Homeಮುಖಪುಟಅರ್ಜೆಂಟಿನಾ ಮಡಿಲಿಗೆ ಕೋಪಾ ಅಮೆರಿಕ ಕಪ್ : 28 ವರ್ಷಗಳ ನಂತರ ಪ್ರಶಸ್ತಿ ಬರ ನೀಗಿಸಿಕೊಂಡ...

ಅರ್ಜೆಂಟಿನಾ ಮಡಿಲಿಗೆ ಕೋಪಾ ಅಮೆರಿಕ ಕಪ್ : 28 ವರ್ಷಗಳ ನಂತರ ಪ್ರಶಸ್ತಿ ಬರ ನೀಗಿಸಿಕೊಂಡ ಮೆಸ್ಸಿ ಎಂಡ್‌ ಟೀಮ್‌

ನೆಯ್ಮಾರ್ ಕ್ರೀಡಾಂಗಣದಲ್ಲಿ ಕಂಬನಿಗರೆದರೆ, ಮೆಸ್ಸಿ ತನ್ನ ಕಿರಿಯ ಸಹೋದರನನ್ನು ಸಂತೈಸುವಂತೆ ನೆಯ್ಮಾರ್‌ರನ್ನು ಅಪ್ಪಿಕೊಂಡು  ಸಮಾಧಾನ ಹೇಳಿದರು. ಸೋಲು ಗೆಲುವಿನ ನಡುವೆ ಕ್ರೀಡೆ ಮಾಡಬೇಕಿದ್ದ ಕೆಲಸವನ್ನು ಕೋಪಾ ಅಮೆರಿಕ ಸದ್ದಿಲ್ಲದೇ ಮಾಡಿಯಾಗಿತ್ತು.

- Advertisement -
- Advertisement -

ಫುಟ್ಬಾಲ್‌ ದಂತಕತೆ ಮರಡೋನಾ, ವಿಶ್ವ ಶ್ರೇಷ್ಠ ಆಟಗಾರ ಮೆಸ್ಸಿ ಹೀಗೆ ಜಗತ್ತಿಗೆ ಶ್ರೇಷ್ಠ ಫುಟ್ಬಾಲರ್‌ಗಳನ್ನು ನೀಡಿದ ಅರ್ಜೆಂಟೆನಾ ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಪ್ರಶಸ್ತಿಯ ಹಂತಕ್ಕೆ ಹೋಗಿ ಮುಗ್ಗರಿಸುತ್ತಿತ್ತು. ವಿಶ್ವ ಶ್ರೇಷ್ಠ ತಂಡವಾಗಿದ್ದರೂ ಕಳೆದ 28 ವರ್ಷಗಳಿಂದ ಯಾವುದೇ ಮಹತ್ವದ ಕ್ರೀಡಾಕೂಟದಲ್ಲಿ ಚಾಂಪಿಯನ್‌ ಪಟ್ಟವನ್ನು ಧರಿಸಲು ಸಾಧ್ಯವಾಗುತ್ತಿರಲಿಲ್ಲ. ಸರಿ ಸುಮಾರು ಮೂರು ದಶಕಗಳ ಅರ್ಜೆಂಟಿನಾದ ಪ್ರಶಸ್ತಿ ಬರ    ನೀಗಿದೆ. ಇಂದು ಬೆಳಗಿನ ಜಾವ ಬ್ರೆಜಿಲ್‌ನ ರಿಯೋ ಡಿ ಜನೈರೋದ ವಿಶ್ವ ಪ್ರಸಿದ್ಧ ಮೆರಕಾನಾ ಕ್ರೀಡಾಂಗಣದಲ್ಲಿ ನಡೆದ ಕೋಪ ಅಮೆರಿಕಾ ಚಾಂಪಿಯನ್‌ಶಿಪ್‌ ಟ್ರೋಫಿ ಗೆಲ್ಲುವ ಮೂಲಕ ಲಿಯೋನಲ್‌ ಮೆಸ್ಸಿ ನಾಯಕತ್ವದ ತಂಡ ಲ್ಯಾಟಿನ್ ಅಮೆರಿಕದ ಫುಟ್ಬಾಲ್ ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ.

