Homeಮುಖಪುಟಅಂಬಾನಿಗಾಗಿ NIA ತನಿಖೆ - ಪುಲ್ವಾಮಾ ದಾಳಿ ಹೇಗೆಂಬುದು ಪತ್ತೆಯಾಗಲಿಲ್ಲ?: ಶಿವಸೇನೆ ಪ್ರಶ್ನೆ

ಅಂಬಾನಿಗಾಗಿ NIA ತನಿಖೆ – ಪುಲ್ವಾಮಾ ದಾಳಿ ಹೇಗೆಂಬುದು ಪತ್ತೆಯಾಗಲಿಲ್ಲ?: ಶಿವಸೇನೆ ಪ್ರಶ್ನೆ

350 ಕೆಜಿ ಆರ್‌ಡಿಎಕ್ಸ್ ದೇಶದೊಳಕ್ಕೆ ನುಗ್ಗಿದ್ದು ಹೇಗೆ ಎಂಬುದನ್ನು ಎರಡು ವರ್ಷವಾದರೂ ಪತ್ತೆ ಮಾಡಲಾಗದ ಎನ್‌ಐಎ 20 ಜಿಲೆಟಿನ್ ಕಡ್ಡಿಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದು ಅಂಬಾನಿಯ ಸಲುವಾಗಿ ಎಂಬ ಆರೋಪಗಳು ಕೇಳಿಬಂದಿವೆ.

- Advertisement -
- Advertisement -

ಫೆಬ್ರವರಿ 17 ರಂದು, ಮುಂಬೈನ ಜನರಲ್ ಪೋಸ್ಟ್ ಆಫೀಸ್ ಬಳಿ ಕಪ್ಪು ಮರ್ಸಿಡಿಸ್ ಬೆಂಜ್ ವಾಹನದ ಒಳಗೆ ಮುಂಬೈ ಇನ್ಸ್ಪೆಕ್ಟರ್ ಸಚಿನ್ ವಾಘೆ ವಾಹನದ ಮಾಲೀಕ ಮನ್ಸುಖ್ ಹಿರಾನ್ ಅವರನ್ನು ಸುಮಾರು 10 ನಿಮಿಷಗಳ ಕಾಲ ಭೇಟಿಯಾದರು ಎಂದು ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಎನ್‌ಡಿಟಿವಿಯ ಹೊಸ ವರದಿಯಲ್ಲಿ, ಮುಖೇಶ್ ಅಂಬಾನಿ ಭದ್ರತಾ ಭೀತಿಯನ್ನು ನಿಭಾಯಿಸಿದ ಪ್ರಕರಣದಲ್ಲಿ ಪರಮ್ ಬೀರ್ ಸಿಂಗ್ ಅವರನ್ನು ಮುಂಬೈ ಪೊಲೀಸ್ ಮುಖ್ಯಸ್ಥರ ಹುದ್ದೆಯಿಂದ ತೆಗೆದು ಹಾಕಿದ ಎರಡು ದಿನಗಳ ನಂತರ, ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತನಿಖೆ ಮತ್ತು ಪೊಲೀಸ್ ಅಧಿಕಾರಿ ಸಚಿನ್ ವಾಘೇ ಬಂಧನ ಕುರಿತು ಪ್ರಶ್ನೆಗಳನ್ನು ಎತ್ತಿದೆ.

ಮುಂಬೈ ಪೊಲೀಸ್ ಮುಖ್ಯಸ್ಥರ ವಜಾಗೊಳಿಸುವಿಕೆಯನ್ನು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ನಿನ್ನೆ ಸಮರ್ಥಿಸಿಕೊಂಡ ನಂತರ, ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಆದೇಶದ ಮೇರೆಗೆ ಮುಂಬೈ ಪೊಲೀಸ್ ಮುಖ್ಯಸ್ಥರನ್ನು ಆ ಸ್ಥಾನದಿಂದ ತೆರವು ಮಾಡಲಾಗಿತ್ತು.
ಆದರೆ ಈಗ ಸೇನಾ ಮುಖವಾಣಿ “ಸಾಮ್ನಾ” ದ ಸಂಪಾದಕೀಯವು ತೆರವುಗೊಂಡ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಅವರಿಗೆ ಬೆಂಬಲವಾಗಿ ನಿಂತಿದೆ.

