Homeಕರ್ನಾಟಕಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟರ ನಿಧಿ ಬಳಕೆ: ಸದನ ಸಮಿತಿ ಆಕ್ಷೇಪ

ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟರ ನಿಧಿ ಬಳಕೆ: ಸದನ ಸಮಿತಿ ಆಕ್ಷೇಪ

- Advertisement -
- Advertisement -

ಪರಿಶಿಷ್ಟ ಜಾತಿಗಳ ಉಪ ಯೋಜನೆ (ಎಸ್‌ಸಿಎಸ್‌ಪಿ) ಪರಿಶಿಷ್ಟ ಪಂಗಡಗಳ ಯೋಜನೆ (ಟಿಎಸ್‌ಪಿ) ನಿಧಿಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವುದಕ್ಕೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಗುರುವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿದ ಸಮಿತಿಯ ಮೂರನೇ ವರದಿಯಲ್ಲಿ ಆಕ್ಷೇಪ ಇದೆ.

ಐದು ಗ್ಯಾರಂಟಿ ಯೋಜನೆಗಳಿಗೆ 14,730.53 ಕೋಟಿ ರೂಪಾಯಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ನಿಧಿಯನ್ನು ಬಳಸಿಕೊಳ್ಳುತ್ತಿರುವುದಕ್ಕೆ ಕಾಂಗ್ರೆಸ್ ಸರ್ಕಾರ ಈಗಾಗಲೇ ಟೀಕೆಗೆ ಗುರಿಯಾಗಿದೆ.

“ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ನಿಧಿಯನ್ನು ಐದು ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆ ‘ಶಕ್ತಿ’ ಹಾಗೂ ವಿದ್ಯಾರ್ಥಿನಿಯರ ಉಚಿತ ಬಸ್‌ ಪಾಸ್‌ನಂತಹ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದೆ. ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ಗಳನ್ನು ನೀಡಲಾಗುತ್ತಿದೆ. ಈ ಉದ್ದೇಶಕ್ಕೆ ಪರಿಶಿಷ್ಟರಿಗೆ ಮೀಸಲಾದ ಹಣವನ್ನು ಬಳಸುವುದು ಕಾನೂನು ಉಲ್ಲಂಘನೆ ಮತ್ತು ದುರುಪಯೋಗವಾಗಿದೆ. ವಿವಿಧ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಪರಿಶಿಷ್ಟರ ಹಣವನ್ನು ಅವರಿಗೇ ಬಳಸಬೇಕು” ಎಂದು ಮಳವಳ್ಳಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅಧ್ಯಕ್ಷತೆಯ ಸಮಿತಿ ಆಗ್ರಹಿಸಿದೆ.

ವರದಿಯ ಪ್ರಕಾರ ಎಸ್‌ಸಿ/ಎಸ್‌ಟಿಗಳಿಗೆ ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಿಲ್ಲ. ಬಸ್‌ಗಳಲ್ಲಿ ಪ್ರಯಾಣಿಸುವವರು ಹೆಚ್ಚಾಗಿ ಬಡವರು ಮತ್ತು ಎಸ್‌ಸಿ /ಎಸ್‌ಟಿಗಳೇ ಎಂದು ಎಂದು ಸಾರಿಗೆ ಇಲಾಖೆ ಸಮಿತಿಗೆ ತಿಳಿಸಿದೆ. ಇಲಾಖೆಯ ಈ ವಾದವನ್ನು ಸಮಿತಿಯು ವಿರೋಧಿಸಿದೆ.

