Homeಮುಖಪುಟರೈಲು ದರ ವಿವಾದ: ಕೇಂದ್ರದ ಮೂರ್ಖತನವೆಂದ ಬಿಜಿಪಿ ಸಂಸದ ಸುಬ್ರಮಣ್ಯ ಸ್ವಾಮಿ

ರೈಲು ದರ ವಿವಾದ: ಕೇಂದ್ರದ ಮೂರ್ಖತನವೆಂದ ಬಿಜಿಪಿ ಸಂಸದ ಸುಬ್ರಮಣ್ಯ ಸ್ವಾಮಿ

- Advertisement -
- Advertisement -

ರೈಲ್ವೆ ಸಚಿವಾಲಯ ವಲಸೆ ಕಾರ್ಮಿಕರಿಂದ ಶುಲ್ಕವನ್ನು ಪಡೆಯುವಂತೆ ಸೂಚಿಸಿರುವುದಕ್ಕೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ಬಿಜೆಪಿಯ ರಾಜ್ಯಸಭಾ ಸದಸ್ಯರಾದ ಸುಬ್ರಮಣ್ಯ ಸ್ವಾಮಿ ಕೇಂದ್ರ ಸರ್ಕಾರ ಮೂರ್ಖತನ ಮಾಡುತ್ತಿದೆ ಕೇಂದ್ರ ಸರ್ಕಾರದ ವಿರುದ್ದವೇ ಕಿಡಿಕಾರಿದ್ದಾರೆ.

ಸುಬ್ರಮಣ್ಯ ಸ್ವಾಮಿ ಟ್ವಿಟ್ಟರಿನಲ್ಲಿ “ಹಸಿವಿನಿಂದ ಬಳಲುತ್ತಿರುವ ವಲಸೆ ಕಾರ್ಮಿಕರಿಂದ ಮಿತಿಮೀರಿದ ರೈಲು ಪ್ರಯಾಣ ದರವನ್ನು ವಿಧಿಸುವ ಕೇಂದ್ರ ಸರ್ಕಾರ ಎಷ್ಟೊಂದು ಮೂರ್ಖತನದ್ದಾಗಿದೆ. ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಏರ್ ಇಂಡಿಯಾ ಉಚಿತವಾಗಿ ಕರೆತರಲಾಯಿತು. ರೈಲ್ವೆ ಇಲಾಖೇ ಇದಕ್ಕೆ ಅನುದಾನ ನೀಡಲು ನಿರಾಕರಿಸಿದರೆ PM CARES ನಿಂದ ಯಾಕೆ ಪಾವತಿಸಬಾರದು?” ಎಂದು ಕೇಂದ್ರದ ವಿರುದ್ದ ಹರಿಹಾಯ್ದಿದ್ದಾರೆ.

ಈ ಟ್ವೀಟಿನ ನಂತರ ಸುಬ್ರಮಣ್ಯ ಸ್ವಾಮಿ “ಕೇಂದ್ರ ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಕೇಂದ್ರ 85% ನೀಡುತ್ತದೆ ಹಾಗೂ ಉಳಿದ 15% ರಾಜ್ಯ ಪಾವತಿಸಲಿ, ವಲಸೆ ಕಾರ್ಮಿಕರು ಉಚಿತವಾಗಿ ಪ್ರಯಾಣಿಸಲಿ, ಸಚಿವಾಲಯ ಅಧೀಕೃತವಾಗಿ ಸ್ಪಷ್ಟನೆ ನೀಡಲಿದೆ” ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಅಧಕ್ಷೆ ಸೋನಿಯಾ ಗಾಂಧಿಯವರು ಕಾರ್ಮಿಕರ ಪ್ರಯಾಣದರವನ್ನು ಪಕ್ಷ ಭರಿಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ವಲಸೆ ಕಾರ್ಮಿಕರ ಬಗ್ಗೆ ಕೇಂದ್ರದ ನಡೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ಟ್ವಿಟ್ಟರಿನಲ್ಲಿ ಕೇಂದ್ರದ ವಿರುದ್ದ ಟೀಕೆ ವ್ಯಕ್ತಪಡಿಸಿದ್ದಾರೆ. “ಒಂದೆಡೆ, ರೈಲ್ವೆ ಇತರ ರಾಜ್ಯಗಳಲ್ಲಿ ಸಿಕ್ಕಿಬಿದ್ದ ಕಾರ್ಮಿಕರಿಂದ ಟಿಕೆಟ್ ದರವನ್ನು ವಿಧಿಸುತ್ತಿದ್ದರೆ, ಮತ್ತೊಂದೆಡೆ ರೈಲ್ವೆ ಸಚಿವಾಲಯವು ಪಿಎಂ ಕೇರ್ ಫಂಡ್‌ಗೆ 151 ಕೋಟಿ ರೂ. ನೀಡುತ್ತಿದೆ, ಇದನ್ನು ಪರಿಹರಿಸಿ” ಎಂದು ಬರೆದಿದ್ದಾರೆ.