“ಕಾರ್ಮೈಕಲ್ ರಸ್ತೆಯಲ್ಲಿ ದೊರೆತ 20 ಜೆಲೆಟಿನ್ ತುಂಡುಗಳು ಸ್ಫೋಟಗೊಂಡಿಲ್ಲ, ಆದರೆ ಈ ಸ್ಫೋಟಕಗಳು ರಾಜಕೀಯ ಮತ್ತು ಆಡಳಿತದಲ್ಲಿ ಸ್ಫೋಟಗಳಿಗೆ ಕಾರಣವಾಗುತ್ತಿವೆ. ಈ ಪ್ರಸಂಗದಿಂದಾಗಿ ಮುಂಬೈ ಪೊಲೀಸ್ ಆಯುಕ್ತರು ತಮ್ಮ ಹುದ್ದೆಯಿಂದ ಹೊರಹೋಗಬೇಕಾಯಿತು” ಎಂದು ಸೇನಾ ಸಂಪಾದಕೀಯ ಹೇಳುತ್ತದೆ.
ಈ ಪ್ರಕರಣದ ಮೊದಲ ಪೊಲೀಸ್ ಅಧಿಕಾರಿಯಾಗಿದ್ದ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಘೆ ಅವರನ್ನು ಎನ್‌ಐಎ ಬಂಧಿಸಿದೆ. ಕಾರು ಮಾಲಿಕನ ಸಾವಿನ ಬಗ್ಗೆ ಮುಂಬೈ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳ ತನಿಖೆ ನಡೆಸುತ್ತಿದೆ, ಆದರೆ ಎನ್‌ಐಎ “ಇದ್ದಕ್ಕಿದ್ದಂತೆ” ತನಿಖೆಯನ್ನು ವಹಿಸಿಕೊಂಡಿದೆ ಎಂದು ಸೇನಾ ಸಂಪಾದಕೀಯ ತಿಳಿಸಿದೆ.

ಸಚಿನ್ ವಾಘೆ

“ಇದರ ಹಿಂದಿನ ಉದ್ದೇಶ ಶೀಘ್ರದಲ್ಲೇ ಹೊರಬರಲಿದೆ. ಈ ಪ್ರಕರಣದಲ್ಲಿ ಯಾವುದೇ ಭಯೋತ್ಪಾದನೆಯ ಯಾವುದೇ ಸಂಬಂಧವಿಲ್ಲ. ಆದರೆ ಈ ಅಪರಾಧದ ಬಗ್ಗೆ ತನಿಖೆ ನಡೆಸಲು ಎನ್‌ಐಎ ಏಕೆ ಮುಂದಾಗಿದೆ? ಏನು ನಡೆಯುತ್ತಿದೆ? ಎನ್‌ಐಎ ದೇಶಾದ್ಯಂತ ಭಯೋತ್ಪಾದಕ ಘಟನೆಗಳ ಬಗ್ಗೆ ತನಿಖೆ ನಡೆಸುತ್ತದೆ. ಆದರೆ ನಾವು ತಿಳಿದುಕೊಳ್ಳಲು ಬಯಸುವುದು ಏನೆಂದರೆ, ಉರಿ ದಾಳಿ, ಪಠಾಣ್‌ಕೋಟ್ ದಾಳಿ ಮತ್ತು ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ನಿಖರ ತನಿಖೆ ಮಾಡಲಾಗದ ಸಂಸ್ಥೆ ಜೆಲೆಟಿನ್ ಕಡ್ಡಿಗಳ ಪ್ರಕರಣದಲ್ಲಿ ಏಕೆ ಭಯೋತ್ಪೋದನಾ ತನಿಖೆ ಮಾಡಿದೆ. ಅವರು ಯಾವ ಸತ್ಯವನ್ನು ಬಹಿರಂಗಪಡಿಸಿದ್ದಾರೆ? ಅವರು ಎಷ್ಟು ಅಪರಾಧಿಗಳನ್ನು ಬಂಧಿಸಿದ್ದಾರೆ? ಇದು ಕೂಡ ಸಸ್ಪೆನ್ಸ್ ವಿಷಯವಾಗಿದೆ “ಎಂದು ಸಾಮ್ನಾ ಹೇಳಿದೆ.

