Homeಮುಖಪುಟಮೋದಿ-ಶಾಗೆ ಕೇಜ್ರಿವಾಲ್ ಈ ಬಾರಿ ಎಂದಿಗಿಂತಲೂ ಹೆಚ್ಚು ಅಪಾಯಕಾರಿ...

ಮೋದಿ-ಶಾಗೆ ಕೇಜ್ರಿವಾಲ್ ಈ ಬಾರಿ ಎಂದಿಗಿಂತಲೂ ಹೆಚ್ಚು ಅಪಾಯಕಾರಿ…

- Advertisement -
- Advertisement -

– ಅಶುತೋಷ್

ಅನುವಾದ: ನಿಖಿಲ್ ಕೋಲ್ಪೆ

ಕೃಪೆ: NDTV

ಅರವಿಂದ ಕೇಜ್ರಿವಾಲ್ ಅವರು ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ಕಬ್ಬಿಣದ ಕಡಲೆಯಾಗಿದ್ದಾರೆ. ಹಿಂದೂತ್ವ ಅಜೆಂಡಾದ ಹಿಂಸಾತ್ಮಕ ಪ್ರತಿಪಾದನೆಯ ಬಳಿಕವೂ ಮೋದಿ ಮ್ಯಾಜಿಕ್ ಕಳೆಗುಂದುತ್ತಿದೆ ಎಂಬುದನ್ನು ದಿಲ್ಲಿಗಾಗಿ ನಡೆಯುತ್ತಿರುವ ಕದನ ಇನ್ನಷ್ಟು ಸ್ಪಷ್ಟವಾಗಿ ತೋರಿಸಿಕೊಡಲಿದೆ.

ಕೇಜ್ರಿವಾಲ್ ಐದು ವರ್ಷಗಳ ಹಿಂದೆ ಇದ್ದಂತಹ ವರ್ಚಸ್ಸನ್ನು ಈಗಲೂ ಉಳಿಸಿಕೊಂಡಿದ್ದಾರೆಂದು ಹೇಳುವಂತಿಲ್ಲ. ಆಗ ಅವರು ರಾಜಕೀಯವಾಗಿ ಎಳಸಾಗಿದ್ದರು. ಆದರೆ, ಎಳಸಾಗಿದ್ದರು, ದಪ್ಪ ಚರ್ಮದ ರಾಜಕಾರಣಿ ಆಗಿಲ್ಲದಿದ್ದರಿಂದಲೇ ಜನರು ಅವರನ್ನು ನಂಬಿದ್ದರು. ಅವರು ರಾಜಕೀಯವನ್ನು ಪ್ರವೇಶಿಸಿಯೂ, ರಾಜಕೀಯ ಮಾಡದೆ, ರಾಜಕೀಯವನ್ನು ಬದಲಿಸಲು ಬಯಸುವ ವ್ಯಕ್ತಿಯಾಗಿ ಜನರು ಅವರನ್ನು ಕಂಡಿದ್ದರು. ಕಳೆದ ಐದು ವರ್ಷಗಳಲ್ಲಿ ಅವರು ಆದರ್ಶವಾದಿಯಿಂದ, ಅರಾಜಕತಾವಾದಿಯಾಗಿ, ಇದೀಗ ವಾಸ್ತವವಾದಿ ರಾಜಕಾರಣಿಯಾಗಿ ರೂಪಾಂತರಗೊಂಡಿದ್ದಾರೆ.

ಯಾರಾದರೂ ಕೇಜ್ರಿವಾಲ್ ಅವರು ತನ್ನ ವರ್ಚಸ್ಸನ್ನು, ಮತದಾರರ ಆಕರ್ಷಣೆಯನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ ಎಂದು ಭಾವಿಸಿದರೆ ಅವರು ಮೂರ್ಖರ ಲೋಕದಲ್ಲಿದ್ದಾರೆ ಎಂದರ್ಥ. ಅವರು ಅಖಿಲ ಭಾರತ ಮಟ್ಟದಲ್ಲಿ ಮತದಾರರನ್ನು ಓಲೈಸಲು ಸಾಧ್ಯವಾಗದೇ ಇರಬಹುದು ಆದರೆ, ದಿಲ್ಲಿಯ ಮಟ್ಟಿಗೆ ಅವರೇ ನಂಬರ್ ವನ್. ಅವರ ನಾಯಕತ್ವದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸ್ಪರ್ಧಿಸಿದ ಯಾವುದೇ ರೀತಿಯ ಚುನಾವಣೆಯಲ್ಲಿ ಆಪ್ ಮಹಾನ್ ಸಾಧನೆ ಮಾಡಿಲ್ಲ ಎಂಬುದು ಅಲ್ಲಗೆಳೆಯಲಾಗದ ಸತ್ಯ.

