ಜಾರ್ಖಂಡ್‌ನ ಆಡಳಿತಾರೂಢ ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) ಪಕ್ಷವು, ಪಕ್ಕದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ ಎಂದು ಸೋಮವಾರ (ಅ.20) ಘೋಷಿಸಿದೆ.
ಮಹಾಘಟಬಂಧನ್‌ನ (ಮಹಾ ಮೈತ್ರಿಕೂಟ) ಭಾಗವಾದ ನಮಗೆ ಯಾವುದೇ ಸೀಟುಗಳನ್ನು ಹಂಚಿಕೆ ಮಾಡದೆ
ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಮತ್ತು ಕಾಂಗ್ರೆಸ್ ರಾಜಕೀಯ ಷಡ್ಯಂತ್ರ ಎಸಗಿದೆ. ಈ ಕಾರಣಕ್ಕೆ ಈ ನಿರ್ಧಾರ ಮಾಡಿದ್ದೇವೆ ಎಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಜೆಎಂಎಂ ನಾಯಕ ಸುದಿವ್ಯ ಕುಮಾರ್, ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಜೊತೆಗಿನ ಮೈತ್ರಿಯನ್ನು ತಮ್ಮ ಪಕ್ಷ ಮರು ಪರಿಶೀಲಿಸಲಿದೆ. ಅವರ ಈ ನಡೆಗೆ ಸೂಕ್ತ ಉತ್ತರವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಸೀಟು ಹಂಚಿಕೆ ಮಾತುಕತೆ ವಿಫಲವಾದ ಕಾರಣ, ಹೇಮಂತ್ ಸೊರೇನ್ ನೇತೃತ್ವದ ಪಕ್ಷವು ಏಕಾಂಗಿಯಾಗಿ ಮತ್ತು ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದ ಕೇವಲ ಎರಡು ದಿನಗಳ ನಂತರ ಈ ಘೋಷಣೆ ಹೊರಬಿದ್ದಿದೆ.
ಜೆಎಂಎಂ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಆರ್‌ಜೆಡಿ ಮತ್ತು ಕಾಂಗ್ರೆಸ್ ಪಿತೂರಿ ಮಾಡಿದೆ. ಜೆಎಂಎಂ ಇದಕ್ಕೆ ಸೂಕ್ತ ಉತ್ತರ ನೀಡುತ್ತದೆ. ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಮರುಪರಿಶೀಲಿಸುತ್ತದೆ ಎಂದು ಜಾರ್ಖಂಡ್ ರಾಜ್ಯ ಪ್ರವಾಸೋದ್ಯಮ ಸಚಿವ ಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ.
ನವೆಂಬರ್ 11ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಚಕೈ, ಧಮ್ದಾಹಾ, ಕಟೋರಿಯಾ, ಮಣಿಹಾರಿ, ಜಮುಯಿ ಮತ್ತು ಪಿರ್ಪೈಂಟಿ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಜೆಎಂಎಂ ಶನಿವಾರ ಘೋಷಿಸಿತ್ತು.
ಈ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನಾಂಕವಾಗಿತ್ತು.
ಬಿಹಾರ ವಿಧಾನಸಭೆ ಚುನಾವಣೆ : 143 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಆರ್‌ಜೆಡಿ


