Homeಮುಖಪುಟಉದ್ಯೋಗ ಖಾತರಿ ಕೆಲಸ ಹುಡುಕುತ್ತಿರುವ ಪದವೀಧರರ ಕತೆಗಳು: ಉತ್ತರ ಪ್ರದೇಶದಲ್ಲಿ ನಿರುದ್ಯೋಗದ ಸ್ಥಿತಿ ಗಂಭೀರ

ಉದ್ಯೋಗ ಖಾತರಿ ಕೆಲಸ ಹುಡುಕುತ್ತಿರುವ ಪದವೀಧರರ ಕತೆಗಳು: ಉತ್ತರ ಪ್ರದೇಶದಲ್ಲಿ ನಿರುದ್ಯೋಗದ ಸ್ಥಿತಿ ಗಂಭೀರ

- Advertisement -
- Advertisement -

ಕೊರೊನಾ ಲಾಕ್‌ಡೌನ್‌ ದೇಶದ ಎಲ್ಲಾ ರಾಜ್ಯಗಳನ್ನು ಹಲವಾರು ವಿಷಯಗಳಲ್ಲಿ ಬಾಧಿಸುತ್ತಿದ್ದರೆ ದೇಶದ ದೊಡ್ಡ ರಾಜ್ಯವೆನಿಸಿಕೊಂಡ ಉತ್ತರಪ್ರದೇಶವನ್ನು ತುಸು ಹೆಚ್ಚೆ ಬಾಧಿಸುತ್ತಿದೆ. ಲಾಕ್‌ಡೌನ್‌ ನಂತರ ರಾಜ್ಯಕ್ಕೆ ಮರಳಿರುವ 30 ಲಕ್ಷ ವಲಸೆ ಕಾರ್ಮಿಕರ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಲು ಹೆಣಗಾಡುತ್ತಿರುವ ಸಂದರ್ಭದಲ್ಲಿಯೇ ಸ್ನಾತಕೋತ್ತರ ಪದವೀಧರರು ಸಹ ಉದ್ಯೋಗ ಖಾತರಿ ಕೆಲಸಗಳಿಗಾಗಿ ಹುಡುಕುತ್ತಿರುವ ದಯನೀಯ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಎನ್‌ಡಿಟಿವಿ ವಿಶೇಷ ವರದಿ ಮಾಡಿದ್ದು ಅದರ ಮುಖ್ಯಾಂಶಗಳು ಈ ಕೆಳಗಿನಂತಿವೆ.

“ನಾನು ಬಿಬಿಎ ಪದವಿ ಹೊಂದಿದ್ದೇನೆ ಆದರೆ ನನಗೆ ಯಾವುದೇ ಯೋಗ್ಯವಾದ ಕೆಲಸ ಸಿಗಲಿಲ್ಲ. ಅಂತಿಮವಾಗಿ, ನಾನು ತಿಂಗಳಿಗೆ 6,000-7,000 ರೂ ವೇತನ ಸಿಗುವ ಕೆಲಸಕ್ಕೆ ಸೇರಿದೆ. ನಂತರ ಲಾಕ್ ಡೌನ್ ಕಾರಣದಿಂದ ಆ ಕೆಲಸವೂ ಸಹ ಹೋಗಿದೆ. ಆದ್ದರಿಂದ, ನಾನು ನನ್ನ ಹಳ್ಳಿಗೆ ಹಿಂತಿರುಗಿದ್ದು, ಇಲ್ಲಿ ನಮ್ಮ ಗ್ರಾಮ ಪ್ರಧಾನ್ (ಗ್ರಾಮ ಮುಖ್ಯಸ್ಥ) ನನಗೆ ನರೇಗ ಅಡಿಯಲ್ಲಿ ಕೂಲಿ ಕೆಲಸ ಪಡೆಯಲು ಸಹಾಯ ಮಾಡಿದರು ”ಎಂದು ಬಿಬಿಎ ಪದವಿ ಪಡೆದ ಸತೇಂದ್ರ ಕುಮಾರ್ ಹೇಳುತ್ತಾರೆ.

ರೋಷನ್ ಕುಮಾರ್ ಸ್ನಾತಕೋತ್ತರ ಪದವೀಧರರಲ್ಲಿ ಒಬ್ಬರು. ಅವರು ಕೊಳಗಳನ್ನು ಅಗೆಯುವುದು ಮತ್ತು ಗ್ರಾಮೀಣ ರಸ್ತೆಗಳನ್ನು ಹಾಕುವುದು ಮುಂತಾದ ಶ್ರಮದಾಯಕ ಕೆಲಸಗಳನ್ನು ಮಾಡಲು ಸಿದ್ಧರಿದ್ದಾರೆ. ಇದು ಕೌಶಲ್ಯರಹಿತ ಕಾರ್ಮಿಕರು ಮಾಡುವ ಕೆಲಸವಾಗಿದೆ. “ನಾನು ಯೋಗ್ಯ ಕೆಲಸ ಮಾಡುತ್ತಿದ್ದೆ ಮತ್ತು ಒಂದಷ್ಟು ಹಣವನ್ನು ಸಂಪಾದಿಸುತ್ತಿದ್ದೆ ಆದರೆ ಲಾಕ್ ಡೌನ್ ನಂತರ ನನ್ನನ್ನು ಕೆಲಸ ಬಿಡಲು ಕೇಳಲಾಯಿತು” ಎಂದು ಎಂಎ ಪದವಿ ಪಡೆದ ರೋಷನ್ ಕುಮಾರ್ ಹೇಳಿದರು.

