Homeಕರ್ನಾಟಕಸಭೆ ಸಮಾರಂಭಗಳಲ್ಲಿ ಪುಸ್ತಕ ಉಡುಗೊರೆ ಕೊಡಲು ಆದೇಶ; ಇಲ್ಲಿವೆ ಕೆಲವು ನಿರ್ದಿಷ್ಟ ಸಲಹೆಗಳು

ಸಭೆ ಸಮಾರಂಭಗಳಲ್ಲಿ ಪುಸ್ತಕ ಉಡುಗೊರೆ ಕೊಡಲು ಆದೇಶ; ಇಲ್ಲಿವೆ ಕೆಲವು ನಿರ್ದಿಷ್ಟ ಸಲಹೆಗಳು

- Advertisement -
- Advertisement -

ಕರ್ನಾಟಕ ಸರ್ಕಾರ ಈ ಶ್ರಾವಣದ ಒಂದು ಮಂಗಳವಾರ ಒಂದು ವಿಚಿತ್ರವಾದ ಆದೇಶವನ್ನು ಹೊರಡಿಸಿತು. ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ನಡೆಸುವ ಯಾವುದೇ  ಸಭೆ ಸಮಾರಂಭಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ನೆನಪಿನ ಕಾಣಿಕೆ ನೀಡಬಾರದಾಗಿ, ಅದರ ಬದಲಿಗೆ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದೆಂದು ಮತ್ತು ಇದನ್ನು ಬಹಳ ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಬೇಕೆಂದು ಆ ಆದೇಶ ಆಗ್ರಹಿಸಿದೆ. ಇದರಿಂದ ಹೂ ಮತ್ತು ಹಣ್ಣು ಬೆಳೆಗಾರರು ಹಾಗೂ ಮಾರಾಟಗಾರರಿಗೆ ಸಮಸ್ಯೆ ಆಗುವುದೆಂಬ ಆತಂಕ- ಆಕ್ರೋಶ ಕೂಡ ವ್ಯಕ್ತವಾಗಿದೆ. ಅದರ ಬಗ್ಗೆ ಸರ್ಕಾರ ಗಮನಹರಿಸಿ ಸರಿಪಡಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಿ ಎಂಬು ನಮ್ಮ ಆಶಯವೂ ಕೂಡ.

