Homeಮುಖಪುಟಅಯೋಧ್ಯೆ ತೀರ್ಪು | ಮಾಜಿ ಸಿಜೆಐ ಚಂದ್ರಚೂಡ್ ಹೇಳಿಕೆಗಳ ಆಧಾರದ ಮೇಲೆ ಕ್ಯುರೇಟಿವ್ ಅರ್ಜಿ ಸಲ್ಲಿಸಬಹುದು:...

ಅಯೋಧ್ಯೆ ತೀರ್ಪು | ಮಾಜಿ ಸಿಜೆಐ ಚಂದ್ರಚೂಡ್ ಹೇಳಿಕೆಗಳ ಆಧಾರದ ಮೇಲೆ ಕ್ಯುರೇಟಿವ್ ಅರ್ಜಿ ಸಲ್ಲಿಸಬಹುದು: ಕಾನೂನು ತಜ್ಞ ಪ್ರೊ. ಜಿ. ಮೋಹನ್ ಗೋಪಾಲ್

- Advertisement -
- Advertisement -

ಅಯೋಧ್ಯೆ ರಾಮ ಮಂದಿರ-ಬಾಬರಿ ಮಸೀದಿ ವಿವಾದದ ಕುರಿತ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ಇತ್ತೀಚಿನ ಹೇಳಿಕೆಗಳು, 2019ರ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಸಾಕಷ್ಟು ಆಧಾರಗಳನ್ನು ಒದಗಿಸಬಹುದು ಎಂದು ಕಾನೂನು ತಜ್ಞ ಪ್ರೊಫೆಸರ್ ಡಾ.ಮೋಹನ್ ಜಿ. ಗೋಪಾಲ್ ಹೇಳಿದ್ದಾರೆ.

‘ಬಾಬರಿ ಮಸೀದಿ ನಿರ್ಮಾಣವೇ ಮೂಲಭೂತ ಅಪವಿತ್ರ ಕೃತ್ಯ’ ಎಂಬ ನ್ಯಾಯಮೂರ್ತಿ ಚಂದ್ರಚೂಡ್ ಅವರ ಅಭಿಪ್ರಾಯವು 2019ರ ತೀರ್ಪಿಗೆ ವಿರುದ್ಧವಾಗಿದೆ ಎಂದು ಪ್ರೊ. ಗೋಪಾಲ್ ಅಭಿಪ್ರಾಯಪಟ್ಟಿದ್ದು, ಮಸೀದಿ ನಿರ್ಮಿಸಲು ದೇವಾಲಯವನ್ನು ನಾಶಪಡಿಸಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದ್ದಾರೆ.

2019ರ ರಾಮ ಮಂದಿರ-ಬಾಬರಿ ಮಸೀದಿ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್‌ನ ಆಗಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್.ಎ ಬೊಬ್ಡೆ, ಡಿ.ವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಝೀರ್ ಅವರನ್ನು ಒಳಗೊಂಡ ಪೀಠ ಪ್ರಕಟಿಸಿತ್ತು.

ಈ ತೀರ್ಪು ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಿಂದೂ ಪಕ್ಷಗಳಿಗೆ ಅನುಮತಿ ನೀಡಿತ್ತು. ಮುಸ್ಲಿಂ ಪಕ್ಷಕಾರರು ವಿವಾದಿತ ಸ್ಥಳದ ಮೇಲೆ ತಮ್ಮ ಸಂಪೂರ್ಣ ಹಕ್ಕನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ತೀರ್ಪು ಹೇಳಿತ್ತು. ಇದೇ ವೇಳೆ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ ಎಂದು ತೀರ್ಪು ಹೇಳಿತ್ತು. ಈ ತೀರ್ಪನ್ನು ಮುಖ್ಯವಾಗಿ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರೇ ಬರೆದಿದ್ದಾರೆ ಎಂದು ನಂಬಲಾಗಿದೆ.

ತೀರ್ಪು ಮತ್ತು ನ್ಯಾಯಮೂರ್ತಿ ಚಂದ್ರಚೂಡ್ ಅವರ ನಂತರದ ಹೇಳಿಕೆಗಳ ನಡುವಿನ ಅಸಂಗತತೆಯು, ತೀರ್ಪಿನ ಮೇಲಿನ ಜನರ ವಿಶ್ವಾಸವನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ಹೊಂದಿದೆ ಪ್ರೊಫೆಸರ್ ಗೋಪಾಲ್ ಅವರು ಹೇಳಿದ್ದಾರೆ.

