Homeಮುಖಪುಟಯುರೋ ಕಪ್‌ ಫೈನಲ್‌: ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಇಟಲಿ ತಂಡ

ಯುರೋ ಕಪ್‌ ಫೈನಲ್‌: ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಇಟಲಿ ತಂಡ

- Advertisement -
- Advertisement -

ವಿಶ್ವ ಫುಟ್‌ಬಾಲ್‌ನ ಪವರ್‌ ಹೌಸ್‌ ಎಂದು ಗುರುತಿಸಿಕೊಂಡಿರುವ ಯುರೋಕಪ್ ಚಾಂಪಿಯನ್‌ಶಿಪ್‌ಗೆ ನಿನ್ನೆ ಮಧ್ಯರಾತ್ರಿ ತೆರೆಬಿದ್ದಿದೆ. ಅಂತಿಮ ಹಣಾಹಣಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್‌ ತಂಡವನ್ನು ಮಣಿಸಿ ಇಟಲಿ ಬರೊಬ್ಬರಿ 53 ವರ್ಷಗಳ ನಂತರ ಚಾಂಪಿಯನ್‌ಶಿಪ್ ಪಟ್ಟ ತನ್ನದಾಗಿಸಿಕೊಂಡಿತು.

ವಿಶ್ವ ಫುಟ್ಬಾಲ್‌ನ ಪವರ್‌ ಹೌಸ್‌ ಎಂದು ಕರೆಸಿಕೊಳ್ಲುವ ಫ್ರಾನ್ಸ್‌, ಜರ್ಮನಿ, ಸ್ಪೇನ್‌, ಬೆಲ್ಜಿಯಮ್‌ ತಂಡಗಳು ಫೈನಲ್‌ ಪ್ರವೇಶಿಸಲು ವಿಫಲವಾಗಿದ್ದವು. ಈ ಸಂದರ್ಭದಲ್ಲಿ ಇಟಲಿ ಯುರೋ ಕಪ್‌ ಗೆಲ್ಲುವುದರೊಂದಿಗೆ ಮುಂದಿನ ವರ್ಷ 2022 ರ ಫುಟ್ಬಾಲ್‌ ವಿಶ್ವಕಪ್‌ಗೆ ಸಿದ್ಧವಾಗಿರುವ ಸಂದೇಶವನ್ನು ನೀಡಿದೆ.

ಇಂಗ್ಲೆಂಡ್‌ ರಾಜಧಾನಿ ಲಂಡನ್‌ ನಗರದ ವೆಂಬ್ಲೆ ಕ್ರೀಡಾಂಗಣದಲ್ಲಿ ತವರಿನ ಪ್ರೇಕ್ಷಕರೆದರು ಮೊಟ್ಟ ಮೊದಲ ಬಾರಿಗೆ ಯುರೋಪಿಯನ್‌ ಚಾಂಪಿಯನ್‌ ಆಗುವ ಇಂಗ್ಲೆಂಡ್‌ ಕನಸು ನಿನ್ನೆ ತಡರಾತ್ರಿ ಭಗ್ನಗೊಂಡಿತು. ಲ್ಯೂಕ್ ಶಾ ಪಂದ್ಯದ 2 ನೇ ನಿಮಿಷದಲ್ಲಿ ಸಿಡಿಸಿದ ಆರಂಭಿಕ ಗೋಲಿನ ಮುನ್ನಡೆಯ ಹೊರತಾಗಿಯೂ ಇಂಗ್ಲೆಂಡ್‌ ಆಟಗಾರರಿಗೆ ಪಂದ್ಯದಲ್ಲಿ ಮತ್ತೊಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಅರ್ಜೆಂಟಿನಾ ಮಡಿಲಿಗೆ ಕೋಪಾ ಅಮೆರಿಕ ಕಪ್ : 28 ವರ್ಷಗಳ ನಂತರ ಪ್ರಶಸ್ತಿ ಬರ ನೀಗಿಸಿಕೊಂಡ ಮೆಸ್ಸಿ ಎಂಡ್‌…

