#Justice4Teltumbde : ಆನಂದ್ ತೇಲ್ತುಂಬ್ಡೆ ಪರ ನ್ಯಾಯದ ದಿನ ಟ್ವಿಟ್ಟರ್ ಅಭಿಯಾನ

1
#Justice4Teltumbde ಹೋರಾಟಗಾರ ಆನಂದ್ ತೇಲ್ತುಂಬ್ಡೆ ಪರ ಟ್ವಿಟ್ಟರಿನಲ್ಲಿ ಟ್ರೆಂಡ್

ಹೋರಾಟಗಾರ ಪ್ರಾಧ್ಯಾಪಕ ಡಾ. ಆನಂದ್ ತೇಲ್ತುಂಬ್ಡೆಯವರನ್ನು ಬಂಧಿಸಿ ತಿಂಗಳ ನೆನಪಿನಲ್ಲಿ ಹಾಗೂ ಹತ್ತಾರು ಸಾಮಾಜಿಕ ಹೋರಾಟಗಾರರ ಬಂಧನವನ್ನು ವಿರೋಧಿಸಿ ಇಂದು ನ್ಯಾಯದ ದಿನ ಅಭಿಯಾನ ನಡೆಸಲಾಗಿದೆ. ಟ್ವಿಟ್ಟರ್ ನಲ್ಲಿ #Justice4Teltumbde ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.

ಈಗಾಗಲೇ ಹಲವಾರು ಸಾಮಾಜಿಕ ಹೋರಾಟಗಾರು, ಗಣ್ಯರು #Justice4Teltumbde ಹ್ಯಾಶ್ ಟ್ಯಾಗ್ ಹಾಕಿ ಭಿನ್ನಮತವಿರುವ ಸಾಮಾಜಿಕ ಹೋರಾಟಗಾರರ ಬಂಧನವನ್ನು ವಿರೋಧಿಸಿದ್ದಾರೆ.

ಊನಾ ಚಳುವಳಿಯ ನಾಯಕ ಹಾಗೂ ಶಾಸಕರಾಗಿರುವ ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿ “ನಮ್ಮ ಪ್ರೀತಿಯ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಜೈಲುಗಳಲ್ಲಿ ಇರುವ ಡಾ.ಆನಂದ್ ಮತ್ತು ಇತರ ಸಾಮಾಜಿಕ ಕಾರ್ಯಕರ್ತರೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲಲು ಈ ಕ್ಷಣವನ್ನು ಗುರುತಿಸೋಣ.” ಎಂದು ಹೇಳಿದ್ದಾರೆ.


ಓದಿ: ಪ್ರೊ. ಆನಂದ್ ತೇಲ್ತುಂಬ್ಡೆ ನರೇಂದ್ರ ಮೋದಿ ಸರ್ಕಾರಕ್ಕೆ ಏಕೆ ಅಪಾಯಕಾರಿಯಾದರು?


JNU ಮಾಜೀ ನಾಯಕ ಟ್ವೀಟ್ ಮಾಡಿ “ಆನಂದ್ ತೇಲ್ತುಂಬ್ಡೆ ಹಾಗೂ ಇತರ ಎಲ್ಲ ಆತ್ಮಸಾಕ್ಷಿ ಇರುವ ಕೈದಿಗಳೊಂದಿಗೆ ಇವತ್ತು ನಾವು ನ್ಯಾಯದ ದಿನವೆಂದು ಗುರುತಿಸುತ್ತೇವೆ. ಈ ಮಾನ್ಯ ಆತ್ಮಗಳು ಅನ್ಯಾಯದ ವಿರುದ್ಧ ಮಾತನಾಡಿದ್ದಕ್ಕೆ, ಬರೆದದ್ದಕ್ಕೆ, ಅನ್ಯಾಯದ ವಿರುದ್ದ ಸೆಟೆದು ನಿಂತಿದ್ದಕ್ಕೆ ಜೈಲಿನಲ್ಲಿದ್ದಾರೆ” ಎಂದು ಬರೆದಿದ್ದಾರೆ.

ಜೊತೆಗೆ “ಆನಂದ್ ತೇಲ್ತುಂಬ್ಡೆ ಜೈಲಿನಲ್ಲಿರಬಾರದು. ಅವರು ಭಾರತದ ಅತ್ಯುತ್ತಮ ಸಾರ್ವಜನಿಕ ಪ್ರಭುದ್ದರಲ್ಲಿ ಒಬ್ಬರಾಗಿದ್ದಾರೆ, ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಬೇಕು.” ಎಂದು ಕೂಡಾ ಹೇಳಿದ್ದಾರೆ.

ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷರಾದ ಯೋಗೇಂದ್ರ ಅವರು “ಪ್ರಜಾಪ್ರಭುತ್ವ ಎಂದರೆ ಭಿನ್ನಾಭಿಪ್ರಾಯವಿಲ್ಲದೆ ಏನೂ ಇಲ್ಲ.
ಡಾ. ಆನಂದ್ ತೇಲ್ತುಂಬ್ಡೆ ಅವರು ಇಂದು ನಮ್ಮ ದೇಶದಲ್ಲಿ ಇರುವ ಪ್ರಜಾಪ್ರಭುತ್ವದ ಪ್ರಬಲ ಧ್ವನಿಗಳಲ್ಲಿ ಒಬ್ಬರಾಗಿದ್ದಾರೆ ಮತ್ತು ಅದೇ ವ್ಯಕ್ತಿಯನ್ನು ಜೈಲಿನಲ್ಲಿ ಇರಿಸಲಾಗಿದೆ, ತೇಲ್ತುಂಬ್ಡೆ ಅವರಿಗೆ ನ್ಯಾಯ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ.


ಓದಿ:  ಆನಂದ್‌ ತೇಲ್‌ತುಂಬ್ಡೆ ಎಂಬ ಅಂಬೇಡ್ಕರ್ ಆತ್ಮಬಂಧು


ಯುವ ಹಲ್ಲಾಬೋಲ್ ಚಳವಳಿಯ ಅನುಪಮ್ ಅವರು “ಇದು ಕೇವಲ ಡಾ. ಆನಂದ್ ತೇಲ್ತುಂಬ್ಡೆ ಅವರ ಹೇಳಿಕೆಯಲ್ಲ, ನಮ್ಮೆಲ್ಲರ ಮುಂದಿರುವ ಪ್ರಶ್ನೆಯಾಗಿದೆ. ಪ್ರಜಾಪ್ರಭುತ್ವವು ಭಿನ್ನಾಭಿಪ್ರಾಯವಿಲ್ಲದೆ ಇರುತ್ತದೆಯೇ” ಎಂದು ಹೇಳಲಿದ್ದಾರೆ.

ಕಾದಂಬರಿಗಾರ್ತಿ ಹಾಗೂ ಕವಯಿತ್ರಿ ಮೀನಾಕಂದಸ್ವಾಮಿ, ಗೌರಿ ಲಂಕೇಶ್ ನ್ಯೂಸ್ ನಲ್ಲಿ ಪ್ರಕಟವಾದ ದೇವನೂರು ಮಹದೇವ ಅವರ ಹೇಳಿಕೆಯನ್ನು ತಮ್ಮ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.

ಮಾನ್ಸಿ ಸಿಂಗ್ ಟ್ವೀಟ್ “ಆನಂದ್ ತೇಲ್ತುಂಬ್ಡೆ ಸದನದಲ್ಲಿ ಇರಬೇಕಾದವರು, ಜೈಲಿನಲ್ಲಿ ಅಲ್ಲ. ಅವರನ್ನು  ಬಿಡುಗಡೆಗೊಳಿಸಿ” ಎಂದು ಟ್ವೀಟ್ ಮಾಡಿದ್ದಾರೆ.

ಆನಂದ್ ತೇಲ್ತುಂಬ್ಡೆ ಭಾರತದ ಒಬ್ಬ ಪ್ರಮುಖ ವಿದ್ವಾಂಸ, ಲೋಕಚಿಂತಕ ಹಾಗೂ ಮಾನವ ಹಕ್ಕುಗಳ ಸಕ್ರಿಯ ಪ್ರತಿಪಾದಕರಾಗಿದ್ದಾರೆ. ನಿಷೇದಿತ ಮಾವೋವಾದಿ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ’ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯಿದೆ” (ಯುಎಪಿಎ) ಯಂತಹ ಕರಾಳ ಶಾಸನವನ್ನು ಬಳಸಿಕೊಂಡು ಅವರ ವಿರುದ್ದ ಪ್ರಕರಣವನ್ನು ದಾಖಲಿಸಲಾಗಿತ್ತು.

2018 ರಲ್ಲಿ ಭೀಮಾಕೊರೆಗಾವ್‌ನಲ್ಲಿ ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಆಚರಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ನಡೆದಿತ್ತು. ಈ ಸಂಬಂಧ ಆನಂದ್‌ ತೆಲ್ತುಂಬ್ಡೆಯವರ ಮೇಲೆಯೂ ಸಹ ಪ್ರಕರಣ ದಾಖಲಾಗಿದ್ದು, ಇದು ಪ್ರಭುತ್ವ ಪ್ರಾಯೋಜಿತ ಪಿತೂರಿ ಎಂದು ಆನಂದ್‌ ತೆಲ್ತುಂಬ್ಡೆಯವರು ಆರೋಪಿಸಿದ್ದಾರೆ.


ಓದಿ:  IIM ಅಹಮದಾಬಾದ್‍ನ ಮೊದಲ ಹಳೆಯ ವಿದ್ಯಾರ್ಥಿ, ಮೊದಲ IIT ಪ್ರೊಫೆಸರ್ ಹಾಗೂ ಮೊದಲ ಕಾ‍ರ್ಪೊರೇಟ್ CEO ಆನಂದ್‌ ತೇಲ್ತುಂಬ್ಡೆ ಬಂಧನ ಸರಿಯೇ?


 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

LEAVE A REPLY

Please enter your comment!
Please enter your name here