ಪರಮ್ ಬಿರ್ ಸಿಂಗ್ ಅವರನ್ನು ತೆಗೆದುಹಾಕಿದ್ದರಿಂದ ಅವರು ಅಪರಾಧ ಮಾಡಿದ್ದಾರೆಂದು ಸಾಬೀತಾಗಿಲ್ಲ ಎಂದು ಸಂಪಾದಕೀಯ ಹೇಳಿದೆ.

“ಪರಮ್ ಬಿರ್ ಸಿಂಗ್ ಅವರು ಮುಂಬೈ ಪೊಲೀಸರಿಗೆ ಬಹಳ ಕಷ್ಟದ ಸಮಯದಲ್ಲಿ ಜವಾಬ್ದಾರರಾಗಿದ್ದರು ಮತ್ತು ಸುಶಾಂತ್ ಮತ್ತು ಕಂಗನಾ ಪ್ರಕರಣದ ಹೊರತಾಗಿಯೂ ಅವರು ಅದನ್ನು ಮುಂಬೈ ಪೊಲೀಸರ ಸ್ಥೈರ್ಯದ ಮೇಲೆ ಪರಿಣಾಮ ಬೀರಲು ಬಿಡಲಿಲ್ಲ. ಅದಕ್ಕಾಗಿಯೇ ಸಿಬಿಐ ಅನ್ನು ಕಳುಹಿಸಲಾಗಿದ್ದರೂ ಸಹ, ಅವರು ಇಂತಹ ಪ್ರಕರಣದಲ್ಲಿ ಮುಂಬೈ ಪೊಲೀಸ್ ತನಿಖೆಯನ್ನು ಮೀರಿ ಹೋಗಬಾರದು ಎಂದರು. ಅವರ ಅಧಿಕಾರಾವಧಿಯಲ್ಲಿ ಟಿಆರ್‌ಪಿ ರೇಟಿಂಗ್ ಹಗರಣವೂ ಪತ್ತೆಯಾಗಿದೆ ಮತ್ತು ದೆಹಲಿಯ ಪ್ರಬಲ ಲಾಬಿ ಇದಕ್ಕಾಗಿ ಅವರ ಮೇಲೆ ಕೋಪಗೊಂಡಿದೆ ಎಂದು ಸೇನಾ ಹೇಳಿದೆ.

ಮನ್ಸುಖ್ ಹಿರಾನ್ ಅವರ ಅನುಮಾನಾಸ್ಪದ ಸಾವು ಬಿಜೆಪಿಗೆ ಎಲ್ಲರಿಗಿಂತ “ಹೆಚ್ಚು ದುಃಖವನ್ನು” ಉಂಟುಮಾಡಿದೆ ಎಂದು ಶಿವಸೇನೆ ವ್ಯಂಗ್ಯವಾಡಿದೆ.

ಸಾಮ್ನಾ ಸಂಪಾದಕೀಯಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ರಾಮ್ ಕದಮ್, “ಶಿವಸೇನೆ ಅಧಿಕಾರಿ ಗ್ಯಾಂಗ್ ಅನ್ನು ಬೆಂಬಲಿಸುತ್ತಿದೆ. ಅವರು ವರ್ಗಾವಣೆಗೊಂಡ ಪೊಲೀಸ್ ಆಯುಕ್ತರನ್ನು ಹೊಗಳಿದ್ದಾರೆ. ಗೃಹ ಸಚಿವರು ಕ್ಷಮಿಸಲಾಗದ ಲೋಪಗಳನ್ನು ಪ್ರಸ್ತಾಪಿಸಿದ್ದಾರೆ. ಶಿವಸೇನೆ ಕ್ಷಮಿಸದ ಸೋಲುಗಳ ಬಗ್ಗೆ ಅವರು ಸುಳಿವು ನೀಡುತ್ತಾರೆಯೇ? ಪಕ್ಷ ಮತ್ತು ಪತ್ರಿಕೆ ಈ ಇಬ್ಬರು ವಿಭಿನ್ನ ದನಿಗಳಲ್ಲಿ ಮಾತನಾಡುತ್ತಿವೆ. ಅವರ ವ್ಯತ್ಯಾಸಗಳು ರಾಜ್ಯದ ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ ಎಂದಿದ್ದಾರೆ.

