ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಮೇಘಸ್ಫೋಟ ಪೀಡಿತ ಚೋಸಿತಿ ಗ್ರಾಮಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡ ಆಗಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರಕ ಪ್ರವಾಹದಿಂದ ಸಮುದಾಯ ಅಡುಗೆಮನೆ ಕೊಚ್ಚಿ ಹೋಗಿದ್ದು, ಹೆಚ್ಚಿನವರು ಯಾತ್ರಿಕರು ಸೇರಿದಂತೆ ಕನಿಷ್ಠ 56 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ದುರಂತ ಸಂಭವಿಸಿದಾಗ ಯಾತ್ರಿಕರಿಂದ ತುಂಬಿದ್ದ ಅಡುಗೆಮನೆ ಹಾನಿಗೀಡಾಗಿದೆ. ಸ್ವಲ್ಪ ಸಮಯದ ನಂತರ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಬೃಹತ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ರಕ್ಷಣಾ ಕಾರ್ಯಚರಣೆ 2 ನೇ ದಿನಕ್ಕೆ ಪ್ರವೇಶಿಸಿದೆ, 100 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆರಂಭದಲ್ಲಿ, ಸಾವಿನ ಸಂಖ್ಯೆ 12 ರಷ್ಟಿತ್ತು; ಕೆಲವು ಗಂಟೆಗಳ ನಂತರ, ಗುರುವಾರ ಸಂಜೆ 37 ಕ್ಕೆ ಏರಿತು. ಶುಕ್ರವಾರ, ಸಾವಿನ ಸಂಖ್ಯೆ 56 ಕ್ಕೆ ಏರಿತು. ಇನ್ನೂ ಅನೇಕ ಜನರ ಸುಳಿವು ಸಿಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಂದರೆ, ಮುಂಬರುವ ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು.
“ಗ್ರಾಮದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್ ತಂಡವು ಆಗಮಿಸಿದೆ. ಅವರು ತಡರಾತ್ರಿ ಗುಲಾಬ್‌ಗಢ ತಲುಪಿದ್ದಾರೆ” ಎಂದು ಜಿಲ್ಲಾಧಿಕಾರಿ ಕಿಶ್ತ್ವಾರ್ ಪಂಕಜ್ ಶರ್ಮಾ ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಮೇಘಸ್ಫೋಟದಿಂದ ಉಂಟಾದ ವಿನಾಶವು ಬೃಹತ್ ಪ್ರಮಾಣದಲ್ಲಿದ್ದು, ವಿಶಾಲ ಪ್ರದೇಶದಲ್ಲಿ ಹರಡಿರುವುದರಿಂದ ಇನ್ನೂ ಎರಡು ಎನ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆಯಲ್ಲಿ ಸೇರಲಿವೆ ಎಂದು ಅವರು ಹೇಳಿದರು. ಕಾಣೆಯಾದವರ ಹುಡುಕಾಟವನ್ನು ತೀವ್ರಗೊಳಿಸಲು ಭಾರತೀಯ ಸೇನೆಯು ಮತ್ತೊಂದು ತುಕಡಿಯನ್ನು ಸೇರಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಷ್ಟ್ರೀಯ ರೈಫಲ್ಸ್ ಪಡೆಗಳು ಕಾರ್ಯಾಚರಣೆ ತಂಡಗಳೊಂದಿಗೆ ಸೇರಿಕೊಂಡಿವೆ.
ವೈಟ್ ನೈಟ್ ಕಾರ್ಪ್ಸ್‌ನ ವೈದ್ಯಕೀಯ ತುಕಡಿಗಳೊಂದಿಗೆ ಒಟ್ಟು 300 ಸೈನಿಕರನ್ನು ಒಳಗೊಂಡ ತಲಾ 60 ಸಿಬ್ಬಂದಿಯ ಐದು ತುಕಡಿಗಳು ಸ್ಥಳದಲ್ಲಿದ್ದು, ಜೀವಗಳನ್ನು ಉಳಿಸಲು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ಪೊಲೀಸ್, ಎಸ್‌ಡಿಆರ್‌ಎಫ್ ಮತ್ತು ಇತರ ನಾಗರಿಕ ಸಂಸ್ಥೆಗಳೊಂದಿಗೆ ಸಮನ್ವಯದಿಂದ ಅವಿಶ್ರಾಂತವಾಗಿ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು.
ಎನ್‌ಡಿಆರ್‌ಎಫ್ ಜೊತೆಗೆ, ಸೇನೆ, ಎಸ್‌ಡಿಆರ್‌ಎಫ್, ಜಮ್ಮು ಮತ್ತು ಕಾಶ್ಮೀರ ಪೊಲೀಸರು, ನಾಗರಿಕ ಸಂಸ್ಥೆಗಳು ಮತ್ತು ಸ್ಥಳೀಯ ಸ್ವಯಂಸೇವಕರು ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಜಮ್ಮು-ಕಾಶ್ಮೀರ: ಭಾರೀ ಮೇಘಸ್ಫೋಟಕ್ಕೆ ಕನಿಷ್ಠ 46 ಮಂದಿ ಸಾವು, 200 ಕ್ಕೂ ಹೆಚ್ಚು ಜನರು ಕಾಣೆ!


