Homeರಾಜಕೀಯಕರಾವಳಿ ರಾಜಕಾರಣದಲ್ಲಿ ಎಂಪಿಗಿರಿ ಟಿಕೆಟ್ ತಂತ್ರಗಾರಿಕೆ ಶುರು!!

ಕರಾವಳಿ ರಾಜಕಾರಣದಲ್ಲಿ ಎಂಪಿಗಿರಿ ಟಿಕೆಟ್ ತಂತ್ರಗಾರಿಕೆ ಶುರು!!

- Advertisement -
- Advertisement -

ಕರಾವಳಿಯಲ್ಲಿ ಎಂಪಿಗಿರಿ ಗುಂಗು-ರಂಗು ನಿಧಾನಕ್ಕೆ ಏರತೊಡಗಿದೆ! ದಿಲ್ಲಿ ಕನಸು ಕಟ್ಟಿಕೊಂಡಿರುವ ಲಾಟ್-ಪುಟ್ ಪುಢಾರಿಗಳು ಲಾಬಿ ಶುರುಹಚ್ಚಿಕೊಂಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷದಲ್ಲೀಗ ಒಂಥರಾ ಆತುರ-ಕಾತುರ, ಗಡಿಬಿಡಿ, ಗಂಡಾಗುಂಡಿ ಒಟ್ಟೊಟ್ಟಿಗೇ ಭುಗಿಲೆದ್ದುಹೋಗಿದೆ. ಕರಾವಳಿಯ ಮೂರೂ ಕ್ಷೇತ್ರದಲ್ಲಿರುವ ಹಿಂದೂತ್ವದ ಅಮಲೇರಿ ಪಾರ್ಲಿಮೆಂಟಿಗೆ ತೂರಿಕೊಳ್ಳುವ ಆಸೆಯಲ್ಲಿ ಸಂಘಪರಿವಾರದ ಸರದಾರರು ಓಡಾಡುತ್ತಿದ್ದಾರೆ. ಅತ್ತ ಹೈರಾಣಾಗಿರುವ ಕಾಂಗ್ರೆಸ್‍ನಲ್ಲೂ ಸಂಸದನಾಗುವ ಚಟದಾರರಿಗೇನೂ ಕಡಿಮೆಯಿಲ್ಲ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡದ ಕೇಸರಿ ಶಾಲಿನ ಹಾಲಿ ಸಂಸದರ ಬಗ್ಗೆ ಕ್ಷೇತ್ರದಲ್ಲಿರುವ ನಕಾರಾತ್ಮಕ ಭಾವನೆ ಮತ್ತು ಮೋದಿ ಮಾಮನ ಮೋಸಗಾರಿಕೆಯಿಂದ ಬೇಸತ್ತ ಮಂದಿ ಬದಲಾವಣೆ ಬಯಸಿದ್ದಾರೆಂಬ ಲೆಕ್ಕಾಚಾರ ಹಾಕಿರುವ ಕಾಂಗ್ರೆಸ್‍ನ ಒಂದಿಷ್ಡು ದಂಡ-ಪಿಂಡಗಳು ಸಂಸದನಾಗುವ ತೆವಲಿಗೆ ಬಿದ್ದಿವೆ.
ದಕ್ಷಿಣ ಕನ್ನಡದ ಹೊಡಿ-ಬಡಿ-ಕಡಿ ಕುಖ್ಯಾತಿಯ ಬೆಂಕಿ ನವಾಬ ನಳಿನ್‍ಕುಮಾರ್ ಕಟೀಲ್‍ಗೆ ಸಂಸದಗಿರಿ ಟಿಕೆಟ್ ತಪ್ಪಿಸಲು ಕಳೆದ ಸಲವೇ ಆರೆಸ್ಸೆಸ್ ಡಾನ್ ಕಲ್ಲಡ್ಕಭಟ್ಟ ಪ್ರಯತ್ನ ನಡೆಸಿದ್ದರು. ಆದರದು ವಿಫಲವಾಗಿ ಆತನಿಗೆ ಉಲ್ಟಾ ಹೊಡೆದಿತ್ತು. ಈ ಬಾರಿಯೂ ಅಂಥದೊಂದು ಸಣ್ಣ ಕರಾಮತ್ತು ಕಲ್ಲಡ್ಕಭಟ್ರು ಚಾಲು ಮಾಡಿದ್ದಾರೆಂಬ ವರ್ತಮಾನ ಚೆಡ್ಡಿ ಬಿಡಾರದಲ್ಲಿದೆ. ಆದರೆ ಗುರುವಿಗೆ ತಿರುಮಂತ್ರ ಹಾಕಿ ಸೆಟೆದುನಿಂತಿರುವ ‘ಕಟೀಲು’ ಸಾಹೇಬರು