ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯನ್ನು ವೀಕ್ಷಿಸಲು ವಿದೇಶಿ ಪ್ರತಿನಿಧಿಗಳನ್ನು ಆಹ್ವಾನಿಸುವ ಕೇಂದ್ರ ಸರ್ಕಾರದ ಕ್ರಮವನ್ನು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಬುಧವಾರ ಟೀಕಿಸಿದ್ದು, ಚುನಾವಣೆಗಳು ಭಾರತದ ಆಂತರಿಕ ವಿಷಯವಾಗಿದೆ ಎಂದು ಹೇಳಿದ್ದಾರೆ.ಜಮ್ಮು ಕಾಶ್ಮೀರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಇಲ್ಲಿ ಚುನಾವಣೆಗಳನ್ನು ಪರೀಕ್ಷಿಸಲು ವಿದೇಶಿಯರನ್ನು ಏಕೆ ಕೇಳಬೇಕು ಎಂದು ನನಗೆ ತಿಳಿದಿಲ್ಲ. ವಿದೇಶಿ ಸರ್ಕಾರಗಳು ಪ್ರತಿಕ್ರಿಯಿಸಿದಾಗ, ಭಾರತ ಸರ್ಕಾರವು ‘ಇದು ಭಾರತದ ಆಂತರಿಕ ವಿಷಯ’ ಎಂದು ಹೇಳುತ್ತದೆ. ಈಗ ಇದ್ದಕ್ಕಿದ್ದಂತೆ ಅವರು ವಿದೇಶಿ ವೀಕ್ಷಕರು ನಮ್ಮ ಚುನಾವಣೆಗೆ ಬಂದು ನೋಡಬೇಕೆಂದು ಬಯಸುತ್ತಿದ್ದಾರೆ” ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಇದನ್ನೂಓದಿ: ಬದ್ಲಾಪುರ ಲೈಂಗಿಕ ದೌರ್ಜನ್ಯ ಎನ್‌ಕೌಂಟರ್ ಪ್ರಕರಣ| ಆರೋಪಿ ತಲೆಗೆ ಗುಂಡು, ರಕ್ತಸ್ರಾವದಿಂದ ಸಾವು: ಶವಪರೀಕ್ಷೆ ವರದಿ
ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆಗಳು “ನಮ್ಮ ಆಂತರಿಕ ವಿಷಯ”ವಾಗಿದ್ದು, “ನಮಗೆ ಅವರ ಪ್ರಮಾಣಪತ್ರ ಅಗತ್ಯವಿಲ್ಲ” ಎಂದು ಅವರು ಹೇಳಿದ್ದಾರೆ. ಅಲ್ಲದೆ, ಭಾರತ ಸರ್ಕಾರ ಮಾಡಿದ ಎಲ್ಲಾ ತೊಂದರೆಯ ಹೊರತಾಗಿಯೂ ಜನರು ಮತದಾನದಲ್ಲಿ ಭಾಗವಹಿಸಿದ್ದು ಸರ್ಕಾರದ ಕಾರಣಕ್ಕಲ್ಲ. ಅವರು ಜನರನ್ನು ಅವಮಾನಿಸಿದ್ದಾರೆ, ಅವರು ಜನರನ್ನು ಬಂಧಿಸಲು ಮತ್ತು ಕಿರುಕುಳ ನೀಡಲು ಸರ್ಕಾರದ ಎಲ್ಲಾ ಯಂತ್ರವನ್ನು ಬಳಸಿದ್ದಾರೆ ಎಂದು ಒಮರ್ ಹೇಳಿದ್ದಾರೆ.ಜಮ್ಮು ಕಾಶ್ಮೀರ
“ಅದರ ನಡುವೆಯೂ, ಜನರು ಬಂದು ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ. ಆದ್ದರಿಂದ, ಇದು ಭಾರತ ಸರ್ಕಾರವು ಹೈಲೈಟ್ ಮಾಡಬೇಕಾದ ವಿಷಯವಲ್ಲ” ಅವರು ಹೇಳಿದ್ದಾರೆ.
ಜುಮ್ಮುಕಾಶ್ಮೀರದಲ್ಲಿ ನಡೆಯುತ್ತಿರುವ ಚುನಾವಣೆಗಳನ್ನು ವೀಕ್ಷಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆಹ್ವಾನದ ಮೇರೆಗೆ ನವದೆಹಲಿ ಮೂಲದ ರಾಯಭಾರಿಗಳ 16 ರಾಜತಾಂತ್ರಿಕರ ನಿಯೋಗ ಬುಧವಾರ ರಾಜ್ಯಕ್ಕೆ ಆಗಮಿಸಿದೆ.
ಜಮ್ಮುಕಾಶ್ಮೀರದಲ್ಲಿ 10 ವರ್ಷಗಳ ನಂತರ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, 2019 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಇದು ಮೊದಲನೆಯ ಚುನಾವಣೆಯಾಗಿದೆ. “ಜಮ್ಮು ಕಾಶ್ಮೀರದ ಜನರು ಚುನಾವಣೆಗಾಗಿ 10 ವರ್ಷಗಳಿಂದ ಕಾಯುತ್ತಿದ್ದಾರೆ.” ಎಂದು ಎನ್‌ಸಿ ಉಪಾಧ್ಯಕ್ಷ ಒಮರ್ ಹೇಳಿದ್ದಾರೆ.
ವಿಡಿಯೊ ನೋಡಿ: LIVE : ಕ್ರಾಂತಿಕಾರಿ ಪ್ರಜಾಕವಿ, ಗಾಯಕ ಗದ್ದರ್ ಪ್ರಥಮ ಪರಿನಿಬ್ಬಾಣ


