ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿದ್ದ ಪಕ್ಷದ ನಾಯಕನನ್ನು ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದಾನೆ ಎಂಬ ಆರೋಪದಲ್ಲಿ ಎನ್‌ಐಎ ಬಂಧಿಸಿದೆ. ಭಯೋತ್ಪಾದನಾ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಕಾಶ್ಮೀರದ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಪ್ರಕರಣದ ತನಿಖೆಯ ವೇಳೆ ಬಿಜೆಪಿ ನಾಯಕನ ಕೃತ್ಯಗಳು ಬೆಳಕಿಗೆ ಬಂದಿದೆ.
ಆರೋಪಿ ತಾರಿಕ್ ಮಿರ್ 2011ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಶೋಪಿಯಾನ್‌ನ ಸರಪಂಚ್ ಕೂಡಾ ಆಗಿದ್ದ ಎಂದು ವರದಿಯಾಗಿದ್ದು, 2014 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದನು. ಈತನನ್ನು ಎನ್‌ಐಎ ಬುಧವಾರ ಬಂಧಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದೇವಿಂದರ್ ಸಿಂಗ್ ಜೊತೆಗೆ ಬಂಧನಕ್ಕೆ ಒಳಗಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಶಂಕಿತ ಭಯೋತ್ಪಾದಕರನ್ನು ತನಿಖೆಗೆ ಒಳಪಡಿಸಿದಾಗ ಸಿಕ್ಕ ಮಾಹಿತಿಯಂತೆ ಆರೋಪಿ ತಾರೀಕ್ ಬಂಧನ ನಡೆದಿದೆ. ತಾರಿಕ್ ಮಿರ್ ವಿವಿಧ ಉಗ್ರಗಾಮಿ ಗುಂಪುಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುವಲ್ಲಿ ಒಳಗೊಂಡಿದ್ದನು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಶಂಕಿತ ಭಯೋತ್ಪಾದಕ ದೇವೀಂದರ್ ಸಿಂಗ್ ವಿರುದ್ದ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ
ಆರೋಪಿ ತಾರಿಕ್ ಕಾಶ್ಮೀರದಲ್ಲಿ ಉಗ್ರಗಾಮಿಗಳಿಗೆ ಶಸ್ತ್ರಾಸ್ತ್ರ ತಲುಪಿಸುವ ಮಧ್ಯವರ್ತಿಯಾಗಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಕೋರ್ಟ್‌ನಲ್ಲಿ ಹಾಜರುಪಡಿಸಿದ ಅಧಿಕಾಗಳು ಆರು ದಿನಗಳ ಕಸ್ಟಡಿಗೆ ನ್ಯಾಯಾಲಯದಿಂದ ಅನುಮತಿ ಪಡೆದಿದ್ದಾರೆ.
ದೇವಿಂದರ್ ಸಿಂಗ್ ಬಂಧನ ಪ್ರಕರಣದಲ್ಲಿ ಆತ ನೇರವಾಗಿ ಭಾಗಿಯಾಗದಿದ್ದರೂ ಹಿಜ್ಬುಲ್ ಮುಜಾಹಿದ್ದೀನ್ ಸೇರಿದಂತೆ ಹಲವು ಉಗ್ರಗಾಮಿ ಗುಂಪುಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ ಎಂದು ಎನ್‌ಐಎ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ತಾರಿಕ್ ಮಿರ್ ಹಿಜ್ಬುಲ್ ನೆಟ್‌ವರ್ಕ್‌ನಲ್ಲಿ ಭಾಗಿಯಾಗಿದ್ದಾನೆ ಎಂದು ಸೂಚಿಸಲು ಎನ್‌ಐಎ ‘ಬಲವಾದ ಲಿಂಕ್‌ಗಳನ್ನು’ ಕಂಡುಕೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ಪ್ರಿಂಟ್ ವರದಿ ಮಾಡಿದೆ.
ಇದನ್ನೂ ಓದಿ: ಮುಂಬೈ ದಾಳಿಯ ಬಗ್ಗೆ ಮನಮೋಹನ್ ಸಿಂಗ್ ಅವರನ್ನು ಪ್ರಶ್ನಿಸಿದ ಮಾಧ್ಯಮ ಪುಲ್ವಾಮ ದಾಳಿ ಬಗ್ಗೆ ಮೋದಿಯನ್ನು ಪ್ರಶ್ನಿಸಲಿಲ್ಲ!
2011 ರಲ್ಲಿ, ತಾರಿಕ್ ಮಿರ್ ಬಿಜೆಪಿ ಬೆಂಬಲದೊಂದಿಗೆ ಶೋಪಿಯಾನ್ ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದನು. 2014ರ ವಿಧಾನಸಭೆ ಚುನಾವಣೆಯಲ್ಲಿ ವಾಚಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದನು.
ಸಂಸತ್ ದಾಳಿ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಅಫ್ಜಲ್ ಗುರುವನ್ನು ಬಂಧಿಸಿದವರು ಎಂದು ಹೇಳಲಾಗುತ್ತಿರುವ ಉನ್ನತ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್‌ನನ್ನು ಜನವರಿಯಲ್ಲಿ ಉಗ್ರರೊಂದಿಗೆ ಬಂಧಿಸಲಾಗಿತ್ತು.
ಇದನ್ನೂ ಓದಿ: ಅಂಬಾನಿಗಾಗಿ NIA ತನಿಖೆ – ಪುಲ್ವಾಮಾ ದಾಳಿ ಹೇಗೆಂಬುದು ಪತ್ತೆಯಾಗಲಿಲ್ಲ?: ಶಿವಸೇನೆ ಪ್ರಶ್ನೆ
ಹಿಜ್ಬುಲ್ ಮುಜಾಹಿದ್ದೀನ್‌ನ ಸಂಘಟನೆಯ ಉಗ್ರಗಾಮಿಗಳೊಂದಿಗೆ ದೇವಿಂದರ್ ಸಿಂಗ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಂಧನಕ್ಕೆ ಒಳಗಾಗಿದ್ದನು. 2018 ರಲ್ಲಿ, ಅವರು ಶೌರ್ಯಕ್ಕಾಗಿ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆದಿದ್ದನು.


