Homeಮುಖಪುಟ’ನಿರ್ಮಲಾ ಸೀತಾರಾಮ್ ಅವ‌ರೊಂದಿಗೆ ಕೆಲಸ ಮಾಡುವುದು ಕಷ್ಟಕರವಾಗಿತ್ತು’ - ಮಾಜಿ ಹಣಕಾಸು ಕಾರ್ಯದರ್ಶಿ

’ನಿರ್ಮಲಾ ಸೀತಾರಾಮ್ ಅವ‌ರೊಂದಿಗೆ ಕೆಲಸ ಮಾಡುವುದು ಕಷ್ಟಕರವಾಗಿತ್ತು’ – ಮಾಜಿ ಹಣಕಾಸು ಕಾರ್ಯದರ್ಶಿ

ಕಳೆದ ವರ್ಷದ ಜೂನ್‌ನಲ್ಲಿ ತಾನು ತನ್ನ ಹುದ್ದಯಿಂದ ಸ್ವಯಂ ನಿವೃತ್ತಿ ಪಡೆಯಲು ಕಾರಣವೇನೆಂದು ಅವರು ಬರೆದುಕೊಂಡಿದ್ದಾರೆ

- Advertisement -
- Advertisement -

ಕೇಂ‌ದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರೊಂದಿಗೆ ಕೆಲಸ ಮಾಡುವುದು ತೀರಾ ಕಷ್ಟಕರವಾದ ವಿಷಯವಾಗಿತ್ತು. ವೈಯಕ್ತಿಕ ಸಂಘರ್ಷದ ಕಾರಣಕ್ಕೆ ನಾನು ಸ್ವಯಂ ನಿವೃತ್ತಿ ಪಡೆದುಕೊಂಡೆ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಶ್ ಚಂದ್ರ ಗರ್ಗ್ ಹೇಳಿದ್ದಾರೆ.

1983 ರ ರಾಜಸ್ಥಾನ್ ಕೇಡರ್‌‌ನ ಐಎಎಸ್ ಅಧಿಕಾರಿಯಾಗಿರುವ ಸುಭಾಶ್ ಚಂದ್ರ ಗರ್ಗ್ ಕಳೆದ ವರ್ಷ ಜೂನ್ ತಿಂಗಳಿನಲ್ಲಿ ತಮ್ಮ ಹುದ್ದೆಯಿಂದ ದಿಡೀರ್ ಸ್ವಯಂ ನಿವೃತ್ತಿ ಹೊಂದಿದ್ದರು. ಇದೀಗ ತಮ್ಮ ಸ್ವಯಂ ನಿವೃತ್ತಿಯ ಬಗ್ಗೆ ಅವರ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. (ಬ್ಲಾಗ್ ಓದಲು ಇಲ್ಲಿ ಕ್ಲಿಕ್ ಮಾಡಿ)

ಇದನ್ನೂ ಓದಿ: ಆರ್ಥಿಕತೆಯಲ್ಲಿ ಭಾರತವನ್ನು ಹಿಂದಿಕ್ಕಲಿರುವ ಬಾಂಗ್ಲಾದೇಶ!

 

ಈ ಬ್ಲಾಗ್‌‌ನಲ್ಲಿ ದೇಶದ ಆರ್ಥಿಕತೆ ಕುರಿತು ಕೂಡಾ ಅವರು ಬರೆದಿದ್ದು, 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಸಾಮರ್ಥ್ಯದ ಕುರಿತು ಭಾರತದಲ್ಲಿ ಸಾಕಷ್ಟು ಸಿನಿಕತನವಿದೆ. 1% ಜನರಿಗೆ ಕೂಡಾ ವೈರಸ್ ಇಲ್ಲದಿರುವ ಸಂದರ್ಭ ಇಡೀ ದೇಶದಲ್ಲಿ ವಿಶ್ವದ ಅತ್ಯಂತ ಕಠಿಣ ಲಾಕ್ ಡೌನ್ ಹೇರಲಾಗಿತ್ತು. ಈ ಮೂಲಕ ಆರ್ಥಿಕ ಬೆಳವಣಿಗೆಯ ಕಣ್ಣು ಗುಡ್ಡೆಯನ್ನು ಕಿತ್ತುಹಾಕಲಾಗಿದೆ ಎಂದು ಅವರು ಬರೆದಿದ್ದಾರೆ.

“ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು 23.9 ಶೇ.ರಷ್ಟು ಕುಗ್ಗಿತ್ತು. ಇದಕ್ಕೆ ಮುಖ್ಯ ಕಾರಣ ಮಾರ್ಚ್ 25 ರಂದು ಜಾರಿಗೆ ಬಂದ 68 ದಿನಗಳ ಕಠಿಣ ಲಾಕ್‌ಡೌನ್. ಇದರಿಂದಾಗಿ ಕಾರ್ಖಾನೆಗಳು ಹಾಗೂ ವ್ಯಾಪಾರ ಸಂಸ್ಥೆಗಳು ಸ್ಥಗಿತಗೊಂಡಿತು, ಸಾರ್ವಜನಿಕ ಸಾರಿಗೆ ಮುಚ್ಚಿತು ಮತ್ತು ಲಕ್ಷಾಂತರ ಕಾರ್ಮಿಕರ ವಲಸೆಗೂ ಕಾರಣವಾಯಿತು” ಸುಭಾಶ್ ಚಂದ್ರ ಗರ್ಗ್ ಹೇಳಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ನೆಲಕಚ್ಚಿದ್ದಾಗ ಅಂಬಾನಿ ಪ್ರತಿ ಗಂಟೆಗೆ ಸಂಪಾದಿಸಿದ್ದು ಎಷ್ಟು ಗೊತ್ತೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read