Homeಮುಖಪುಟಕೇರಳ ಚುನಾವಣೆ: ಸದ್ಯದ ಸ್ಥಿತಿ ಮತ್ತು ಮೈತ್ರಿಕೂಟಗಳಲ್ಲಿ ಸೀಟು ಹಂಚಿಕೆ ಹಗ್ಗಜಗ್ಗಾಟ

ಕೇರಳ ಚುನಾವಣೆ: ಸದ್ಯದ ಸ್ಥಿತಿ ಮತ್ತು ಮೈತ್ರಿಕೂಟಗಳಲ್ಲಿ ಸೀಟು ಹಂಚಿಕೆ ಹಗ್ಗಜಗ್ಗಾಟ

- Advertisement -
- Advertisement -

ಎಲ್‌ಡಿಎಫ್ (ಎಡಪಕ್ಷಗಳ ನೇತೃತ್ವದ ರಂಗ) ಮತ್ತು ಯುಡಿಎಫ್ (ಕಾಂಗ್ರೆಸ್ ನೇತೃತ್ವದ ರಂಗ) ಏಪ್ರಿಲ್ 6 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ವಾರದ ಅಂತ್ಯದ ವೇಳೆಗೆ ಆಯಾ ಪಾಲುದಾರರಲ್ಲಿ ಸೀಟು ಹಂಚಿಕೆ ವ್ಯವಸ್ಥೆಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.

ನಂತರ ಎರಡು ರಂಗಗಳು ಕೇರಳದ 140 ಕ್ಷೇತ್ರಗಳಿಗೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೆಚ್ಚು ವಿವಾದಾತ್ಮಕ ಪ್ರಕ್ರಿಯೆಗೆ ಕೈ ಹಾಕಲಿವೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಚ್ಚಿನ ಮಹಿಳೆಯರು ಮತ್ತು ಯುವಕರನ್ನು ಸೇರಿಸಲು ಎರಡೂ ರಂಗಗಳ ನಾಯಕತ್ವದ ಮೇಲೆ ಕಾರ್ಯಕರ್ತರ ಒತ್ತಡವಿದೆ.

ಎಲ್‌ಡಿಎಫ್‌ ಪರಿಸ್ಥಿತಿ

ಎಲ್‌ಡಿಎಫ್‌ಗೆ ಸೀಟು ವಿತರಣೆಯಲ್ಲಿನ ದೊಡ್ಡ ಸವಾಲು ಕೇರಳ ಕಾಂಗ್ರೆಸ್ (ಎಂ) ಪಕ್ಷ. ಜೋಸ್ ಕೆ ಮಣಿ ನೇತೃತ್ವದ ಪ್ರಾದೇಶಿಕ ಪಕ್ಷವು ಕೇಂದ್ರ ಕೇರಳದ ಕ್ಯಾಥೊಲಿಕ್ ಕ್ರಿಶ್ಚಿಯನ್ ಮತದಾರರಲ್ಲಿ ಪ್ರಭಾವ ಹೊಂದುತ್ತಿದೆ. ಕಾಂಗ್ರೆಸ್ಸಿನ ದೀರ್ಘಕಾಲದ ಮಿತ್ರಪಕ್ಷವಾಗಿದ್ದ ಕೆಸಿ (ಎಂ) ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಿಪಿಎಂ ನೇತೃತ್ವದ ಎಡರಂಗದೊಡನೆ ಸೇರಿದೆ.

ಕೆಸಿ (ಎಂ) 15 ಸ್ಥಾನಗಳಿಗೆ ಒತ್ತಡ ಹೇರಿದರೆ, ಒಕ್ಕೂಟದ ಪ್ರಧಾನ ಪಕ್ಷವಾದ ಸಿಪಿಎಂ ಅದನ್ನು 10 ಸ್ಥಾನಗಳಿಗಿಂತ ಕಡಿಮೆ ಮಾಡಲು ಬಯಸಿದೆ. ಸಿಪಿಎಂ, ಸಿಪಿಐ ಪಕ್ಷಗಳು ಕೆಸಿ (ಎಂ) ಗೆ ಸ್ಥಳಾವಕಾಶ ಕಲ್ಪಿಸಲು ತಮ್ಮದೇ ಆದ ಕೆಲವು ಕ್ಷೇತ್ರಗಳನ್ನು ಕೈ ಬಿಡಬೇಕಾಗುತ್ತದೆ. ಕಳೆದ ಚುನಾವಣೆಯಲ್ಲಿ ಸಿಪಿಐ ಸ್ಪರ್ಧಿಸಿದ್ದ ಕಾಂಜಿರಪ್ಪಲ್ಲಿ, ಇರಿಕೂರ್ ಮತ್ತು ಕಳೆದ ಬಾರಿ ಸಿಪಿಎಂ ವಲಯದಲ್ಲಿದ್ದ ಇರಿಂಜಲಕುಡ, ತಾಲಿಪರಂಬ, ಅಲತೂರ್ ಮತ್ತು ಎಟ್ಟುಮನೂರ್ ಮುಂತಾದ ಸ್ಥಾನಗಳು ಕೆಸಿ (ಎಂ) ಗೆ ಹೋಗುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ, ಸಿಪಿಎಂ ಮತ್ತು ಸಿಪಿಐ 2016 ಕ್ಕೆ ಹೋಲಿಸಿದರೆ ಕಡಿಮೆ ಸ್ಥಾನಗಳ ಮೇಲೆ ಹೋರಾಡುವ ಸಾಧ್ಯತೆಯಿದೆ.

