ಜಾರ್ಖಂಡ್‌ನ ಹೇಮಂತ್ ಸೊರೆನ್ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಜಾರ್ಖಂಡ್ ಹೈಕೋರ್ಟ್ ಬುಧವಾರ ರಾಜ್ಯದ ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ 75% ಮೀಸಲಾತಿ ಜಾರಿಗೆ ತಡೆಯಾಜ್ಞೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎಂ.ಎಸ್. ರಾಮಚಂದ್ರ ರಾವ್ ಮತ್ತು ನ್ಯಾಯಮೂರ್ತಿ ದೀಪಕ್ ರೋಷನ್ ಅವರಿದ್ದ ವಿಭಾಗೀಯ ಪೀಠವು ತೀರ್ಪು ನೀಡಿದ್ದು, ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿದೆ.
ಜಾರ್ಖಂಡ್ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಅಜಯ್ ಪಚೇರಿವಾಲಾ ಅವರು ಖಾಸಗಿ ಕಂಪನಿಗಳಲ್ಲಿ ಸ್ಥಳೀಯ ನಿವಾಸಿಗಳಿಗೆ 75% ರಷ್ಟು ಮೀಸಲಾತಿ ನೀಡುವ ಸಂಬಂಧ ‘ಜಾರ್ಖಂಡ್ ರಾಜ್ಯ ಖಾಸಗಿ ವಲಯದ ಸ್ಥಳೀಯ ಅಭ್ಯರ್ಥಿಯ ಉದ್ಯೋಗ ಕಾಯಿದೆ-2021’ ಅನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಅದನ್ನು ರದ್ದು ಮಾಡುವಂತೆ ಒತ್ತಾಯಿಸಿದ್ದರು.
75% ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಬೇಕೆಂಬ ಕಾನೂನು ಸಮಾನತೆ, ತಾರತಮ್ಯ ಮತ್ತು ವ್ಯವಹಾರ ನಡೆಸುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಪಚೇರಿವಾಲಾ ನ್ಯಾಯಾಲಯದಲ್ಲಿ ವಾದಿಸಿದ್ದು, ಕಾನೂನು ಅಸಂವಿಧಾನಿಕ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಹಿಂದೆ ಹರ್ಯಾಣ ಸರ್ಕಾರ ಜಾರಿಗೊಳಿಸಿದ ಇದೇ ರೀತಿಯ ಕಾನೂನನ್ನು ಪಂಜಾಬ್-ಹರಿಯಾಣ ಹೈಕೋರ್ಟ್ ರದ್ದುಗೊಳಿಸಿದೆ ಎಂದು ಅರ್ಜಿದಾರರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಖಾಸಗಿ ವಲಯದ ಸ್ಥಳೀಯ ಅಭ್ಯರ್ಥಿಗಳ ಜಾರ್ಖಂಡ್ ರಾಜ್ಯ ಉದ್ಯೋಗ ಮಸೂದೆ 2021 ಅನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಂಗೀಕರಿಸಲಾಗಿತ್ತು. ಇದರ ಅಡಿಯಲ್ಲಿ ಖಾಸಗಿ ವಲಯದಲ್ಲಿ ಮಾಸಿಕ 40,000 ರೂ.ವರೆಗಿನ ಉದ್ಯೋಗಗಳಲ್ಲಿ ಸ್ಥಳೀಯರಿಗೆ 75% ಮೀಸಲಾತಿಯನ್ನು ಖಾತ್ರಿಪಡಿಸಲಾಗುತ್ತದೆ. “ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಪ್ರಕ್ರಿಯೆಯಲ್ಲಿ, ಸಂಬಂಧಪಟ್ಟ ಸಂಸ್ಥೆಯ ಸ್ಥಾಪನೆ, ಸಂಬಂಧಪಟ್ಟ ಜಿಲ್ಲೆಯ ಸ್ಥಳೀಯ ಅಭ್ಯರ್ಥಿಗಳು ಮತ್ತು ಸಮಾಜದ ಎಲ್ಲಾ ವರ್ಗಗಳ ಪ್ರಾತಿನಿಧ್ಯಕ್ಕೆ ಗಮನ ನೀಡಲಾಗುವುದು” ಎಂದು ಕಾಯಿದೆಯು ಖಚಿತಪಡಿಸುತ್ತದೆ.
ಸ್ಥಳೀಯ ಶಾಸಕ, ಉಪ ಅಭಿವೃದ್ಧಿ ಆಯುಕ್ತ (ಡಿಡಿಸಿ) ಮತ್ತು ಸರ್ಕಲ್ ಆಫೀಸರ್ (ಸಿಒ) ಅವರನ್ನು ಒಳಗೊಂಡಿರುವ ಗೊತ್ತುಪಡಿಸಿದ ಅಧಿಕಾರಿಯ ನೇತೃತ್ವದ ಸಮಿತಿಯ ರಚನೆಗೆ ಸಹ ಅಧಿಕಾರ ಒದಗಿಸುತ್ತದೆ. ಈ ಸಮಿತಿ ಉದ್ಯೋಗದ ಕಾರ್ಯವಿಧಾನವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸೂಕ್ತವಾದ ಉದ್ಯೋಗದಾತರಿಗೆ ನಿರ್ದೇಶನಗಳನ್ನು ನೀಡುತ್ತದೆ.
