Homeಮುಖಪುಟವೆಬ್‌ಸೀರೀಸ್‌: ಕರ್ನಾಟಕ ಪೊಲೀಸರಿಂದ ಖಾಸಗಿತನದ ಉಲ್ಲಂಘನೆ; ಮೊದಲ ಸಂಚಿಕೆಗೆ ಹೈಕೋರ್ಟ್‌ ತಡೆ

ವೆಬ್‌ಸೀರೀಸ್‌: ಕರ್ನಾಟಕ ಪೊಲೀಸರಿಂದ ಖಾಸಗಿತನದ ಉಲ್ಲಂಘನೆ; ಮೊದಲ ಸಂಚಿಕೆಗೆ ಹೈಕೋರ್ಟ್‌ ತಡೆ

ಈ ರೀತಿಯ ಘಟನೆ ಅಮೆರಿಕ ಅಥವಾ ಯೂರೋಪ್‌‌ನಲ್ಲಿ ಆಗಿದ್ದರೆ ಕೋಟ್ಯಂತರ ರೂಪಾಯಿ ದಂಡವನ್ನು ಆರೋಪಿಗಳಿಗೆ ಪೊಲೀಸ್‌ ಇಲಾಖೆ ಕಟ್ಟಬೇಕಾಗಿತ್ತು ಎಂದು ವೆಬ್‌ಸೀರೀಸ್‌ ನೋಡಿದವರು ಟೀಕಿಸಿದ್ದಾರೆ.

- Advertisement -
- Advertisement -

ನೆಟ್‌ಪ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿರುವ ‘ಕ್ರೈಮ್‌ ಸ್ಟೋರೀಸ್‌: ಇಂಡಿಯಾ ಡೆಟೆಕ್ಟೀವ್ಸ್‌’ ಸಾಕ್ಷ್ಯಚಿತ್ರ ಸರಣಿಯ ಮೊದಲ ಸಂಚಿಕೆಯ ಪ್ರಸಾರವನ್ನು ತಡೆ ಹಿಡಿಯಲು ಕರ್ನಾಟಕ ಹೈಕೋರ್ಟ್‌ ಸೂಚಿಸಿದೆ.

ನೆಟ್‌ಪ್ಲಿಕ್‌ ಇಂಟರ್‌ಟೈನ್‌ಮೆಂಟ್‌ ಸರ್ವೀಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಓಟಿಟಿಯಲ್ಲಿ ಈ ಸಾಕ್ಷ್ಯಚಿತ್ರ ಸರಣಿ ಬಿಡುಗಡೆಯಾಗಿದ್ದು, ಕರ್ನಾಟಕದಲ್ಲಿ ನಡೆದ ಅಪರಾಧ ಪ್ರಕರಣಗಳ ಕುರಿತು ಚಿತ್ರೀಕರಿಸಲಾಗಿದೆ. ಒಟ್ಟು ನಾಲ್ಕು ಸಂಚಿಕೆಗಳನ್ನು ಬಿಡುಗಡೆ ಮಾಡಲಾಗಿದ್ದು, ಒಂದೊಂದು ಸಂಚಿಕೆಯೂ ಒಂದೊಂದು ನೈಜ ಘಟನೆಯನ್ನು ಆಧರಿಸಿವೆ.

ಮೊದಲ ಸಂಚಿಕೆಯು ‘ಎ ಮರ್ಡರ್‌ ಮದರ್‌’ ಎಂದಿದ್ದು, ಅದಕ್ಕೆ ಜಸ್ಟೀಸ್‌ ಬಿ.ಎಂ.ಶ್ಯಾಮ್‌ ಪ್ರಸಾದ್‌ ಅಕ್ಟೋಬರ್‌ 1ರಂದು ಮಧ್ಯಂತರ ತಡೆಯಾಜ್ಞೆಯನ್ನು ಹೊರಡಿಸಿದ್ದಾರೆ.