ಎಂ.ಎ ಪದವೀಧರರಾದ ಸುರ್ಜಿತ್ ಕುಮಾರ್ ಅವರು ಕೂಲಿ ಕೆಲಸವನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳುತ್ತಾರೆ. “ನನಗೆ ಎಂಎ ಮತ್ತು ಬಿ.ಎಡ್ ಪದವಿ ಇದೆ ಮತ್ತು ನಾನು ಕೆಲಸ ಹುಡುಕುವ ಮೊದಲು ಲಾಕ್‌ಡೌನ್ ವಿಧಿಸಲಾಯಿತು” ಎಂದು ಅವರು ಹೇಳುತ್ತಾರೆ.

ಲಾಕ್‌ಡೌನ್‌ಗೆ ಮೊದಲು ಒಂದು ದಿನಕ್ಕೆ ಸರಾಸರಿ 20 ನರೇಗ ಕೂಲಿ ಕಾರ್ಮಿಕರು ಇದ್ದರು. ಈಗ ಆ ಸಂಖ್ಯೆ ದಿನಕ್ಕೆ 100 ಕ್ಕಿಂತ ಹೆಚ್ಚಾಗಿದೆ, ಅದರಲ್ಲಿ ಕನಿಷ್ಠ ಐದನೇ ಒಂದು ಭಾಗದವರು ಪದವಿ ಪಡೆದವರು ಅಥವಾ ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡವರು. ಲಾಕ್‌ಡೌನ್‌ನಲ್ಲಿ ಉದ್ಯೋಗ ಮತ್ತು ಜೀವನೋಪಾಯವನ್ನು ಕಳೆದುಕೊಂಡವರು ನರೇಗ ಕೆಲಸಕ್ಕೂ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಜುನೈದ್‌ಪುರದ ಗ್ರಾಮ ಮುಖ್ಯಸ್ಥ ವೀರೇಂದ್ರ ಸಿಂಗ್ ಹೇಳುತ್ತಾರೆ.

ರಾಜ್ಯಕ್ಕೆ ಮರಳಿದ 30 ಲಕ್ಷ ವಲಸಿಗರಿಗೆ ಉದ್ಯೋಗ ಒದಗಿಸಲು ಯೋಗಿ ಆದಿತ್ಯನಾಥ್ ಸರ್ಕಾರವು ಎಂಜಿಎನ್‌ಆರ್‌ಇಜಿಎಗೆ ಹೆಚ್ಚಿನ ಕೆಲಸ ಮಾಡಿಸಲು ತಿಳಿಸಿದೆ.

ಕಳೆದ ತಿಂಗಳು, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, “ಆತ್ಮ ನಿರ್ಭಾರ ಭಾರತ್ ಅಭಿಯಾನ್” ಪ್ಯಾಕೇಜ್ ಅಡಿಯಲ್ಲಿ ಐದನೇ ಮತ್ತು ಅಂತಿಮ ಹಂತದ ಕ್ರಮಗಳನ್ನು ವಿವರಿಸುವಾಗ ನರೇಗಾಕ್ಕೆ ಪ್ರಸ್ತುತ ಬಜೆಟ್ ಅಂದಾಜು 60,000 ಕೋಟಿ ರೂ ಇದ್ದು, ಹೆಚ್ಚುವರಿ 40,000 ಕೋಟಿ ರೂ.ಗಳನ್ನು ನೀಡಲಾಗುತ್ತದೆ ಎಂದು ಘೋಷಿಸಿದ್ದರು.

ದೇಶಾದ್ಯಂತ ಸುಮಾರು 14 ಕೋಟಿ ಜನರು ಎಂಜಿಎನ್‌ಆರ್‌ಇಜಿಎ ಜಾಬ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಪ್ರತಿ ಕಾರ್ಡ್ ಹೊಂದಿರುವವರಿಗೆ ಈ ವರ್ಷ 100 ದಿನಗಳ ಖಾತರಿಯ ಕೆಲಸವನ್ನು ಪಡೆಯಲು ಸಾಧ್ಯವಾದರೆ ಸರ್ಕಾರಕ್ಕೆ 2.8 ಲಕ್ಷ ಕೋಟಿ ರೂ ಖರ್ಚಾಗುತ್ತದೆ. ಇದಲ್ಲದೇ ಏಪ್ರಿಲ್ 1 ರಿಂದ ದೇಶಾದ್ಯಂತ ಕನಿಷ್ಠ 35 ಲಕ್ಷ ಜನರು ಎಂಜಿಎನ್‌ಆರ್‌ಇಜಿಎಗೆ ಅರ್ಜಿ ಸಲ್ಲಿಸಿದ್ದಾರೆ, ಇದು ಈ ದಶಕದಲ್ಲಿ ಅತಿ ಹೆಚ್ಚು.

“ಎಂಜಿಎನ್‌ಆರ್‌ಇಜಿಎ ಜಾಬ್ ಕಾರ್ಡ್‌ಗಳಿಗೆ ಉದ್ಯೋಗ ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಬಜೆಟ್ ಅಗತ್ಯವಿದೆ. ಎಂಎನ್‌ಆರ್‌ಇಜಿಎ ಅಡಿಯಲ್ಲಿ ಕೆಲಸ ಬಯಸುವ ಪ್ರತಿಯೊಬ್ಬ ವ್ಯಕ್ತಿಯು ಅದನ್ನು ಪಡೆಯಬೇಕು ಎಂದು ಸರ್ಕಾರ ಖಚಿತಪಡಿಸಿಕೊಳ್ಳಬೇಕು” ಎಂದು ಅರ್ಥಶಾಸ್ತ್ರಜ್ಞ ರೀತಿಕಾ ಖೇರಾ ಅಭಿಪ್ರಾಯಪಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...