ಹೋರಾಟಗಾರ ಪ್ರಾಧ್ಯಾಪಕ ಡಾ. ಆನಂದ್ ತೇಲ್ತುಂಬ್ಡೆಯವರನ್ನು ಬಂಧಿಸಿ ತಿಂಗಳ ನೆನಪಿನಲ್ಲಿ ಹಾಗೂ ಹತ್ತಾರು ಸಾಮಾಜಿಕ ಹೋರಾಟಗಾರರ ಬಂಧನವನ್ನು ವಿರೋಧಿಸಿ ಇಂದು ನ್ಯಾಯದ ದಿನ ಅಭಿಯಾನ ನಡೆಸಲಾಗಿದೆ. ಟ್ವಿಟ್ಟರ್ ನಲ್ಲಿ #Justice4Teltumbde ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.
ಈಗಾಗಲೇ ಹಲವಾರು ಸಾಮಾಜಿಕ ಹೋರಾಟಗಾರು, ಗಣ್ಯರು #Justice4Teltumbde ಹ್ಯಾಶ್ ಟ್ಯಾಗ್ ಹಾಕಿ ಭಿನ್ನಮತವಿರುವ ಸಾಮಾಜಿಕ ಹೋರಾಟಗಾರರ ಬಂಧನವನ್ನು ವಿರೋಧಿಸಿದ್ದಾರೆ.
ಊನಾ ಚಳುವಳಿಯ ನಾಯಕ ಹಾಗೂ ಶಾಸಕರಾಗಿರುವ ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿ “ನಮ್ಮ ಪ್ರೀತಿಯ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಜೈಲುಗಳಲ್ಲಿ ಇರುವ ಡಾ.ಆನಂದ್ ಮತ್ತು ಇತರ ಸಾಮಾಜಿಕ ಕಾರ್ಯಕರ್ತರೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲಲು ಈ ಕ್ಷಣವನ್ನು ಗುರುತಿಸೋಣ.” ಎಂದು ಹೇಳಿದ್ದಾರೆ.
Let us mark this moment to stand in solidarity with Dr. Anand and other activists who are languishing in prisons for defending our beloved democracy.#Justice4Teltumbde #freeallpoliticalprisoners pic.twitter.com/qWtzxZFL1n
— Jignesh Mevani (@jigneshmevani80) May 16, 2020
ಓದಿ: ಪ್ರೊ. ಆನಂದ್ ತೇಲ್ತುಂಬ್ಡೆ ನರೇಂದ್ರ ಮೋದಿ ಸರ್ಕಾರಕ್ಕೆ ಏಕೆ ಅಪಾಯಕಾರಿಯಾದರು?
JNU ಮಾಜೀ ನಾಯಕ ಟ್ವೀಟ್ ಮಾಡಿ “ಆನಂದ್ ತೇಲ್ತುಂಬ್ಡೆ ಹಾಗೂ ಇತರ ಎಲ್ಲ ಆತ್ಮಸಾಕ್ಷಿ ಇರುವ ಕೈದಿಗಳೊಂದಿಗೆ ಇವತ್ತು ನಾವು ನ್ಯಾಯದ ದಿನವೆಂದು ಗುರುತಿಸುತ್ತೇವೆ. ಈ ಮಾನ್ಯ ಆತ್ಮಗಳು ಅನ್ಯಾಯದ ವಿರುದ್ಧ ಮಾತನಾಡಿದ್ದಕ್ಕೆ, ಬರೆದದ್ದಕ್ಕೆ, ಅನ್ಯಾಯದ ವಿರುದ್ದ ಸೆಟೆದು ನಿಂತಿದ್ದಕ್ಕೆ ಜೈಲಿನಲ್ಲಿದ್ದಾರೆ” ಎಂದು ಬರೆದಿದ್ದಾರೆ.
ಜೊತೆಗೆ “ಆನಂದ್ ತೇಲ್ತುಂಬ್ಡೆ ಜೈಲಿನಲ್ಲಿರಬಾರದು. ಅವರು ಭಾರತದ ಅತ್ಯುತ್ತಮ ಸಾರ್ವಜನಿಕ ಪ್ರಭುದ್ದರಲ್ಲಿ ಒಬ್ಬರಾಗಿದ್ದಾರೆ, ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಬೇಕು.” ಎಂದು ಕೂಡಾ ಹೇಳಿದ್ದಾರೆ.
Anand Teltumbde should not be in jail. He is one of the finest public intellectuals of India who should be given a national award. #Justice4Teltumbde
(Image below is of the cover of Anand's latest book on the historic Mahad satyagraha led by Babasaheb Ambedkar) pic.twitter.com/8GNqtNRDM9
— Umar Khalid (@UmarKhalidJNU) May 16, 2020
ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷರಾದ ಯೋಗೇಂದ್ರ ಅವರು “ಪ್ರಜಾಪ್ರಭುತ್ವ ಎಂದರೆ ಭಿನ್ನಾಭಿಪ್ರಾಯವಿಲ್ಲದೆ ಏನೂ ಇಲ್ಲ.
ಡಾ. ಆನಂದ್ ತೇಲ್ತುಂಬ್ಡೆ ಅವರು ಇಂದು ನಮ್ಮ ದೇಶದಲ್ಲಿ ಇರುವ ಪ್ರಜಾಪ್ರಭುತ್ವದ ಪ್ರಬಲ ಧ್ವನಿಗಳಲ್ಲಿ ಒಬ್ಬರಾಗಿದ್ದಾರೆ ಮತ್ತು ಅದೇ ವ್ಯಕ್ತಿಯನ್ನು ಜೈಲಿನಲ್ಲಿ ಇರಿಸಲಾಗಿದೆ, ತೇಲ್ತುಂಬ್ಡೆ ಅವರಿಗೆ ನ್ಯಾಯ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ.
