ನವದೆಹಲಿಯ ಜಾಮಿಯಾ ನಗರ ಪ್ರದೇಶದಲ್ಲಿ 17 ವರ್ಷದ ಬಾಲಕಿಯೊಬ್ಬಳು ಜೆಇಇ ಪರೀಕ್ಷೆ ತೇರ್ಗಡೆಯಾಗಲು ವಿಫಲವಾದ ಕಾರಣ, ಪರೀಕ್ಷೆ ನಡೆದು ತಿಂಗಳ ನಂತರ ವಸತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಜೆಇಇ ಫೈಲ್
ಬಾಲಕಿಯು 12 ನೇ ತರಗತಿ ಮುಗಿಸಿ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಶುಕ್ರವಾರ ಶಾಹೀನ್ ಬಾಗ್‌ನ ಕಟ್ಟಡದ ಏಳನೇ ಮಹಡಿಯಿಂದ ಜಿಗಿದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಬಾಲಕಿಯ ಸೂಸೈಡ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ‘ನನ್ನನ್ನು ಕ್ಷಮಿಸಿ, ನಾನು ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಯಾಗಲಿಲ್ಲ’ ಎಂದು ಬರೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನಿನ್ನೆ, 11:25 ಕ್ಕೆ, ಓಖ್ಲಾ ಮುಖ್ಯ ಮಾರುಕಟ್ಟೆಯಲ್ಲಿರುವ ಕಟ್ಟಡದ 7 ನೇ ಮಹಡಿಯ ಮೇಲ್ಛಾವಣಿಯಿಂದ 17 ವರ್ಷದ ಹುಡುಗಿ ಜಿಗಿದಿರುವ ಬಗ್ಗೆ ಜಾಮಿಯಾ ನಗರದ ಪೊಲೀಸ್ ಠಾಣೆಯಗೆ ಕರೆ ಬಂದಿತ್ತು. ಬಾಲಕಿ 12 ನೇ ತರಗತಿಯನ್ನು ತೇರ್ಗಡೆಯಾದ ನಂತರ ಜೆಇಇಗೆ ತಯಾರಿ ನಡೆಸುತ್ತಿದ್ದರು” ಎಂದು ಪೊಲೀಸರು ಹೇಳಿದ್ದಾರೆ.
“ಅಧ್ಯಯನದ ಒತ್ತಡ ಮತ್ತು ಫಲಿತಾಂಶ ನಿರೀಕ್ಷೆಗೆ ತಕ್ಕಂತಿಲ್ಲ ಎಂಬ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ” ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೆಇಇ ಫೈಲ್
ಪರೀಕ್ಷೆಯಲ್ಲಿ ಫೇಲಾದರೆ ಪ್ರಾಣ ಕಳೆದುಕೊಳ್ಳುವುದಾಗಿ ಬಾಲಕಿ ಈ ಹಿಂದೆ ತನ್ನ ತಾಯಿಗೆ ತಿಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ತಂದೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿಯಾಗಿದ್ದಾರೆ.
ಬಾಲಕಿ ಛಾವಣಿಯಿಂದ ಜಿಗಿದಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 194 ರ ಅಡಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಸೇರಿಸಿದ್ದಾರೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ – 104
ಇದನ್ನೂ ಓದಿ: ಜೈಲಿನಿಂದಲೇ ಲಾರೆನ್ಸ್ ಬಿಷ್ಣೋಯಿ ಸಂದರ್ಶನ : 7 ಮಂದಿ ಪಂಜಾಬ್ ಪೊಲೀಸರ ಅಮಾನತು
ಜೈಲಿನಿಂದಲೇ ಲಾರೆನ್ಸ್ ಬಿಷ್ಣೋಯಿ ಸಂದರ್ಶನ : 7 ಮಂದಿ ಪಂಜಾಬ್ ಪೊಲೀಸರ ಅಮಾನತು