ಕೆ.ಆರ್‌.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2020ರ ಫೆಬ್ರುವರಿಯಲ್ಲಿ ನಡೆದ 54 ವರ್ಷದ ನಿರ್ಮಲಾ ಚಂದ್ರಶೇಖರ್‌ ಕೊಲೆ ಪ್ರಕರಣದ ಸಹ ಆರೋಪಿ, ಬೆಂಗಳೂರಿನ ನಿವಾಸಿ ಶ್ರೀಧರ್‌ ರಾವ್ ಎಸ್‌ (28) ಅವರು ‘ಎ ಮರ್ಡರ್‌ ಮದರ್‌’ ಸಂಚಿಕೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಅರ್ಜಿದಾರರು (ಸಹ ಆರೋಪಿ ಶ್ರೀಧರ್‌ ರಾವ್‌) ಮತ್ತು ಪ್ರಮುಖ ಆರೋಪಿ ಅಮೃತ ಚಂದ್ರಶೇಖರ್ ವಿರುದ್ಧದ ತನಿಖೆಯ ದೃಶ್ಯಗಳನ್ನು ಈ ಸರಣಿ ಒಳಗೊಂಡಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಆರೋಪಿ ಅಮೃತಾ ತನ್ನ ತಾಯಿಯನ್ನು ಕೊಂದು, ಸಹೋದರನನ್ನೂ ಕೊಲ್ಲಲು ಯತ್ನಿಸಿ ಬಳಿಕ ಸಹಆರೋಪಿ (ಅರ್ಜಿದಾರ) ಜೊತೆ ಅಂಡಮಾನ್‌ ನಿಕೋಬಾರ್‌ಗೆ ಫೆಬ್ರುವರಿ 2ರಂದು ವಿಮಾನ ಹತ್ತಿದ್ದರು ಎಂದು ಸಂಚಿಕೆಯಲ್ಲಿ ನಿರೂಪಿಸಲಾಗಿದೆ.

ಇದನ್ನೂ ಓದಿರಿ: ಕನ್ನಡದ ಮೊದಲ ಲೆಸ್ಬಿಯನ್ ಚಿತ್ರ ’ನಾನು ಲೇಡಿಸ್’ ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆ

“ಅರ್ಜಿದಾರನು ಕಳೆದ ವರ್ಷದ ಫೆಬ್ರುವರಿಯಲ್ಲಿ ಬಂಧನಕ್ಕೆ ಒಳಗಾಗಿದ್ದಾಗ ಆತನ ಎಲ್ಲ ಚಲನವಲನಗಳನ್ನು ರೆಕಾರ್ಡ್‌ ಮಾಡಿಕೊಳ್ಳಲು, ವಿವಿಧ ಅಧಿಕಾರಿಗಳ ಸಂದರ್ಶನ ನಡೆಸಲು ಮಿನ್‌ನೌ ಫಿಲ್ಮ್ಸ್‌‌ನ ಕ್ಲೈರೇ ಗುಡ್‌ಲಾಸ್‌ ಮತ್ತು ಆಕೆಯ ತಂಡಕ್ಕೆ ಪೊಲೀಸರು ಅಧಿಕಾರ ನೀಡಿದ್ದಾರೆ” ಎಂದು ಅರ್ಜಿದಾರರು ಆರೋಪಿಸಿದ್ದಾರೆ.

“ಯಾವುದೇ ಅಧಿಕೃತ ಅನುಮತಿ ಇಲ್ಲದೇ ವಿಡಿಯೋ ಚಿತ್ರೀಕರಣ ಮಾಡಲಾಯಿತು, ಹೇಳಿಕೆಯನ್ನು ಪಡೆಯಲಾಯಿತು. ಮಿನ್‌ನೌ ಫಿಲ್ಮ್ಸ್‌ನವರ ಪತ್ರದ ಮೇಲೆ ಪೊಲೀಸರು ಬಲವಂತವಾಗಿ ಸಹಿ ಪಡೆದಿದ್ದಾರೆ” ಎಂದು ಅರ್ಜಿದಾರರು ಕೋರ್ಟ್‌‌ಗೆ ತಿಳಿಸಿದ್ದಾರೆ.

ವೆಬ್‌ ಸೀರೀಸ್‌ಗೆ ಆಕ್ಷೇಪ: ಕೀಲಾರ ನಾಗೇಗೌಡರ ಆಕ್ಷೇಪ

ಸದರಿ ವೆಬ್‌ ಸೀರೀಸ್‌ ಕುರಿತು, ನೆಟ್‌ಪ್ಲಿಕ್ಸ್‌ನ ಹಲವು ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದಾರೆ. ಇಂತಹ ವೆಬ್‌ ಸೀರೀಸ್‌ಗಳನ್ನು ನೋಡಿ ಹೊಗಳುವಾಗ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಪ್ರಜ್ಞಾವಂತರು ಅಭಿಪ್ರಾಯ ತಾಳಿದ್ದಾರೆ.

