ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಪತ್ನಿ ವೈ.ಎಸ್. ಭಾರತಿ ಅವರ ಬಗ್ಗೆ ಅಶ್ಲೀಲ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ತೆಲುಗು ದೇಶಂ ಪಕ್ಷದ ಕಾರ್ಯಕರ್ತ ಮತ್ತು ಯೂಟ್ಯೂಬರ್ ಚೆಬ್ರೋಲು ಕಿರಣ್ ಕುಮಾರ್ ಅವರನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಶುಕ್ರವಾರ ವರದಿ ಮಾಡಿದೆ.
ಯೂಟ್ಯೂಬ್ ಚಾನೆಲ್ ಪಾಯಿಂಟ್ ಬ್ಲಾಂಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಆರೋಪಿ ಕಿರಣ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ. ಅವರನ್ನು ಗುರುವಾರ ಬಂಧಿಸಲಾಗಿದ್ದು, ನಂತರ ತೆಲುಗು ದೇಶಂ ಪಕ್ಷ ಅವರನ್ನು ಅಮಾನತುಗೊಳಿಸಿದೆ ಎಂದು ದಿ ಸೌತ್ ಫಸ್ಟ್ ವರದಿ ಮಾಡಿದೆ. ಅವರ ಹೇಳಿಕೆಗಳನ್ನು ಪಕ್ಷವೂ “ಅಸಭ್ಯ” ಎಂದು ಬಣ್ಣಿಸಿದೆ.
ಆತ್ಮಕೂರ್ ಗ್ರಾಮದ ನಿವಾಸಿಗಳು ನೀಡಿದ ದೂರುಗಳ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ, ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸುವುದು ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67 (ಎ) ಅಡಿಯಲ್ಲಿಯೂ ಅವರ ವಿರುದ್ಧ ಆರೋಪ ಹೊರಿಸಲಾಗಿದೆ.
ಕಿರಣ್ ಕುಮಾರ್ ಮಾಡಿದ ಹೇಳಿಕೆಗಳು ರಾಜಕೀಯ ವಿವಾದಕ್ಕೆ ಕಾರಣವಾಯಿತು, ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷವು ಅವರ ಹೇಳಿಕೆಯನ್ನು “ನಾಚಿಕೆಗೇಡಿನ” ಕೃತ್ಯ ಎಂದು ಬಣ್ಣಿಸಿದೆ. “ಇದು ರಾಜಕೀಯ ದ್ವೇಷವನ್ನು ಮೀರಿದ್ದು, ಇದು ಶುದ್ಧ ನಿಂದನೆ” ಎಂದು ಪಕ್ಷ ಹೇಳಿದೆ.
Unacceptable and shameful! An ITDP member has used abusive language against the family of former CM YS Jagan Mohan Reddy garu. This goes beyond political hatred — it’s pure obloquy. We demand immediate arrest.@APPOLICE100, @ncbn, @Anitha_TDP, @PawanKalyan, @naralokesh… pic.twitter.com/3D39X3KGu3
— YSR Congress Party (@YSRCParty) April 9, 2025
ಈ ನಡುವೆ ಕಿರಣ್ ಕುಮಾರ್ ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಿದ್ದು, ತಾನು ಈ ಹೇಳಿಕೆಗಳನ್ನು ಕೋಪದ ಕ್ಷಣದಲ್ಲಿ ಇದ್ದಾಗ ನೀಡಿದ್ದೆ ಎಂದು ಅವರು ಹೇಳಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. “ನನ್ನ ಮಾತುಗಳು ಯಾರಿಗಾದರೂ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಇದರಲ್ಲಿ ಯಾವುದೇ ದುರುದ್ದೇಶವಿರಲಿಲ್ಲ.” ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.
ಈ ಮಧ್ಯೆ ಮಾಜಿ ವೈಎಸ್‌ಆರ್‌ಸಿಪಿ ಸಂಸದ ಗೋರಂಟ್ಲಾ ಮಾಧವ್ ಅವರು ಕಿರಣ್ ಕುಮಾರ್ ಅವರನ್ನು ಪೊಲೀಸರು ಗುಂಟೂರ್‌ಗೆ ಕರೆದೊಯ್ಯುತ್ತಿದ್ದಾಗ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಮಾಧವ್ ಮತ್ತು ಅವರ ಬೆಂಬಲಿಗರನ್ನು ಬಂಧಿಸಿದ್ದಾರೆ. ಜಗನ್ ಮೋಹನ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಛತ್ತೀಸ್‌ಗಢ | ಪ್ರೇಮ ಸಂಬಂಧ ಆರೋಪಿಸಿ ದಲಿತ ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ
ಛತ್ತೀಸ್‌ಗಢ | ಪ್ರೇಮ ಸಂಬಂಧ ಆರೋಪಿಸಿ ದಲಿತ ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ


Love is blind is the saying!
Lovers even more so?
But why others are concerned?
If the parents have no objection to the union, why others intervene to create enemity or animosity?
Jealousy?