ಇಂದು ಬೆಳಗಿನ ಜಾವ ನಡೆದ ಬ್ರೆಜಿಲ್ ಮತ್ತು ಅರ್ಜೆಂಟಿನಾ  ತಂಡಗಳ ನಡುವಿನ ಫೈನಲ್‌ ಪಂದ್ಯ ಕೊನೆ  ಕ್ಷಣದವರೆಗೂ ಫುಟ್ಬಾಲ್‌ ಪ್ರೇಮಿಗಳನ್ನು ರೋಚಕತೆಯ ಉತ್ತುಂಗದಲ್ಲಿ ತಂದು ನಿಲ್ಲಿಸಿತ್ತು. ಜಗತ್ತಿನ ಫುಟ್ಬಾಲ್ ಪ್ರೇಮಿಗಳು ಮೆಸ್ಸಿ ಮತ್ತು ನೆಯ್ಮಾರ್‌ ಗೋಲು ಸಿಡಿಸುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಮೆಸ್ಸಿಯಾಗಲಿ ‍ನೆಯ್ಮಾರ್‌ ಆಗಲಿ ಅಂತಿಮ ಹಣಾಹಣಿಯಲ್ಲಿ ಗೋಲು ಸಿಡಿಸದೇ ಫುಟ್ಬಾಲ್‌ ಪ್ರೇಮಿಗಳನ್ನು ನಿರಾಸೆ ಗೊಳಿಸಿದರು. ಅರ್ಜೆಂಟಿನಾದ ಗೆಲುವಿನ ಗೋಲು ಪಂದ್ಯದ 22 ನಿಮಿಷದಲ್ಲಿ ಎಂಜೆಲ್‌ ಡಿ ಮಾರಿಯಾ ಅವರ ಮೂಲಕ ಬಂತು. ಆಮೂಲಕ ಅರ್ಜೆಂಟಿನಾ 1-0 ಗೋಲುಗಳ ಅಂತರದಲ್ಲಿ ಬ್ರೆಜಿಲ್‌ ತಂಡವನ್ನು ಮಣಿಸಿ ಲ್ಯಾಟಿನ್‌ ಅಮೆರಿಕಾದ  ಪುಟ್ಬಾಲ್‌ ಚಾಂಪಿಯನ್ನು ಪಟ್ಟವನ್ನು ಧರಿಸಿತು.

ಅರ್ಜೆಂಟಿನಾ ಗೆಲುವಿನ ರುವಾರಿ ಅಂಜೆಲ್ ಡಿ ಮಾರಿಯಾ

ಮಿಡ್‌ಫೀಲ್ಡರ್‌ ರೋಡ್ರಿಗೊ ಡಿ ಪಾಲ್ ನೀಡಿದ ಲಾಂಗ್‌ ಪಾಸನ್ನು ಮಾರಿಯೋ ಯಾವುದೇ ಪ್ರಮಾದವಿಲ್ಲದೇ ಬ್ರೆಜಿಲ್‌ನ ಗೋಲು ಪೆಟ್ಟಿಗೆ ತಲುಪಿಸಿದರು. ಆ ಕ್ಷಣ ಅರ್ಜೆಂಟಿನಾ ಪಾಳಯದಲ್ಲಿ ಸಂತಸದ ಕಲರವ ಮುಗಿಲು ಮುಟ್ಟಿತು. ಪಂದ್ಯದ ಅಂತ್ಯದವರೆಗೂ ದಕ್ಷಿಣದ ಅಮೆರಿಕದ ಎರಡು ಶ್ರೇಷ್ಠ ತಂಡಗಳು ಗೋಲು ಗಳಿಸಲು ತೀವ್ರ ಹಣಾಹಣಿ ನಡೆಸಿದವಾದರೂ ಗೋಲ್‌ಕೀಪರ್‌ ಮತ್ತು ಬಲಿಷ್ಠ ರಕ್ಷಣೆಯಿಂದ ಮತ್ತೊಂದು ಗೋಲು ಪಂದ್ಯದಲ್ಲಿ ದಾಖಲಾಗಲಿಲ್ಲ.

ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ: ಅಧ್ಯಕ್ಷ ಜೈರ್‌ ಬೊಲ್ಸೊನಾರೋ ರಾಜೀನಾಮೆಗೆ ಪಟ್ಟು

ಪಂದ್ಯದ 88 ನೇ ನಿಮಿಷದಲ್ಲಿ  ಲಿಯೋನಲ್‌ ಮೆಸ್ಸಿ ಗೋಲು ಪೆಟ್ಟಿಗೆಯ ಹತ್ತಿರಕ್ಕೆ ಚೆಂಡನ್ನು ತಂದು  ಅಭಿಮಾನಿಗಳು ಒಂದು ಕ್ಷಣ ಉಸಿರನ್ನು ಬಿಗಿಹಿಡಿದು ನಿಲ್ಲುವಂತೆ ಮಾಡಿದರು. ಆದರೆ ಮೆಸ್ಸಿ ಫೈನಲ್‌ನಲ್ಲಿ ಅಭಿಮಾನಿಗಳನ್ನು ನಿರಾಸೆ ಗೊಳಿಸಿದರು. ಇಡೀ  ಪಂದ್ಯದಲ್ಲಿ ಅರ್ಜೆಂಟಿನಾ ಗೋಲು ಪೆಟ್ಟಿಗೆಗೆ ಭದ್ರ ತಡೆಗೋಡೆಯಾಗಿ ನಿಂತು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದು ಗೋಲ್‌ಕೀಪರ್ ಎಮಿಲಿಯಾನೋ ಮಾರ್ಟಿನೇಜ್‌.  ಫೈನಲ್‌ ಪಂದ್ಯದಲ್ಲಿ ಮಾರ್ಟಿನೇಜ್‌ ತೋರಿದ ಕೆಚ್ಚೆದೆಯ ಪ್ರದರ್ಶನ ಎಂತಹವರನ್ನಾದರೂ ದಂಗುಬಡಿಸದೇ ಇರಲಾರದು. ಬ್ರೆಜಿಲಿಯನ್‌ ಸ್ಟ್ರೈಕರ್‌ಗಳ ಪ್ರಬಲ ದಾಳಿಯನ್ನು ಮೆಟ್ಟಿನಿಂತ ಮಾರ್ಟಿನೇಜ್‌ ಅರ್ಜೆಂಟಿನಾ ಮಡಿಲಿಗೆ ಕೋಪಾ ಅಮೆರಿಕ ಟ್ರೋಫಿ ಬರಲು ಮುಖ್ಯ ಕಾರಣ.

ಅರ್ಜೆಂಟಿನಾ ಗೋಲ್‌ಕೀಪರ್‌ ಎಮಿಲಿಯಾನೊ ಡಿ ಮಾರ್ಟಿನೇಜ್‌

ಬ್ರೆಜಿಲ್‌ನಲ್ಲಿ ಫೈನಲ್‌ ಪಂದ್ಯ. ಬ್ರೆಜಿಲ್ ಟ್ರೋಫಿಯಿಂದ ಒಂದು ಹೆಜ್ಜೆಯಷ್ಟೆ ದೂರವಿದೆ. ಆಂತಿಮ ಹಣಾಹಣಿ ಸಾಂಪ್ರದಾಯಿಕ ಎದುರಾಳಿ ಅಜೆಂಟಿನಾ ವಿರುದ್ಧ. ಹಾಗಿದ್ದ ಮೇಲೆ ಬ್ರೆಜಿಲಿಯನ್‌ ಅಭಿಮಾನಿಗಳ ಉತ್ಸಾಹಕ್ಕೆಲ್ಲಿ ತಡೆ ? ಅಂತಿಮ ಕ್ಷಣದ ವರೆಗೂ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿ ನೆರೆದಿದ್ದ ಸಾವಿರಾರು ಬ್ರೆಜಿಲಿಯನ್‌ ಪ್ರೇಕ್ಷಕರ ಕಂಗಳು ಪಂದ್ಯದಂತ್ಯಕ್ಕೆ ಹನಿಗೂಡಿದ್ದವು. ನೆಯ್ಮಾರ್ ಕ್ರೀಡಾಂಗಣದಲ್ಲಿ ಕಂಬನಿಗರೆದರೆ, ಮೆಸ್ಸಿ ತನ್ನ ಕಿರಿಯ ಸಹೋದರನನ್ನು ಸಂತೈಸುವಂತೆ ನೆಯ್ಮಾರ್‌ರನ್ನು ಅಪ್ಪಿಕೊಂಡು  ಸಮಾಧಾನ ಹೇಳಿದರು. ಸೋಲು ಗೆಲುವಿನ ನಡುವೆ ಕ್ರೀಡೆ ಮಾಡಬೇಕಿದ್ದ ಕೆಲಸವನ್ನು ಕೋಪಾ ಅಮೆರಿಕ ಸದ್ದಿಲ್ಲದೇ ಮಾಡಿಯಾಗಿತ್ತು.