ಹೊಸದಾಗಿ ಒಡಮೂಡಿರುವ ಮಿತ್ರಪಕ್ಷಗಳಾದ ಲೋಕ್ ತಾಂತ್ರಿಕ್ ಜನತಾದಳ (ಎಲ್‌ಜೆಡಿ), ಜನತಾದಳ (ಎಸ್) ಮತ್ತು ಎನ್‌ಸಿಪಿಯಂತಹ ಸಣ್ಣ ಪಕ್ಷಗಳಿಗೆ ಅವಕಾಶ ಕಲ್ಪಿಸುವ ಪ್ರಶ್ನೆಯೂ ಇದೆ. ಅವರು ಸಾಮೂಹಿಕ ನೆಲೆ ಹೊಂದಿರುವ ಪಕ್ಷಗಳಲ್ಲ. ಆದರೆ ಆಯ್ದ ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯವಿರುವ ವೈಯಕ್ತಿಕ ನಾಯಕರನ್ನು ಹೊಂದಿದ್ದಾರೆ.

ಸಿಪಿಎಂ ಪಕ್ಷವು ಎಲ್‌ಜೆಡಿ ಮತ್ತು ಜೆಡಿ (ಎಸ್) ಗಳನ್ನು ವಿಲೀನಗೊಳಿಸುವಂತೆ ನಿರ್ದೇಶಿಸಿತ್ತು. ಏಕೆಂದರೆ ಅವೆರಡೂ ಸಮಾಜವಾದಿ ಪಕ್ಷಗಳಾಗಿದ್ದು ಜನತಾದಳದಿಂದ ಹೊರಬಂದಿವೆ. ಆದರೆ ಎರಡು ಪಕ್ಷಗಳ ನಾಯಕತ್ವವು ಒಮ್ಮತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಈ ಪಕ್ಷಗಳಿಗೆ ಸ್ಥಾನಗಳನ್ನು ಹಂಚಿಕೆ ಮಾಡುವುದು ಮತ್ತೊಮ್ಮೆ ಸಿಪಿಐ (ಎಂ) ವೆಚ್ಚದಲ್ಲಿ ನಡೆಯಲಿದೆ. ತಿರುವಲ್ಲಾ, ಅಂಬಲಪುಳ, ವಟಕರ ಮತ್ತು ಕೂತುಪರಂಬು ಮುಂತಾದ ಕ್ಷೇತ್ರಗಳಲ್ಲಿ ಇದಕ್ಕಾಗಿ ಚೌಕಾಶಿ ನಡೆಯಲಿದೆ.

ಯುಡಿಎಫ್‌ ಪರಿಸ್ಥಿತಿ

ಯುಡಿಎಫ್‌ಗೆ ಸಂಬಂಧಿಸಿದಂತೆ, ಸೀಟು ಹಂಚಿಕೆ ಕುರಿತು ಮಾತುಕತೆ ಮುಖ್ಯವಾಗಿ 15 ಸ್ಥಾನಗಳನ್ನು ಬಯಸುವ ಕೇರಳ ಕಾಂಗ್ರೆಸ್ (ಜೋಸೆಫ್) ಪಕ್ಷದೊಂದಿಗೆ ಅಡೆತಡೆಗಳನ್ನು ಎದುರಿಸಲಿದೆ. ಕಾಂಗ್ರೆಸ್ ನಾಯಕತ್ವವು ಆ ಪಕ್ಷದ ಮಿತಿಗಳನ್ನು ಅರ್ಥಮಾಡಿಕೊಂಡಂತೆ 8 ಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡದಿರಲು ಉತ್ಸುಕವಾಗಿದೆ ಎಂದು ತಿಳಿದುಬಂದಿದೆ.