ಜಿಲೆಟಿನ್ ಕಡ್ಡಿಗಳ ಸುತ್ತದ ಪ್ರಕರಣ

ಥಾಣೆ ಉದ್ಯಮಿ ಮನ್ಸುಖ್ ಹಿರಾನಿಯವರ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿ ಕಳವು ಮಾಡಿದ ದಿನ, ಅಂದರೆ ಫೆಬ್ರವರಿ 17 ರಂದು ಬಂಧಿತ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಘೆ ಅವರು ಮನ್ಸುಖ್ ಹಿರಾನ್ ಅವರನ್ನು ಭೇಟಿಯಾಗಿದ್ದರು ಎಂದು ಮೂಲಗಳ ಆಧಾರದಲ್ಲಿ ಎನ್‌ಡಿಟಿವಿ ವರದಿ ಮಾಡಿದೆ.

ಒಂದು ವಾರದ ನಂತರ, ಮುಂಬೈ ನಗರದ ಕಾರ್ಮೈಕಲ್ ರಸ್ತೆಯಲ್ಲಿ, ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ, ‘ಸ್ಫೋಟಕಗಳಿಂದ’ ತುಂಬಿದ ವಾಹನ ಪತ್ತೆಯಾಗಿತ್ತು. ಅದರಲ್ಲಿ ಅಂಬಾನಿ ಕುಟುಂಬಕ್ಕೆ ಬೆದರಿಕೆ ಪತ್ರ ಪತ್ತೆಯಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದರು. ಘಟನೆಗೆ ಸಂಬಂಧಿಸಿದ ಮೂರು ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಈಗ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಉದ್ಯಮಿ ಹಿರಾನ್ ಮತ್ತು ಪೊಲೀಸ್ ಅಧಿಕಾರಿ ವಾಘೆ ಅವರಿಬ್ಬರೂ ನಗರದ ಕೋಟೆ ಪ್ರದೇಶದಲ್ಲಿ ಒಟ್ಟಿಗೆ ಇದ್ದರು ಎಂದು ಹೇಳಿವೆ.

ವಾಹನ ಮಾಲೀಕ ಹಿರಾನ್ ಮಾರ್ಚ್ 5 ರಂದು ಥಾಣೆ ಕೊಲ್ಲಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅದರ ನಂತರ ಅವರ ಪತ್ನಿ ಪೊಲೀಸ್ ಅಧಿಕಾರಿ ವಾಘೆ ತನ್ನ ಗಂಡನ ಸಾವಿನಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದ್ದರು. ಈಗ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ವಾಘೇ, ಅದೇ ಎಸ್‌ಯುವಿಯನ್ನು ಮೃತ ಹಿರಾನ್‌ನಿಂದ ಪಡೆದು, ಸುಮಾರು ನಾಲ್ಕು ತಿಂಗಳು ಬಳಸಿ ಫೆಬ್ರವರಿ 5 ರಂದು ಅದನ್ನು ಹಿಂದಿರುಗಿಸಿದ್ದರು.

ಫೆಬ್ರವರಿ 17 ರಂದು, ವಾಘೆ ಮತ್ತು ಹಿರಾನ್ ಅವರು ಕಪ್ಪು ಮರ್ಸಿಡಿಸ್ ಬೆಂಜ್‌ನೊಳಗೆ ಜನರಲ್ ಪೋಸ್ಟ್ ಆಫೀಸ್ ಬಳಿ ನಡೆದ ಸುಮಾರು 10 ನಿಮಿಷಗಳ ಕಾಲ ಭೇಟಿ ನಡೆಸಿದರು ಎಂದು ಮೂಲಗಳು ಹೇಳುವೆ.

ಫೆಬ್ರವರಿ 17 ರಂದು ಹಿರಾನ್ ತಮ್ಮ ಸ್ಕಾರ್ಪಿಯೋವನ್ನು ಮಧ್ಯ ಮುಂಬಯಿಯ ವಿಖ್ರೋಲಿ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ನಿಲ್ಲಿಸಿದ್ದೆ, ದಕ್ಷಿಣ ಮುಂಬೈನ ಕ್ರಾಫೋರ್ಡ್ ಮಾರುಕಟ್ಟೆಯನ್ನು ತಲುಪಲು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದಿದ್ದೆ ಎಂದು ಹಿರಾನ್ ವರದಿ ಮಾಡಿದ್ದರು. ಮರುದಿನ, ತನ್ನ ಕಾರು ಕಳವು ಮಾಡಲಾಗಿದೆ ಎಂದು ತನಗೆ ಗೊತ್ತಾಗಿತ್ತು ಎಂದು ದೂರು ನೀಡಿದ್ದರು.

