ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಇಚ್ಛೆಯ ಮೇರೆಗೆ ಕಂಪನಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಕಾಕಿನಾಡ ಸೀಪೋರ್ಟ್ಸ್ ಲಿಮಿಟೆಡ್‌ನ ಅಧ್ಯಕ್ಷರು ನೀಡಿದ ದೂರಿನ ಆಧಾರದ ಮೇಲೆ ಆಂಧ್ರಪ್ರದೇಶದ ಅಪರಾಧ ತನಿಖಾ ಇಲಾಖೆಯು ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಜಗನ್ ಆದೇಶದ
ಎಫ್‌ಐಆರ್‌ನಲ್ಲಿ ಹೆಸರಿಸಲಾದ ಮೂವರಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದ ವಿ. ವಿಜಯಸಾಯಿ ರೆಡ್ಡಿ, ವೈ.ವಿ. ವಿಕ್ರಾಂತ್ ರೆಡ್ಡಿ ಮತ್ತು ಅರಬಿಂದೋ ಫಾರ್ಮಾದ ನಿರ್ದೇಶಕ ಪಿ. ಶರತ್ ಚಂದ್ರ ರೆಡ್ಡಿ ಇದ್ದಾರೆ. ವೈ.ವಿ. ವಿಕ್ರಾಂತ್ ರೆಡ್ಡಿ ಅವರು ಪಕ್ಷದ ಸಂಸದ ವೈ.ವಿ. ಸುಬ್ಬಾ ರೆಡ್ಡಿ ಅವರ ಪುತ್ರನಾಗಿದ್ದು, ಪಿ. ಶರತ್ ಚಂದ್ರ ರೆಡ್ಡಿ ಅವರು ವಿ. ವಿಜಯಸಾಯಿ ರೆಡ್ಡಿ ಅವರ ಅಳಿಯ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಜೊತೆಗೆ, ಎರಡು ಕಂಪನಿಗಳಾದ PKF ಶ್ರೀಧರ್ ಆಂಡ್ ಸಂತಾನಂ LLP ಮತ್ತು ಅರಬಿಂದೋ ರಿಯಾಲ್ಟಿ ಆಂಡ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಹೆಸರನ್ನು ಕೂಡಾ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಜಗನ್ ಆದೇಶದ
ಈ ಬಗ್ಗೆ ಕಾಕಿನಾಡ ಸೀಪೋರ್ಟ್ಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕರ್ನಾಟಿ ವೆಂಕಟೇಶ್ವರ ರಾವ್ ಅವರು ಸೋಮವಾರ ದೂರು ದಾಖಲಿಸಿದ್ದರು. 2,500 ಕೋಟಿ ಮೌಲ್ಯದ ಕಾಕಿನಾಡ ಸೀಪೋರ್ಟ್ಸ್ ಲಿಮಿಟೆಡ್‌ನ 40% ರಷ್ಟು ಶೇರುಗಳನ್ನು ಬಲವಂತವಾಗಿ ಮತ್ತು ಬೆದರಿಕೆಯ ಮೂಲಕ 494 ಕೋಟಿ ರೂಪಾಯಿಗಳಿಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ವೆಂಕಟೇಶ್ವರ ರಾವ್ ಆರೋಪಿಸಿದ್ದಾರೆ.
400 ಕೋಟಿ ಮೌಲ್ಯದ ಕಾಕಿನಾಡ ವಿಶೇಷ ಆರ್ಥಿಕ ವಲಯದ 49%ರಷ್ಟು ಜಾಗವನ್ನು 12 ಕೋಟಿ ರೂ.ಗೆ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಒಪ್ಪಂದಕ್ಕೆ ಬಹುರಾಷ್ಟ್ರೀಯ ಸಂಸ್ಥೆಯು 400 ಕೋಟಿ ನೀಡಲು ಮುಂದಾಗಿತ್ತು.
“ಈ ಸಂಪೂರ್ಣ ಕಾರ್ಯಾಚರಣೆಯನ್ನು ಕೆಎಸ್‌ಪಿಎಲ್ ಮತ್ತು ಕಾಕಿನಾಡ ಎಸ್‌ಇಜೆಡ್‌ನಲ್ಲಿನ ನನ್ನ ಷೇರುಗಳನ್ನು ಕಸಿದುಕೊಳ್ಳಲು ಮತ್ತು ಷೇರುಗಳನ್ನು ಅರಬಿಂದೋ ಗ್ರೂಪ್‌ಗೆ ವರ್ಗಾಯಿಸಲು ಯೋಜಿಸಿ ನಡೆಸಲಾಗಿದೆ” ಎಂದು ವೆಂಕಟೇಶ್ವರ ರಾವ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
ಅದಾಗ್ಯೂ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಕಾಕಣಿ ಗೋವರ್ಧನ್ ರೆಡ್ಡಿ ಅವರು ಈ ಆರೋಪಗಳನ್ನು ರಾಜಕೀಯ ಸೇಡಿನ ಆರೋಪ ಎಂದು ಬಣ್ಣಿಸಿದ್ದಾರೆ. “ಇದು ರಾಜಕೀಯ ದ್ವೇಷದ ಭಾಗವಾಗಿದೆ ಎಂಬುದು ಸ್ಪಷ್ಟವಾಗಿದೆ… ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆಡುತ್ತಿರುವ ಆಟದ ಭಾಗವಾಗಿ ಇದನ್ನು ಮಾಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಜೂನ್ ವೇಳೆ ನಡೆದ ವಿಧಾನಸಭಾ ಚುನಾವಣೆಯಲ್ಲಿ, ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಸೋತು, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷದ ಸರ್ಕಾರ ಅಧಿಕಾರಕ್ಕೆ ಏರಿತ್ತು.
ಇದನ್ನೂ ಓದಿ: ‘ಮೋದಿ ಅದಾನಿ ಒಂದೆ..’ ಎಂಬ ವಿಶೇಷ ಜಾಕೆಟ್ ಧರಿಸಿದ ಇಂಡಿಯಾ ಬ್ಲಾಕ್ ಸದಸ್ಯರು; ಸಂಸತ್ತಿನಲ್ಲಿ ಪ್ರತಿಭಟನೆ
‘ಮೋದಿ ಅದಾನಿ ಒಂದೆ..’ ಎಂಬ ವಿಶೇಷ ಜಾಕೆಟ್ ಧರಿಸಿದ ಇಂಡಿಯಾ ಬ್ಲಾಕ್ ಸದಸ್ಯರು; ಸಂಸತ್ತಿನಲ್ಲಿ ಪ್ರತಿಭಟನೆ


