ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ವೇಳೆ ಕೊಲೆ ಪ್ರಕರಣದ ಆರೋಪಿಯೊಬ್ಬ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದೆ. ಆರೋಪಿ ಎಸೆದ ಚಪ್ಪಲಿ ನ್ಯಾಯಾಧೀಶರಿಗೆ ತಾಗಲಿಲ್ಲ ಎಂದು ಪೊಲೀಸರು ಹೇಳಿದ್ದು, ನ್ಯಾಯಾಧೀಶರ ಮೇಜಿನ ಮುಂದೆ ಮರದ ಚೌಕಟ್ಟಿಗೆ ಚಪ್ಪಲಿ ಬಡಿದು ಬೆಂಚ್ ಕ್ಲರ್ಕ್ ಪಕ್ಕದಲ್ಲಿ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ. ಕೋರ್ಟ್‌ನಲ್ಲೆ
ಕಲ್ಯಾಣ್ ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು 22 ವರ್ಷದ ಕಿರಣ್ ಸಂತೋಷ್ ಭರಮ್ ಎಂದು ಗುರುತಿಸಲಾಗಿದೆ. ಆತನನ್ನು ಕೊಲೆ ಪ್ರಕರಣದ ವಿಚಾರಣೆಗಾಗಿ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್.ಜಿ. ವಾಘಮಾರೆ ಅವರ ಮುಂದೆ ಹಾಜರುಪಡಿಸಲಾಗಿತ್ತು ಎಂದು ಮಹಾತ್ಮ ಫುಲೆ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋರ್ಟ್‌ನಲ್ಲೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನ್ಯಾಯಾಲಯದಲ್ಲಿ ಆರೋಪಿಯು ತಮ್ಮ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವಹಿಸುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದನು. ಆಗ ನ್ಯಾಯಾಧೀಶರು ಆರೋಪಿಗೆ ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸುವಂತೆ ಹೇಳಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.
ಈ ವೇಳೆ ಅವರ ವಕೀಲರ ಹೆಸರನ್ನು ಕರೆಯಲಾಯಿತು, ಆದರೆ ಅವರು ಸುತ್ತಮುತ್ತ ಇರಲಿಲ್ಲ ಮತ್ತು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಹೀಗಾಗಿ ಆರೋಪಿಯ ಪರ ವಕಾಲತ್ತು ವಹಿಸಲು ಮತ್ತೊಬ್ಬ ವಕೀಲರ ಹೆಸರನ್ನು ನೀಡುವಂತೆ ಕೋರಿ, ನ್ಯಾಯಾಲಯ ಹೊಸ ದಿನಾಂಕವನ್ನು ನೀಡಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಈ ವೇಳೆ ಆರೋಪಿಯು ಕೆಳಗೆ ಬಾಗಿ, ತನ್ನ ಚಪ್ಪಲಿಯನ್ನು ಹೊರತೆಗೆದು ನ್ಯಾಯಾಧೀಶರ ದಿಕ್ಕಿನಲ್ಲಿ ಎಸೆದಿದ್ದಾನೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 132 (ಸಾರ್ವಜನಿಕ ನೌಕರರನ್ನು ಅವರ ಕರ್ತವ್ಯದಿಂದ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲ) ಮತ್ತು 125 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ‘ಆಹಾರ ಅಸಮಾನತೆ’ ತೊಡೆದು ಹಾಕಿದ ಮಂಡ್ಯದ ಸಾಹಿತ್ಯ ಸಮ್ಮೇಳನ : 100 ವರ್ಷಗಳಲ್ಲಿ ಮೊದಲ ಬಾರಿಗೆ ಮಾಂಸಾಹಾರ ವಿತರಣೆ
‘ಆಹಾರ ಅಸಮಾನತೆ’ ತೊಡೆದು ಹಾಕಿದ ಮಂಡ್ಯದ ಸಾಹಿತ್ಯ ಸಮ್ಮೇಳನ : 100 ವರ್ಷಗಳಲ್ಲಿ ಮೊದಲ ಬಾರಿಗೆ ಮಾಂಸಾಹಾರ ವಿತರಣೆ