ಬರಹಗಾರ ನಾಗೇಗೌಡ ಕೀಲಾರ ಶಿವಲಿಂಗಯ್ಯ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಆಕ್ಷೇಪ ಎತ್ತಿದ್ದಾರೆ. “ಕರ್ನಾಟಕ ಪೊಲೀಸ್‌ನವರದು ಒಂದು detective web series Netflixನಲ್ಲಿ ಬಂದಿದೆ ಅಂತ ಕುತೂಹಲದಿಂದ ಮೊದಲ ಎಪಿಸೋಡ್ ನೋಡಿದೆ. ಇದರಲ್ಲಿ ಯಾವುದೇ detective ಅಂಶಗಳು ಇರಲಿಲ್ಲ. ಇದೊಂದು open and shut case ಆಗಿತ್ತು” ಎಂದಿದ್ದಾರೆ.

ಮುಂದುವರಿದು, “ಬಡವರ ಮನೆ ಮಕ್ಕಳು ಈ ಮರ್ಡರ್‌‌ನಲ್ಲಿ ಆರೋಪಿಗಳು ಆಗಿರುವುದರಿಂದ ಪೊಲೀಸ್‌ನವರು ಆ ಆರೋಪಿಗಳ ಘನತೆಗೆ ಯಾವುದೇ ಬೆಲೆ ಕೊಡದೇ ಅವರನ್ನು ಈ ವೆಬ್‌ ಸೀರೀಸ್‌ನಲ್ಲಿ ತೋರಿಸಲು ಅವಕಾಶ ಕಲ್ಪಿಸಿದ್ದಾರೆ. ಆರೋಪಿಗಳ privacy ಹಕ್ಕುಗಳನ್ನು ಉಲ್ಲಂಘಿಸಿ ಅವರ ಮೆಸೇಜ್, ಬ್ಯಾಂಕ್ ಖಾತೆಯ ವಿವರಗಳು, ವೈಯಕ್ತಿಕ ವಿಚಾರಗಳು ಎಲ್ಲವನ್ನೂ web seriesನಲ್ಲಿ ತೋರಿಸಿದ್ದಾರೆ. ಇದಕ್ಕೆ ನಮ್ಮ ಕರ್ನಾಟಕ ಪೊಲೀಸ್‌‌ನವರು ಅವಕಾಶ ಕೊಟ್ಟಿದ್ದಾರೆ” ಎಂದಿದ್ದಾರೆ.

“ಈ ಮರ್ಡರ್‌‌ನಲ್ಲಿ ಬರುವ ಒಬ್ಬ ಆರೋಪಿ ಇವರ ಪ್ರಕಾರವೇ ನಿರಪರಾಧಿಯಾದರೂ ಇವನ ಮೇಲೆ ಕರ್ನಾಟಕ ಪೋಲಿಸ್‌‌ನವರು ಮರ್ಡರ್ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಈ ರೀತಿಯದ್ದು ಅಮೆರಿಕ ಅಥವಾ ಯೂರೋಪ್‌‌ನಲ್ಲಿ ಆಗಿದ್ದರೆ ಕೋಟ್ಯಂತರ ರೂಪಾಯಿ ದಂಡವನ್ನು ಆರೋಪಿಗಳಿಗೆ ಪೊಲೀಸ್‌ ಇಲಾಖೆ ಕಟ್ಟಬೇಕಾಗಿತ್ತು. ಜೊತೆಗೆ ಈ ಪೊಲೀಸ್‌‌ ಅಧಿಕಾರಿಗಳು ಕೆಲಸ ಕಳೆದುಕೊಳ್ಳುತ್ತಿದ್ದರು. ಇವರಿಗೆ ಅವರ PF, pension ಕೂಡ ಸಿಗುತ್ತಿರಲಿಲ್ಲ. ಆದರೆ ಭಾರತದಲ್ಲಿ ಬಡವರ ಮನೆ ಮಕ್ಕಳು ಅಂದರೆ ಯಾವುದೇ ಗೌರವ ಇಲ್ಲ. ನನ್ನ ಅಭಿಪ್ರಾಯದಲ್ಲಿ ಕರ್ನಾಟಕ ಪೊಲೀಸ್‌ನವರು ಆರೋಪಿಗಳಿಗೆ ಸಾರ್ವಜನಿಕ ಕ್ಷಮೆ ಕೇಳಿ ಒಂದು ದೊಡ್ಡ ಮೊತ್ತದ ದಂಡ ಕಟ್ಟಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.