ಅವರ ಪಕ್ಷಕ್ಕೆ ಹರ್ಯಾಣ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್‌ಘಡ್ ಮತ್ತು ರಾಜಸ್ಥಾನದ ಚುನಾವಣೆಯಲ್ಲಿ ಒಂದು ಶೇಕಡಾ ಮತವನ್ನೂ ಗಳಿಸಲು ಸಾಧ್ಯವಾಗಿಲ್ಲ. ಅವರ ಪಕ್ಷವು ದಿಲ್ಲಿಯಲ್ಲಿ ಸಂಸದೀಯ ಚುನಾವಣೆಯ ವೇಳೆಯೂ ದಯನೀಯವಾಗಿ ಸೋತಿತ್ತು ಮತ್ತು ಗಳಿಸಿದ ಮತಗಳ ಲೆಕ್ಕದಲ್ಲೂ ಅದು ಮೂರನೇ ಸ್ಥಾನದಲ್ಲಿತ್ತು. ಕಾಂಗ್ರೆಸ್ ಕೂಡಾ ಅದಕ್ಕಿಂತ ಹೆಚ್ಚು ಮತಗಳನ್ನು ಗಳಿಸಿತ್ತು. ಆಪ್ 2017ರಲ್ಲಿ ನಡೆದ ದಿಲ್ಲಿ ಮುನಿಸಿಪಲ್ ಚುನಾವಣೆಗಳಲ್ಲೂ ಕೆಟ್ಟದಾಗಿ ಸೋತಿತ್ತು. ಆದರೆ, ದಿಲ್ಲಿ ವಿಧಾನಸಭಾ ಚುನಾವಣೆಯ ವಿಷಯ ಬೇರೆಯೇ ತರದ ಆಟ.

ಆಪ್ ಭವಿಷ್ಯ ನಿರ್ಧರಿಸಲಿರುವ ಮೂರು ವಿಷಯಗಳು:

ಮೊದಲನೆಯದು, ದಿಲ್ಲಿಯಲ್ಲಿ ಮೋದಿಯಂತೆಯೇ ಕೇಜ್ರಿವಾಲ್‌ರಿಗೂ ಯಾರೂ ಎದುರಾಳಿಗಳಿಲ್ಲ. 2019ರ ಸಂಸದೀಯ ಚುನಾವಣೆಗಳ ವೇಳೆ ಮೋದಿ ಉಳಿದವರಿಗಿಂತ ಸ್ವಲ್ಪ ಎತ್ತರವಾಗಿಯೇ ಕಾಣುತ್ತಿದ್ದರು. ದಿಲ್ಲಿಯಲ್ಲಿ ಬಿಜೆಪಿ ನಾಯಕತ್ವರಹಿತವಾಗಿದೆ. ಮನೋಜ್ ತಿವಾರಿ, ವಿಜಯ್ ಗೋಯಲ್, ಹರ್ಷವರ್ಧನ್ ಮತ್ತಿತರರು ಕೇಜ್ರಿವಾಲ್‌ರಿಗೆ ಸರಿಸಾಟಿಯೇ ಅಲ್ಲ. ಅವರಿಗೆ ವರ್ಚಸ್ಸು ಅಥವಾ ಸಾಮಾಜಿಕ ನೆಲೆಯೇ ಇಲ್ಲ. ದಿಲ್ಲಿಯಲ್ಲಿ ಮೇಲು ಮತ್ತು ಮಧ್ಯಮ ವರ್ಗದವರು ಕೇಜ್ರಿವಾಲ್ ಬಗ್ಗೆ ಭ್ರಮನಿರಸನಗೊಂಡಿರಬಹುದು. ಆದರೆ, ಅವರು ಕೆಳಮಧ್ಯಮ ಮತ್ತು ಬಡಜನರು ಮತ್ತು ಆ ನಡುವೆ ಬದುಕುವ ಜನರ ಕಣ್ಮಣಿಯಾಗಿಯೇ ಉಳಿದಿದ್ದಾರೆ. ಬಿಜೆಪಿ ನಾಯಕರಿಗೆ ವ್ಯತಿರಿಕ್ತವಾಗಿ ಅವರು ಯಾವತ್ತೂ ಕಾಲಿಗೆ ಚಕ್ರ ಕಟ್ಟಿಕೊಂಡಿರುವ ವ್ಯಕ್ತಿ. 2017ರ ಎಪ್ರಿಲ್‌ನಲ್ಲಿ ನಡೆದ ದಿಲ್ಲಿ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಸೋತ ಬಳಿಕ ಅವರು ದಿಲ್ಲಿಯ ಮೂಲೆ ಮೂಲೆಯನ್ನೂ ತಿರುಗಿ ಪ್ರತಿದಿನವೆಂಬತೆ ಚಿಕ್ಕ ದೊಡ್ಡ ಸಭೆಗಳಲ್ಲಿ ಮಾತನಾಡುತ್ತಲೇ ಇದ್ದಾರೆ. ಅವರೀಗ ತನ್ನ ಮಾಂತ್ರಿಕ ಸ್ಪರ್ಶವನ್ನು ಮರಳಿ ಪಡೆದಂತಿದೆ.