ಕಳೆದ ಅಸೆಂಬ್ಲಿ ಇಲೆಕ್ಷನ್ ನಂತರ ಮತ್ತೊಂದಿಷ್ಟು ಮಜಬೂತಾಗಿದ್ದಾರೆ. ತಮಗೆ ಬೇಕಾದ ಸ್ವಜಾತಿ ಬಂಟರ ಶಾಸಕನಾಗಿ ಮಾಡಿಕೊಂಡಿರುವ ಕಟೀಲ್‍ನನ್ನು ಕದಲಿಸುವುದು ಅಷ್ಟು ಸುಲಭವಲ್ಲ. ಎಂಬ ಮಾತು ಬಿಜೆಪಿಯಲ್ಲಿ ಅನುರನಿಸುತ್ತಿದೆ. ಆದರೆ ಕಟೀಲು ಬಗ್ಗೆ ಕ್ಷೇತ್ರದ ಜನರಿಗೆ ಸದಭಿಪ್ರಾಯವಿಲ್ಲ. ತನ್ನ ಹಿಂದೂತ್ವದ ಅಸ್ತಿತ್ವ ಕಾಪಾಡಿಕೊಳ್ಳಲು ಇಡೀ ಜಿಲ್ಲೆಗೆ ಬೇಕಿದ್ದರೂ ಬೆಂಕಿ ಹಾಕುವ ವಿದ್ರ್ರೋಹಿ ಮನಸ್ಥಿತಿಯ ಈ ಸ್ವಯಂ ಘೋಷಿತ ದೇಶಭಕ್ತನ ಎದುರು ಕಾಂಗ್ರೆಸ್ ಹೊಸ ಮುಖ ಒಂದಕ್ಕೆ ಅವಕಾಶ ಕೊಟ್ಟರೆ ಬದಲಾವಣೆ ಅಸಾಧ್ಯವೇನಲ್ಲ.
ಎಂಪಿಗಿರಿ ಅಭ್ಯರ್ಥಿ ಆಗಲು ಕಾಂಗ್ರೆಸ್‍ನಲ್ಲಿ ಮಾಜಿಮಂತ್ರಿ ರಮಾನಾಥ ರೈ, ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್‍ರೈ, ಮಾಜಿ ಮಂತ್ರಿ ವಿನಯ್‍ಕುಮಾರ್‍ಸೊರಕೆ, ಮೊಯ್ಲಿ ಮಹಾತ್ಮನ ಮಗ ಹರ್ಷಮೊಯ್ಲಿ, ಕೆಪಿಸಿಸಿ ಜನರಲ್ ಸೆಕ್ರೆಟರಿ ಪಿ.ವಿ ಮೋಹನ್ ಸಾಲುಗಟ್ಟಿ ನಿಂತಿದ್ದಾರೆ. ಬಂಟ್ವಾಳದಲ್ಲೇ ಗೆಲ್ಲಲಾಗÀದ ಬಡಾಯಿ ಭೂಪ ಬೇಬಿಯಣ್ಣ ಯಾನÉ ರಮಾನಾÀಥ್‍ರೈಗೆ ಜಿಲ್ಲಾ ಮಟ್ಟದ ಇಮೇಜು ಇಲ್ಲ. ಅಧಿಕಾರ ಇಲ್ಲದೇ ಬದುಕಲಾಗದ ರೈ ಬಂಟ್ವಾಳದಲ್ಲಿ ಸೋತ ಮರುದಿನವೇ ತನಗೆ ಎಮ್ಮೆಲ್ಸಿ ಮಾಡಿ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಮಾಡಿಯೆಂದು ಗೋಳಾಡಿದ್ದರು. ತಿಕ್ಕತಿಕ್ಕಲಾಗಿ ಮಾತಾಡಿ ಹಿಂದೂ ವಿರೋಧಾ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ರೈ ಕಾಂಗ್ರೆಸ್ ಕ್ಯಾಂಡಿಡೇಟಾದರೆ ಬಿಜೆಪಿ ನಿರಾಯಾಸವಾಗಿ ಗೆಲ್ಲುತ್ತದೆ! ಕಾಪು ಕ್ಷೇತ್ರದಲ್ಲಿ ಸೋತು ಸುಣ್ಣವಾಗಿರುವ ವಿನಯ್‍ಕುಮಾರ್‍ಸೊರಕೆ ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣಕನ್ನಡ ಎರಡೂ ಕ್ಷೇತ್ರದ ಮೇಲೆ ಒಂದೊಂದು ಕಣ್ಣು ಹಾಕಿ ಕುಂತಿದ್ದಾರೆ, ಪಾಪ! ಈ ಸೊರಕೆಯ ಬೇರುಗಳು ಎರಡೂ ಜಿಲ್ಲೆಯಲ್ಲಿ ಒಣಗಿಹೋಗಿ ಅದ್ಯಾವುದೋ ಕಾಲವಾಗಿದೆ. ಕನಿಷ್ಟ ಸ್ವಜಾತಿ ಬಿಲ್ಲವರ ಹುಡುಗರು ಕೇಸರಿ ಖೆಡ್ಡಾಕ್ಕೆ ಹೋಗಿಬೀಳೋದೂ ತಪ್ಪಿಸಲಾಗದ ಈ ಸೊರಕೆ ಗೆಲ್ಲೋದು ಕಷ್ಟ. ಬಿಲ್ಲವರ ಕುಲ ಕಂಠೀರವ ಜನಾರ್ದನ ಪೂಜಾರಿ ವಯೋಸಹಜ ಅರಳು-ಮರಳಿಂದ ಪ್ರಸ್ತುತರಾಗಿರುವುದರಿಂದ ತಾನೇ ಕಾಂಗ್ರೆಸ್‍ನ ಬಿಲ್ಲವ ಮುಖಂಡ ಎಂದು ಭಾವಿಸಿರುವ ಸೊರಕೆ ಬಗ್ಗೆ ಹೈಕಮಾಂಡ್ ಮಾಂಡಲೀಕ ಆಸ್ಕರ್ ಫರ್ನಾಂಡಿಸ್‍ಗೂ ಒಳ್ಳೆಯ ಅಭಿಪ್ರಾಯವಿಲ್ಲ. ಮಂಗಳೂರಿನ ಮಾಜಿ ಮೇಯರಮ್ಮ ಕರಾಟೆರಾಣಿ ಕವಿತಾ ಸನಿಲ್ ತಾನೂ ಬಿಲ್ಲವರ ಕುಡಿಯೆಂದು ಕೂಗು ಹಾಕುತ್ತಿದ್ದಾರೆ. ಈಕೆಗೆ ಟಿಕೆಟ್ ಕೊಟ್ಟರೆ ಮ್ಯಾಜಿಕ್ ಆಗಬಹುದೆಂದು ಹೇಳೋರೂ ಇದ್ದಾರೆ.
ಹರ್ಷ ಮೊಯ್ಲಿ ಅದೆಷ್ಟೇ ತಿಪ್ಪರಲಾಗ ಹಾಕಿದರೂ ಆತನಿಗೆ ಟಿಕೆಟ್ ಸಿಗಲಾರದು. ಕಾರ್ಕಳ ಅಸೆಂಬ್ಲಿ ಟಿಕೆಟ್ ಸಿಗಲಾರದೆಂಬ ಹತಾಶೆಯಲ್ಲಿ ಆತ ಪಕ್ಷದ ವಿರುದ್ಧವೇ ಟ್ವೀಟಾಯಿಸಿ ಕಿಮ್ಮತ್ತು ಕಳೆದುಕೊಂಡಿದ್ದಾನೆ. ಅಲ್ಲದೆ ಅವನಪ್ಪ ವೀರಪ್ಪ ಮೊಯ್ಲಿಗೆ ಚಿಕ್ಕಬಳ್ಳಾಪುರದಲ್ಲಿ ಆಭ್ಯರ್ಥಿ ಮಾಡಬೇಕಾಗಿರುವುದರಿಂದ ಹರ್ಷನಿಗೆ ಛಾನ್ಸ್ ಇಲ್ಲ. ಕಾಂಗ್ರೆಸ್‍ನಲ್ಲಿ ಒಂಚೂರು ಗಟ್ಟಿ ಕಾಳೆಂದು ಕಾಣಿಸಿಕೊಂಡಿರುವುದು ಹಿಂದುಳಿದ ವರ್ಗದ ಪಿ.ವಿ ಮೋಹನ್ ಮತ್ತು ಬಂಟರ ಬಹಾದ್ದೂರ ಮಿಥುನ್‍ರೈ ಇಬ್ಬರೇ. ಮಿಥುನ್ ಕ್ಯಾಂಡಿಡೇಟಾದರೆ ಸ್ವಜಾತಿಯ ನಳಿನ್‍ಕಟೀಲ್‍ಗೆ ಸೆಡ್ಡು ಹೊಡೆಯಬಹುದೆಂದು ಜನ ಹೇಳುತ್ತಾರೆ. ಜತೆಗೆ ದುಡ್ಡು ಮಿಥುನ್‍ನಲ್ಲಿ ಸಾಕಷ್ಟಿದೆ. ಕಳೆದ ಅಸೆಂಬ್ಲಿ ಇಲೆಕ್ಷನ್ ಕೊನೆಹಂತದಲ್ಲಿ ಮಾಜಿ ಮಂತ್ರಿ ಅಭಯಚಂದ್ರ ಜೈನ್‍ನ ಹಿಕಮತ್ತಿಗೆ ಬಲಿಯಾಗಿದ್ದರು. ಆ ಅನ್ಯಾಯಕ್ಕೆ ಪರಿಹಾರವಾಗಿ ಮಿಥುನ್‍ಗೆ ಕಾಂಗ್ರೆಸ್ ಟಿಕೆಟೇನಾದರೂ ಸಿಕ್ಕರೆ ನಳಿನ್‍ಗೆ ಟಕ್ಕರ್ ಖಂಡಿತ!
