ಭಾನುವಾರ ಸಂಜೆ ನಡೆದ ಭಾರತ ಪಾಕಿಸ್ತಾನ ಎದುರಿನ ಏಷ್ಯಾಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಜಯಗಳಿಸಿದ ನಂತರ ಭಾರತದ ತ್ರಿವರ್ಣ ಧ್ವಜ ಹಿಡಿಯಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನಿರಾಕರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಯ್ ಶಾ ನಡೆದ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
ಪಂದ್ಯದಲ್ಲಿ ಭಾರತ ತಂಡ ಗೆಲ್ಲಲು ಮೂರು ಎಸೆತಗಳಲ್ಲಿ 6 ರನ್ ಬೇಕಿದ್ದಾಗ ಹಾರ್ದಿಕ್ ಪಾಂಡ್ಯ ಸಿಕ್ಸರ್ ಸಿಡಿಸಿ ಗೆಲುವು ತಂದುಕೊಟ್ಟರು. ಆ ಸಂದರ್ಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾದ ಜಯ್ ಶಾ ಸಂಭ್ರಮಿಸುತ್ತಿದ್ದಾಗ ವ್ಯಕ್ತಿಯೊಬ್ಬರು ಭಾರತದ ಧ್ವಜವನ್ನು ನೀಡಲು ಮುಂದಾಗುತ್ತಾರೆ. ಅದನ್ನು ತೆಗೆದುಕೊಳ್ಳಲು ಜಯ್ ಶಾ ನಿರಾಕರಿಸುತ್ತಾರೆ. 5 ಸೆಕೆಂಡ್‌ಗಳ ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
Why son of India's Home Minister not accepting the National flag? pic.twitter.com/ZSB0P56iLV
— Maharashtra Congress (@INCMaharashtra) August 28, 2022
ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ತ್ರಿವರ್ಣ ಧ್ವಜವನ್ನು ಹಿಡಿಯಲು ಜಯ್ ಶಾ ಏಕೆ ನಿರಾಕರಿಸಿದರು? ಅವರಿಗೆ ಭಗವಧ್ವಜ ಅಥವಾ ಬಿಜೆಪಿ ಧ್ವಜ ಬೇಕಿತ್ತಾ? ಎಂದು ಮಾಜಿ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಹರ್ ಘರ್ ತಿರಂಗಕ್ಕಾಗಿ ಮೋದಿ ಸರ್ಕಾರ ಅಕ್ಷರಶಃ ಜನರ ಹಣವನ್ನು ಕಿತ್ತುಕೊಂಡಿತ್ತು. ಆದರೆ ಗೃಹ ಸಚಿವ ಅಮಿತ್ ಶಾ ರವರ ಮಗನಿಗೆ ರಾಷ್ಟ್ರಧ್ವಜ ಕೊಟ್ಟರೂ ಅದನ್ನು ಹಿಡಿಯಲು ನಿರಾಕರಿಸುತ್ತಾನೆ. ಹಾಗಾದರೆ “ದೇಶ ವಿರೋಧಿ” ಪ್ರಮಾಣಪತ್ರ ಎಲ್ಲಿದೆ ಎಂದು ಬಿಜೆಪಿ ಹೇಳುವುದೇ? ಅಥವಾ ಷಾ ರಾಜವಂಶಕ್ಕೆ ವಿನಾಯಿತಿ ಇದೆಯೇ? ಎಂದು ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಪ್ರಶ್ನಿಸಿದ್ದಾರೆ.
Modi govt literally deducted money from people’s salaries for Har Ghar Tiranga.
But Home Minister @AmitShah’s son refuses to hold the flag even when it’s offered to him.
Where’s the “anti-national” certificate, BJP?
Or is the Shah dynasty exempt?