ಕೆಲವು ಕೆಸಿ (ಜೆ) ಸ್ಥಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಆ ಸ್ಥಾನಗಳನ್ನು ಗೆಲ್ಲಲು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಾಯಕತ್ವದೊಳಗೆ ಆಲೋಚನೆ ಇವೆ.. ಅದೇ ಸಮಯದಲ್ಲಿ, ಕೆಸಿ (ಜೆ) ಮೈತ್ರಿ ಮುರಿದುಕೊಂಡು ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಕಷ್ಟ ಎಂಬ ಅರಿವೂ ಯುಡಿಎಫ್‌ಗೆ ಇದೆ. ಇರಿಂಜಲಕುಡ, ಮುವಾಟ್ಟುಪುಳ ಮತ್ತು ಕೊಠಮಂಗಲಂ ಮುಂತಾದ ಸ್ಥಾನಗಳ ಬಗ್ಗೆ ವಿವಾದಗಳು ಉದ್ಭವಿಸುವ ನಿರೀಕ್ಷೆಯಿದೆ.

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ಅಂತಿಮಗೊಂಡಿದೆ, ಇದು ಹೆಚ್ಚಾಗಿ 27 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ, ಇದು 2016 ರಲ್ಲಿ ಹೋರಾಡಿದ್ದಕ್ಕಿಂತ ಮೂರು ಹೆಚ್ಚು ಸ್ಥಾನಗಳನ್ನು ಪಡೆಯಲಿದೆ.

ಸ್ಥಾನ ಹಂಚಿಕೆ ಖಚಿತವಾದ ನಂತರ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮುಂದಿನ ವಾರ ಸಭೆಗಳನ್ನು ನಡೆಸಿ ಅಭ್ಯರ್ಥಿಗಳ ಅಂತಿಮ ಆಯ್ಕೆ ಮಾಡಲಿದೆ. 14 ಜಿಲ್ಲೆಗಳಲ್ಲಿ ತಲಾ ಒಬ್ಬರು ಮಹಿಳಾ ಅಭ್ಯರ್ಥಿಯನ್ನು ನಿಲ್ಲಿಸುವಂತೆ ಎಐಸಿಸಿ ರಾಜ್ಯ ನಾಯಕತ್ವವನ್ನು ಕೇಳಿದೆ. ಪಕ್ಷದ ಒಳಗಿನವರ ಪ್ರಕಾರ ಹೆಚ್ಚಿನ ಯುವ ಪ್ರಾತಿನಿಧ್ಯ ಇರಲಿದೆ ಮತ್ತು ಕೆಲವು ಪ್ರಸಿದ್ಧ ಅಭ್ಯರ್ಥಿಗಳು ಸಹ ಇರುತ್ತಾರೆ.

ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ ಮತ್ತೊಮ್ಮೆ ಹರಿಪಾದ್‌ನಿಂದ ತಮ್ಮ ಅದೃಷ್ಟವನ್ನು ಪ್ರಯತ್ನಿಸಲಿದ್ದರೆ, ಮಾಜಿ ಸಿಎಂ ಉಮ್ಮನ್ ಚಾಂಡಿ ಅವರು ಪುತ್ತುಪ್ಪಳ್ಳಿಯಿಂದ ಹೋರಾಡುತ್ತಾರೆಯೇ ಅಥವಾ ಕಾಂಗ್ರೆಸ್ ತನ್ನ ಪ್ರತಿಸ್ಪರ್ಧಿ ಪಕ್ಷದಿಂದ ಕಸಿದುಕೊಳ್ಳುವ ಕಠಿಣ ಸ್ಥಾನಕ್ಕೆ ಹೋಗುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಮುಲ್ಲಪ್ಪಲ್ಲಿ ರಾಮಚಂದ್ರನ್ ಅಭ್ಯರ್ಥಿಯಾಗಲಿದ್ದಾರೆ ಎಂಬುದರ ಬಗ್ಗೆ ಯಾವುದೇ ದೃಢೀಕರಣ ಕಂಡುಬಂದಿಲ್ಲ.


ಇದನ್ನೂ ಓದಿ: ಪಂಜಾಬ್ ಚುನಾವಣೆ: ಕಾಂಗ್ರೆಸ್‌ನ ಅಮರಿಂದರ್ ಸಿಂಗ್ ಪರ ಮತ್ತೆ ಕೆಲಸ ಮಾಡಲಿರುವ ಪ್ರಶಾಂತ್ ಕಿಶೋರ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...