Democracy means nothing without dissent.
Dr. Anand Teltumbde is one of the strongest voices of democracy we have in our country today and the same person has been put up in jail, on completely trumped up charges, for more than a month now#Justice4Teltumbde pic.twitter.com/YXWRMy3q3k— Yogendra Yadav (@_YogendraYadav) May 16, 2020
ಓದಿ: ಆನಂದ್ ತೇಲ್‌ತುಂಬ್ಡೆ ಎಂಬ ಅಂಬೇಡ್ಕರ್ ಆತ್ಮಬಂಧು
ಯುವ ಹಲ್ಲಾಬೋಲ್ ಚಳವಳಿಯ ಅನುಪಮ್ ಅವರು “ಇದು ಕೇವಲ ಡಾ. ಆನಂದ್ ತೇಲ್ತುಂಬ್ಡೆ ಅವರ ಹೇಳಿಕೆಯಲ್ಲ, ನಮ್ಮೆಲ್ಲರ ಮುಂದಿರುವ ಪ್ರಶ್ನೆಯಾಗಿದೆ. ಪ್ರಜಾಪ್ರಭುತ್ವವು ಭಿನ್ನಾಭಿಪ್ರಾಯವಿಲ್ಲದೆ ಇರುತ್ತದೆಯೇ” ಎಂದು ಹೇಳಲಿದ್ದಾರೆ.
This is not just a statement by Dr. Anand Teltumbde, but also a question before all of us!
Can a democracy survive without dissent? #Justice4Teltumbde pic.twitter.com/qjPsiBXruS
— Anupam | अनुपम (@AnupamConnects) May 16, 2020
ಕಾದಂಬರಿಗಾರ್ತಿ ಹಾಗೂ ಕವಯಿತ್ರಿ ಮೀನಾಕಂದಸ್ವಾಮಿ, ಗೌರಿ ಲಂಕೇಶ್ ನ್ಯೂಸ್ ನಲ್ಲಿ ಪ್ರಕಟವಾದ ದೇವನೂರು ಮಹದೇವ ಅವರ ಹೇಳಿಕೆಯನ್ನು ತಮ್ಮ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.
Devanuru Mahadeva's statement in full:
His biographical journey reminds us of the life of Babasaheb Bhimrao Ambedkar. We all change our social media DP (profile picture) for one day on 16th May and put Dr Teltumbde’s picture. #Justice4Teltumbdehttps://t.co/JDu3GBgWUq
— meena kandasamy || இளவேனில் மீனா கந்தசாமி (@meenakandasamy) May 15, 2020
ಮಾನ್ಸಿ ಸಿಂಗ್ ಟ್ವೀಟ್ “ಆನಂದ್ ತೇಲ್ತುಂಬ್ಡೆ ಸದನದಲ್ಲಿ ಇರಬೇಕಾದವರು, ಜೈಲಿನಲ್ಲಿ ಅಲ್ಲ. ಅವರನ್ನು ಬಿಡುಗಡೆಗೊಳಿಸಿ” ಎಂದು ಟ್ವೀಟ್ ಮಾಡಿದ್ದಾರೆ.
He must be in parliament. Not in jail.
Release Anand Teltumbde pic.twitter.com/AKYywczdzR
— Mansi Singh (@Mansi_11S) May 16, 2020
ಆನಂದ್ ತೇಲ್ತುಂಬ್ಡೆ ಭಾರತದ ಒಬ್ಬ ಪ್ರಮುಖ ವಿದ್ವಾಂಸ, ಲೋಕಚಿಂತಕ ಹಾಗೂ ಮಾನವ ಹಕ್ಕುಗಳ ಸಕ್ರಿಯ ಪ್ರತಿಪಾದಕರಾಗಿದ್ದಾರೆ. ನಿಷೇದಿತ ಮಾವೋವಾದಿ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ’ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯಿದೆ” (ಯುಎಪಿಎ) ಯಂತಹ ಕರಾಳ ಶಾಸನವನ್ನು ಬಳಸಿಕೊಂಡು ಅವರ ವಿರುದ್ದ ಪ್ರಕರಣವನ್ನು ದಾಖಲಿಸಲಾಗಿತ್ತು.
2018 ರಲ್ಲಿ ಭೀಮಾಕೊರೆಗಾವ್‌ನಲ್ಲಿ ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಆಚರಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ನಡೆದಿತ್ತು. ಈ ಸಂಬಂಧ ಆನಂದ್ ತೆಲ್ತುಂಬ್ಡೆಯವರ ಮೇಲೆಯೂ ಸಹ ಪ್ರಕರಣ ದಾಖಲಾಗಿದ್ದು, ಇದು ಪ್ರಭುತ್ವ ಪ್ರಾಯೋಜಿತ ಪಿತೂರಿ ಎಂದು ಆನಂದ್ ತೆಲ್ತುಂಬ್ಡೆಯವರು ಆರೋಪಿಸಿದ್ದಾರೆ.



ಅವರನ್ನು ಬಿಡುಗಡೆ ಮಾಡುವಂತೆ ವಿನಂತಿ.