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕೂಗುಮಾರಿ ಖ್ಯಾತಿಯ ಸಂಸದೆ ಬೇಬಿಯಕ್ಕ ಯಾನೆ ಶೋಭ ಕರಂದ್ಲಾಜೆಗೆ ಮತ್ತೆ ಸ್ಪರ್ದಿಸುವ ಧೈರ್ಯವಿಲ್ಲ. ಸ್ಥಳೀಯ ನಿಷ್ಠಾವಂತ ಕೇಸರಿ ಕಾರ್ಯಕರ್ತರನ್ನೆಲ್ಲಾ ಕಡೆಗಣಿಸಿ ದಿಲ್ಲಿ ಲೆವೆಲ್ ಪುಢಾರಿಯಾಗಿ ತಾನೆಂದು ಹಾರಾಡುತ್ತ ನಾಲ್ಕು ವರ್ಷ ಕಳೆದಿರುವ ಈ ಕರ್ಮಗೇಡಿ ಎಂಪಿಣಿ ಉಡುಪಿ ಅಥವಾ ಚಿಕ್ಕಮಗಳೂರು ಭಾಗದಲ್ಲಿ ಮೂರು ಬಿಲ್ಲೂ ಕೆಲಸ ಮಾಡಿಲ್ಲ. ಆಕೆಗೆ ಕ್ಷೇತ್ರದ ಭೌಗೋಳಿಕ, ಉದ್ದಗಲ, ಜನರ ಕಷ್ಟ-ಸುಖ, ಬೇಕು-ಬೇಡ ಏನೂ ಗೊತ್ತಿಲ್ಲ. “ಯಜಮಾನ” ಯಡ್ಡಿಯನ್ನು ಸಿಎಂ ಮಾಡುವ ಏಕೈಕ ಧ್ಯೇಯೋದ್ದೇಶದ ಬೇಬಿಯಕ್ಕ ಈ ಬಾರಿ ಸ್ಪರ್ಧಿಸಿದರೂ ಗೆಲ್ಲೋದು ಅನುಮಾನ ಎಂದು ಬಿಜೆಪಿಯ ಜನರೇ ಹೇಳುತ್ತಿದ್ದಾರೆ. ಪಾರ್ಟಿಯಲ್ಲಿ ಶಾಸಕ ರಘುಪತಿಭಟ್ಟ, ಸಿ.ಟಿ ರವಿಯಂಥವರಿಗೆ ಆಕೆಯ ಮುಸುಡಿ ಕಂಡರಾಗುವುದಿಲ್ಲ. ಶೋಭಾ ದುರಹಂಕಾರಿ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ.