ಕೊರೊನಾ ಸಾಂಕ್ರಾಮಿಕದ ನಡುವೆಯೂ ಜಗತ್ತಿನ ಅತಿ ಹಳೆಯ ಫುಟ್ಬಾಲ್‌ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬ್ರೆಜಿಲ್ ಸರ್ಕಾರ ಮತ್ತು ಬ್ರೆಜಿಲಿಯನ್‌ ಫುಟ್ಬಾಲ್‌ ಫೆಡರೇಷನ್‌ ನಿಜಕ್ಕೂ ಅಭಿನಂದನೆಗೆ ಅರ್ಹರು. ಕ್ರೀಡಾಕೂಟದ ಆರಂಭದಲ್ಲಿ ಬ್ರೆಜಿಲ್‌ನಲ್ಲಿ ನಡೆದ ಪ್ರತಿಭಟನೆಯನ್ನೆಲ್ಲ ಫುಟ್ಬಾಲ್ ತನ್ನ ತೆಕ್ಕೆಯಲ್ಲಿ ಕರಗಿಸಿಕೊಂಡಿದ್ದು ವಿಶೇಷ.

ಇದನ್ನೂ ಓದಿ: ಡಿಯಾಗೋ ಮರಡೋನಾ: ಫುಟ್‌ಬಾಲ್ ಲೋಕವನ್ನು ಪ್ರಜ್ವಲಿಸಿದ ಅದ್ಭುತ ಮಾಂತ್ರಿಕ

 2014ರಲ್ಲಿ ಇದೇ ಮೆರಕಾನಾ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಜರ್ಮನಿ ವಿರುದ್ಧ ಪಾರಾಭಾವಗೊಂಡು ನಿರಾಸೆಗೊಳಗಾಗಿತ್ತು. ಇಂದು 2014ರ ಅರ್ಜೆಂಟಿನಾದ  ನಿರಾಸೆಯನ್ನು ಅದೇ ಮೆರಕಾನಾ ಕ್ರೀಡಾಂಗಣ ಮರೆಸಿದೆ.