ಇಟಲಿಯ ಸ್ಟಾರ್‌ ಆಟಗಾರ  ಲಿಯೋನಾರ್ಡೊ ಬೊನುಸಿ 67 ನೇ ನಿಮಷದಲ್ಲಿ ಅದ್ಭುತ ಗೋಲು ಗಳಿಸಿ ಇಟಲಿ ಪಕ್ಷದಿಂದ ಜಾರುತ್ತಿದ್ದ ಪಂದ್ಯವನ್ನು ಮತ್ತೆ ಸಮ ಸ್ಥಿತಿಗೆ ತಂದರು. ಎರಡೂ ತಂಡಗಳು ಯುರೋಪಿಯನ್‌ ಫುಟ್ಬಾಲ್‌ ಕಿರೀಟಕ್ಕಾಗಿ ಅಂತಿಮ ನಿಮಿಷದವರೆಗೂ ತೀವ್ರ ಪೈಪೋಟಿ ನಡೆಸಿದವಾದರೂ ಪಂದ್ಯ ಇಕ್ವಲೈಜರ್‌ನಲ್ಲಿಯೇ ಅಂತ್ಯವಾಯಿತು. 90+ ಹೆಚ್ಚುವರಿ ಸಮಯದಲ್ಲೂ ಪ್ರಬಲ ತಡೆಗೋಡೆಗಳನ್ನು ಭೇದಿಸಿ ಗೋಲು ಗಳಿಸುವ ಇಟಲಿ ಮತ್ತು ಇಂಗ್ಲೆಂಡ್‌ ತಂಡದ ಯತ್ನ ಯಶಸ್ವಿಯಾಗಲಿಲ್ಲ. ಕೊನೆಗೆ 1-1 ಗೋಲ್‌ಗಳಿಂದ ಎರಡು ತಂಡಗಳು ಸಮಬಲ ಸಾಧಿಸಿದ್ದರಿಂದ ಪಂದ್ಯ ರೋಚಕ ಪೆನಾಲ್ಟಿ ಶೂಟೌಟ್‌ವರೆಗೂ ಸಾಗಿತು.

ಚಾಂಪಿಯನ್‌ ತಂಡವನ್ನು ನಿರ್ಣಯಿಸುವ ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ ಮೇಲುಗೈ ಸಾಧಿಸಿ ಇಂಗ್ಲೆಂಡ್‌ ಅಭಿಮಾನಿಗಳನ್ನು ನಿರಾಸೆಗೊಳಿಸಿತು. ಮೊಟ್ಟ ಮೊದಲ ಬಾರಿಗೆ ಯುರೋಪಿಯನ್‌ ಚಾಂಪಿಯನ್‌ ಆಗುವ ಇಂಗ್ಲೆಂಡ್‌ ತಂಡದ ಕನಸು ನಿರ್ಣಾಯಕ ಹಂತದಲ್ಲಿ ವಿಫಲಗೊಂಡಿದ್ದಕ್ಕೆ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು.

ಇಂಗ್ಲೆಂಡ್‌ ತಂಡದ ನಾಯಕ ಹ್ಯಾರಿ ಕೇನ್ ಮತ್ತು ರಹೀಮ್ ಸ್ಟರ್ಲಿಂಗ್ ಮೇಲೆ ತವರಿನ ಅಭಿಮಾನಿಗಳು ಇಟ್ಟ ನಿರೀಕ್ಷೆ ಹುಸಿಯಾಗಿದೆ. ಇಬ್ಬರೂ ಆಟಗಾರರು ಟೂರ್ನಿಮೆಂಟ್‌ ಉದ್ದಕ್ಕೂ ಮಿಂಚಿನ ಪ್ರದರ್ಶನಗಳನ್ನು ನೀಡಿದ್ದರು.

Euro Cup 2020 England Vs Denmark Preview: Where To Watch Semifinal Match Liveಯುರೋ ಚಾಂಪಿಯನ್ಶಿಪ್‌ನಲ್ಲಿ ನಾಲ್ಕು ಪಂದ್ಯಗಳಿಂದ 5 ಗೋಲುಗಳಿಸಿದ ಕ್ರಿಸ್ಟಿಯಾನೋ ರೊನಾಲ್ಡೊ ಅತಿಹೆಚ್ಚು ಗೋಲು ಗಳಿಸಿದ ಆಟಗಾರನಿಗೆ ನಿಡಲಾಗುವ ಗೋಲ್ಡನ್‌ ಶೂ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಯುರೋ ಕಪ್‌ನಲ್ಲಿ ರೊನಾಲ್ಡೋಗೆ ದೊರೆತ ಮೊದಲ ಪ್ರಶಸ್ತಿ ಇದು.

16 ಗೋಲುಗಳನ್ನು ತಡೆದ ಇಂಗ್ಲೆಂಡ್‌ ಗೋಲ್‌ ಕೀಪರ್‌ ಜೊರ್ಡನ್‌ ಪಿಕ್‌ಫೋರ್ಡ್ ಅವರಿಗೆ ಗೋಲ್ಡನ್‌ ಗ್ಲೌಸ್‌ ಪ್ರಶಸ್ತಿಯನ್ನು ನೀಡಲಾಯಿತು.

ಮತ್ತೊಂದೆಡೆ ಇಟಲಿ ತಂಡ ಮ್ಯಾನೇಜರ್‌ ರಾಬರ್ಟೊ ಮ್ಯಾನ್ಸಿನಿ ಮಾರ್ಗದರ್ಶನದಲ್ಲಿ ಸತತ 34ನೇ ಗೆಲುವನ್ನು ಸಾಧಿಸುವ ಮೂಲಕ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿತು.