ಆದರೆ ಈ ಸಮಯದಲ್ಲಿ ಶಾಸಕರಿಗೆ-ಸಚಿವರಿಗೆ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ನೀಡಲು ಪುಸ್ತಕಗಳನ್ನು ಆಯ್ದು ಕೊಂಡುಕೊಳ್ಳಲು ರಾಜ್ಯಾದ್ಯಂತ ಪುಸ್ತಕದ ಅಂಗಡಿಗಳಿಗೆ ಭಾರಿ ಸಂಖ್ಯೆಯಲ್ಲಿ, ನೂಕುನುಗ್ಗಲಿನಲ್ಲಿ ಜನ ಹೋಗುತ್ತಿದ್ದಾರೆ ಎಂಬ ಅನಧಿಕೃತ ವರದಿಗಳು ಇವೆ. ಅದರ ಸತ್ಯಾಸತ್ಯತೆ ಏನೇ ಇರಲಿ, ಉಡುಗೊರೆ ತರಲು ಪುಸ್ತಕ ಅಂಗಡಿಗೆ ಹೋದವನಿಗೆ ಏನು ಕೊಳ್ಳಬೇಕು ಎಂಬ ಗೊಂದಲ ಮೂಡುವುದು ಸರ್ವೇ ಸಾಮಾನ್ಯ. ಮತ್ತು ಈ ಕಾಲಘಟ್ಟದಲ್ಲಿ ಶಾಸಕರು-ಸಚಿವರು ಆರೋಗ್ಯಕರವಾದದ್ದನ್ನೇ ಓದಬೇಕು ಎಂಬ ಕಾಳಜಿ ಎಲ್ಲರಿಗೂ ಇದ್ದೇ ಇರುತ್ತದಲ್ಲವೇ! ಸಾಂಕ್ರಾಮಿಕದ ಸಮಯದಲ್ಲಿ ಆರೋಗ್ಯದ ಪುಸ್ತಕಗಳ ಬಗ್ಗೆ ಮಾತಾಡ್ತಾ ಇದ್ದೀನಿ ಅಂದುಕೊಳ್ಳಬೇಡಿ. ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡುವ ಪುಸ್ತಕಗಳನ್ನು ಜನಪ್ರತಿನಿಧಿಗಳು ಓದುವುದು ಅತಿ ಮುಖ್ಯ. ಆ ನಿಟ್ಟಿನಲ್ಲಿ ಉಡುಗೊರೆ ಹುಡುಕಲು ಸಮಸ್ತ ಜನತೆಗೆ ಉಪಯೋಗವಾಗಲಿ ಎಂಬ ದೃಷ್ಟಿಯಿಂದ ಸಲಹೆಗಳನ್ನು ಹಲವು ಕಂತುಗಳಲ್ಲಿ ಇಲ್ಲಿ ನೀಡಲಾಗುವುದು. ಸಾಮಾನ್ಯವಾಗಿ ಯಾರಿಗಾದರೂ ಕೊಡಬಹುದಾದ ಪುಸ್ತಕಗಳ ಸಲಹೆಗಳ ಜೊತೆಗೆ ನಿರ್ದಿಷ್ಟವಾಗಿ ಕೆಲವು ಶಾಸಕರಿಗೆ, ಸಚಿವರಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಉಡುಗೊರೆ ನೀಡುವಾಗ ಯಾವ ಪುಸ್ತಕ ನೀಡಿದರೆ ಒಳ್ಳೆಯದು ಎಂಬುದರ ಬಗ್ಗೆಯೂ ಇಲ್ಲಿ ವಿವರಣೆ ಇರಲಿದೆ. ನೀವೂ ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಸಜೆಶನ್‌ಗಳನ್ನ ಹಾಕುವುದಕ್ಕೆ ಮರೆಯಬೇಡಿ!

ಸಾಮಾನ್ಯವಾಗಿ ಯಾರಿಗೂ ಕೊಡಬಹುದಾದ ಪುಸ್ತಕ ಉಡುಗೊರೆಗಳು!

  1. ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು

ಇವತ್ತು ಎಲ್ಲಾ ಜನಪ್ರತಿನಿಧಿಗಳು ಓದಲೇಬೇಕಾದದ್ದು ಎಂದರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಸಮಗ್ರ ಬರಹಗಳನ್ನು. ಭಾರತಕ್ಕೆ ಪ್ರಜಾಪ್ರಭುತ್ವದ ಅಗತ್ಯ ಏಕಿದೆ ಎಂಬುದರಿಂದ ಹಿಡಿದು, ಹಿಂದೂ ಧರ್ಮದಲ್ಲಿ ಅಡಗಿರುವ ಅಪಸವ್ಯಗಳು, ಸಂವಿಧಾನದ ಬಗ್ಗೆ, ಬೌದ್ಧ ಧರ್ಮದ ಬಗ್ಗೆ, ಭಾರತದ ಇತಿಹಾಸದ ಸಂಗತಿಗಳ ಬಗ್ಗೆ – ಒಟ್ಟಿನಲ್ಲಿ ಭಾರತೀಯ ಸಮಾಜ ಆರೋಗ್ಯಪೂರ್ಣವಾಗಿ ಮುನ್ನಡೆಯಲು ಬೇಕಿರುವ ಎಲ್ಲಾ ಸಂಗತಿಗಳು ಇದರಲ್ಲಿ ಅಡಕವಾಗಿವೆ. ಕುವೆಂಪು ಭಾಷಾ ಪ್ರಾಧಿಕಾರ ಇದನ್ನು ಪ್ರಕಟಿಸಿದ್ದು ಈಗ ಪ್ರತಿಗಳ ಲಭ್ಯತೆ ಬಗ್ಗೆ ಗೊಂದಲಗಳಿವೆ. ಶೀಘ್ರದಲ್ಲಿಯೇ ಮರುಮುದ್ರಣ ಮಾಡುವಂತೆ ಒತ್ತಡ ಹಾಕಬೇಕಿದೆ.

