ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ರಾಜ್ಯವನ್ನು ನಿಂದಿಸಿದ ಆರೋಪದ ಮೇಲೆ ಎರಡು ಸಾಮಾಜಿಕ ಮಾಧ್ಯಮ ಖಾತೆಗಳ ಅಪರಿಚಿತ ಆಪರೇಟರ್‌ಗಳ ವಿರುದ್ಧ ರಾಜ್ಯದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಮುಖ್ಯಮಂತ್ರಿಯ ಪ್ರತಿಷ್ಠೆಗೆ ಹಾನಿ ತರಲು ಬಿಜೆಪಿಯು ತನ್ನ ಬೆಂಬಲಿಗ “ಶ್ಯಾಡೋ ಖಾತೆಗಳನ್ನು” ನಡೆಸುತ್ತಿದೆ ಎಂದು ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಆರೋಪಿಸಿದ ನಂತರ ಕನಿಷ್ಠ ಎರಡು ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ. ಜಾರ್ಖಂಡ್
“ಸಿಎಂ ಮತ್ತು ರಾಜ್ಯದ ವಿರುದ್ಧ ಅಪ್ರಚಾರ ನಡೆಸಿದ್ದಕ್ಕಾಗಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಅಸೆಂಬ್ಲಿ ಚುನಾವಣೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವ ಖಾತೆಗಳಿಂದ ಪೋಸ್ಟ್‌ಗಳನ್ನು ತೆಗೆದುಹಾಕಲು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮೂಲ ಕಂಪನಿಯಾದ ಮೆಟಾವನ್ನು ಪೊಲೀಸರು ಕೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ಖಾತೆಗಳನ್ನು ನಿರ್ವಹಿಸುವ ವ್ಯಕ್ತಿಗಳ ಬಗ್ಗೆಯೂ ಅವರು ಮಾಹಿತಿ ಕೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮೊದಲ ಎರಡು ಪ್ರಕರಣಗಳು ನವೆಂಬರ್ 8 ರಂದು ರಾಂಚಿಯ ಗೊಂಡಾ ಮತ್ತು ರಾತು ಪೊಲೀಸ್ ಠಾಣೆಗಳಲ್ಲಿ “ರಾಂಚಿ ಚೌಪಾಲ್” ಪುಟದ ವಿರುದ್ಧ ದಾಖಲಾಗಿದ್ದರೆ, ರಾಂಚಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ “ಜಾರ್ಖಂಡ್ ಚೌಪಾಲ್” ಪುಟದ ವಿರುದ್ಧ ಮೂರನೇ ಪ್ರಕರಣವನ್ನು ಬುಧವಾರ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಜಾರ್ಖಂಡ್
ಚುನಾವಣೆಗೆ ಸಂಬಂಧಿಸಿದ ಸುಳ್ಳು ಹೇಳಿಕೆಗಳು ಮತ್ತು ಫೋರ್ಜರಿಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆಯ ನಿಬಂಧನೆಗಳು ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳನ್ನು ಸಹ ಈ ಪ್ರಕರಣಗಳಿಗೆ ಅನ್ವಯಿಸಿದ್ದಾರೆ ಎಂದು ವರದಿಯಾಗಿದೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಯು ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಮೊದಲನೆಯ ಮತದಾನ ನವೆಂಬರ್ 13 ನಡೆದಿದ್ದು, ಎರಡನೆಯ ಹಂತದ ಮತದಾನ ನವೆಂಬರ್ 20 ರಂದು ಮುಕ್ತಾಯಗೊಳ್ಳಲಿದೆ. ಮಹಾರಾಷ್ಟ್ರ ಚುನಾವಣೆಯ ಜೊತೆಗೆ ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.
ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಒಕ್ಕೂಟವನ್ನು ಗುರಿಯಾಗಿಸಲು ಬಿಜೆಪಿಯು ಸಾಮಾಜಿಕ ಮಾಧ್ಯಮ ಪ್ರಚಾರಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದ್ದು, 95,000 ವಾಟ್ಸಾಪ್ ಗುಂಪುಗಳನ್ನು ರಚಿಸಿದೆ ಎಂದು ಸೋರೆನ್ ಆರೋಪಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
“ನಾವು ಶ್ಯಾಡೊ ಖಾತೆಗಳ ಮೂಲಕ ಪ್ರಚಾರ ಮಾಡುವ ಸಾಮಾಜಿಕ ಮಾಧ್ಯಮ ವೇದಿಕೆಗಳ ವಿರುದ್ಧ ರಾಂಚಿಯ ಗೊಂಡಾ ಮತ್ತು ರತು ಪೊಲೀಸ್ ಠಾಣೆಗಳಲ್ಲಿ ಎರಡು ದೂರುಗಳನ್ನು ದಾಖಲಿಸಿದ್ದೇವೆ” ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ವಕ್ತಾರ ವಿನೋದ್ ಪಾಂಡೆ ಪಿಟಿಐಗೆ ತಿಳಿಸಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದಿಂದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕೆ. ರವಿಕುಮಾರ್ ಅವರು ದೂರನ್ನು ಸ್ವೀಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಯನ್ನು ಟೀಕಿಸಿರುವ ಸಿಎಂ ಸೊರೆನ್, “ಸರ್ವಾಧಿಕಾರಿಗಳು ಶತಕೋಟಿ ರೂಪಾಯಿಗಳನ್ನು ಹೊಂದಿರಬಹುದು. ಆದರೆ, ಅನ್ಯಾಯ ವಿಧಾನಗಳ ಮೂಲಕ ಗೆಲ್ಲುವ ಬದಲು ಸಿದ್ದಾಂತಗಳಿಗೆ ಅಂಟಿಕೊಳ್ಳುವುದು ಉತ್ತಮ. ನಾನು ನಿಮಗೆ ಒಂದು ಪ್ರಮುಖ ವರದಿಯನ್ನು ಪ್ರಸ್ತುತಪಡಿಸಲು ಬಯಸುತ್ತೇನೆ. ಶ್ಯಾಡೊ ಖಾತೆಗಳ ಮೂಲಕ ಅಪ್ರಚಾರ ಮಾಡುವ ಮೂಲಕ ನನ್ನ ಮತ್ತು ರಾಜ್ಯದ ಇಮೇಜ್‌ಗೆ ಹಾನಿ ಮಾಡಲು ಬಿಜೆಪಿಯು ಫೇಸ್‌ಬುಕ್ ಜಾಹೀರಾತುಗಳಿಗೆ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ” ಎಂದು ಹೇಳಿದ್ದಾರೆ.
‘ಜಾರ್ಖಂಡ್ ಚೌಪಾಲ್’ ಮತ್ತು ‘ರಾಂಚಿ ಚೌಪಾಲ್’ ನಂತಹ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಅಪಪ್ರಚಾರ ಮಾಡಲು ಕಳೆದ 30 ದಿನಗಳಲ್ಲಿ 72 ಲಕ್ಷ ರೂಪಾಯಿಗಳನ್ನು ಜಾಹೀರಾತುಗಳಿಗಾಗಿ ಖರ್ಚು ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
“ಈ ಪುಟಗಳ ವಿಷಯವನ್ನು ನೀವು ನೋಡಿದರೆ, ಅವರ ಏಕೈಕ ಉದ್ದೇಶ ನನ್ನ ಮತ್ತು ರಾಜ್ಯದ ಪ್ರತಿಷ್ಠೆಯನ್ನು ಹಾಳುಮಾಡುವುದು. ಧಾರ್ಮಿಕ ದ್ವೇಷವನ್ನು ಹರಡುವುದು ಮತ್ತು ಜನರು ತಮ್ಮೊಳಗೆ ಜಗಳವಾಡುವಂತೆ ಮಾಡುವುದು” ಎಂದು ಅವರು ಹೇಳಿದ್ದಾರೆ.
“ಬಿಜೆಪಿ ನನ್ನ ಪ್ರತಿಷ್ಠೆಯನ್ನು ಹಾಳುಮಾಡಲು ಕೋಟಿಗಟ್ಟಲೆ ಖರ್ಚು ಮಾಡಿದ್ದರೂ, ನಾನು ಯಾವುದೇ ಪ್ರಚಾರಕ್ಕಾಗಿ ಒಂದು ರೂಪಾಯಿಯನ್ನು ಖರ್ಚು ಮಾಡಿಲ್ಲ. ನೀವು ಯಾವುದೇ ಸಾಮಾಜಿಕ ಮಾಧ್ಯಮದ ಜಾಹೀರಾತು ಲೈಬ್ರರಿಗೆ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು” ಎಂದು ಸೋರೆನ್ ಹೇಳಿದ್ದಾರೆ. ಅದಾಗ್ಯೂ, ಸೋರೆನ್ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ.
ಇದನ್ನೂ ಓದಿ: ಚುನಾವಣೆ ಹೊತ್ತಿನಲ್ಲಿ ‘ಎಎಪಿ’ಗೆ ಭಾರೀ ಹಿನ್ನಡೆ; ಪಕ್ಷ ತೊರೆದ ದೆಹಲಿ ಸಚಿವ ಕೈಲಾಶ್ ಗಹ್ಲೋಟ್
ಚುನಾವಣೆ ಹೊತ್ತಿನಲ್ಲಿ ‘ಎಎಪಿ’ಗೆ ಭಾರೀ ಹಿನ್ನಡೆ; ಪಕ್ಷ ತೊರೆದ ದೆಹಲಿ ಸಚಿವ ಕೈಲಾಶ್ ಗಹ್ಲೋಟ್