ಇದನ್ನೂ ಓದಿ: ಡಿಯಾಗೋ ಮರಡೋನಾ: ಫುಟ್‌ಬಾಲ್ ಲೋಕವನ್ನು ಪ್ರಜ್ವಲಿಸಿದ ಅದ್ಭುತ ಮಾಂತ್ರಿಕ

ಎರಡೂ ತಂಡಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಯುರೋ ಕಪ್‌ನಲ್ಲಿ ಇಂಗ್ಲೆಂಡ್‌ ತಂಡ ಮೊದಲ ಬಾರಿಗೆ ಫೈನಲ್ ಹಂತವನ್ನು ತಲುಪಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿತ್ತು. 2020 ರಲ್ಲೂ ಇಂಗ್ಲೆಂಡ್‌ನ ಪ್ರಶಸ್ತಿಯ ಬರ ನೀಗಲಿಲ್ಲ. 1966 ರ ಫುಟ್ಬಾಲ್‌ ವಿಶ್ವಕಪ್‌ ಗೆಲುವಿನ ನಂತರ ಇಂಗ್ಲೆಂಡ್‌ ಇದುವರೆಗೆ ಯಾವುದೇ ಮುಖ್ಯ ಕ್ರೀಡಾಕೂಟದಲ್ಲಿ ಫೈನಲ್‌ಗೇರಿರಲಿಲ್ಲ. ಹಾಗಾಗಿ ಇಂಗ್ಲೆಂಡ್‌ ಅಭಿಮಾನಿಗಳಲ್ಲಿ ಸ್ವಾಭಾವಿಕವಾಗಿ ನಿರೀಕ್ಷೆ ಗರಿಗೆದರಿತ್ತು.

ಅತ್ತ 4 ಬಾರಿಯ ವಿಶ್ವಕಪ್‌ ಚಾಂಪಿಯನ್‌ ಇಟಲಿ ಕೂಡ 2006 ರ ವಿಶ್ವಕಪ್‌ ಗೆಲುವಿನ ನಂತರ ಸತತ 15 ವರ್ಷ ಗೆಲುವಿನ ರುಚಿ ಸವಿದಿರಲಿಲ್ಲ. 2012 ರಲ್ಲಿ ಬಲಿಷ್ಠ ಸ್ಪೇನ್‌ ತಂಡದ ವಿರುದ್ಧ ಸೋಲನುಭವಿಸುವ ಮೂಲಕ ನಿರಾಸೆ ಗೊಂಡಿದ್ದ ಇಟಲಿ ಯುರೋ ಕಪ್‌ 2020 ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಳ್ಳುವ ಮೂಲಕ 2012 ರ ನಿರಾಸೆಗೆ ಕೊನೆಹಾಡಿತು.

ಕೊರೊನಾ ಸಾಂಕ್ರಾಮಿಕದ ನಡುವೆಯೂ ಮಿನಿ ವರ್ಡ್‌ಕಪ್ ಎಂದೇ ಖ್ಯಾತವಾಗಿರುವ ಯುರೋಪಿಯನ್‌ ಚಾಂಪಿಯನ್‌ಶಿಪ್‌ ಹಣಾಹಣಿ ಸುಖಾಂತ್ಯವಾಗಿದೆ. ಕೋವಿಡ್‌ ಕಾರಣದಿಂದ 16 ನೇ ಯುರೋ ಕಪ್‌ ಪಂದ್ಯಾವಳಿಯನ್ನು ಕೇವಲ ಒಂದು ದೇಶದಲ್ಲಿ ನಡೆಯದೇ 11 ದೇಶಗಳು ಟೂರ್ನಿಗೆ ಆತಿಥ್ಯ ವಹಿಸಿದವು. ಅಜೆರ್ಬೈಜಾನ್, ಡೆನ್ಮಾರ್ಕ್, ಇಂಗ್ಲೆಂಡ್, ಜರ್ಮನಿ, ಹಾಲೆಂಡ್, ಹಂಗೇರಿ, ಇಟಲಿ, ರೊಮೇನಿಯಾ, ರಷ್ಯಾ, ಸ್ಕಾಟ್ಲೆಂಡ್ ಮತ್ತು ಸ್ಪೇನ್ ಗಳಲ್ಲಿ ಯುರೋ ಕಪ್‌ ಪಂದ್ಯಗಳು ನಡೆದಿದ್ದು ಕೋವಿಡ್‌ ಆತಂಕದ ನಡುವೆ ಪಂದ್ಯಾವಳಿಯ ಸ್ಥಳ ಬದಲಾವಣೆಗೆ ಕೂಡ ಒತ್ತಾಯಗಳು ಕೇಳಿ ಬಂದಿದ್ದವು.

-ರಾಜೇಶ್‌ ಹೆಬ್ಬಾರ್‌


ಇದನ್ನೂ ಓದಿ: ಕೊರೊನಾ 3ನೇ ಅಲೆಯ ಆತಂಕ ಹೆಚ್ಚಿಸಿದ ಯುರೋ ಕಪ್ ಫುಟ್ಬಾಲ್ ಟೂರ್ನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....