ಇದೆಲ್ಲ ಅಪಶಕುನ ಅರ್ಥಮಾಡಿಕೊಂಡಿರುವ ಯಡ್ಡಿ ಆಕೆಗೆ ರಾಜ್ಯಸಭೆ ಅಥವಾ ವಿಧಾನಪರಿಷತ್‍ಗೆ “ಪ್ಯಾಕ್” ಮಾಡುವ ಯೋಚನೆಯಲ್ಲಿದ್ದಾರೆ. ಕೇಂದ್ರಮಂತ್ರಿ ಡಿ.ವಿ ಸದಾನಂದಗೌಡ ಅಥವಾ ಮಾಜಿ ಸಂಸದ ಜಯಪ್ರಕಾಶ್‍ಹೆಗ್ಡೆಗೆ ಅಭ್ಯರ್ಥಿ ಮಾಡಿದರೆ ಮಾತ್ರ ಕ್ಷೇತ್ರ ಉಳಿಸಿಕೊಳ್ಳಲು ಸಾಧ್ಯವೆಂಬುದು ಸಂಘಿ ಸರದಾರರಿಗೂ ಖಾತ್ರಿಯಾಗಿದೆ. ಆದರೆ ಸದಾನಂದ ಗೌಡರಿಗೆ ತಾನು ಉಡುಪಿ-ಚಿಕ್ಕಮಗಳೂರಲ್ಲಿ ಗೆಲ್ಲುತ್ತೇನೆಂಬ ಆತ್ಮವಿಶ್ವಾಸವಿಲ್ಲ. ಹಾಗಾಗಿ ಜಯಪ್ರಕಾಶ್‍ಹೆಗ್ಡೆ ಟಿಕೆಟ್‍ಗೆ ಬಾಯಿ ತೆರೆದು ಕುಂತಿದ್ದಾರೆ. ಮೊದಲಿನ ಖದರು ಕಳೆದುಕೊಂಡಿರುವ ವಲಸಿಗ ಜೆಪಿ ಹೆಗ್ಡೆಗೆ ಸಂಘಪರಿವಾರ ಅಷ್ಟು ಸುಲಭಕ್ಕೆ ಛಾನ್ಸ್ ಕೊಡುವುದಿಲ್ಲ! ಹಿಂದುತ್ವ ಪ್ರಣೀತ ನಾಟಕದ ಸುಳ್ಳುಬುರುಡೆ ಪಾತ್ರ ಪ್ರವೀಣೆ ಬೇಬಿಯಕ್ಕನಿಗೆ ಅದ್ಯಾಕೊ ಬಿಜೆಪಿ ಅಡ್ಡಗಾಲು ಹಾಕಿ ಕುಂತಿದೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಎದ್ದಿದ್ದ ಹಿಂದೂತ್ವದ ತೂಫಾನ್ ಎದುರಿಸಲಾಗದೆ ಮುಳುಗಿದ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‍ನಿಂದ ಎಂಪಿ ಆಗುವ ಹಗಲುಗನಸು ಕಾಣುತಿದ್ದಾರೆ. ಮಂತ್ರಿಯಾಗಿದ್ದಾಗ ಪಕ್ಷಕ್ಕೆ ನಿಷ್ಠವಾಗದೆ ಎಡಬಿಡಂಗಿ ದರ್ಬಾರು ನಡೆಸಿದ್ದ ಪ್ರಮೋದ್‍ಗೆ ಪಾರ್ಟಿ ಮತ್ತು ಕ್ಷೇತ್ರದಾದ್ಯಂತ ಪ್ರಭಾವಿಗಳೇ ಇಲ್ಲ. ಒಂಥರಾ ಒಣದೌಲತ್ತಿನ ಪ್ರಮೋದ್ ಮಂತ್ರಿಯಾಗಿದ್ದಾಗ ಬರೀ ಉಡುಪಿ ವಿಧಾನಸಭಾ ಕ್ಷೇತ್ರಕ್ಕಷ್ಟೇ ಸೀಮಿತರಾಗಿ “ಕಬ್ಜು” ಎನಿಸಿಕೊಂಡಿದ್ದರು. ಈ ಪ್ರಮೋದ್‍ಗಿಂತ ಬಿಲ್ಲವರ ಬಾಹುಳ್ಯದ ಸÀದ್ರಿ ಕ್ಷೇತ್ರದಲ್ಲಿ ತಾನೇ “ಸ್ಟ್ರಾಂಗ್‍ಗುರು” ಎನ್ನುತ್ತಿದ್ದಾರೆ ವಿನಯ್‍ಕುಮಾರ್ ಸೊರಕೆ.