  1. ಆತ್ಮಕತೆ ಅಥವಾ ನನ್ನ ಸತ್ಯಾನ್ವೇಷಣೆ

ಸ್ವಾತಂತ್ರ್ಯ ದಿನಾಚರಣೆ ಬೇರೆ ಹತ್ತಿರ ಬರುತ್ತಿದೆ. ರಾಜಕಾರಣಿಗಳು, ಶಾಸಕರು ಸ್ವಾತಂತ್ರ್ಯದ ಬಗ್ಗೆ, ಅದಕ್ಕೆ ಮಹಾತ್ಮ ಗಾಂಧಿಯವರು ನೀಡಿದ ಕೊಡುಗೆ ಬಗ್ಗೆ ಬಹಳಷ್ಟು ಮಾತನಾಡಲಿದ್ದಾರೆ. ಅವರು ಮಹಾತ್ಮ ಗಾಂಧೀಜಿಯ ಬಗ್ಗೆ ಇನ್ನಷ್ಟು ಓದಿಕೊಳ್ಳಲಿ. ಗಾಂಧಿ ಹಿಂದೂ ಮತ್ತು ಮುಸ್ಲಿಮರ ನಡುವಿನ ಕೋಮು ಸೌಹಾರ್ದಕ್ಕೆ ಯಾಕಷ್ಟು ಶ್ರಮಿಸಿದರು ಎಂಬುದನ್ನು ಹೆಚ್ಚು ಅರ್ಥ ಮಾಡಿಕೊಳ್ಳಲಿ. ಈ ದೃಷ್ಟಿಯಿಂದ ಗಾಂಧಿಯವರ ಆತ್ಮಕತೆಯನ್ನು ಅಗತ್ಯವಾಗಿ ಗಿಫ್ಟ್ ಕೊಡಿ. ಕನ್ನಡಕ್ಕೆ ಹಲವು ಬಾರಿ ಗಾಂಧಿ ಆತ್ಮಕತೆ ಅನುವಾದವಾಗಿದ್ದರೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಅನುವಾದಿಸಿರುವ ಆವೃತ್ತಿ ಬಹಳ ಜನಪ್ರಿವಾಗಿದ್ದು, ಸುಲಭವಾಗಿ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿದೆ.

  1. ಭಾರತ ದರ್ಶನ

ಮೊನ್ನೆ ಮೊನ್ನೆ ಬಿಜೆಪಿ ಶಾಸಕರಾದ ಸಿ ಟಿ ರವಿಯವರು ಭಾರತದ ಪ್ರಥಮ ಮುಖ್ಯಮಂತ್ರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಜವಾಹರ್ ಲಾಲ್ ನೆಹರು ಅವರ ಬಗೆಗಿನ ತಮ್ಮ ಅನುಚಿತ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಇನ್ನು ಪೋಸ್ಟ್ ಕಾರ್ಡ್ ನಂತಹ ಸುಳ್ಳುಸುದ್ದಿ ಹರಡುವ ತಾಣಗಳಿಗೆ ನೆಹರೂ ಬಗೆಗೆ ಫೇಕ್ ಸುದ್ದಿಗಳನ್ನು ಸೃಷ್ಟಿ ಮಾಡಿ ಹಂಚುವ ಕೆಲಸ ಅಚ್ಚುಮೆಚ್ಚು. ಜನಪ್ರತಿನಿಧಿಗಳು ಸುಳ್ಳು ಸುದ್ದಿಯಿಂದ ಪ್ರೇರೇಪಿತರಾಗಬಾರದಲ್ಲವೇ? ಅದಕ್ಕೆ ನೆಹರೂ ಅವರ ‘ಡಿಸ್ಕವರಿ ಆಫ್ ಇಂಡಿಯಾ’ದ ಅನುವಾದ ‘ಭಾರತ ದರ್ಶನ’ವನ್ನು ಅಗತ್ಯವಾಗಿ ಉಡುಗೊರೆ ನೀಡಿ. ಮುಂದಿನ ಬಾರಿ ಸಿಕ್ಕಾಗ ‘ಓದಿ ಮುಗಿಸಿದ್ರಾ’ ಅಂತ ಕೇಳುವುದನ್ನು ಮಾತ್ರ ಮರೆಯಬೇಡಿ!