ಎರಡನೆಯದಾಗಿ, ದಿಲ್ಲಿಯಲ್ಲಿ ಕಾಂಗ್ರೆಸ್ ಮರಣಶಯ್ಯೆಯಲ್ಲಿದೆ. ಸಂಸದೀಯ ಚುನಾವಣೆಯ ವೇಳೆ ಅದು ಕಳೆದುಕೊಂಡದ್ದನ್ನು ಮರಳಿಪಡೆಯುತ್ತಿರುವಂತೆ ಕಂಡುಬಂದಿತ್ತು. ಸಂಸದೀಯ ಚುನಾವಣೆಯ ವೇಳೆ ಅದು 22 ಶೇಕಡಾ ಮತಗಳನ್ನು ಗಳಿಸಿ, ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ಬಿಜೆಪಿಯ ಬೆನ್ನಲ್ಲಿ ಎರಡನೇ ಸ್ಥಾನ ಗಳಿಸಿತ್ತು. ಅಲ್ಪಸಂಖ್ಯಾತರ ವಿಚಾರಗಳ ಕುರಿತು ಆಪ್ ಪಕ್ಷದ ಅಸ್ಪಷ್ಟ ನಿಲುವಿನಿಂದಾಗಿ ಮುಸ್ಲಿಮರು ಆಪ್ ಕೈಬಿಟ್ಟು ಕಾಂಗ್ರೆಸ್ ಕೈ ಹಿಡಿದಂತೆ ಕಂಡುಬರುತ್ತಿತ್ತು. ಆದರೆ, ಸಂಸದೀಯ ಚುನಾವಣೆಯ ಬಳಿಕ ಕಾಂಗ್ರೆಸ್ ತನ್ನ ಮಾಮೂಲಿ ಗುಂಪು ಒಳಜಗಳಕ್ಕೆ ಮರಳಿತ್ತು. ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸಾವು ಮತ್ತು ಪಕ್ಷಾಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ಕಾಂಗ್ರೆಸ್ ಪಕ್ಷವನ್ನು ಕೆಟ್ಟದಾಗಿ ಬಾಧಿಸಿದೆ. ನಾಯಕರಿಲ್ಲದೇ ಪಕ್ಷವು ತಿಂಗಳುಗಳ ಕಾಲ ನಾವಿಕನಿಲ್ಲದ ನಾವೆಯಂತೆ ತಿರುಗುತ್ತಿತ್ತು. ಆಪ್ ಮತ್ತು ಕಾಂಗ್ರೆಸ್ ದಿಲ್ಲಿಯಲ್ಲಿ ಹೊಂದಿರುವುದು ಒಂದೇ ಸಾಮಾಜಿಕ ನೆಲೆಗಟ್ಟನ್ನು. ಕಾಂಗ್ರೆಸ್ ಎದ್ದರೆ ಆಪ್ ಮುಳುಗುತ್ತದೆ. ಕಂಗೆಟ್ಟ ಕಾಂಗ್ರೆಸ್ ಆಪ್ ಪಕ್ಷಕ್ಕೆ ಮತ್ತು ಕೇಜ್ರಿವಾಲ್‌ಗೆ ವರ. ಈಗ ಬಿಜೆಪಿ ವಿರುದ್ಧ ಮತಗಳು ವಿಭಜನೆಯಾಗುವ ಯಾವುದೇ ಸಾಧ್ಯತೆಯಿಲ್ಲ.