ಇವರಿಬ್ಬರಿಗಿಂತ ಸದ್ಯಕ್ಕೆ ಜಾಸ್ತಿ ಚಾಲ್ತಿಯಲ್ಲಿರೋದು ಅಮೃತಶಣೈ ಎಂಬ ರಿಯಲ್ ಎಸ್ಟೇಟ್‍ಕುಳ. ಬಿಜೆಪಿಯಿಂದ ವಲಸೆ ಬಂದಿರುವ ಈ ಕೊಂಕಣಿಗ ಆಸ್ಕರ್‍ಫರ್ನಾಂಡಿಸ್ ಆಶೀರ್ವಾದದಿಂದ ಎಐಸಿಸಿಯಲ್ಲಿ ಕೆಲಸಕ್ಕೆ ಬಾರದ ಹುದ್ದೆಗೇರಿದ್ದಾರೆ. ಜನಪರ ಸಂಸದ ಎನಿಸಿದ್ದ ರಂಗನಾಥಶಣೈ ವಂಶಸ್ಥನಾದ ತಾನು ಉಡುಪಿ ಎಂಪಿಯಾಗಲು ಅರ್ಹನೆಂದು ತಿಳಿದಂತಿದೆÀ ಅಮೃತ ಶಣೈ. ಅತ್ತ ಚಿಕ್ಕಮಗಳೂರು ಕಡೆಯಿಂದ ಮಾಜಿ ಸಂಸದರಾದ ಡಿ.ಕೆ ತಾರಾದೇವಿ, ಬಿ.ಎಲ್ ಶಂಕರ್ ಹೆಸರುಕೇಳಿ ಬರುತ್ತಿದೆ. ತುಳು ಸುಲಲಿತವಾಗಿ ಮಾತಾಡುವ ಬಿ.ಎಲ್ ಶಂಕರ್ ಈಗ ಟಿಕೆಟ್‍ಗೆ ಕ್ಯೂನÀಲ್ಲಿರುವವರಿಗಿಂತ ಬೇಟರ್. ಎಂಪಿನಿಧಿ ಸರಿಯಾಗಿ ಬಳಸದೆ ಪ್ಲಾಪ್ ಮಾಡುತ್ತಿರುವ ನಾಲಾಯಕ್ ಸಂಸದೆ ಶೋಭ ಕರಂದ್ಲಾಜೆ ಬಿಜೆಪಿಯಿಂದ ಎಕ್ಕುಟ್ಟಿಹೋಗಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ದೂರದೃಷ್ಟಿಯ ಶಂಕರ್ ಆಶಾಕಿರಣ ಆಗಬಲ್ಲರು. ದುರಂತವೆಂದರೆ ಹಿಂದೂತ್ವದಿಂದ ತಲೆ ತೊಳೆದುಕೊಳ್ಳುತ್ತಿರುವ ಕ್ಷೇತ್ರಕ್ಕಿದು ಅರ್ಥವಾಗೋದು ಅನುಮಾನ!
ಉತ್ತರ ಕನ್ನಡ ಕ್ಷೇತ್ರ ಸತತವಾಗಿ ಶನಿಯಂತೆ ಗಂಟುಬಿದ್ದಿರುವ ಡೋಂಗಿ ಹಿಂದುತ್ವವಾದಿ ಅನಂತ್ಮಾಣಿ ಯಾನೆ ಅನಂತಕುಮಾರ್ ಹೆಗ್ಡೆ ಬಿಜೆಪಿ ಟಿಕೆಟ್ ತರುವಷ್ಟೇ ಸುಲಭವಾಗಿ ಈ ಸಲ ಮತ್ತೇ ಸಂಸದರಾಗಿ ಆಯ್ಕೆಯಾಗಲಾರನೆಂಬ ಅಂದಾಜು ಕಟ್ಟರ್ ಚೆಡ್ಡಿಗಳೇ ಹಾಡುತ್ತಿದ್ದಾರೆ. ಒಂದು ಕಾಲದಲ್ಲಿ ಮಂತ್ರಿ ಅಭ್ಯರ್ಥಿಯಾಗಿ ಭಟ್ಕಳದ ಹಳ್ಳಿಗಳಲ್ಲಿ ಅಂಡಲೆಯುತ್ತಾ ಹಿಂದುತ್ವದ ಹಿಂಸಾ ಪ್ರಚಾರ ಮಾಡುತ್ತಿದ್ದ ಈ ಹಿಂಜಾವೇ ಪುಂಡ ಭಾರತದ ಸಂವಿಧಾನದ ಪವಾಡದಿಂದ ಕೇಂದ್ರ ಮಂತ್ರಿಯಾಗಿದ್ದಾನೆ!
ಅಧಿಕಾರದ ಪಿತ್ಥ ನೆತ್ತಿಗೇರಿರುವ ಮಾಣಿಯ ಬುರ್ನಾಸ್ ಭಾಷೆ, ಭಾವನೆ, ಭಂಗಿಗೆ ಬಿಜೆಪಿ ಕಾರ್ಯಕರ್ತರೇ ಹೇಸಿ ಹೋಗಿದ್ದಾರೆ. ಈತನಿಗೆ ಗುದುಮುರಿಗೆ ಮಾಡಲು ಸಾಬರೇ ಬೇಕೆಂದೇನಿಲ್ಲ ಸ್ವ-ಪಕ್ಷದ ಹಿಂದೂಹಿರಿಯರು, ವೈದ್ಯರು, ಕಾಗೇರಿ, ವಿಎಸ್ ಪಾಟೀಲ್‍ರಂಥ ಶಾಸಕರು, ಅಧಿಕಾರಿಗಳು ಯಾರಾದರೂ ಸರಿ. ರೌಡಿಯಂತೆ ಹೊಡೆದು ಹಲ್ಲೆ ಮಾಡಿ ರಕ್ತ ಹರಿಸಿ ತೀಟೆ ತೀರಿಸಿಕೊಳ್ಳಬಲ್ಲ. ಈ ಪಾತಕ ಹಿನೆÀ್ನಲೆ ನೋಡಿಯೆ ಮಾಣಿಗೆ ಮೋದಿ ಮಂತ್ರಿ ಮಾಡಿದ್ದಾರೆಂದು ಆತನ ಅಭಿಮಾನಿಗಳು ಹೊಗಳೋದು ಮಜಾ ಆಗಿದೆ.