— Saket Gokhale (@SaketGokhale) August 28, 2022
ಭಾರತದ ಧ್ವಜವನ್ನು ಹಿಡಿಯಲು ಬಿಜೆಪಿಯೇತರ ನಾಯಕರು ಯಾರಾದರೂ ನಿರಾಕರಿಸಿದರೆ ಇಷ್ಟೊತ್ತಿಗೆ ಅವರನ್ನು ದೇಶದ್ರೋಹಿಗಳೆಂದು ಇಡೀ ಬಿಜೆಪಿ ಐಟಿ ಸೆಲ್ ಕರೆಯುತ್ತಿತ್ತು. ಗೋಧಿ ಮೀಡಿಯಾ ದಿನವಿಡಿ ಅದರ ಕುರಿತು ಚರ್ಚಿಸುತ್ತಿತ್ತು. ಅದೃಷ್ಟವಶಾತ್ ಆ ಕೆಲಸ ಮಾಡಿರುವುದು ಶಾಹೆನ್‌ಶಾ ಅವರ ಮಗ ಜಯ್ ಶಾ ಎಂದು ಟಿಆರ್‌ಎಸ್ ಪಕ್ಷದ ಮುಖ್ಯಸ್ಥ ಕೃಷ್ಣನ್ ಟ್ವೀಟ್ ಮಾಡಿದ್ದಾರೆ.
If it was any non bjp leader who refused to hold the Indian Flag, the whole of BJP IT Wing would have called Anti National and the Godi Media would have day long debates on it ….
Luckily its Shahenshah's Son Jay Shah pic.twitter.com/zPZStr2I3D— krishanKTRS (@krishanKTRS) August 28, 2022
ಭಾರತದ ಗೃಹ ಸಚಿವರ ಪುತ್ರ ರಾಷ್ಟ್ರಧ್ವಜವನ್ನು ಏಕೆ ಸ್ವೀಕರಿಸುತ್ತಿಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಕೂಡ ಟೀಕಿಸಿದೆ. ಇಷ್ಟು ಮಾತ್ರವಲ್ಲದೆ ಜಯ್ ಶಾ ಏಕೆ ಭಾರತದ ಧ್ವಜವನ್ನು ಆ ಸಂದರ್ಭದಲ್ಲಿ ಸ್ವೀಕರಿಸಲಿಲ್ಲ ಎಂದು ಕೆಲವರು ವಿವರಣೆ ನೀಡಿದ್ದಾರೆ.
AITC National General Secy #AbhishekBanerjee slams #JayShah for refusing to hold National Flag post yesterday's game in the #AsiaCup2022#TMCPFoundationDay pic.twitter.com/mIzvmRRDeE
— Bhartendu Sharma (@Bhar10duSharma) August 29, 2022
ಜಯ್ ಶಾ ಕೈಗೆ ಭಾರತದ ಬಾವುಟ ಕೊಡಲು ಹೋದಾಗ, ಆತ ನಿರಾಕರಿಸುವುದನ್ನು ಟ್ರಾಲ್ ಮಾಡಲಾಗುತ್ತಿದೆ. ಜಯ್ ಶಾ ಈಗ ಕೇವಲ ಬಿಸಿಸಿಐ ಕಾರ್ಯದರ್ಶಿ ಮಾತ್ರವಲ್ಲ, ಏಷಿಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ.ಆತನ ಜತೆ ಏಷಿಯಾದ ಇತರ ದೇಶಗಳ ಬೋರ್ಡ್ ಪದಾಧಿಕಾರಿಗಳೂ ಇದ್ದರು. ಹೀಗಾಗಿ ಆತ ಮಾಡಿದ್ದು ಸರಿಯಾಗೇ ಇದೆ ಎಂಬುದು ನನ್ನ ಅನಿಸಿಕೆ. ನಿಮಗೇನನ್ನಿಸುತ್ತದೆ? ಎಂದು ಪತ್ರಕರ್ತ ದಿನೇಶ್ ಕುಮಾರ್ ದಿನೂ ಬರೆದಿದ್ದಾರೆ. ನಿಮಗೆ ಈ ಕುರಿತು ಏನು ಅನ್ನಿಸುತ್ತದೆ ಎಂಬುದನ್ನು ಕಮೆಂಟ್ ಮಾಡಿ.
ಇದನ್ನೂ ಓದಿ: ಏಷ್ಯಾ ಕಪ್‌ನಲ್ಲಿ ಮತ್ತೆ ಎರಡು ಭಾರಿ ಭಾರತ – ಪಾಕ್ ಮುಖಾಮುಖಿಯಾಗಬಹುದು!: ಇಲ್ಲಿದೆ ವಿವರ