ವಿಶೇಷವೆಂದರೆ, ಆಟೋ ಪಾರ್ಟ್ಸ್ ವ್ಯಾಪಾರಿ ಹಿರಾನ್ ಹೇಳಿಕೆಯನ್ನು ಅಪರಾಧ ಗುಪ್ತಚರ ಘಟಕದ ಮುಖ್ಯಸ್ಥರಾಗಿದ್ದ ವಾಘೇ ದಾಖಲಿಸಿದ್ದಾರೆ. ಆದರೂ, ಅವರು ಫೆಬ್ರವರಿ 17 ರಂದು ಹಿರಾನ್ ಅವರೊಂದಿಗೆ ನಡೆಸಿದ ತಾನು ನಡೆಸಿದ ಸಭೆಯನ್ನು ದಾಖಲಿಸಿಲ್ಲ ಎನ್ನಲಾಗಿದೆ.
ಕಾರಿನ ಕಳ್ಳತನ ಮತ್ತು ಹಿರಾನ್ ಸಾವಿನ ಬಗ್ಗೆ ಈಗ ಎಟಿಎಸ್ ತನಿಖೆ ನಡೆಸುತ್ತಿದ್ದರೆ, ಎನ್‌ಐಎ ಅಂಬಾನಿಗೆ ಬೆದರಿಕೆಯ ಬಗ್ಗೆ ತನಿಖೆ ನಡೆಸುತ್ತಿದೆ.

ವಾಘೆ ಅವರ ಜಾಮೀನು ಅರ್ಜಿಯನ್ನು ಇಂದು ಥಾಣೆ ನ್ಯಾಯಾಲಯವು ವಿಚಾರಣೆಗೆ ಒಳಪಡಿಸುವ ನಿರೀಕ್ಷೆಯಿದೆ. ಈ ಮೊದಲು, ಮಧ್ಯಂತರ ಜಾಮೀನಿಗಾಗಿ ಅವರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸುವಾಗ, ಅಮಾನತುಗೊಂಡ ಪೋಲೀಸ್‌ನ ಕಸ್ಟಡಿ ವಿಚಾರಣೆ ಅಗತ್ಯ ಎಂದು ಅದು ಗಮನಿಸಿತ್ತು ಮತ್ತು ಈ ವಿಷಯವನ್ನು ಇಂದು ವಿಚಾರಣೆಗೆ ಪಟ್ಟಿ ಮಾಡಿದೆ. ಎಟಿಎಸ್ ತನ್ನ ಸಾಕ್ಷ್ಯವನ್ನು ನ್ಯಾಯಾಲಯದ ಮುಂದೆ ಇಟ್ಟು ವಾಘೆ ವಿರುದ್ಧ ಪ್ರೊಡಕ್ಷನ್ ವಾರಂಟ್ ಕೋರುವ ಸಾಧ್ಯತೆ ಇದೆ.

ವಾಘೆ ಇನ್ನೂ ಎನ್‌ಐಎ ವಶದಲ್ಲಿದ್ದಾರೆ. ಮಧ್ಯಂತರ ಪರಿಹಾರಕ್ಕಾಗಿ ಅವರು ಸಲ್ಲಿಸಿದ್ದ ಮನವಿಯನ್ನು ಥಾಣೆ ನ್ಯಾಯಾಲಯ ತಿರಸ್ಕರಿಸಿದ ಮರುದಿನ ಮಾರ್ಚ್ 13 ರಂದು ಅವರನ್ನು ಬಂಧಿಸಲಾಗಿದೆ.

350 ಕೆಜಿ ಆರ್‌ಡಿಎಕ್ಸ್, 20 ಜಿಲೆಟಿನ ಕಡ್ಡಿ!

ಇಲ್ಲಿ ಒಂದಿಷ್ಟು ಪ್ರಶ್ನೆಗಳು ಉದ್ಭವ ಆಗುತ್ತವೆ. ಭಯೋತ್ಪಾದನೆಯ ಕೃತ್ಯಗಳ ಕುರಿತು ತನಿಖೆ ಮಾಡುವ ಎನ್‌ಐಎ ಇತ್ತೀಚೆಗೆ ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ರಾಜಕೀಯ ಮಾಡುತ್ತಿದೆಯೇ ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಎತ್ತಿದ್ದಾರೆ.