“ನ್ಯಾಯಾಲಯದ ಅಂತಿಮ ಜವಾಬ್ದಾರಿಯೆಂದರೆ ಜನರಲ್ಲಿ ವಿಶ್ವಾಸವನ್ನು ಮೂಡಿಸುವ ತೀರ್ಪುಗಳನ್ನು ನೀಡುವುದು. ನ್ಯಾಯ ದೊರೆಯಬೇಕು ಎಂದು ಮಾತ್ರವಲ್ಲ, ಅದು ದೊರೆತಿದೆ ಎಂದು ಎಲ್ಲರಿಗೂ, ವಿಶೇಷವಾಗಿ ಪ್ರಕರಣದಲ್ಲಿ ಸೋತವರಿಗೆ ಕಾಣಿಸಬೇಕು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಅಯೋಧ್ಯೆ ತೀರ್ಪು ತಪ್ಪಾಗಿ ನೀಡಲಾಗಿದೆ. ಈಗ ಪ್ರಶ್ನೆಯೆಂದರೆ, ನ್ಯಾಯಮೂರ್ತಿ ಚಂದ್ರಚೂಡ್ ಅವರು ಹೇಳಿರುವುದನ್ನು ಗಮನದಲ್ಲಿಟ್ಟುಕೊಂಡು, ನಾವು ಒಟ್ಟಾಗಿ ಕ್ಯುರೇಟಿವ್ ಪಿಟಿಷನ್ ಸಲ್ಲಿಸಬೇಕೇ? ಎಂಬುದು, ಬಹುಶಃ ಸಲ್ಲಿಸಬೇಕು. ಏನಾಗುತ್ತದೆ ಎಂದು ನೋಡೋಣ” ಎಂದು ಪ್ರೊ. ಗೋಪಾಲ್ ಹೇಳಿದ್ದಾರೆ.

ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ನಡೆದ ಸಿ.ಎಚ್ ಮೊಹಮ್ಮದ್ ಕೋಯಾ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಕೀಲ ಮತ್ತು ಐಯುಎಂಎಲ್ ಸಂಸದ ಹಾರಿಸ್ ಬೀರನ್ ಕೇಳಿದ ಪ್ರಶ್ನೆಗೆ ಪ್ರೊ. ಗೋಪಾಲ್ ಉತ್ತರಿಸಿದ್ದಾರೆ.

2019ರ ಅಯೋಧ್ಯೆ ತೀರ್ಪನ್ನು “ಕೃತಕ” (contrived) ಮತ್ತು “ತರ್ಕರಹಿತ” (unreasoned) ಎಂದು ವಿವರಿಸಿದ ಪ್ರೊ. ಗೋಪಾಲ್, “ತೀರ್ಪಿಗೆ ಸೇರಿಸಲಾದ ಒಂದು ಭಾಗ (ಅಡೆಂಡಮ್) ಸಂಪೂರ್ಣವಾಗಿ ಧಾರ್ಮಿಕ ಆಡಳಿತದಂತಿತ್ತು (theocracy). ಆ ಭಾಗಕ್ಕೆ ಯಾರೂ ಸಹಿ ಮಾಡಿರಲಿಲ್ಲ. ಇಡೀ ತೀರ್ಪೇ ಶಂಕಾಸ್ಪದವಾಗಿದೆ” ಎಂದಿದ್ದಾರೆ.

“ದಯವಿಟ್ಟು ನೀವು ನ್ಯಾಯಪೀಠದಲ್ಲಿರುವಾಗ ನಿಮ್ಮ ಸೈದ್ಧಾಂತಿಕ ದೃಷ್ಟಿಕೋನದ ಬಗ್ಗೆ ಪಾರದರ್ಶಕವಾಗಿರಿ ಎಂದು ನಾನು ನ್ಯಾಯಾಧೀಶರಲ್ಲಿ ಮನವಿ ಮಾಡುತ್ತೇನೆ” ಎಂದ ಪ್ರೊ. ಗೋಪಾಲ್, ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ತಾವು ಮಾರ್ಕ್ಸ್‌ವಾದಿ (ಕಮ್ಯೂನಿಸ್ಟ್ ಆಲೋಚನೆಯವರು) ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಕ್ಕಾಗಿ ಪ್ರೊ. ಉಪೇಂದ್ರ ಬಕ್ಷಿ ಅವರನ್ನು ಪ್ರಶಂಸಿಸಿದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ. “ಇಡಬ್ಲ್ಯುಎಸ್‌ ಮೀಸಲಾತಿ ಪ್ರಕರಣದಲ್ಲಿ, ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ಎಸ್. ರವೀಂದ್ರ ಭಟ್ ಆರಂಭದಲ್ಲಿ ಅರ್ಜಿದಾರರ ವಾದಗಳ ಬಗ್ಗೆ ಸಂಶಯ ಹೊಂದಿದ್ದರು ಎಂದು ಮುಕ್ತವಾಗಿ ಹೇಳಿದ್ದರು. ಆದರೆ, ನಂತರ ಆ ವಾದಗಳಲ್ಲಿ ಒಳಿತು ಕಂಡು ಮೀಸಲಾತಿಯನ್ನು ರದ್ದುಗೊಳಿಸಿದರು. ನ್ಯಾಯಾಧೀಶರಿಗೆ ಯಾವುದೇ ಆಲೋಚನೆಗಳು ಇರಬಹುದು. ಆದರೆ, ಅವರು ಪ್ರಾಮಾಣಿಕರಾಗಿರಬೇಕು, ಸತ್ಯವನ್ನು ಹೇಳಬೇಕು ಮತ್ತು ತಮ್ಮ ದೃಷ್ಟಿಕೋನವನ್ನು ಮರೆಮಾಚದೆ ತಿಳಿಸಬೇಕು “ಎಂದಿದ್ದಾರೆ. 

ನ್ಯಾ. ಚಂದ್ರಚೂಡ್ ಅವರಿಗೆ ಅಯೋಧ್ಯೆ ವಿವಾದದ ಬಗ್ಗೆ ತೀವ್ರವಾದ ವೈಯಕ್ತಿಕ ನಂಬಿಕೆಗಳಿದ್ದರೆ (ಉದಾಹರಣೆಗೆ, ಮಸೀದಿಯನ್ನು ದೇವಾಲಯದ ಮೇಲೆ ಕಟ್ಟಿದ್ದು ‘ಅಪವಿತ್ರ’ ಎಂದು ಭಾವಿಸಿದ್ದರೆ), ಅವರು ಈ ಪ್ರಕರಣದ ತೀರ್ಪಿನಿಂದ ದೂರ ಉಳಿಯಬೇಕಿತ್ತು ಪ್ರೊ. ಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.

“ಚಂದ್ರಚೂಡ್ ಅವರು ಒಬ್ಬ ಒಳ್ಳೆಯ ನ್ಯಾಯಾಧೀಶ ಮತ್ತು ನನ್ನ ಸ್ನೇಹಿತರಾಗಿದ್ದರೂ, ಅಯೋಧ್ಯೆ ಪ್ರಕರಣದಲ್ಲಿ ಅವರು ತಮ್ಮ ವೈಯಕ್ತಿಕ ನಂಬಿಕೆಗಳ ಬಗ್ಗೆ (ಉದಾಹರಣೆಗೆ, ಬಾಬರಿ ಮಸೀದಿಯನ್ನು ‘ಅಪವಿತ್ರ’ ಎಂದು ಭಾವಿಸಿದ್ದು) ಪಾರದರ್ಶಕವಾಗಿರಲಿಲ್ಲವೇ?” ಎಂದು ಗೋಪಾಲ್ ಪ್ರಶ್ನಿಸಿದ್ದಾರೆ.

“ನ್ಯಾಯಮೂರ್ತಿ ಚಂದ್ರಚೂಡ್ ಅವರ ಇತ್ತೀಚಿನ ಹೇಳಿಕೆಗಳಿಂದಾಗಿ 2019ರ ಅಯೋಧ್ಯೆ ತೀರ್ಪು ಈಗ ‘ದೋಷಪೂರಿತ’ವಾಗಿದೆ (ಅಂದರೆ, ತಪ್ಪಿತ್ತು ಎಂದು ಪರಿಗಣಿಸಬಹುದು) ಕ್ಯುರೇಟಿವ್ ಪಿಟಿಷನ್ (ಪುನಃಪರಿಶೀಲನಾ ಅರ್ಜಿ) ಸಲ್ಲಿಸುವುದು ಜನರ ಅಭಿಪ್ರಾಯವನ್ನು ರೂಪಿಸಲು ಮತ್ತು ಅಯೋಧ್ಯೆ ಪ್ರಕರಣದಲ್ಲಿ ನಿಜವಾಗಿ ಏನಾಯಿತು ಎಂದು ಜನರಿಗೆ ತಿಳಿಸಲು ಒಂದು ಅವಕಾಶವಾಗಿದೆ” ಎಂದು ಪ್ರೊ. ಗೋಪಾಲ್ ಹೇಳಿದ್ದಾರೆ,

