ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಪ್ಪಿಸಲು ಕಾಲೇಜು ಮಂಡಳಿಯೊಂದು ಐಡಿಯಾ ಕಂಡು ಹಿಡಿದಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಪಿ ಚೀಟಿ ತರುವುದು, ಕೇಳಿ ಬರೆಯುವುದು, ನಕಲು ಮಾಡುವುದನ್ನು ತಪ್ಪಿಸಲು ಕಾಲೇಜು ಕಂಡು ಹಿಡಿದಿರುವ ಅದ್ಭುತ ಉಪಾಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕರ್ನಾಟಕದ ಹಾವೇರಿ ಜಿಲ್ಲೆಯ ಭಗತ್ ಪೂರ್ವ ವಿಶ್ವವಿದ್ಯಾಲಯದಲ್ಲಿ, ನಕಲು ಮಾಡುವುದನ್ನು ತಪ್ಪಿಸಲು, ವಿದ್ಯಾರ್ಥಿಗಳ ತಲೆಗೆ ಕಾರ್ಡ್ ಬೋರ್ಡ್ ಬಾಕ್ಸ್ ಗಳನ್ನು ಹಾಕಲಾಗಿದೆ. ಕಾಲೇಜು ಆಡಳಿತ ಮಂಡಳಿ, ಪರೀಕ್ಷೆ ಬರೆಯುವ ಪ್ರತಿ ವಿದ್ಯಾರ್ಥಿಯ ತಲೆಗೆ ಕಾರ್ಡ್ ಬೋರ್ಡ್ ಬಾಕ್ಸ್ ಹಾಕಿದೆ. ಸತೀಶ್ ಹೀರೂರು ಎಂಬುವವರು ಕಾರ್ಡ್ ಬೋರ್ಡ್ ಬಾಕ್ಸ್ ಧರಿಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳ ಫೋಟೋ ತೆಗೆದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಇದು ನಮ್ಮ ಕಾಲೇಜಿನಲ್ಲಿ ನಡೆಯುತ್ತಿರುವ ಮಧ್ಯಂತರ ವಾರ್ಷಿಕ ಪರೀಕ್ಷೆ’ ಎಂದು ಬರೆದಿದ್ದಾರೆ. ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕಾಪಿ ಹೊಡೆಯುತ್ತಿದ್ದರು. ವಿದ್ಯಾರ್ಥಿಗಳಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿತ್ತಾದರೂ ನಕಲು ಮಾಡುವುದನ್ನು ಬಿಟ್ಟಿರಲಿಲ್ಲ. ಇದನ್ನು ತಪ್ಪಿಸಲು ಕಾಲೇಜು ಮಂಡಳಿ ಈ ಐಡಿಯಾ ಕಂಡು ಹಿಡಿದಿದೆ.
ಇನ್ನು ಹಾವೇರಿ ಜಿಲ್ಲೆಯ ಭಗತ್ ಪಿಯು ಕಾಲೇಜಿನಲ್ಲಿ ಕೈಗೊಂಡಿರುವ ಕ್ರಮವನ್ನು ಪ್ರಶ್ನಿಸಿ, ರಾಜ್ಯ ಸರ್ಕಾರ ಕಾಲೇಜಿಗೆ ನೋಟಿಸ್ ನೀಡಿದೆ. ವಿದ್ಯಾರ್ಥಿಗಳು ರಟ್ಟಿನ ಪೆಟ್ಟಿಗೆಗಳನ್ನು ಏಕೆ ಧರಿಸಬೇಕು ಎಂಬ ಪ್ರಶ್ನೆಗೆ ವಿವರಣೆ ನೀಡುವಂತೆ ತಿಳಿಸಲಾಗಿದೆ. ಇನ್ನೊಮ್ಮೆ ಈ ರೀತಿಯ ಘಟನೆ ಮರುಕಳಿಸಿದರೆ ಕಾಲೇಜಿನ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಎಸ್.ಎಸ್.ಪಿರಜೆ ಹೇಳಿದರು.