ಮಸೂದೆಯನ್ನು ಜಾರ್ಖಂಡ್ ವಿಧಾನಸಭೆಯ ಆಯ್ಕೆ ಸಮಿತಿಯು ಕೆಲವು ಬದಲಾವಣೆಗಳೊಂದಿಗೆ ಈ ಹಿಂದೆ ಅನುಮೋದಿಸಿತ್ತು. ಇದನ್ನು ಮಾರ್ಚ್ 2021 ರಲ್ಲಿ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಯಿತು ಮತ್ತು ಸ್ಪೀಕರ್ ರವೀಂದ್ರ ನಾಥ್ ಮಹ್ತೋ ಅವರು ರಚಿಸಿದ ಆರು ಸದಸ್ಯರ ಆಯ್ಕೆ ಸಮಿತಿಗೆ ಪರಿಶೀಲನೆಗಾಗಿ ಉಲ್ಲೇಖಿಸಲಾಗಿತ್ತು.
ಕಾರ್ಮಿಕ ಸಚಿವ ಸತ್ಯಾನಂದ ಭೋಕ್ತಾ ಅವರ ಅಧ್ಯಕ್ಷತೆಯ ಸಮಿತಿಯು ತಿದ್ದುಪಡಿ ಮಸೂದೆಯಲ್ಲಿ “ಖಾಸಗಿ ವಲಯ” ಪದಗಳನ್ನು ಸೇರಿಸಿ, ಅದರ ಹೆಸರನ್ನು ‘ಜಾರ್ಖಂಡ್ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ, 2021’ ಎಂಬ ಹೆಸರಿನಿಂದ ‘ಖಾಸಗಿ ವಲಯದ ಸ್ಥಳೀಯ ಅಭ್ಯರ್ಥಿಗಳ ಜಾರ್ಖಂಡ್ ರಾಜ್ಯ ಉದ್ಯೋಗ ಮಸೂದೆ, 2021’ ಎಂದು ಬದಲಾಯಿಸಿತ್ತು. ತಿದ್ದುಪಡಿ ಮಾಡಿದ ಮಸೂದೆಯು ವೇತನ ಮಿತಿಯನ್ನು ಈ ಹಿಂದೆ ಇದ್ದ 30,000 ರೂ.ಗಳಿಂದ 40,000 ರೂ.ಗೆ ಹೆಚ್ಚಿಸಿದೆ.
ಇದನ್ನೂ ಓದಿ: ‘ವೈಕಂ ಪ್ರಶಸ್ತಿ’ ಸ್ವೀಕರಿಸಿದ ದೇವನೂರ ಮಹಾದೇವ; ಕನ್ನಡದ ಸಾಹಿತಿಗೆ ಗೌರವ ಸೂಚಿಸಿದ ಪಿಣರಾಯಿ-ಸ್ಟಾಲಿನ್
‘ವೈಕಂ ಪ್ರಶಸ್ತಿ’ ಸ್ವೀಕರಿಸಿದ ದೇವನೂರ ಮಹಾದೇವ; ಕನ್ನಡದ ಸಾಹಿತಿಗೆ ಗೌರವ ಸೂಚಿಸಿದ ಪಿಣರಾಯಿ-ಸ್ಟಾಲಿನ್
ಇದನ್ನೂ ಓದಿ: ‘ವೈಕಂ ಪ್ರಶಸ್ತಿ’ ಸ್ವೀಕರಿಸಿದ ದೇವನೂರ ಮಹಾದೇವ; ಕನ್ನಡದ ಸಾಹಿತಿಗೆ ಗೌರವ ಸೂಚಿಸಿದ ಪಿಣರಾಯಿ-ಸ್ಟಾಲಿನ್
ಇದನ್ನೂ ಓದಿ: ‘ವೈಕಂ ಪ್ರಶಸ್ತಿ’ ಸ್ವೀಕರಿಸಿದ ದೇವನೂರ ಮಹಾದೇವ; ಕನ್ನಡದ ಸಾಹಿತಿಗೆ ಗೌರವ ಸೂಚಿಸಿದ ಪಿಣರಾಯಿ-ಸ್ಟಾಲಿನ್
ಇದನ್ನೂ ಓದಿ: ‘ವೈಕಂ ಪ್ರಶಸ್ತಿ’ ಸ್ವೀಕರಿಸಿದ ದೇವನೂರ ಮಹಾದೇವ; ಕನ್ನಡದ ಸಾಹಿತಿಗೆ ಗೌರವ ಸೂಚಿಸಿದ ಪಿಣರಾಯಿ-ಸ್ಟಾಲಿನ್


