ವಿಶ್ವ ಸಂತೋಷ ವರದಿ- 149 ದೇಶಗಳಲ್ಲಿ ಭಾರತಕ್ಕೆ 139 ಸ್ಥಾನ!

ಶುಕ್ರವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ‘ವಿಶ್ವ ಹ್ಯಾಪಿನೆಸ್‌ ರಿಪೋರ್ಟ್-2021’ ರ ಪಟ್ಟಿಯಲ್ಲಿ ಭಾರತವು 149 ದೇಶಗಳಲ್ಲಿ 139 ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಫಿನ್ಲೆಂಡ್ ಅಗ್ರಸ್ಥಾನದಲ್ಲಿದೆ.

ವಿಶ್ವಸಂಸ್ಥೆಯ ಸಸ್ಟೈನಬಲ್ ಡೆವಲಪ್ಮೆಂಟ್ ಸೊಲ್ಯೂಷನ್ಸ್ ನೆಟ್ವರ್ಕ್ ಹೊರಡಿಸಿದ ‘ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್-2021’ ವರದಿಯು, ಕೊರೊನಾ ಸಂಕ್ರಾಮಿಕವು ಪ್ರಪಂಚದಾದ್ಯಂತದ ಜನರ ಹೇಗೆ ಪರಿಣಾಮ ಬೀರಿದೆ ಎಂಬುದರ ಮೇಲೆ ಕೇಂದ್ರೀಕರಿಸಿದೆ.

ವಿಶ್ವದ 149 ದೇಶಗಳ ನಾಗರಿಕರು ತಾವು ಎಷ್ಟು ಸಂತೋಷದಿಂದ ಇದ್ದೇವೆ ಎಂದು ಹೇಳಿರುವುದರ ಮೇಲೆ ದೇಶಗಳು ವರದಿಯಲ್ಲಿ ತಮ್ಮ ಸ್ಥಾನಗಳನ್ನು ಪಡೆದಿದೆ.

ಇದನ್ನೂ ಓದಿ: ‘ಕೋರ್ಟುಗಳು ಮಹಿಳೆಯರ ಕುರಿತ ರೂಢಿಗತ ಅಪವಾದ ಪರಿಗಣಿಸಬಾರದು’: ಸುಪ್ರೀಂ ಕೋರ್ಟ್

“ನಮ್ಮ ಗುರಿಯು ಎರಡು ಉದ್ದೇಶಗಳನ್ನು ಹೊಂದಿದ್ದು, ಮೊದಲನೆಯದಾಗಿ ಜನರ ಜೀವನದ ಸಂರಚನೆ ಮತ್ತು ಗುಣಮಟ್ಟದ ಮೇಲೆ ಸಾಂಕ್ರಾಮಿಕದ ಪರಿಣಾಮಗಳನ್ನು ಕೇಂದ್ರೀಕರಿಸುವುದು. ಎರಡನೆಯದಾಗಿ ಸಾಂಕ್ರಾಮಿಕವನ್ನು ಪ್ರಪಂಚದಾದ್ಯಂತದ ಸರ್ಕಾರಗಳು ಹೇಗೆ ಎದುರಿಸಿದೆ ಎಂಬುದನ್ನು ವಿವರಿಸಲು ಮತ್ತು ಮೌಲ್ಯಮಾಪನ ಮಾಡುವುದಾಗಿದೆ. ನಿರ್ದಿಷ್ಟವಾಗಿ, ಕೆಲವು ದೇಶಗಳು ಇತರ ದೇಶಗಳಿಗಿಂತ ಯಾಕೆ ಉತ್ತಮವಾಗಿ ಕಾರ್ಯನಿರ್ವಹಿಸಿವೆ ಎಂಬುದನ್ನು ವಿವರಿಸುವುದು ನಮ್ಮ ಉದ್ದೇಶವಾಗಿದೆ” ಎಂದು ವರದಿಯು ಹೇಳಿಕೆಯಲ್ಲಿ ತಿಳಿಸಿದೆ.

ಈ ಪಟ್ಟಿಯಲ್ಲಿ ಭಾರತವು 139 ನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ. ವಿಶ್ವಸಂಸ್ಥೆಯು 2019 ರಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಭಾರತವು 140 ನೇ ಸ್ಥಾನದಲ್ಲಿತ್ತು.

ವರದಿಯಲ್ಲಿ ಫಿನ್‌ಲ್ಯಾಂಡ್ ದೇಶವು ವಿಶ್ವದ ಅತ್ಯಂತ ಸಂತೋಷದಾಯಕ ದೇಶವೆಂದು ಸ್ಥಾನ ಪಡೆದಿದೆ. ನಾರ್ಡಿಕ್ ದೇಶಗಳಾದ ಐಸ್‌ಲ್ಯಾಂಡ್, ಡೆನ್ಮಾರ್ಕ್, ಸ್ವಿಟ್‌ಜಲ್ಯಾಂಡ್, ನೆದರ್ಲ್ಯಾಂಡ್ಸ್, ಸ್ವೀಡನ್, ಜರ್ಮನಿ ಮತ್ತು ನಾರ್ವೆಯು ನಂತರದ ಸ್ಥಾನದಲ್ಲಿದೆ.

ಇದನ್ನೂ ಓದಿ: ರಣಥಂಬೂರ್‌‌ ಟೈಗರ್‌ ರಿಸರ್ವ್‌ನಲ್ಲಿ ನಾಲ್ಕು ಹುಲಿಗಳು ಒಂದು ವರ್ಷದಿಂದ ನಾಪತ್ತೆ

ಪಾಕಿಸ್ತಾನ 105 ನೇ ಸ್ಥಾನದಲ್ಲಿ, ಬಾಂಗ್ಲಾದೇಶ 101 ನೇ ಸ್ಥಾನದಲ್ಲಿದೆ ಮತ್ತು ಚೀನಾ 84 ನೇ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಯುದ್ಧ ಪೀಡಿತ ಅಫ್ಘಾನಿಸ್ತಾನದ ಜನರು ತಮ್ಮ ಜೀವನದ ಬಗ್ಗೆ ಹೆಚ್ಚು ಅತೃಪ್ತರಾಗಿದ್ದಾರೆ, ನಂತರದ ಸ್ಥಾನಗಳಲ್ಲಿ ಜಿಂಬಾಬ್ವೆ (148), ರುವಾಂಡಾ (147), ಬೋಟ್ಸ್ವಾನ (146) ಮತ್ತು ಲೆಸೊಥೊ (145) ದೇಶಗಳಿವೆ.

ಈ ವರದಿಯ ಫಲಿತಾಂಶಗಳು ಜಿಡಿಪಿ ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ಇತರ ಅಂಶಗಳೊಂದಿಗೆ ಪರಸ್ಪರ ಸಂಬಂಧ ಹೊಂದಿವೆ ಎಂದು ರಿಪೋರ್ಟ್ ತಿಳಿಸಿದೆ.

ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದ್ದರೂ ಅಮೆರಿಕವು ಈ ಪಟ್ಟಿಯಲ್ಲಿ 19 ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಮೋದಿ, ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರನ್ನು ‘ದುರ್ಯೋಧನ, ದುಶ್ಯಾಶನ’ ಎಂದ ಮಮತಾ

LEAVE A REPLY

Please enter your comment!
Please enter your name here