ಮಂಗಳವಾರ ಮುಂಜಾನೆ ಜಾರ್ಖಂಡ್‌ನ ಸಾಹೇಬ್‌ಗಂಜ್ ಜಿಲ್ಲೆಯಲ್ಲಿ ಎರಡು ಸರಕು ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೆ ಒಳಗಾಗಿರುವ ಎರಡು ರೈಲುಗಳನ್ನು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್‌ಟಿಪಿಸಿ) ನಿರ್ವಹಿಸುತ್ತಿದ್ದು, ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬರ್ಹೈಟ್ ಪೊಲೀಸ್ ಠಾಣೆ ಪ್ರದೇಶದ ಭೋಗ್ನಾದಿಹ್ ಬಳಿ ಡಿಕ್ಕಿ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜಾರ್ಖಂಡ್
ಅಪಘಾತ ಸಂಭವಿಸಿದ ಹಳಿಗಳು ಎನ್‌ಟಿಪಿಸಿ ಒಡೆತನದಲ್ಲಿದೆ ಮತ್ತು ಮುಖ್ಯವಾಗಿ ಅದರ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಿಸಲು ಅದನ್ನು ಬಳಸಲಾಗುತ್ತಿತ್ತು. “ಎರಡೂ ಸರಕು ರೈಲುಗಳ ಚಾಲಕರು ಮುಖಾಮುಖಿ ಡಿಕ್ಕಿಯಲ್ಲಿ ಸಾವನ್ನಪ್ಪಿದ್ದಾರೆ” ಎಂದು ಸಾಹೇಬ್‌ಗಂಜ್‌ನ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಕಿಶೋರ್ ಟಿರ್ಕಿ ಪಿಟಿಐಗೆ ತಿಳಿಸಿದ್ದಾರೆ.
ಪೂರ್ವ ರೈಲ್ವೆ ವಕ್ತಾರ ಕೌಸಿಕ್ ಮಿತ್ರ, “ಸರಕು ರೈಲುಗಳು ಮತ್ತು ಹಳಿ ಎರಡೂ ಎನ್‌ಟಿಪಿಸಿಗೆ ಸೇರಿದ್ದು, ಇದಕ್ಕೂ ಭಾರತೀಯ ರೈಲ್ವೆಗೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ. ಅಪಘಾತ ಸಂಭವಿಸಿದ ಮಾರ್ಗವು ಬಿಹಾರದ ಭಾಗಲ್ಪುರ್ ಜಿಲ್ಲೆಯ ಎನ್‌ಟಿಪಿಸಿಯ ಕಹಲ್‌ಗಾಂವ್ ಸೂಪರ್ ಥರ್ಮಲ್ ಪವರ್ ಸ್ಟೇಷನ್ ಅನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಫರಕ್ಕಾ ವಿದ್ಯುತ್ ಸ್ಥಾವರಕ್ಕೆ ಸಂಪರ್ಕಿಸುತ್ತದೆ. ಜಾರ್ಖಂಡ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಬೆಂಗಾವಲು ಪಡೆಗೆ ಅಡ್ಡಿ ಆರೋಪ; ಯೂಟ್ಯೂಬರ್ ಬಂಧನ
ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಬೆಂಗಾವಲು ಪಡೆಗೆ ಅಡ್ಡಿ ಆರೋಪ; ಯೂಟ್ಯೂಬರ್ ಬಂಧನ