“ಕಳೆದ 10 ವರ್ಷಗಳಿಂದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣವನ್ನು ಕಾನೂನು ಉಲ್ಲಂಘಿಸಿ ಬಳಸಲಾಗುತ್ತಿದೆ. ಇದು ಶಿಕ್ಷಾರ್ಹವಾಗಿದೆ. ಸಮಾಜ ಕಲ್ಯಾಣ ಇಲಾಖೆಯಡಿ ಹಾಸ್ಟೆಲ್‌ಗಳಲ್ಲಿ ಮೂಲ ಸೌಕರ್ಯ ಮತ್ತು ವಿದ್ಯಾರ್ಥಿವೇತನವನ್ನು ಒದಗಿಸಲು ಹಣವನ್ನು ಬಳಸಬೇಕು “ಎಂದು ಸಮಿತಿಯು ಹಣಕಾಸು ಇಲಾಖೆಗೆ ತನ್ನ ಶಿಫಾರಸಿನಲ್ಲಿ ಹೇಳಿದೆ.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ಹೆಚ್ಚಿನ ಇಲಾಖೆಗಳ ಸಾಮಾನ್ಯ ಯೋಜನೆಗಳಿಗೆ ಬಳಸುತ್ತಿದ್ದಾರೆ ಎಂದು ನರೇಂದ್ರಸ್ವಾಮಿ ಸಮಿತಿ ಹೇಳಿದೆ. ಶಿಕ್ಷಣ ಇಲಾಖೆಯು ಈ ಹಣವನ್ನು ಪಠ್ಯಪುಸ್ತಕಗಳು, ಶೂಗಳನ್ನು ಒದಗಿಸಲು ಬಳಸುತ್ತಿದೆ ಎಂದು ವರದಿ ತಿಳಿಸಿದೆ.

ಕರ್ನಾಟಕ ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ (ಹಣಕಾಸಿನ ಸಂಪನ್ಮೂಲಗಳ ಯೋಜನೆ, ಹಂಚಿಕೆ ಮತ್ತು ಬಳಕೆ) ಕಾಯ್ದೆಯಿಂದ ಸೆಕ್ಷನ್ 7(ಸಿ) ಅನ್ನು ರದ್ದುಗೊಳಿಸುವಂತೆ ಸಮಿತಿಯು ಸರ್ಕಾರವನ್ನು ಆಗ್ರಹಿಸಿದೆ. ಈ ಸೆಕ್ಷನ್ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ಸಾಮಾನ್ಯ ಸಾಮಾಜಿಕ ವಲಯದ ಯೋಜನೆಗಳಿಗೆ ಇತರರೊಂದಿಗೆ ಎಸ್‌ಸಿ/ಎಸ್‌ಟಿಗಳಿಗೆ ಬಳಸಲು ಅವಕಾಶ ನೀಡುತ್ತದೆ. ಈ ನಿಬಂಧನೆಯನ್ನು ದುರುಪಯೋಗ ಮಾಡಲಾಗುತ್ತಿದೆ. ಇದು ಎಸ್‌ಸಿ, ಎಸ್‌ಟಿಗಳ ಆರ್ಥಿಕ ಉನ್ನತಿಗೆ ಅವಕಾಶ ನೀಡುವುದಿಲ್ಲ ಎಂದು ವರದಿ ಹೇಳಿದೆ.

ಸಮಾಜ ಕಲ್ಯಾಣ ಇಲಾಖೆಯ ಅಧೀನದ ಆರು ನಿಗಮಗಳಿಗೆ ನೀಡಿದ್ದ ಅನುದಾನದಲ್ಲಿ 2023-24ನೇ ಸಾಲಿನ ಅಂತ್ಯಕ್ಕೆ ಖರ್ಚಾಗದೆ ಉಳಿದ ಹಣ 985 ಕೋಟಿ ರೂಪಾಯಿ. ಈ ಎಲ್ಲಾ ಹಣ ಆಯಾ ನಿಗಮಗಳ ವೈಯಕ್ತಿಕ ಖಾತೆಗಳಲ್ಲಿ (ಪಿಡಿ) ಇವೆ. ಸಮಾಜ ಕಲ್ಯಾಣ ಇಲಾಖೆಗೆ ಒದಗಿಸಲಾದ ಅನುದಾನವನ್ನು ನಿಗಮಗಳ ಪಿಡಿ ಇಟ್ಟಿರುವುದಕ್ಕೆ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ.

ಇದನ್ನೂ ಓದಿ : ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ಕೋರಿ ನಿರ್ಣಯ ಅಂಗೀಕರಿಸಿದ ರಾಜ್ಯ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...