  1. ಬಸವಣ್ಣನವರ ವಚನಗಳು

ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ವೈದಿಕ ಧರ್ಮದ ವಿರುದ್ಧ ಆದ ಶರಣ ಕ್ರಾಂತಿಯನ್ನು ಇಂದಿನ ಜನಪ್ರತಿನಿಧಿಗಳು ತಿಳಿದುಕೊಳ್ಳುವುದು ಅತಿ ಮುಖ್ಯ ಸಂಗತಿ. ಅಂದಿನ ಅನುಭವ ಮಂಟಪ ಜಗತ್ತಿನ ಮೊದಲ ಪ್ರಜಾಸತ್ತೀಯವಾದ ವ್ಯವಸ್ಥೆಯಾಗಿತ್ತು ಅನ್ನುತ್ತಾರೆ. ಈ ನಿಟ್ಟಿನಲ್ಲಿ ಅದರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಪ್ರಾಥಮಿಕವಾಗಿ ಬಸವಣ್ಣನವರ ವಚನಗಳನ್ನು ಓದುವುದು ಒಳ್ಳೆಯ ಪ್ರಾರಂಭವಾದೀತು. ವಿದ್ವಾಂಸರಾದ ಎಲ್ ಬಸವರಾಜು, ಡಾ. ಎಚ್ ತಿಪ್ಪೇರುದ್ರಸ್ವಾಮಿ ಹೀಗೆ ಹಲವರು ಬಸವಣ್ಣನವರ ವಚನಗಳನ್ನು ಸಂಗ್ರಹಿಸಿ ಪ್ರಸ್ತಾವನೆಗಳನ್ನು ಬರೆದು ಜನಪ್ರಿಯಗೊಳಿಸಿದ್ದಾರೆ. ಯಾವುದಾದರೂ ಆವೃತ್ತಿಯನ್ನು ಉಡುಗೊರೆ ನೀಡಿ!

