Homeಮುಖಪುಟಡಬಲ್ ಎಂಜಿನ್ ಸರ್ಕಾರ ಸಮರ್ಥವಾಗಿಲ್ಲ, ವಲಸಿಗರ ಪ್ರಯಾಣದ ಖರ್ಚು ನಾವು ನೀಡುತ್ತೇವೆ: ತೇಜಸ್ವಿ ಯಾದವ್

ಡಬಲ್ ಎಂಜಿನ್ ಸರ್ಕಾರ ಸಮರ್ಥವಾಗಿಲ್ಲ, ವಲಸಿಗರ ಪ್ರಯಾಣದ ಖರ್ಚು ನಾವು ನೀಡುತ್ತೇವೆ: ತೇಜಸ್ವಿ ಯಾದವ್

- Advertisement -
- Advertisement -

ತಮ್ಮ ರಾಜ್ಯಕ್ಕೆ ವಾಪಾಸು ಬರುತ್ತಿರುವ ವಲಸೆ ಕಾರ್ಮಿಕರ 50 ರೈಲುಗಳ ಎಲ್ಲಾ ಪ್ರಯಾಣಿಕರ ಪ್ರಯಾಣ ದರವನ್ನು ಪಾವತಿಸಲು ಸಿದ್ದರಿದ್ದೇವೆ ಎಂದು ಬಿಹಾರದ ಪ್ರಮುಖ ವಿರೋಧ ಪಕ್ಷದ ನಾಯಕ ತೇಜಶ್ವಿ ಯಾದವ್ ಪ್ರಸ್ತಾಪಿಸಿದ್ದಾರೆ. ಇದಾದ ಕೆಲವೇ ಗಂಟೆಗಳ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸರ್ಕಾರವೇ ರೈಲು ದರ ಪಾವತಿಸಲಿದೆ ಎಂಬ ನಿಲುವು ಪ್ರಕಟಿಸಿದ್ದಾರೆ.

ರೈಲಿನಲ್ಲಿ ಮನೆಗೆ ಮರಳುವ ಪ್ರತಿಯೊಬ್ಬ ಕಾರ್ಮಿಕರಿಗೆ ಪೂರ್ಣ ಟಿಕೆಟ್ ಶುಲ್ಕವನ್ನು ಮರುಪಾವತಿ ಮಾಡಲಾಗುವುದು ಮತ್ತು ಹೆಚ್ಚುವರಿ 500ರೂ. ಗಳ ನೆರವು ನೀಡಲಾಗುವುದು ಎಂದು ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಘೋಷಿಸಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು “ನಮ್ಮ ವಿದ್ಯಾರ್ಥಿಗಳಿಗೆ ಮರಳಿ ಮನೆಗೆ ಉಚಿತ ಪ್ರಯಾಣವನ್ನು ಖಾತ್ರಿಪಡಿಸುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ ಮತ್ತು ಈಗ ಅದೇ ರೀತಿಯ ಸೌಲಭ್ಯವನ್ನು ವಲಸೆ ಕಾರ್ಮಿಕರಿಗೂ ವಿಸ್ತರಿಸಲಾಗುತ್ತಿದೆ” ಎಂದು ತಮ್ಮ ಪರೀಷ್ಕೃತ ನಿಲುವನ್ನು ಹೇಳಿದ್ದಾರೆ.

