ದೇಶದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳಿದ್ದ ಕೇರಳದಲ್ಲಿ ಸತತ ಮೂರನೇ ದಿನ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಅಷ್ಟು ಮಾತ್ರವಲ್ಲದೇ ಇಂದು 61 ಜನರು ಕೊರೊನಾದಿಂದ ಗುಣಮುಖ ಹೊಂದಿ ಡಿಸ್ಚಾರ್ಜ್ ಆಗಿದ್ದಾರೆ. ಈಗ ಸದ್ಯಕ್ಕೆ ಅಲ್ಲಿರುವ ಸಕ್ರಿಯ ಸೋಂಕಿತರು ಕೇವಲ 34 ಜನ.
ಸೋಮವಾರ ಕೇರಳದಲ್ಲಿ ಸಂಗ್ರಹಿಸಿದ ಶಂಕಿತರ ಎಲ್ಲಾ ಮಾದರಿಗಳು ಪರೀಕ್ಷೆಯಲ್ಲಿ ಋಣಾತ್ಮಕವಾಗಿ ವರದಿಯಾಗುವ ಮೂಲಕ ಕೊರೊನಾ ವಿರುದ್ದ ಹೋರಾಟದಲ್ಲಿ ಕೇರಳ ಮಹತ್ತರವಾದ ಮೈಲಿಗಲ್ಲು ಸಾಧಿಸಿದೆ.
ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 61 ಮಂದಿ ಸೋಮವಾರ ರೋಗದಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಕೇವಲ 34 ಜನರು ಮಾತ್ರ ಉಳಿದಿದ್ದಾರೆ ಎಂದು ಹೇಳಿದ್ದಾರೆ.
#COVID19 Update | May 4
Well, the curve has flattened.
No new cases.
61 recoveries.
Active cases down at 34.?No new hotspots
?21,724 under observation
? 33,010 samples tested; 32,315 -ve
? 2431 samples covered in sentinel surveillance pic.twitter.com/fxmJuXOPjo— Pinarayi Vijayan (@vijayanpinarayi) May 4, 2020
ಈವರೆಗೆ ಕೇರಳದಲ್ಲಿ 499 ಕೊರೊನಾ ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ 462 ಜನರು ಗುಣಮುಖರಾಗಿದ್ದಾರೆ. ಮೂವರು ಮರಣ ಹೊಂದಿದ್ದಾರೆ. ಒಟ್ಟು ವೀಕ್ಷಣೆಯಲ್ಲಿರುವ 21,724 ಜನರಲ್ಲಿ, 213,52 ಜನರನ್ನು ಮನೆ ಸಂಪರ್ಕತಡೆಯಲ್ಲಿ ಇಡಲಾಗಿದ್ದು ಉಳಿದ 372 ಜನರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕೊರೊನಾ ಪರೀಕ್ಷೆಗಳಿಗೆ ಕಳುಹಿಸಲಾದ ಒಟ್ಟು 33,010 ಮಾದರಿಗಳಲ್ಲಿ 32,315 ಋಣಾತ್ಮಕವಾಗಿವೆ.
ಕೇರಳ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ಪ್ರಕರಣಗಳು ವರದಿಯಾಗಿದ್ದವು, ಆದರೆ ಇತ್ತೀಚಿನ ಸುದ್ದಿಯಂತೆ ತಿರುವನಂತಪುರಂ, ಕೋಳಿಕೋಡ್, ಮಲಪ್ಪುರಂ ಮೂರು ಜಿಲ್ಲೆಗಳು ಕೊರೊನಾ ಮುಕ್ತ ಜಿಲ್ಲೆಗಳಾಗಿ ಘೋಣೆಯಾಗಿವೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳದಲ್ಲಿ 84 ಹಾಟ್‌ಸ್ಪಾಟ್‌ಗಳಿದ್ದು, ಸೋಮವಾರ ಹಾಟ್‌ಸ್ಪಾಟ್ ಪಟ್ಟಿಗೆ ಯಾವುದೇ ಹೊಸ ಸೇರ್ಪಡೆ ಮಾಡಲಿಲ್ಲ ಎಂದಿರುವ ಅವರು, ಭಾರತದಾದ್ಯಂತ 1.65 ಲಕ್ಷಕ್ಕೂ ಹೆಚ್ಚು ಜನರು ಕೇರಳಕ್ಕೆ ಮರಳಲು ಬಯಸುತ್ತಿದ್ದು, ಇದರಲ್ಲಿ ಕರ್ನಾಟಕವೂ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
ಇದುವರೆಗೆ 28,272 ಜನರು ಪಾಸ್‌ಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈವರೆಗೆ 5,470 ಪಾಸ್‌ಗಳನ್ನು ವಿತರಿಸಲಾಗಿದೆ ಎನ್ನಲಾಗಿದೆ. ಅಲ್ಲದೆ ಸೋಮವಾರ ಮಧ್ಯಾಹ್ನದವರೆಗೆ 515 ಜನರು ಕೇರಳ ತಲುಪಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಕೇರಳ ಅಂತರರಾಜ್ಯ ವಲಸೆ ಕಾರ್ಮಿಕರಿಗಾಗಿ ವಿಶೇಷ ರೈಲುಗಳನ್ನು ವ್ಯವಸ್ಥೆಗೊಳಿಸಿದ್ದು ಅದರಲ್ಲೆ, ಭಾರತದ ಇತರ ಭಾಗಗಳಲ್ಲಿ ಸಿಲುಕಿರುವ ಕೇರಳಿಗರನ್ನು ಮರಳಿ ತರಲು ಈ ರೈಲುಗಳನ್ನು ಬಳಸಬೇಕು ಎಂದು ಪಣರಾಯಿ ತಿಳಿಸಿದ್ದಾರೆ.
ಕೇರಳದಿಂದ ಸೋಮವಾರ 13,518 ಅಂತರರಾಜ್ಯ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಿದ್ದಾರೆ.
ಇದನ್ನೂ ಓದಿ: ಕೊರೊನಾ ವಿರುದ್ಧದ ಸಮರದಲ್ಲಿ ಕೇರಳ ಸರ್ಕಾರ ಮತ್ತು ಜನತೆಯ ಪ್ರಬುದ್ಧತೆ
ವಿಡಿಯೊ ನೋಡಿ: ಸದ್ದು , ಈ ಸುದ್ದಿಗಳೇನಾಗಿದೆ ??