ಮೂರನೆಯದಾಗಿ ಎಲ್ಲಾ ದೌರ್ಬಲ್ಯಗಳ ಹೊರತಾಗಿ ಆಪ್ ಸರಕಾರ ತನ್ನ ಭರವಸೆಗಳಿಗಾಗಿ ಕೆಲಸ ಮಾಡುತ್ತಾ, ಅವುಗಳನ್ನು ಈಡೇರಿಸುತ್ತಿರುವಂತೆ ಕಾಣುತ್ತಿದೆ. ಈ ಚುನಾವಣೆಗೆ ಮುಂಚಿತವಾಗಿ ಆಪ್ ಸರಕಾರವು ಜನರಿಗೆ ಉಚಿತವಾದ ಕೊಡುಗೆಗಳನ್ನು ನೀಡುತ್ತಿದೆ. ಇವುಗಳಲ್ಲಿ ಆಪ್ ಸರಕಾರದ ಪರವಾಗಿ ವಾಲುತ್ತಿರುವುದು ಬಡವರಿಗೆ ಉಚಿತ ವಿದ್ಯುತ್ ಮತ್ತು ಅರ್ಧ ದರದಲ್ಲಿ ನೀರು ನೀಡಿದೆ. ಇದು ದಿಲ್ಲಿಯ 80 ಶೇಕಡಾ ಜನರಿಗೆ ಅನುಕೂಲವಾಗುತ್ತಿದೆ. ಈ ಸತ್ಯದ ಬಗ್ಗೆ ಜನರು ಕುರುಡಾಗಿಲ್ಲ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಈತ ಮಾಡಿದ ಸಾಧನೆ ವಿರೋಧಿಗಳ ಬಾಯಿಯನ್ನೂ ಮುಚ್ಚಿಸಿದೆ. ಸರಕಾರಿ ಶಾಲೆಗಳು ಹೇಗೆ ಪರಿವರ್ತನೆ ಹೊಂದಿವೆ ಎಂಬದೇ ಮತದಾರರ ಯೋಚನೆಯ ದಿಕ್ಕು ಬದಲಿಸಿದೆ!

ಇಲ್ಲಿ ನಾಲ್ಕನೇ ಅಂಶವೊಂದಿದೆ. ಅದೆಂದರೆ, ಕೇಜ್ರಿವಾಲ್ ಮೌನ. 2015ರ ಭಾರೀ ಗೆಲುವಿನ ನಂತರ ಈ ಕೇಜ್ರಿವಾಲ್ ಆಕ್ರಮಣಕಾರಿಯಾಗಿ ಮೋದಿಯನ್ನು ಎದುರಿಸಿದ್ದರು. ಅದನ್ನು ಮೋದಿ ನೆಗೆಟಿವಾಗಿ ಬಳಸಿದ್ದರು. ಆದರೆ, ಈ ಬಾರಿ ಅವರ ಮೌನ ಮೋದಿಗೆ ಯಾವುದೇ ಅಸ್ತ್ರ ಒದಗಿಸುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಕೇಜ್ರಿವಾಲ್ ಈ ಚುನಾವಣೆಯಲ್ಲಿ ಬಿಜೆಪಿಗೆ ಕಬ್ಬಿಣದ ಕಡಲೆಯಾಗಿದ್ದಾರೆ ಮತ್ತು ಹಿಂದೆಂದಿಗಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...