ತಮ್ಮ ಆಯ್ಕೆಯ ತಂಡವನ್ನು ಬೆಂಬಲಿಸದಿದ್ದರೆ ಹಿಂಸಾಚಾರಕ್ಕಿಳಿಯುವ “ಬ್ರಿಟಿಷ್ ಫುಟ್ಬಾಲ್ ಗೂಂಡಾಗಳ ತಂಡದಂತೆ” ಹಿಂದೂ ಧರ್ಮವನ್ನು ಕೆಲವರು ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಭಾನುವಾರ ಹೇಳಿದ್ದಾರೆ. ಜೈಪುರ ಸಾಹಿತ್ಯ ಉತ್ಸವದಲ್ಲಿ ನಡೆದ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು. ಜೈಶ್ರೀರಾಮ್
“ಈ ಜನರು, ನೀವು ನನ್ನ ತಂಡವನ್ನು ಬೆಂಬಲಿಸುವುದಿಲ್ಲ ಎಂದಾರೆ ನಾನು ನಿಮ್ಮ ತಲೆಗೆ ಹೊಡೆಯುತ್ತೇನೆ. ಜೈ ಶ್ರೀ ರಾಮ್ ಎಂದು ಹೇಳದಿದ್ದರೆ, ನಾನು ನಿಮ್ಮನ್ನು ಹೊಡೆಯುತ್ತೇನೆ ಎಂಬಂತೆ ಮಾಡಿದ್ದಾರೆ. ಆದರೆ, ಅದು ಹಿಂದೂ ಧರ್ಮವಲ್ಲ. ಅದಕ್ಕೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಶಶಿ ತರೂರ್ ಹೇಳಿದ್ದಾರೆ. ಜೈಶ್ರೀರಾಮ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಜಾಗತಿಕವಾಗಿ ಹೆಚ್ಚು ಮಾರಾಟವಾಗುವ ‘ಇಕಿಗೈ’ ಪುಸ್ತಕದ ಸಹ ಲೇಖಕ ಸ್ಪ್ಯಾನಿಷ್ ಬರಹಗಾರ ಫ್ರಾನ್ಸೆಸ್ಕ್ ಮಿರಾಲ್ಸ್ ಅವರೊಂದಿಗೆ ತರೂರ್ ವೇದಿಕೆಯನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಅವರು ಪುರುಷಾರ್ಥದ ಮಾರ್ಗ – ಮಾನವ ಜೀವನದ ನಾಲ್ಕು ಗುರಿಗಳ ಕುರಿತು ಮಾತನಾಡುತ್ತಾ, ಉತ್ತಮ ಹಿಂದೂವಾಗಿರಲು ನಾಲ್ಕು ಮಾರ್ಗಗಳಿವೆ ಎಂದು ಹೇಳಿದ್ದಾರೆ.
#WATCH | At Jaipur Literature Festival, author & Congress MP Shashi Tharoor says, “…There are four ways in which you can be a good Hindu, Right? So there’s Gyana Yoga, which is through reading and knowledge, you find out about these spiritual ideas, as I’ve tried to do. There’s… pic.twitter.com/gl66cNxMLm
— ANI (@ANI) February 2, 2025
“ನಾನು ಪ್ರಯತ್ನಿಸಿದಂತೆ ಜ್ಞಾನ ಯೋಗ ಮೊದಲನೆಯದ್ದಾಗಿದ್ದು, ಇದು ಓದು ಮತ್ತು ಜ್ಞಾನದ ಮೂಲಕ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ತಿಳಿದುಕೊಳ್ಳಬಹುದು. ಎರಡನೆಯದಾಗಿ, ಹೆಚ್ಚಿನ ಜನರು ಆಚರಿಸುವ ಭಕ್ತಿ ಯೋಗವಿದೆ. ನಂತರದಲ್ಲಿ ರಾಜ ಯೋಗವಿದೆ, ಅದು ಧ್ಯಾನ, ನಿಮ್ಮೊಳಗಿನ ಸತ್ಯವನ್ನು ಹುಡುಕುವುದಾಗಿದೆ… ಮತ್ತು ಅಂತಿಮವಾಗಿ ಕರ್ಮ ಯೋಗ, ಅದು ಮಾನವೀಯತೆಗಾಗಿ ಕೆಲಸ ಮಾಡುವ ಮೂಲಕ ದೇವರನ್ನು ನಿಜವಾಗಿಯೂ ಪೂಜಿಸುವುದು” ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ಮೈಕ್ರೋ ಫೈನಾನ್ಸ್‌ಗಳ ಆಟಾಟೋಪಗಳಿಗೆ ಕಡಿವಾಣಕ್ಕೆ ಮಹತ್ವದ ಸಭೆ ನಡೆಸಿದ ಸಚಿವ ಕೃಷ್ಣೇಬೈರೆ ಗೌಡ
ಮೈಕ್ರೋ ಫೈನಾನ್ಸ್‌ಗಳ ಆಟಾಟೋಪಗಳಿಗೆ ಕಡಿವಾಣಕ್ಕೆ ಮಹತ್ವದ ಸಭೆ ನಡೆಸಿದ ಸಚಿವ ಕೃಷ್ಣೇಬೈರೆ ಗೌಡ


