ಸರ್ಕಾರಿ ಪ್ರೌಢಶಾಲೆಯ ಅತಿಥಿ ಶಿಕ್ಷಕನೊಬ್ಬ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಡೆದಿದೆ ಎಂದು ಪ್ರಜಾವಾಣಿ ಸೋಮವಾರ ವರದಿ ಮಾಡಿದೆ. ಆರೋಪಿ ವಿದ್ಯಾರ್ಥಿನಿಯ ಮನೆಗೆ ನುಗ್ಗಿ ಅವರ ಮೇಲೆ ಅತ್ಯಾಚಾರ ಎಸಗಿದ್ದಾಗಿ ವರದಿಯಾಗಿದೆ. ಕೃತ್ಯದ ಬಳಿಕ ಮಾದನಹಿಪ್ಪರಗಾ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯನ್ನು ಶಿವರಾಜ್ ಹಣಮಂತ (32) ಎಂದು ಗುರುತಿಸಲಾಗಿದೆ. 8ನೇ ತರಗತಿಯಲ್ಲಿ ಓದುತ್ತಿದ್ದ ಸಂತ್ರಸ್ತೆ ಬಾಲಕಿಯ ತಾಯಿ, ಯುಗಾದಿ ಹಬ್ಬದ ಸಂದರ್ಭದಲ್ಲಿ ತನ್ನ ಮೂವರು ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದರು. ಆದರೆ, ಪರೀಕ್ಷೆಯ ಕಾರಣಕ್ಕೆ ಬಾಲಕಿ ಮನೆಯಲ್ಲಿಯೇ ಉಳಿದಿದ್ದರು.
ಅದ ದಿನ ಸಂಜೆ ಗ್ರಾಮದಲ್ಲೆ ಇದ್ದ ತನ್ನ ಅಜ್ಜಿಯ ಮನೆಯಿಂದ ಮರಳಿದ್ದ ಬಾಲಕಿ ಸ್ನೇಹಿತರ ಜೊತೆ ಸೇರಿ ಮನೆಯಲ್ಲಿ ಟಿವಿ ನೋಡುತ್ತಿದ್ದರು. ಈ ವೇಳೆ ದುಷ್ಕರ್ಮಿ ಶಿವರಾಜ್ ಅವರನ್ನು ಹಿಂಬಾಲಿಸಿ ಮನೆಗೆ ನುಗ್ಗಿದ್ದಾನೆ. ಆತನ ಆಗಮನದಿಂದ ಭಯಗೊಂಡ ಸ್ನೇಹಿತರು ಹೊರಗೆ ಓಡಿಹೋಗಿದ್ದಾರೆ.
ಈ ವೇಳೆ, ತಾನು ಮನೆಯಲ್ಲಿ ಒಂಟಿಯಾಗಿದ್ದು, ತಾಯಿ-ತಂದೆ ಇಲ್ಲದಿರುವ ಈ ಸಮಯ ಯಾಕೆ ಬಂದಿದ್ದೀರಿ ಎಂದು ಶಿಕ್ಷಕನಿಗೆ ಪ್ರಶ್ನಿಸಿದ್ದಾರೆ. ಆದರೆ, ಆರೋಪಿ ಶಿವರಾಜ್, “ನಾನು ನಿನ್ನ ಪ್ರೀತಿಸುತ್ತೇನೆ” ಎಂದು ಪುಸಲಾಯಿಸಿ, ಬಾಲಕಿಯ ಪ್ರತಿರೋಧದ ನಡುವೆಯೂ ಹೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ.
ಆರೋಪಿಯ ಈ ದುಷ್ಕೃತ್ಯದಿಂದ ಪ್ರಜ್ಞೆ ತಪ್ಪಿದ ಬಾಲಕಿಯನ್ನು ಪೋಷಕರು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಎಚ್ಚರಗೊಂಡ ಬಳಿಕ ಬಾಲಕಿ ತನ್ನ ಮೇಲೆ ನಡೆದ ದಾಳಿಯ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ಘಟನೆಯ ಬಳಿಕ ಪರಾರಿಯಾಗಿದ್ದ ಶಿವರಾಜ್‌ನನ್ನು ಮಾದನಹಿಪ್ಪರಗಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಆರಂಭವಾಗಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಕಲಬುರಗಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಜೈಲಿಗೆ ಹೋದರೂ ಸರಿ, ಅರ್ಹರು ಕೆಲಸ ಕಳೆದುಕೊಳ್ಳಲು ಬಿಡುವುದಿಲ್ಲ’: ವಜಾಗೊಂಡ ಶಿಕ್ಷಕರ ಪರ ನಿಂತ ಮಮತಾ ಬ್ಯಾನರ್ಜಿ
‘ಜೈಲಿಗೆ ಹೋದರೂ ಸರಿ, ಅರ್ಹರು ಕೆಲಸ ಕಳೆದುಕೊಳ್ಳಲು ಬಿಡುವುದಿಲ್ಲ’: ವಜಾಗೊಂಡ ಶಿಕ್ಷಕರ ಪರ ನಿಂತ ಮಮತಾ ಬ್ಯಾನರ್ಜಿ

