2024ರ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಬಿಜೆಪಿ ತನ್ನ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದೆ. ಆದರೆ ಅದರಲ್ಲಿ ಇರುವ ಪ್ರಧಾನ ವಿಚಾರ ಏನೆಂದರೆ ಪ್ರತಿ ಮೂರನೇ ಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ. ಸುಮಾರು 76 ಪುಟಗಳ ಪ್ರಣಾಳಿಕೆಯಲ್ಲಿ ಮೋದಿ ಅವರ ಚಿತ್ರ 23 ಬಾರಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಜಾರ್ಖಂಡ್ ಬಿಜೆಪಿ ಪ್ರಣಾಳಿಕೆ
ಇದಕ್ಕೆ ವ್ಯತಿರಿಕ್ತವಾಗಿ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿಗಳಾದ ಬಾಬುಲಾಲ್ ಮರಾಂಡಿ ಮತ್ತು ಅರ್ಜುನ್ ಮುಂಡಾ ಸೇರಿದಂತೆ ಪಕ್ಷದ ಪ್ರಮುಖ ಆದಿವಾಸಿ ನಾಯಕರ ಚಿತ್ರ ಬಹುತೇಕ ಕಾಣಿಸಿಕೊಂಡಿಲ್ಲ ಎಂದು ವರದಿ ಉಲ್ಲೇಖಿಸಿದೆ. ಜೊತೆಗೆ, ಪ್ರಣಾಳಿಕೆಯಲ್ಲಿ ಮಹಿಳಾ ನಾಯಕರ ಪ್ರಾತಿನಿಧ್ಯದ ಕೊರತೆಯಿದ್ದು, ವಿಶೇಷವಾಗಿ ಆದಿವಾಸಿ ಮಹಿಳೆಯರಿಗೆ, ಮಹಿಳಾ ಸಬಲೀಕರಣಕ್ಕೆ ಪಕ್ಷಕ್ಕೆ ಇರುವ ಬದ್ಧತೆಯ ಬಗ್ಗೆ ಪ್ರಶ್ನೆಗಳು ಮುನ್ನಲೆಗೆ ಬಂದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರಣಾಳಿಕೆಯ ಹಲವಾರು ಪುಟಗಳು ಮೋದಿಯವರ ಫೋಟೋಗಳಿಗೆ ಮಾತ್ರ ಸಂಪೂರ್ಣವಾಗಿ ಮೀಸಲಾಗಿದ್ದು, ಆದಿವಾಸಿ ನಾಯಕ ಮರಾಂಡಿ ಅವರ ಕೇವಲ ಎರಡು, ಅದೂ ಕೂಡಾ ಚಿಕ್ಕದಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಣಾಳಿಕೆಯಲ್ಲಿ ಮೋದಿ ಕೇಂದ್ರ ಸ್ಥಾನದಲ್ಲಿರುವ ಛಾಯಾಚಿತ್ರದ ಹಿನ್ನೆಲೆಯಲ್ಲಿ ಮಾತ್ರ ಅರ್ಜುನ್ ಮುಂಡಾ ಅವರ ಚಿತ್ರ ಕಾಣಿಸಿಕೊಂಡಿದೆ. ಜಾರ್ಖಂಡ್ ಬಿಜೆಪಿ ಪ್ರಣಾಳಿಕೆ
ಬಿರ್ಸಾ ಮುಂಡಾ (1875-1900), ತೆಲಂಗಾ ಖರಿಯಾ (1806-1880), ಮತ್ತು ವೀರ್ ಬುಧು ಭಗತ್ (1792-1832) ನಂತಹ ಆದಿವಾಸಿ ಐಕಾನ್‌ಗಳಿಗೆ ಮೋದಿ ಗೌರವ ಸಲ್ಲಿಸುತ್ತಿರುವ ಚಿತ್ರಗಳು ಪ್ರಣಾಳಿಕೆಯಲ್ಲಿ ಕಂಡುಬರುತ್ತದೆ. ಮತ್ತೊಂದು ಚಿತ್ರದಲ್ಲಿ, ಮಹಿಳೆಯರ ಗುಂಪಿನ ನಡುವೆ ಮೋದಿಯನ್ನು ತೋರಿಸಲಾಗಿದೆ.
ಉಳಿದಂತೆ, ಪ್ರಧಾನ ಮಂತ್ರಿ ಕಿಸಾನ್ ಮಂಧನ್ ಯೋಜನೆಯಿಂದ ಪ್ರಯೋಜನಗಳನ್ನು ವಿತರಿಸುತ್ತಿರುವ ಮೋದಿ ಚಿತ್ರವಿದೆ. ಮತ್ತೊಂದು ಫೋಟೋದಲ್ಲಿ ಅವರು ಕುಂಬಾರರೊಬ್ಬರಿಂದ ಸಂವಹನ ನಡೆಸುತ್ತಿರುವುದು ಮತ್ತು ಇನ್ನೊಂದು ಚಿತ್ರ ಅವರು ಮಕ್ಕಳೊಂದಿಗೆ ತಮಾಷೆಯಾಗಿ ತೊಡಗಿಸಿಕೊಂಡಿರುವಂತೆ ತೋರಿಸಲಾಗಿದೆ.
