ಬೆಂಗಳೂರಿನ ಸಾರ್ವಜನಿಕ ವ್ಯವಹಾರಗಳ ಕೇಂದ್ರವು ಇಂದು ಬಿಡುಗಡೆ ಮಾಡಿದ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ -2020 ರ ಪ್ರಕಾರ ಕೇರಳ ದೇಶದ ಅತ್ಯುತ್ತಮ ಆಡಳಿತ ರಾಜ್ಯವೆಂದು ಆಯ್ಕೆಯಾಗಿದೆ. ದೊಡ್ಡ ರಾಜ್ಯಗಳ ವಿಭಾಗದಲ್ಲಿ ಉತ್ತರ ಪ್ರದೇಶವು ಕಳಪೆ ಸಾಧನೆ ಮಾಡಿದ್ದು ಕೊನೆಯ ಸ್ಥಾನ ಪಡೆದಿದೆ.
ಇಂದು ಬಿಡುಗಡೆಯಾದ ತನ್ನ ವಾರ್ಷಿಕ ವರದಿಯಲ್ಲಿ, ಮಾಜಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ ಕಸ್ತುರಿರಂಗನ್ ನೇತೃತ್ವದ ಬೆಂಗಳೂರು ಮೂಲದ ಎನ್‌ಜಿಓ, ‘ಸುಸ್ಥಿರ ಅಭಿವೃದ್ಧಿಯ ಸಂದರ್ಭದಲ್ಲಿ ಸಂಯೋಜಿತ ಸೂಚ್ಯಂಕದ ಆಧಾರದ ಮೇಲೆ ರಾಜ್ಯಗಳ ಆಡಳಿತ ಸಾಧನೆಯನ್ನು ಗುರುತಿಸಲಾಗಿದೆ’ ಎಂದು ಹೇಳಿದೆ.
Kerala tops the Public Affairs Index-2020 of Public Affairs Centre (@pacindia). The State has been ranked as the best-governed state based on a composite index with a focus on sustainable development goals. The people of the State deserve the credit for this achievement.
— CMO Kerala (@CMOKerala) October 30, 2020
ದಕ್ಷಿಣದ ನಾಲ್ಕು ರಾಜ್ಯಗಳಾದ ಕೇರಳ (1.388 ಪಿಎಐ ಇಂಡೆಕ್ಸ್ ಪಾಯಿಂಟ್), ತಮಿಳುನಾಡು (0.912), ಆಂಧ್ರಪ್ರದೇಶ (0.531) ಮತ್ತು ಕರ್ನಾಟಕ (0.468) ಆಡಳಿತದ ದೃಷ್ಟಿಯಿಂದ ದೊಡ್ಡ ರಾಜ್ಯಗಳ ವಿಭಾಗದಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿವೆ ಎಂದು ಅದು ಹೇಳಿದೆ.
ದೊಡ್ಡ ರಾಜ್ಯಗಳ ವಿಭಾಗದಲ್ಲಿ ನಕಾರಾತ್ಮಕ ಅಂಕಗಳನ್ನು ಗಳಿಸಿದ ಉತ್ತರ ಪ್ರದೇಶ -1.461, ಒಡಿಶಾ -1.201 ಮತ್ತು ಬಿಹಾರ -1.158 ಕಳಪೆ ಸಾಧನೆಗೈದಿವೆ ಎನ್ನಲಾಗಿದೆ.
And the winners are-#Kerala-Best Governed State in the Large States Category #Goa Best Governed State in the Small States Category #Chandigarh Best Governed Union Territory -Congratulations @GGurucharan @PMOIndia @CMofKarnataka @onthinktanks @WorldBank @UNDP_India @NITIAayog pic.twitter.com/IuS84VyEQ8
— PublicAffairsCentre (@pacindia) October 30, 2020
ಸಣ್ಣ ರಾಜ್ಯಗಳ ವಿಭಾಗದಲ್ಲಿ ಗೋವಾ 1.745 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಮೇಘಾಲಯ (0.797) ಮತ್ತು ಹಿಮಾಚಲ ಪ್ರದೇಶ (0.725) ನಂತರದ ಸ್ಥಾನದಲ್ಲಿವೆ. ಪಿಎಸಿ ವರದಿಯ ಪ್ರಕಾರ ಮಣಿಪುರ (-0.363), ದೆಹಲಿ (-0.289) ಮತ್ತು ಉತ್ತರಾಖಂಡ್ (-0.277) ಋಣಾತ್ಮಕ ಅಂಕಗಳನ್ನು ಗಳಿಸಿದ ಸಣ್ಣ ರಾಜ್ಯಗಳಾಗಿವೆ.
ಪಿಎಸಿ ಪ್ರಕಾರ, ಈಕ್ವಿಟಿ, ಬೆಳವಣಿಗೆ ಮತ್ತು ಸುಸ್ಥಿರತೆಯ ಮೂರು ಸ್ತಂಭಗಳಿಂದ ವ್ಯಾಖ್ಯಾನಿಸಲಾದ ಸುಸ್ಥಿರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಆಡಳಿತದ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಕಸ್ತುರಿರಂಗನ್, “ಪಿಎಐ 2020 ತೋರಿಸುವ ಪುರಾವೆಗಳು ಮತ್ತು ಅದು ಒದಗಿಸುವ ಒಳನೋಟಗಳು ಭಾರತದಲ್ಲಿ ನಡೆಯುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಸ್ಥಿತ್ಯಂತರವನ್ನು ಅರ್ಥಮಾಡಿಕೊಳ್ಳಲು ನಮ್ಮನ್ನು ಒತ್ತಾಯಿಸಬೇಕು” ಎಂದಿದ್ದಾರೆ.
(ಈ ಸುದ್ದಿಯು ಮೊದಲು ಎನ್‌ಡಿಟಿವಿಯಲ್ಲಿ ಪ್ರಕಟಗೊಂಡಿದೆ)
ಇದನ್ನೂ ಓದಿ: ಪ್ರತಿ ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಕ್ಲಾಸ್‌ರೂಂ ಇರುವ ಏಕೈಕ ರಾಜ್ಯ ಕೇರಳ!


