಮಾಡಲಾಗಿದೆ.


ಇದನ್ನೂ ಓದಿ: ಭಾರತ್ ಬಂದ್: ರೈತರ ಕರೆಗೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಸಂಪೂರ್ಣ ಬೆಂಬಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...