ರಾಹುಲ್ ಗಾಂಧಿಯವರ ಟ್ವಿಟ್ಟರಿಗೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಟ್ವೀಟ್ ಮಾಡಿ, “ರಾಹುಲ್ ಗಾಂಧಿಯವರೆ, ಮಾರ್ಗ ಸೂಚಿಯೂ ಯಾವುದೇ ನಿಲ್ದಾಣದಲ್ಲಿ ಯಾವುದೇ ಟಿಕೆಟ್‌ಗಳನ್ನು ಮಾರಾಟ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳುತ್ತದೆ ರೈಲ್ವೆ ಸಚಿವಾಲಯ 85% ಸಬ್ಸಿಡಿ ನೀಡಿದೆ ಮತ್ತು ರಾಜ್ಯ ಸರ್ಕಾರ 15% ಪಾವತಿಸಬೇಕಾಗಿದೆ, ಅದನ್ನು ಅನುಸರಿಸಲು ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಸರ್ಕಾರಗಳಿಗೆ ಹೇಳಿ” ಎಂದಿದ್ದಾರೆ.

ಇದಕ್ಕೆ ಉತ್ತರವಾಗಿ ಟ್ವಿಟ್ಟರ್ ಬಳಕೆದಾರರೊಬ್ಬರು, ಯಾವುದೆ ಟಿಕೆಟುಗಳು ಮಾರುತ್ತಿಲ್ಲ ಎಂದು ಹೇಳುತ್ತಿರುವ ಸಂಬಿತ್ ಪಾತ್ರ, ಇದೇನು? ಎಂದು ಮೇ 02 ರಂದು ಪಡೆದ ರೂ. 740 ರ ರೈಲ್ವೇ ಟಿಕೆಟೊಂದರ ಚಿತ್ರವನ್ನು ಹಾಕಿದ್ದಾರೆ.


ಇದನ್ನೂ ಓದಿ:ಲಸೆ ಕಾರ್ಮಿಕರ ರೈಲು ಪ್ರಯಾಣದ ಶುಲ್ಕ ಪಾವತಿಗೆ ಕೇಂದ್ರದ ಸೂಚನೆ: ವಿರೋಧ ಪಕ್ಷಗಳ ಆಕ್ಷೇಪ


ವಿಡಿಯೊ ನೋಡಿ: ಮರೆಯಲೆ ಬಾರದ ಈ ಹಿಂದಿನ ಸುದ್ದಿಗಳು

ಸದ್ದು ಈ ಸುದ್ದಿಗಳೇನಾಗಿವೆ? – 03 may 2020

ಹೊಸ ಸುದ್ದಿಗಳು, ಮರೆಯಬಾರದ ಹಳೆಯ ಸುದ್ದಿಗಳು ಮತ್ತು ಮುಂದಾಗಬೇಕಾದ ಸುದ್ದಿಗಳು – ಇವುಗಳನ್ನೊಳಗೊಂಡ ಇಂದಿನ #ಸದ್ದು_ಈ_ಸುದ್ದಿಗಳೇನಾಗಿವೆ?

Posted by Naanu Gauri on Sunday, May 3, 2020


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...