ಆರೆಸ್ಸೆಸ್ ವಲಯದಲ್ಲಿ ಚಿರಪರಿಚಿತನಾಗಿರುವ ಅನಂತ್ಮಾಣಿ ಟಿಕೆಟ್ ತರುವುದು ಕಷ್ಟವಾಗದು. ಆದರೂ ಈತ ನಾಲಾಯಕ್ ಸಂಸದ. ಕ್ಷೇತ್ರ ಬರಡಾಗಿ ತಾನು ಸಮೃದ್ಧನಾಗಿರುವ ಅಯೋಗ್ಯನೆಂದು ಬಿಂಬಿಸಿ ತಾನೇ ಅಭ್ಯರ್ಥಿಯಾಗಲೂ “ಹಿಂದೂತ್ವವಾಗ್ಮಿ” ಸೂಲಿಬೆಲೆ ಚಕ್ರವರ್ತಿಯಾನೆ, ಮಿಥುನ್ ಚಕ್ರವರ್ತಿ, ಡಿ.ಶೇಟ್ ನಾಜೂಕಾಗಿ ಆಟ ಆಡುತ್ತಿದ್ದಾನೆ. ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಉತ್ತರ ಕನ್ನಡ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಹಿಂದುತ್ವದ ಹುಚ್ಚಿರುವುದು ಖರೆ. ಆದರೆ ಕುಮಟಾ, ಭಟ್ಳಳದಂತ ಕಡೆ ಭಜರಂಗಿ ಪಡೆಯು ಅನಂತ್ಮಾಣಿ ವಿರುದ್ದ ತಿರುಗಿ ಬಿದ್ದಿದೆ. ಇದನ್ನು ಸರಿಯಾಗಿ ಬಳಸಿಕೂಳ್ಳುವ ತಂತ್ರಗಾರಿಕೆ ಸದಕ್ಕಂತೂ ಕಾಂಗ್ರೆಸ್‍ನಲ್ಲಿ ಕಾಣಿಸುತ್ತಿಲ್ಲ.
ಎಐಸಿಸಿ ಫ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಉತ್ತರ ಕನ್ನಡ ಅಥÀವಾ ದಕ್ಷಿಣ ಕನ್ನಡದಿಂದ ಪಾರ್ಲಿಮೆಂಟ್ ಪ್ರವೇಶಕ್ಕೆ ಪ್ಲಾನು ಹಾಕಿದ್ದಾರೆ. ಉತ್ತರ ಕನ್ನಡವೇ ಹೆಚ್ಚು ಅನುಕೂಲಕರ ಎಂಬ ಯೋಚನೆ ಅವರದು. ಕ್ಷೇತ್ರದಲ್ಲಿ ದೀನರು(ಈಡಿಗರು) ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇತರ ಹಿಂದುಳಿದವರು ಹಳಿಯಾಳ, ಜೋಯಿಡ, ಕಾರವಾರ, ಮುಂಡಗೋಡದಲ್ಲಿ ಗಣನೀಯವಾಗಿದ್ದಾರೆ. ಈ ಏರಿಯಾದಲ್ಲಿ “ಆ್ಯಂಟಿ ದೀವರು” ಭಾವನೆಯಿಲ್ಲ ಮುಸ್ಲಿಂ ಮತ್ತು ಹಾಲಕ್ಕಿ ಒಕ್ಕಲಿಗರ ಒಲಿಸಿಕೊಂಡರೆ ಗೆಲುವು ಸುಲಭ ಎಂಬ ಲೆಕ್ಕಾಚಾರ ಹಿಂದುತ್ವದ ಎದುರು ಅಷ್ಟು ಸರಳವೇನಲ್ಲ. ಆದರೂ ಮಂತ್ರಿ ದೇಶಪಾಂಡೆ ಮಗ ಪ್ರಶಾಂತ್ ದೇಶಪಾಂಡೆಗಿಂತ ಹರಿಪ್ರಸಾದ್ ಬಲಾಢ್ಯ ಕ್ಯಾಂಡಿಡೇಟ್ ಎಂಬುದರಲ್ಲಿ ಅನುಮಾನವಿಲ್ಲ. ದೇಶಪಾಂಡೆಯ ಪಾಳೆಗಾರ ರಾಜಕಾರಣ ವಿರೋಧಪಕ್ಷದ ಜೊತೆಗಿನ ಹೊಂದಾಣಿಕೆ ಹಿಕಮತ್ತು ಮತ್ತಾತನ ಹಿಂಬಾಲಕರ ದಾದಾಗಿರಿಯಿಂದ ಕ್ಷೇತ್ರದಲ್ಲಿನ ಎರಡೂ ದೊಡ್ಡ ಜಾತಿಗಳಾದ ಹವ್ಯಕರು ಮತ್ತು ದೀನರು ದೇಶಪಾಂಡೆ ಸಂತಾನಕ್ಕೆ ವಿರುದ್ಧವಾಗಿವೆ.
