ಮುಂಬರುವ ವಿಧಾನಸಭಾ ಚುನಾವಣೆಗೆ ಜಾರ್ಖಂಡ್ ಮುಕ್ತಿ ಮೋರ್ಚಾ ತನ್ನ 35 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಬರ್ಹೈತ್ ಕ್ಷೇತ್ರದಿಂದ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಗಂಡೇ ಕ್ಷೇತ್ರದಿಂದ ಅವರ ಪತ್ನಿ ಕಲ್ಪನಾ ಸೊರೆನ್ ಅವರನ್ನು ಕಣಕ್ಕಿಳಿಸಿದೆ. ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.
ಸಾಹಿಬ್‌ಗಂಜ್ ಜಿಲ್ಲೆಯ ಬರ್ಹೈತ್ (ಎಸ್‌ಟಿ) ಕ್ಷೇತ್ರದ ಹಾಲಿ ಶಾಸಕರಾಗಿರುವ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು 2019 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹತ್ತಿರದ ಬಿಜೆಪಿ ಪ್ರತಿಸ್ಪರ್ಧಿ ಸೈಮನ್ ಮಾಲ್ಟೊ ಅವರಿಗಿಂತ 25,740 ಮತಗಳಿಂದ ಗೆದ್ದಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅವರ ಪತ್ನಿ ಕಲ್ಪನಾ ಸೊರೆನ್ ಅವರು ತಮ್ಮ ಸಮೀಪದ ಬಿಜೆಪಿ ಪ್ರತಿಸ್ಪರ್ಧಿ ದಿಲೀಪ್ ಕುಮಾರ್ ವರ್ಮಾ ವಿರುದ್ಧ 27,149 ಮತಗಳಿಂದ ಗಂಡೇ ಉಪಚುನಾವಣೆಯಲ್ಲಿ ಜಯಗಳಿಸಿದ್ದರು. ಜೆಎಂಎಂ ಶಾಸಕ ಸರ್ಫರಾಜ್ ಅಹ್ಮದ್ ರಾಜೀನಾಮೆ ನೀಡಿದ ನಂತರ ಈ ಸ್ಥಾನ ತೆರವಾಗಿತ್ತು. ಜಾರ್ಖಂಡ್
ಜೆಎಂಎಂ ಬಿಡುಗಡೆ ಮಾಡಿರುವ 35 ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಅವರ ಸಹೋದರ ಬಸಂತ್ ಸೊರೆನ್, ರಾಜ್ಯದ ಸ್ಪೀಕರ್ ರವೀಂದ್ರನಾಥ್ ಮಹತೋ, ಸಚಿವರಾದ ಮಿಥಿಲೇಶ್ ಠಾಕೂರ್, ಸೋನು ಸುದಿವ್ಯಾ ಗಿರಿದಿಹ್ ಮತ್ತು ಬೇಬಿ ದೇವಿ ಅವರ ಹೆಸರಿದೆ. ಬಸಂತ್ ಸೊರೆನ್ ಈ ಹಿಂದೆ ಜೆಎಂಎಂ ಭದ್ರಕೋಟೆಯಾದ ದುಮ್ಕಾದಲ್ಲಿ ಬಿಜೆಪಿಯ ಮಾಜಿ ಸಚಿವ ಲೋಯಿಸ್ ಮರಾಂಡಿ ಅವರನ್ನು 6,842 ಮತಗಳಿಂದ ಸೋಲಿಸಿದ್ದರು.
ಅಸೆಂಬ್ಲಿ ಸ್ಪೀಕರ್ ಮಹ್ತೋ ಅವರು ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸತ್ಯಾನಂದ್ ಝಾ ಅವರನ್ನು ಸೋಲಿಸಿ 3,520 ಮತಗಳ ಅಂತರದಿಂದ ಜಮ್ತಾರಾದ ನಾಲಾ ಕ್ಷೇತ್ರವನ್ನು ಗೆದ್ದಿದ್ದರು. ಮಹತೋ ಈ ಹಿಂದೆ 2005 ಮತ್ತು 2014ರಲ್ಲಿ ಕೂಡಾ ಈ ಕ್ಷೇತ್ರವನ್ನು ಗೆದ್ದಿದ್ದರು.
ಜೆಎಂಎಂ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇತ್ತೀಚೆಗಷ್ಟೆ ಬಿಜೆಪಿ ತೊರೆದು ಪಕ್ಷ ಸೇರಿದ ಶಾಸಕ ಕೇದರ್ ಹಜಾರಾ ಅವರ ಹೆಸರು ಕೂಡಾ ಇವೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಮತ್ತು ಜೆಎಂಎಂ 81 ಸ್ಥಾನಗಳಲ್ಲಿ 70 ಸ್ಥಾನಗಳಿಗೆ ಸ್ಪರ್ಧಿಸಲಿದ್ದು, ಉಳಿದ 11 ಸ್ಥಾನಗಳಲ್ಲಿ ಆರ್‌ಜೆಡಿ ಮತ್ತು ಎಡ ಪಕ್ಷಗಳು ಸ್ಪರ್ಧಿಸಲಿವೆ. ಆರ್‌ಜೆಡಿ ಮಂಗಳವಾರ ಆರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ವಿರೋಧ ಪಕ್ಷದಲ್ಲಿ ಬಿಜೆಪಿ 68 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಎಜೆಎಸ್‌ಯು ಪಕ್ಷ 10, ಜೆಡಿಯು 2 ಮತ್ತು ಎಲ್‌ಜೆಪಿ (ರಾಮ್ ವಿಲಾಸ್) 1 ರಲ್ಲಿ ಸ್ಪರ್ಧಿಸಲಿದೆ.
ಮೊದಲ ಹಂತದ ಮತದಾನ ನವೆಂಬರ್ 13 ರಂದು ನಡೆಯಲಿದೆ. ರಾಜ್ಯದ 43 ವಿಧಾನಸಭಾ ಕ್ಷೇತ್ರಗಳಿಗೆ ಶುಕ್ರವಾರ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್ 25 ಸಲ್ಲಿಕೆಗೆ ಕೊನೆಯ ದಿನವಾಗಿದೆ. ರಾಜ್ಯದಲ್ಲಿ ಒಟ್ಟು 2.60 ಕೋಟಿ ಮತದಾರರಿದ್ದು, 11.84 ಲಕ್ಷ ಮತದಾರರು ಮೊದಲ ಬಾರಿ ಮತ ಚಲಾವಣೆ ಮಾಡಲಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕ ಸಾರಿಗೆ ವ್ಯವಸ್ಥೆ ’ಜನಸ್ನೇಹಿ’ಯಾಗುವುದು ಯಾವಾಗ?