  1. ವಿಚಾರ ಕ್ರಾಂತಿಗೆ ಆಹ್ವಾನ, ಶೂದ್ರ ತಪಸ್ವಿ ಮತ್ತು ಮಲೆಗಳಲ್ಲಿ ಮದುಮಗಳು

ಇನ್ನು ಕನ್ನಡ ಆಧುನಿಕ ಸಾಹಿತ್ಯದ ಮೇರು ಹೆಸರು ಕುವೆಂಪು. ಕನ್ನಡದ ವಿವೇಕವನ್ನು, ತಿಳಿವನ್ನು ಹೆಚ್ಚಿಸುವುದರಲ್ಲಿ ಕುವೆಂಪು ಅವರ ಕವನ, ಕಥೆ-ಕಾದಂಬರಿಗಳು, ವೈಚಾರಿಕ ಬರಹಗಳು, ನಾಟಕ ಮತ್ತು ಮಹಾಕಾವ್ಯ ಶ್ರೀರಾಮಾಯಣಂ ದರ್ಶನಂ ಕೃತಿಗಳು ಅಪಾರ ಕೊಡುಗೆಯನ್ನು ನೀಡಿವೆ. ಈ ನಿಟ್ಟಿನಲ್ಲಿ 12 ಸಂಪುಟಗಳಲ್ಲಿ ಸಿಗುವ ಅವರ ಸಮಗ್ರ ಬರಹ ಅತ್ಯುತ್ತಮ ಉಡುಗೊರೆಯಾದೀತು. ಬಜೆಟ್‌ನ ಕೊರತೆ ಎಂದಾದರೆ, ಪೌರಾಣಿಕ ಕಾವ್ಯ ರಾಮಾಯಣದಲ್ಲಿರುವ ಶೋಷಣೆಯ ಸಂಗತಿಯೊಂದನ್ನು ತಿದ್ದಿ ಬರೆದ ‘ಶೂದ್ರ ತಪಸ್ವಿ’ ನಾಟಕ, ವೈಚಾರಿಕತೆಯನ್ನು ಉದ್ದೀಪಿಸುವ ‘ವಿಚಾರ ಕ್ರಾಂತಿಗೆ ಆಹ್ವಾನ’ ಮತ್ತು ಭಾರತ ಸಮಾಜಿಕ ವ್ಯವಸ್ಥೆಯನ್ನು ಕಥಾ ನಿರೂಪಣೆಯ ಮೂಲಕ ಶೋಧಿಸುವ, ಅದರಲ್ಲಿರುವ ತಾರತಮ್ಯವನ್ನು ಸರಿಪಡಿಸಿ ಉತ್ತಮ ನಾಗರಿಕರಾಗಬೇಕಿರುವ ಉದಾತ್ತತೆಯನ್ನು ಸಾರುವ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಉಡುಗೊರೆಯಲ್ಲಿ ಒಳಗೊಳ್ಳಿ.

ಇದು ಅಂತಿಮವಾದ ಪಟ್ಟಿಯೇನಲ್ಲ. ಪ್ರಾಥಮಿಕ ಮತ್ತು ಪ್ರಾತಿನಿಧಿಕ ಪಟ್ಟಿ ಮಾತ್ರ. ಮುಂದಿನ ಕಂತಿನಲ್ಲಿ ಪ್ರತಿ ಇಲಾಖೆಯ (ಮುಜರಾಯಿ, ಶಿಕ್ಷಣ, ಆರೋಗ್ಯ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆ ಇತ್ಯಾದಿ) ಕಾರ್ಯಕ್ರಮಗಳಿಗೆ ಹೊಂದುವಂತಹ ನಿರ್ದಿಷ್ಟ ಪುಸ್ತಕಗಳನ್ನು ಇಲ್ಲಿ ಪಟ್ಟಿ ಮಾಡಲಾಗುತ್ತದೆ. ಅಲ್ಲಿಯವರೆಗೆ ನೀವು ನಿಮ್ಮ ಸಲಹೆಗಳನ್ನು ಕಮೆಂಟ್ ಮಾಡುವುದನ್ನು ಮರೆಯಬೇಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಟರಾಜ್ ಹುಳಿಯಾರ್ ಅವರು ರಚಿಸಿರುವ ಶಾಂತವೇರಿ ಗೋಪಾಲಗೌಡರ ಜೀವನ ಚರಿತ್ರೆ ಮತ್ತು ಬಸವರಾಜು ಮೇಗಲಕೇರಿ ಅವರು ಹೊರತಂದ “ನಮ್ಮ ಅರಸು” ಕೃತಿಗಳು ಉತ್ತಮ ರಾಜಕಾರಣಿಗಳಾಗಲು ಸ್ಪೂರ್ತಿ ನೀಡುತ್ತವೆ. ಹೀಗಾಗಿ ಈ ಕೃತಿಗಳನ್ನೂ ಸಹ ಉಡುಗೊರೆಯಾಗಿ ನೀಡಬಹುದು.

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...