ಮ್ಯಾಗಿ ಪುತ್ರರತ್ನ ನಿವೇದಿತಾಆಳ್ವಗೆ ಪಾರ್ಲಿಮೆಂಟ್‍ಗೆ ಸ್ಪರ್ಧಿಸುವ ದಮ್ ಇಲ್ಲ. ದೇಶಪಾಂಡೆ ಪಡೆ ಕಾಲೆಳೆಯುತ್ತದೆ ಮತ್ತು ಅಲ್ಪಸಂಖ್ಯಾತನೆಂಬ ಕಾರ್ಡ್ ಬಿಜೆಪಿ ಹಾಕುತ್ತದೆಂಬ ಆತಂಕ ಅತನದು. ಹಾಗಾಗಿ ಆತ ಎಮ್ಮೆಲ್ಸಿ ಆಗಲು ಕಟಿಪಿಟಿ ನಡೆಸಿದ್ದಾನೆ. ಮ್ಯಾಗಿ-ದೇಶಪಾಂಡೆ ವೈಮನಸ್ಸು ಬಿಟ್ಟು ಬಿಜೆಪಿ ಸೋಲಿಸಬೇಕೆಂಬ ದೃಢನಿರ್ಧಾರ ಮಾಡಿ ತಂತ್ರ ಹೆಣೆದರೆ ಅನಂತ್ಮಾಣಿಯಿಂದ ನತದೃಷ್ಟ ಉತ್ತರ ಕನ್ನಡಕ್ಕೆ ಮೋಕ್ಷ ಕೊಡಿಸುವುದೇನು ಕಷ್ಟವಲ್ಲ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮಗಳು ಮಮತಾ ನಿಚ್ಚಾನಿ ಅಥವಾ ಹೆಗಡೆಜೀ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆಯನ್ನು ಕಾಂಗ್ರೆಸ್ ಹುರಿಯಾಳಾಗಿ ಅಖಾಡಕ್ಕೆ ಇಳಿಸಿದರೆ ಗೆಲುವು ಸುಲಭವಾಗುತ್ತದೆ. ಆದರೆ ಇಂಥ ಸ್ಟ್ರೇಟಜ್ರಿಗಳೆಲ್ಲ ಸ್ವಾರ್ಥಲಾಲಸೆಯ ಮ್ಯಾಗಿ-ದೇಶಪಾಂಡೆಗೆ ಅರ್ಥವಾಗೋದು ಕಷ್ಟವೆಂದು ನಿಷ್ಠಾವಂತ ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಕಾರವಾರದ ಖಾಲಿಬರಡು ಪುಢಾರಿ ಆನಂದ ಅಸ್ನೋಟಿಕರ್ ತಾನೇ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂಬ ಭ್ರಮೆಯಲ್ಲಿ ಅನಂತ್ಮಾಣಿ ಮೇಲೆ ಡೆಡ್ಲಿಯಾಗಿ ಮುಗಿಬಿದ್ದಿದ್ದಾನೆ. ಅನಂತನ ಅನಾಹುತ, ಅಸಹ್ಯ, ಅಧಿಕ ಪ್ರಸಂಗದ ಹೇಳಿಕೆ, ಆನಂದ ಅಸ್ನೋಟಿಕರ್ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಇದೇ ಸದ್ಯಕ್ಕೆ ಕರಾವಳಿಯ ಪೊಲಿಟಿಕಲ್ ಫನ್!!

– ನಹುಷ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...