ವಿರೋಧ ಪಕ್ಷಗಳು ಮಾತ್ರವಲ್ಲದೇ ತಮ್ಮದೇ ಸಮ್ಮಿಶ್ರ ಸರ್ಕಾರದ ಹಲವು ನಾಯಕರು ಸಹ ನಿತೀಶ್‌ ಕುಮಾರ್‌ರವರ ಮೊದಲಿನ ನಿಲುವನ್ನು ಟೀಕಿಸಿದ್ದರು. ಇತರ ರಾಜ್ಯಗಳು ತಮ್ಮ ಕಾರ್ಮಿಕರನ್ನು ವಾಪಸ್ ಕಳುಹಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಾಗ ನಿತೀಶ್ ಕುಮಾರ್ ಅವರು ಕಾರ್ಮಿಕರು ಇದ್ದಲ್ಲಿಯೇ ಇರಬೇಕೆಂದು ಒತ್ತಾಯಿಸಿದರು. ಕಾರ್ಮಿಕರು ಹಿಂದಿರುಗಿದ ನಂತರ 14 ದಿನಗಳವರೆಗೆ ಕಾರ್ಮಿಕರನ್ನು ಪ್ರತ್ಯೇಕವಾಗಿರಿಸಲು ಸಮರ್ಪಕ ಸೌಲಭ್ಯಗಳಿಲ್ಲ. ಉತ್ತರ ಪ್ರದೇಶದಂತಹ ರಾಜ್ಯಗಳ ಅವರ ಸಹವರ್ತಿಗಳು ಇತರ ನಗರಗಳಿಂದ ವಿದ್ಯಾರ್ಥಿಗಳು ಮತ್ತು ಕಾರ್ಮಿಕರನ್ನು ಮರಳಿ ಕರೆತರಲು ಬಸ್ಸುಗಳನ್ನು ಆಯೋಜಿಸಿದರೆ ನಿತೀಶ್ ಅವರು ರೈಲುಗಳನ್ನು ತಡೆದು ಕೇಂದ್ರ ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟರು ಎಂಬ ಟೀಕೆಗಳು ಅವರ ಮೇಲಿದ್ದವು.

ಆರ್‌ಜೆಡಿ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕರಾದ ತೇಜಸ್ವಿ ಯಾದವ್ ” ಆರ್‌ಜೆಡಿ 50 ರೈಲುಗಳ ಶುಲ್ಕವನ್ನು ಅಸಮರ್ಥ ಬಿಹಾರ ಸರ್ಕಾರಕ್ಕೆ ಕಾರ್ಮಿಕರ ಪರವಾಗಿ ನೀಡುತ್ತೇವೆ. ಮುಂದಿನ 5 ದಿನಗಳಲ್ಲಿ ಸರ್ಕಾರವು ರೈಲುಗಳನ್ನು ವ್ಯವಸ್ಥೆಗೊಳಿಸಬೇಕು, ಪಕ್ಷವು ತನ್ನ ಶುಲ್ಕವನ್ನು ತಕ್ಷಣವೇ ಸರ್ಕಾರಿ ಖಾತೆಗೆ ವರ್ಗಾಯಿಸುತ್ತದೆ” ಎಂದು ಹೇಳಿದ್ದರು.

ಅಲ್ಲದೆ ಟ್ವಿಟ್ಟರ್‌ನಲ್ಲಿ “ಗೌರವಾನ್ವಿತ ನಿತೀಶ್ ಕುಮಾರ್ ಅವರೇ, ಬಡ ಕಾರ್ಮಿಕರ 50 ರೈಲುಗಳ ಶುಲ್ಕವನ್ನು ಭರಿಸಲು ಆರ್‌ಜೆಡಿ ಸಿದ್ಧವಾಗಿದೆ, ಯಾಕೆಂದರೆ ಡಬಲ್ ಎಂಜಿನ್ ಸರ್ಕಾರ ಸಮರ್ಥವಾಗಿಲ್ಲ. ದಯವಿಟ್ಟು ಈಗ ನಿರ್ವಹಣೆಯನ್ನು ತಕ್ಷಣವೇ ಮಾಡಿ. ಸುಶಿಲ್ ಮೋದಿಯವರೇ, ದಯವಿಟ್ಟು ಒಟ್ಟು ಮೊತ್ತವನ್ನು ಹೇಳಿ, ಚೆಕ್ ಅನ್ನು ತಕ್ಷಣ ಕಳುಹಿಸಲಾಗುತ್ತದೆ. ಹೇಗಾದರೂ, ನೀವು ಲೆಕ್ಕ ಪತ್ರವನ್ನು ನೋಡಲು ಇಷ್ಟಪಡುತ್ತೀರಿ” ಎಂದು ಕುಟುಕಿದ್ದರು.

ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ನಾಲ್ಕು ಗಂಟೆಗಳ ಸೂಚನೆಯೊಂದಿಗೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದಾಗ, ಲಕ್ಷಾಂತರ ವಲಸೆ ಕಾರ್ಮಿಕರು ತಾವು ದುಡಿಯುವ ನಗರಗಳಲ್ಲಿ ಸಿಲುಕಿಕೊಂಡರು. ಅವರ ದುಡಿಮೆಗಳು ಹಠಾತ್ತನೆ ನಿಂತು ಹೋದುದರಿಂದ, ಹಲವಾರು ಕಾರ್ಮಿಕರು ಮನೆಗೆ ತೆರಳಲು ನಿರ್ಧರಿಸಿದರು. ಆದರೆ ಯಾವುದೇ ಸಾರ್ವಜನಿಕ ಸಾರಿಗೆ ಇಲ್ಲದೆ ಸಾವಿರಾರು ಜನರು ತಮ್ಮ ಊರಿಗೆ ಮರಳಲು ಸಾವಿರಾರು ಕಿಲೋಮೀಟರನ್ನು ಕಾಲ್ನಡಿಗೆಯಲ್ಲೇ ನಡೆದರು. ಈ ಸಂಧರ್ಭದಲ್ಲಿ ನೂರಾರು ಜನರು ನೀರು-ಆಹಾರವಿಲ್ಲದೆ ಸಾವಿಗೀಡಾಗಿದ್ದರು.

ಇದರಿಂದಾಗಿ ಕಳೆದ ಶುಕ್ರವಾರ ಬಿಜೆಪಿ ತಮಗೆ ರಾಜಕೀಯ ಹಿನ್ನಡೆಯಾಗುತ್ತಿರುವ ಬಗ್ಗೆ ಚರ್ಚಿಸಿ, ವಿಶೇಷ ರೈಲುಗಳ ಮೂಲಕ ವಲಸೆ ಕಾರ್ಮಿಕರನ್ನು ಮನೆಗೆ ಹಿಂದಿರುಗಿಸುವುದಾಗಿ ಘೋಷಿಸಿತು. ಬಿಜೆಪಿ ಆಡಳಿತವಿಲ್ಲದ ರಾಜ್ಯ ಸರ್ಕಾರಗಳು ರೈಲುಗಳಿಗೆ ಪಾವತಿಸಲು ಹಣವಿಲ್ಲ ಎಂದು ಹೇಳಿದ್ದು, ಸಾಂಕ್ರಾಮಿಕ ರೋಗವನ್ನು ಎದುರಿಸುವ ಕಾರಣದಿಂದಾಗಿ ಅವರ ಹಣಕಾಸು ವೆಚ್ಚ ಒತ್ತಡದಲ್ಲಿದೆ ಎಂದು ಹೇಳಿದ್ದವು.

ಇಂದು ಬೆಳಿಗ್ಗೆ ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ತಮ್ಮ ಪಕ್ಷವು ಕಾರ್ಮಿಕರ ಪ್ರಯಾಣ ಹಣವನ್ನು ಭರಿಸುತ್ತದೆ ಎಂದು ಘೋಷಿಸಿದ್ದಾರೆ.


ಇದನ್ನೂ ಓದಿ:  ರೈಲು ದರ ವಿವಾದ: ಕೇಂದ್ರದ ಮೂರ್ಖತನವೆಂದ ಬಿಜಿಪಿ ಸಂಸದ ಸುಬ್ರಮಣ್ಯ ಸ್ವಾಮಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...