ವಿಶ್ವ ಫುಟ್ಬಾಲ್‌ನ ಮುಕುಟಮಣಿಯಾಗಿ ಕಂಗೊಳಿಸುತ್ತಿರವ ಮೆಸ್ಸಿ ಕ್ಲಬ್‌ ಫುಟ್ಬಾಲ್‌ನಲ್ಲಿ ಇದುವರೆಗೆ ನೂರಾರು ಪ್ರಶಸ್ತಿಗಳನ್ನು ಹತ್ತಾರು ಚಾಂಪಿಯನ್‌ ಶಿಫ್‌ ಜಯಿಸಿದ್ದಾರೆ. ಆದರೆ ಅರ್ಜೆಂಟಿನಾದ ಬಿಳಿ ನೀಲಿ ಪಟ್ಟೆಯ ಜೆರ್ಸಿ ತೊಟ್ಟು ದೇಶಕ್ಕೆ ಟ್ರೋಫಿ ಗೆಲ್ಲುವ  ಮೆಸ್ಸಿ ಕನಸು ಇದುವರೆಗೆ ಈಡೇರಿರಲಿಲ್ಲ. ಇಂದು ಮೆಸ್ಸಿ ಮತ್ತು ಅರ್ಜೆಂಟಿನಾದ ದೀರ್ಘಕಾಲದ ಟ್ರೊಫಿ ಕನಸು ನನಸಾಗಿದೆ . ಈ ರೋಚಕ ಪಂದ್ಯವನ್ನು ಗೆಲ್ಲುತ್ತಿದ್ದಂತೆಯೇ ಅರ್ಜೆಂಟಿನಾ ಆಟಗಾರರು ಮೆಸ್ಸಿಯನ್ನು ಮೇಲಕ್ಕೆ ಚಿಮ್ಮಿಸಿ ಸಂಭ್ರಮಿಸಿದ ಕ್ಷಣ ವಿಶ್ವ ಫುಟ್ಬಾಲ್ ಇತಿಹಾಸದಲ್ಲಿ ಅಚ್ಚಳಿಯದ ದಾಖಲೆಯಾಗಿ ಸೇರ್ಪಡೆಗೊಂಡಿತು.

ಅರ್ಜೆಂಟಿನಾ ಆಟಗಾರರು ಮೆಸ್ಸಿಯನ್ನು ಮೇಲಕ್ಕೆ ಚಿಮ್ಮಿಸಿ ಸಂಭ್ರಮಿಸಿದ ಕ್ಷಣ

2016 ರ ಜುಲೈ ೧೦ ರಂದು ಅಂದರೆ ಇಂದಿಗೆ ೫ ವರ್ಷ ಮೊದಲು ಫುಟ್ಬಾಲ್ ಕ್ರೀಡೆಯ ಮತ್ತೊಬ್ಬ ಶ್ರೇಷ್ಠ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ನೇತೃತ್ವದ ಪೋರ್ಚುಗಲ್ ಯುರೋಪಿಯನ್ ಚಾಂಪಿಯಾನ್‌ ಆಗಿ ಹೊರಹೊಮ್ಮಿತ್ತು. ರೊನಾಲ್ಡೋ ಗೆಲುವಿಗೂ ಪೋರ್ಚುಗಲ್‌ ಅಭಿಮಾನಿಗಳು ಹೀಗೆಯೇ ಸಂಭ್ರಮಿಸಿದ್ದರು.

ನಿವೃತ್ತಿಯ ಅಂಚಿನಲ್ಲಿರುವ ಫುಟ್ಬಾಲ್‌ ಜಗತ್ತಿನ ಇಬ್ಬರು ಶ್ರೇಷ್ಠ ಆಟಗಾರರಾದ ಮೆಸ್ಸಿ ಮತ್ತು ರೊನಾಲ್ಡೋ ಇನ್ನೆಷ್ಟು ವರ್ಷ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬುದು ತಿಳಿದಿಲ್ಲ. ವರ್ಷಗಳ ಹಿಂದೆ ನಿವೃತ್ತಿಯ ನಿರ್ಧಾರ ಮಾಡಿದ್ದ ಮೆಸ್ಸಿ ಅಭಿಮಾನಿಗಳ ಒತ್ತಾಯ ಮತ್ತು ದೇಶಕ್ಕಾಗಿ ಟ್ರೋಫಿ ಗೆಲ್ಲುವ ಕನಸಿನಿಂದ ತಮ್ಮ ನಿವೃತ್ತಿಯಿಂದ ಹಿಂದೆ ಸರಿದಿದ್ದರು.

 -ರಾಜೇಶ್ ಹೆಬ್ಬಾರ್‌

  ಇದನ್ನೂ ಓದಿ: ವಿಂಬಲ್ಡನ್ ಟೆನಿಸ್ ಟೂರ್ನಿ ಆರಂಭ; ಇಲ್ಲ ಭಾರತದ ಪ್ರಾತಿನಿಧ್ಯ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...