ಅಂಬಾನಿ ಭದ್ರತೆಯ ಲೋಪ ಎಂಬ ಏಕೈಕ ವಿಷಯ ಇಟ್ಟುಕೊಂಡು ಎನ್‌ಐಎ ತನಿಖೆ ಮಾಡುವ ಅಗತ್ಯವಿತ್ತೆ? ಮಹಾರಾಷ್ಟ್ರ ಎಸ್‌ಐಟಿ ಆಗಲೇ ತನಿಖೆ ಆರಂಭಿಸಿತ್ತಲ್ಲವೆ? ಅಂಬಾನಿ ಮೆಚ್ಚಿಸಲು ಮತ್ತು ಮಹಾರಾಷ್ಟ್ರ ಸರ್ಕಾರವನ್ನು ಇಕ್ಕಟ್ಟಿಗೆ ದೂಡಲು ಕೇಂದ್ರ ಎನ್‌ಐಎ ಅನ್ನು ಛೂ ಬಿಟ್ಟಿತೆ? ಅರ್ನಾಬ್, ಕಂಗನಾ ಪ್ರಕರಣಗಳಲ್ಲಿ ಮುಂಬೈ ಪೊಲೀಸರ ತನಿಖೆಯಿಂದ ಹಿನ್ನಡೆ ಅನುಭವಿಸಿದ್ದ ಕೇಂದ್ರ ಈ ಸಾಹಸಕ್ಕೆ ಮುಂದಾಗಿತೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

350 ಕೆಜಿ ಆರ್‌ಡಿಎಕ್ಸ್ ಹೊತ್ತು ಬಂದು 40 ಸೈನಿಕರನ್ನು ಬಲಿ ತೆಗೆದುಕೊಂಡ ಪ್ರಕರಣ ಭೇದಿಸಲು ವರ್ಷಗಳ ನಂತರವೂ ವಿಫಲವಾಗಿರುವ ಎನ್‌ಐಎ, ಸ್ಫೋಟಿಸದೇ ಇದ್ದ 20 ಜಿಲೆಟಿನ್ ಕಡ್ಡಿಗಳ ಬಗ್ಗೆ ಆಸಕ್ತಿ ವಹಿಸಿದ್ದು ತಮಾಷೆಯೋ ಅಥವಾ ಅಂಬಾನಿ ಪ್ರೀತಿ ಗಳಿಸಲೋ?
ಇವು ಕೇವಲ ಶಿವಸೇನೆ ಪ್ರಶ್ನೆಗಳಲ್ಲ, ನೆಟ್ಟಿಗರ ಆಕ್ರೋಶದ ಪ್ರಶ್ನೆಗಳೂ ಕೂಡ ಹೌದು.


ಇದನ್ನೂ ಓದಿ: ದಾದ್ರ & ನಗರ ಹವೇಲಿ ಸಂಸದನ ಅಸಹಜ ಸಾವು: ತನಿಖೆಗೆ SIT ರಚಿಸಿದ ಮಹಾರಾಷ್ಟ್ರ ಸರ್ಕಾರ‌‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಳಿಪಟ-2: ಯೋಗರಾಜ ಭಟ್ರ ಲಾಜಿಕ್‌ಗಳನ್ನು ‘ದೇವ್ಲೆ’ ಬಲ್ಲ!

ನೀವು ಬರಹಗಾರರಾಗಿದ್ದೀರಾ? ಹೌದಾದರೆ, ನೀವು ಆರಂಭಿಕ ದಿನಗಳಲ್ಲಿ ಬರೆದ ಒಂದು ಬರಹವನ್ನು ಮತ್ತೆ ಓದಿ ನೋಡಿ. ಎಷ್ಟೊಂದು ಪೇವಲವಾಗಿ ಬರೆದಿದ್ದೇನಲ್ಲ ಅಂತ ನಿಮಗೆಯೇ ಅನಿಸಲೂಬಹುದು. ಕಾಲ ಉರುಳಿದಂತೆ, ನಮ್ಮ ಅನುಭವಗಳು ದಟ್ಟವಾದಂತೆ ಬರವಣಿಗೆಯೂ...