“ದುರಂತ ಏನು ಅಂದರೆ ಕರ್ನಾಟಕದ ಒಂದಷ್ಟು ಸಿನಿಮಾ ಪ್ರಿಯರು ಇದೊಂದು ಅದ್ಭುತ ವೆಬ್ series ಅಂತ ಒಂದು ಕ್ಲಬ್ ಹೌಸ್ ಚರ್ಚೆ ಕೂಡ ನಡೆಸಿದರು. ಆ ಚರ್ಚೆಯಲ್ಲಿ ತಮ್ಮನ್ನು ತಾವೇ ಸಿನಿಮಾ ವಿಮರ್ಶಕರು ಅಂತ ಕರೆಸಿಕೊಳ್ಳುವವರು ಒಂದು ಘನವಾದ ಚರ್ಚೆ ಕೂಡ ಮಾಡಿದ್ದು ಅಲ್ಲದೇ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಆ ಪೊಲೀಸ್‌ ಅಧಿಕಾರಿಗಳನ್ನು ಆ ಚರ್ಚೆಗೆ ಕರೆಸಿ ಹೊಗಳಿದ್ದೇ ಹೊಗಳಿದ್ದು. ಇಂತಹ ಮೂರ್ಖ ಸಿನಿಮಾ ವಿಮರ್ಶಕರಿಗೆ ವ್ಯಕ್ತಿ ಘನತೆ, ಮಾನವ ಹಕ್ಕುಗಳು, ನಮ್ಮ ನೆಲದ ಕಾನೂನಿನ ಬಗ್ಗೆ ಕಿಂಚಿತ್ತೂ ತಿಳಿವಳಿಕೆ ಇಲ್ಲ” ಎಂದು ವಿಷಾದಿಸಿದ್ದಾರೆ.

ದಯಾ ಗಂಗನಘಟ್ಟ ಅವರು ಪ್ರತಿಕ್ರಿಯಿಸಿ, “ಜಾಳು ಜಾಳು ಡೈಲಾಗ್ಸ್, ಆದರೆ ವಾಸ್ತವವಾಗಿಯೂ ಪೊಲೀಸ್ ವ್ಯವಸ್ಥೆ ಇದಕ್ಕಿಂತ ಹದಗೆಟ್ಟಿರೋದು ವಿಷಾದ” ಎಂದಿದ್ದಾರೆ.

ರಿಯಾಜ್‌ ಎಂಬುವವರು ಪ್ರತಿಕ್ರಿಯಿಸಿ, “ಸಾರ್ವಜನಿಕ ಸೇವಕರಾಗಿ ಇರಬೇಕಾದ ಪೊಲೀಸರನ್ನು ಹುಲಿ ಸಿಂಹ ಅಂತಾ ಮಿತಿಗಿಂತ ಹೆಚ್ಚು ಹೊಗಳಿ ಅಟ್ಟಕೇರಿಸಿ ಅವರ ಕಾನೂನು ಬಾಹಿರ (ಕಸ್ಟಡಿ ಸಾವು, ಎನ್ ಕೌಂಟರ್, ಸುಳ್ಳು ಕೇಸುಗಳು) ಕೃತ್ಯಗಳನ್ನು ಈ ಪರಿ ಸರ್ಮಥಿಸುವ ಮನಸ್ಥಿತಿ ಭಾರತದಲ್ಲಿ ಮಾತ್ರ ಇರಬಹುದೇನೋ, ಅನುಮಾನ” ಎಂದಿದ್ದಾರೆ.

ಇದನ್ನೂ ಓದಿ: ಚಲನಚಿತ್ರ 2020: ಸ್ಟ್ರೀಮ್ ಸಿನಿಮಾ ಕುಗ್ಗಿದ ಪರದೆ, ಹಿಗ್ಗಿದ ಮಾರುಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...