ಅಕ್ಟೋಬರ್ 23 ರಂದು ಹೃದಯಾಘಾತಕ್ಕೊಳಗಾಗಿ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಕ್ರಿಕೆಟ್ ದಂತಕತೆ ಕಪಿಲ್ ದೇವ್ ಮೃತಪಟ್ಟಿದ್ದಾರೆ ಎಂಬ ಸುಳ್ಳುಸುದ್ದಿ ವೈರಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಅವರಿಗೆ ಶ್ರದ್ದಾಂಜಲಿ ಅರ್ಪಿಸಿ ಪೋಸ್ಟರ್ ಹಂಚುತ್ತಿದ್ದಾರೆ.


ಇದನ್ನೂ ಓದಿ: ಭಾರತೀಯ ಕ್ರಿಕೆಟ್ ದಂತಕತೆ ಕಪಿಲ್ ದೇವ್ಗೆ ಹೃದಯಾಘಾತ!
ಕಪಿಲ್ ದೇವ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೂ ಇದೀಗ ವೈರಲಾಗುತ್ತಿದ್ದಂತೆ ಭಾರತ ಮೊದಲ ಭಾರಿ ವಿಶ್ವಕಪ್ ಗೆದ್ದಾಗ ಆ ತಂಡದಲ್ಲಿದ್ದ ಕಪಿಲ್ ದೇವ್ ಸ್ನೇಹಿತ ಮದನ್ ಲಾಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕಪಿಲ್ ದೇವ್ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಹರಡಲಾಗುತ್ತಿರುವ ಊಹಾಪೋಹಗಳು ಸೂಕ್ಷ್ಮತೆಯಿಲ್ಲದ ಬೇಜವಾಬ್ದಾರಿತನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮದನ್ ಲಾಲ್, “ನಮ್ಮ ಸ್ನೇಹಿತ ಕಪಿಲ್ ದೇವ್ ದಿನ ದಿನ ಉತ್ತಮವಾಗಿ ಚೇತರಿಸುತ್ತಿದ್ದಾರೆ. ಅವರು ಆಸ್ಪತ್ರೆಗೆ ದಾಖಲಾಗಿ ಅವರ ಕುಟುಂಬವು ಒತ್ತಡಕ್ಕೆ ಸಿಲುಕಿರುವ ಈ ಸಮಯದಲ್ಲಿ ದಯವಿಟ್ಟು ಸೂಕ್ಷ್ಮತೆಯಿಂದ ವರ್ತಿಸಿ” ಎಂದು ವಿನಂತಿಸಿದ್ದಾರೆ.
Speculation on a colleagues health and well being is insensitive and irresponsible. Our friend, Kapil Dev is on the path to recovery and getting better each day. At a time where the family has been through stress owing to his hospitalization, please let us be sensitive.
— Madan Lal (@MadanLal1983) November 2, 2020
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್‍ನಲ್ಲಿ ಭಾರತದ ಹೆಜ್ಜೆಗುರುತುಗಳು


