ರಣಥಂಬೂರ್‌‌ ಟೈಗರ್‌ ರಿಸರ್ವ್‌ನಲ್ಲಿ ನಾಲ್ಕು ಹುಲಿಗಳು ಒಂದು ವರ್ಷದಿಂದ ನಾಪತ್ತೆ

ಎರಡು ಮರಿಗಳು ಸೇರಿದಂತೆ ನಾಲ್ಕು ಹುಲಿಗಳು ರಾಜಸ್ಥಾನದ ರಣಥಂಬೋರ್ ಟೈಗರ್ ರಿಸರ್ವ್‌ ಕಾಡಿನಲ್ಲಿ ಒಂದು ವರ್ಷದಿಂದ ನಾಪತ್ತೆಯಾಗಿದೆ ಎನ್ನಲಾಗಿದೆ. ಅವುಗಳನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ, ಆದರೆ ಅವು ಸಾವಿಗೀಡಾಗಿರುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ.

ನಾಪತ್ತೆಯಾಗಿರುವ ಹುಲಿಗಳನ್ನು ಮಾರ್ಚ್ 2020 ರಲ್ಲಿ ಕೊನೆಯದಾಗಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಎಂದು ಜನರು ಹೇಳುತ್ತಿದ್ದಾರೆ.

ಮಾಧ್ಯಮಕ್ಕೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು, ಕಾಡು 1,700 ಚದರ ಕಿ.ಮೀ ಪ್ರದೇಶದಲ್ಲಿ ಹರಡಿಕೊಂಡಿದ್ದು, ಇದರಲ್ಲಿ ದಟ್ಟವಾದ ಕಾಡುಗಳೂ ಇವೆ. ಹುಲಿಗಳು ನಾಪತ್ತೆಯಾಗಿರುವುದನ್ನು ತರಾತುರಿಯಲ್ಲಿ ದೃಡೀಕರಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: 86 ಮೇಯರ್‌‌/ಅಧ್ಯಕ್ಷ ಸ್ಥಾನಗಳಲ್ಲಿ 52 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಟ್ಟ ‘ಜಗನ್‌’ ಸರ್ಕಾರ!

ಹುಲಿಗಳು ಇಲ್ಲಿಂದ ಹೊರಬಿದ್ದು, ಮಧ್ಯಪ್ರದೇಶಕ್ಕೂ ತೆರಳಿರುವ ಸಾಧ್ಯತೆ ಇದೆ ಎಂದು ಅಧಿಕಾರಿ ಹೇಳಿದ್ದಾರೆ. ಇಂತಹ ಘಟನೆಗಳು ಈ ಹಿಂದೆ ಕೂಡಾ ವರದಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಅರಣ್ಯ ಪ್ರದೇಶಗಳಲ್ಲಿ ಸೀಮಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕೆಲವೊಮ್ಮೆ ಅವು ಹುಲಿಯ ಚಲನೆಯನ್ನು ಸೆರೆಹಿಡಿಯುವುದಿಲ್ಲ ಎಂದು ಅಧಿಕಾರಿ ಒತ್ತಿ ಹೇಳಿದ್ದಾರೆ.

ರಿಸರ್ವ್ ಆಡಳಿತವು ಹುಲಿಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದೆ ಮತ್ತು ಸಹಾಯಕ್ಕಾಗಿ ಹತ್ತಿರದ ಜಿಲ್ಲೆಗಳ ಅಧಿಕಾರಿಗಳಿಗೆ ಮತ್ತು ಮಧ್ಯಪ್ರದೇಶ ಅರಣ್ಯ ಇಲಾಖೆಗೆ ಪತ್ರ ಬರೆದಿದೆ.

ಕಳೆದ 10 ವರ್ಷಗಳಲ್ಲಿ ಕನಿಷ್ಠ 26 ಹುಲಿಗಳು ಮೀಸಲು ಪ್ರದೇಶದಿಂದ ಕಾಣೆಯಾಗಿವೆ. ಟಿ -42 ಫತೇಹ್ ಮತ್ತು ಟಿ -47 ಮೋಹನ್ ಹೆಸರಿನ ಹುಲಿಗಳು 2020 ರ ಜನವರಿಯಿಂದ ಮೀಸಲು ಪ್ರದೇಶದಿಂದ ಕಾಣೆಯಾಗಿವೆ.

ಎರಡು ವರ್ಷಗಳ ಹಿಂದೆ ನಾಲ್ಕು ಹುಲಿಗಳು ಮತ್ತು ಮೂರು ಮರಿಗಳನ್ನು ಹೊಂದಿದ್ದ ಕೋಟಾದ ಮುಕುಂದ್ರಾ ಹಿಲ್ಸ್ ಟೈಗರ್ ರಿಸರ್ವ್ ಈಗ ಕೇವಲ ಒಂದು ಹುಲಿಯನ್ನು ಹೊಂದಿದೆ. ಎರಡು ಹುಲಿಗಳು ಮತ್ತು ಒಂದು ಮರಿ ಸಾವನ್ನಪ್ಪಿದ್ದರೆ, ಮೂರು ಹುಲಿಗಳು ನಾಪತ್ತೆಯಾಗಿವೆ.

ಇದನ್ನೂ ಓದಿ: ಚುನಾವಣೆ ಎದುರಿಸಲು ನಮಗೆ ಯಾವುದೇ ಕೋಮು ಶಕ್ತಿಯ ಸಹಾಯ ಬೇಕಿಲ್ಲ: ಪಿಣರಾಯಿ ವಿಜಯನ್

LEAVE A REPLY

Please enter your comment!
Please enter your name here