ಅಷ್ಟೆ ಅಲ್ಲದೆ ಪ್ರಣಾಳಿಕೆಯ 67 ನೇ ಪುಟದಲ್ಲಿರುವ ದೊಡ್ಡ ಗಾತ್ರದ ಛಾಯಾಚಿತ್ರವು ಕೈಗಳನ್ನು ಮಡಚಿ, ಹಣೆಯ ಮೇಲೆ ಧಾರ್ಮಿಕ ಚಿಹ್ನೆಗಳು ಇರುವ ಚಿತ್ರನ್ನು ಹಾಕಲಾಗಿದ್ದು, ಅದರಲ್ಲಿ ಅವರು ಆರ್‌ಎಸ್‌ಎಸ್ ಕಾರ್ಯಕರ್ತ ಎಂಬ ಗುರುತನ್ನು ಸೂಚಿಸಲಾಗಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಹೊರತುಪಡಿಸಿ, ಪಕ್ಷದ ಯಾವುದೇ ಪ್ರಮುಖ ನಾಯಕರು ಪ್ರಣಾಳಿಕೆಯಲ್ಲಿ ಕಾಣಿಸಿಕೊಂಡಿಲ್ಲ
ಅಷ್ಟೆ ಅಲ್ಲದೆ, ಬಿಜೆಪಿ ಜಾರ್ಖಂಡ್ ಪ್ರಣಾಳಿಕೆಯು ಜಾರ್ಖಂಡ್‌ನ ದಲಿತ ಮತ್ತು ಒಬಿಸಿ ನಾಯಕರನ್ನು ಸಹ ಕೈಬಿಟ್ಟಿದೆ. ರಾಜ್ಯದಲ್ಲಿ ದಲಿತ (12%) ಮತ್ತು OBC ಸಮುದಾಯದ ಕಲ್ಯಾಣಕ್ಕಾಗಿ ಪಕ್ಷವು ಯಾವುದೇ ಗಣನೀಯ ಕಾರ್ಯಕ್ರಮವನ್ನು ನೀಡಿಲ್ಲ.
ರಾಜ್ಯದ ಇತರ ಹಿಂದುಳಿದ ಜಾತಿಗಳಿಗೆ ಪಕ್ಷವು OBC ಗಳಿಗೆ 27% ಮೀಸಲಾತಿಗೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಅದಾಗ್ಯೂ, JMM ನೇತೃತ್ವದ ಹೇಮಂತ್ ಸೊರೆನ್ ಸರ್ಕಾರವು ವರ್ಷಗಳ ಹಿಂದೆಯೆ OBC ಮೀಸಲಾತಿಯನ್ನು ಈ ಮಟ್ಟಕ್ಕೆ ಹೆಚ್ಚಿಸಲು ಈಗಾಗಲೇ ನಿರ್ಧರಿಸಿದೆ.
ಇದಲ್ಲದೆ, ಸಂತಾಲ್ ಪರಗಣದಲ್ಲಿ “ಬಾಂಗ್ಲಾದೇಶಿ ನುಸುಳುಕೋರರ” ಬೆದರಿಕೆಯನ್ನು ಒತ್ತಿಹೇಳುವ ಮೂಲಕ ಆದಿವಾಸಿ ಮತದಾರರನ್ನು ಒಟ್ಟುಗೂಡಿಸುವ ಪ್ರಯತ್ನವನ್ನು ಬಿಜೆಪಿ ಮಾಡಿದ್ದರೂ, ರಾಜ್ಯದ ಮುಸ್ಲಿಂ ಅಲ್ಪಸಂಖ್ಯಾತರ ಕಡೆಗೆ ಯಾವುದೇ ಮಹತ್ವದ ಸೂಚನೆಗಳನ್ನು ನೀಡಿಲ್ಲ. ಮುಸ್ಲಿಂ ಅಲ್ಪಸಂಖ್ಯಾತರ (14.5%) ಜೊತೆಗೆ, ಜನಸಂಖ್ಯೆಯ 4.3% ರಷ್ಟಿರುವ ಕ್ರಿಶ್ಚಿಯನ್ ಸಮುದಾಯವನ್ನು ಕೂಡಾ ಬಿಜೆಪಿ ಪ್ರಣಾಳಿಕೆಯಲ್ಲಿ ನಿರ್ಲಕ್ಷಿಸಲಾಗಿದೆ.
ಇದನ್ನೂ ಓದಿ: ಕೋವಿಡ್ ಹಗರಣ : ಯಡಿಯೂರಪ್ಪ, ಶ್ರೀರಾಮುಲು ವಿರುದ್ದ ಕಾನೂನು ಕ್ರಮಕ್ಕೆ ನ್ಯಾ. ಡಿ’ಕುನ್ಹಾ ಆಯೋಗ ಶಿಫಾರಸು
ಕೋವಿಡ್ ಹಗರಣ : ಯಡಿಯೂರಪ್ಪ, ಶ್ರೀರಾಮುಲು ವಿರುದ್ದ ಕಾನೂನು ಕ್ರಮಕ್ಕೆ ನ್ಯಾ. ಡಿ’ಕುನ್ಹಾ ಆಯೋಗ ಶಿಫಾರಸು