“ನ್ಯಾಯಮೂರ್ತಿ ಚಂದ್ರಚೂಡ್ ಅವರು ಏನು ಹೇಳಿದ್ದಾರೆ ಎಂದು ತಿಳಿದುಕೊಳ್ಳೋಣ ಮತ್ತು ಕ್ಯುರೇಟಿವ್ ಪಿಟಿಷನ್ (ಪುನಃಪರಿಶೀಲನಾ ಅರ್ಜಿ) ಸಲ್ಲಿಸಲು ಕೆಲಸ ಮಾಡೋಣ. ಈ ಇಡೀ ವಿಷಯವನ್ನು ಮತ್ತೆ ವಿಚಾರಣೆ ಮಾಡಬೇಕೆಂದು ಕೋರೋಣ. ಈಗ ಈ ತೀರ್ಪು ದೋಷಪೂರಿತವಾಗಿದೆ. ಈ ರೀತಿಯ ಪ್ರತಿಕ್ರಿಯೆಯ ಮೂಲಕ ನಾವು ಜನರ ಅಭಿಪ್ರಾಯವನ್ನು ರೂಪಿಸಬಹುದು. ಚಂದ್ರಚೂಡ್ ಅವರ ಹೇಳಿಕೆಗಳನ್ನು ಒಂದು ಅವಕಾಶವಾಗಿ ಬಳಸಿಕೊಂಡು, ಈ ಪ್ರಕರಣದಲ್ಲಿ ನಿಜವಾಗಿ ಏನಾಯಿತು ಎಂದು ಜನರಿಗೆ ಮನವರಿಕೆ ಮಾಡೋಣ ಮತ್ತು ಸಾಧ್ಯವಾದರೆ ಕೋರ್ಟ್‌ಗೆ ಹೋಗಿ ಈ ಪ್ರಕರಣವನ್ನು ಮತ್ತೆ ವಿಚಾರಣೆಗೆ ಒಳಪಡಿಸುವಂತೆ ಮಾಡೋಣ” ಎಂದು ಪ್ರೊ. ಮೋಹನ್ ಜಿ. ಗೋಪಾಲ್ ಹೇಳಿದ್ದಾರೆ.

ಇತ್ತೀಚೆಗೆ ದಿ ವೈರ್‌ನ ಪತ್ರಕರ್ತ ಶ್ರೀನಿವಾಸನ್ ಜೈನ್ ಅವರಿಗೆ ನೀಡಿದ ಸಂದರ್ಶನದಲ್ಲಿ, ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು “ಬಾಬರಿ ಮಸೀದಿ ನಿರ್ಮಾಣವೇ ಅಪವಿತ್ರ” ಎಂದು ಹೇಳಿದ್ದಾರೆ. ತೀರ್ಪಿನಲ್ಲಿ ದಾಖಲಾದ ಅಂಶಗಳಿಗೆ ವಿರುದ್ಧವಾಗಿರುವ ಈ ಹೇಳಿಕೆ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.

Courtesy : livelaw.in

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Now it’s established that the Ayodhya judgement is a chief justice has not followed justice. .He being a Hindu and he was supporter of VHP and BJP he has killed the justice. Even at that time Vajpayee was also felt that justice was denied . He wasn’t happy with the concocted judgement.

LEAVE A REPLY

Please enter your comment!
Please enter your name here

- Advertisment -

‘ಸಂಯಮ ಮುಗಿದಿದೆ’: ಟ್ರಂಪ್ ಬೆದರಿಕೆಗೆ ಜಗ್ಗದ ಇರಾನ್; ಪ್ರದೇಶವನ್ನು ಮೀರಿ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ ಐಆರ್‌ಜಿಸಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ನೀಡಿದ್ದ ಗಡುವು ಕೆಲವೇ ಗಂಟೆಗಳು ಬಾಕಿ ಇರುವಾಗ, ಟ್ರಂಪ್ ಬೆದರಿಕೆಯನ್ನು ಧಿಕ್ಕರಿಸಿದ ಇರಾನ್ "ಸಂಯಮ ಮುಗಿದಿದೆ" ಎಂದು ಹೇಳಿದೆ ಮತ್ತು ಅದು ಈಗ ಈ ಪ್ರದೇಶದಲ್ಲಿನ...

ಒಡಿಶಾ| ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣ; ಬುಡಕಟ್ಟು ಜನಾಂಗ – ಪೊಲೀಸರ ನಡುವೆ ಘರ್ಷಣೆ

ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಸಿಜಿಮಾಲಿ ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣದ ಬಗ್ಗೆ ಮಂಗಳವಾರ (ಏಪ್ರಿಲ್ 7) ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗಿನ ಘರ್ಷಣೆಯಲ್ಲಿ 40 ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 50 ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ...

ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಅನುಮತಿಸಿದ್ದ ತೀರ್ಪು ತಪ್ಪು : 9 ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ ಪೀಠದ ಮುಂದೆ ಕೇಂದ್ರ ಸರ್ಕಾರ ಹೇಳಿಕೆ-ವರದಿ

ಶಬರಿಮಲೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿದ 2018ರ ತೀರ್ಪು ತಪ್ಪಾಗಿದೆ ಮತ್ತು ಅದನ್ನು ತಪ್ಪು ಕಾನೂನು ಎಂದು ಘೋಷಿಸಲು ಅರ್ಹವಾಗಿದೆ ಎಂಬುವುದಾಗಿ ಕೇಂದ್ರ...

ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ‘ಲವ್ ಜಿಹಾದ್’ ಹೇಳಿಕೆ; ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಚುನಾವಣಾ ಆಯೋಗ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ ಅಥವಾ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗದ ಗೆಲುವು ರಾಜ್ಯದಲ್ಲಿ "ಲವ್ ಜಿಹಾದ್" ಘಟನೆಗಳಿಗೆ ಕಾರಣವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಪಿ ಕೆ ಕೃಷ್ಣದಾಸ್ ನೀಡಿದ ಹೇಳಿಕೆಯ...

ಮಣಿಪುರ: ಇಬ್ಬರು ಮಕ್ಕಳ ಹತ್ಯೆ ಖಂಡಿಸಿ ಇಂಫಾಲ್ ಕಣಿವೆಯಲ್ಲಿ ಪ್ರತಿಭಟನೆ; 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

ಮಣಿಪುರ: ಕಣಿವೆಯ ಐದು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಬ್ರಾಡ್‌ಬ್ಯಾಂಡ್, ವಿಎಸ್‌ಎಟಿಗಳು ಮತ್ತು ವಿಪಿಎನ್ ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು ಮಣಿಪುರ ಸರ್ಕಾರ ಮಂಗಳವಾರ ಆದೇಶಿಸಿದೆ. ಗೃಹ ಇಲಾಖೆಯ ಅಧಿಕೃತ...

ಶ್ರೀನಗರದಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐವರ ಬಂಧನ; ಅಂತರರಾಜ್ಯ ಎಲ್‌ಇಟಿ ಮಾಡ್ಯೂಲ್ ಪತ್ತೆ 

ಶ್ರೀನಗರ: ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಶ್ರೀನಗರದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಅಂತರರಾಜ್ಯ ಮಾಡ್ಯೂಲ್ ಅನ್ನು ಭೇದಿಸಿದ್ದು, ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐದು...

ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿ ಬಳಿ ಗುಂಡಿನ ದಾಳಿ: ಮೂವರು ಸಾವು

ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ಕಾನ್ಸುಲೇಟ್ ಕಟ್ಟಡದ ಬಳಿ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ, ಅಧಿಕಾರಿಗಳು ಆ ಪ್ರದೇಶವನ್ನು...

ತೆಲಂಗಾಣ ಸಿಎಂ ರೆಡ್ಡಿ ವಿರುದ್ಧ ಪಿಣರಾಯಿ ವಿಜಯನ್ ವಾಗ್ದಾಳಿ; ತೀವ್ರ ಸ್ವರೂಪ ಪಡೆದುಕೊಂಡ ವಾಕ್ಸಮರ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ (ಏ.7) ವಾಗ್ದಾಳಿ ನಡೆಸಿದ್ದಾರೆ. ಇಬ್ಬರು ನಾಯಕರ ನಡುವಿನ ಮಾತಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಣ್ಣೂರಿನಲ್ಲಿ ನಡೆದ ಪತ್ರಿಕಾ ಸಂವಾದ...

ಹಿಮಂತ ಬಿಸ್ವಾ ಶರ್ಮಾ ಪತ್ನಿಯ ವಿರುದ್ಧ ‘ಹಲವು ಪಾಸ್‌ಪೋರ್ಟ್‌’ ಹೊಂದಿರುವ ಆರೋಪ : ಪವನ್ ಖೇರಾ ಮನೆಯಲ್ಲಿ ಶೋಧ ನಡೆಸಿದ ಅಸ್ಸಾಂ ಪೊಲೀಸರು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ಮನೆಯಲ್ಲಿ ಶೋಧ...

ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೇಂದ್ರದ ಹಣವನ್ನು ಪಕ್ಷದ ಚಟುವಟಿಕೆಗಳಿಗೆ ಬಳಸಿಕೊಂಡಿದೆ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕೇಂದ್ರ ನಿಧಿಯ ದುರುಪಯೋಗ ಮತ್ತು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ತೀವ್ರ ಕುಸಿತವಾಗಿದೆ ಎಂದು...