Homeಮುಖಪುಟಈ ಮಾಧ್ಯಮಗಳಿಗೆ ’ದೊಡ್ಡರೋಗ’ ಬಂದಿದೆಯೇ? ಅಂಕೆ ತಪ್ಪಿದ ಅಭಿವ್ಯಕ್ತಿಯೇ ನಾಗರಿಕತೆಯ ತಿರುಗು ಚಕ್ರಕ್ಕೆ ತಡೆದಿಮ್ಮೆ! 

ಈ ಮಾಧ್ಯಮಗಳಿಗೆ ’ದೊಡ್ಡರೋಗ’ ಬಂದಿದೆಯೇ? ಅಂಕೆ ತಪ್ಪಿದ ಅಭಿವ್ಯಕ್ತಿಯೇ ನಾಗರಿಕತೆಯ ತಿರುಗು ಚಕ್ರಕ್ಕೆ ತಡೆದಿಮ್ಮೆ! 

ಇದೆಂತಹ ವಿಚಿತ್ರ ರೋಗವೆಂದರೆ ರೋಗದಿಂದ ಬಳಲುತ್ತಿರುವವನಿಗಿಂತಲೂ ಅವನ ಸುತ್ತು ಮುತ್ತಲಿನವರಿಗೆ ಮಾನಸಿಕ ನೋವು, ಮುಜುಗರವನ್ನು ಉಂಟು ಮಾಡುತ್ತದೆ. 

- Advertisement -
- Advertisement -

1949 ನವೆಂಬರ್ 25 ಸಂವಿಧಾನ ರಚನಾಸಭೆಯ ಕಡೆಯ ದಿನದ ಚರ್ಚೆ ಅತ್ಯಂತ ಮಹತ್ವಪೂರ್ಣವಾದದ್ದು. “ಧರ್ಮದೆಡಗಿನ ಭಕ್ತಿಯು ಮುಕ್ತಿಯನ್ನು ತಂದು ಕೊಡಬಹುದು. ಆದರೆ ರಾಜಕೀಯ ಭಕ್ತಿ, ವ್ಯಕ್ತಿ ಪೂಜೆ ಪ್ರಜಾಪ್ರಭುತ್ವದ ಕುಸಿತಕ್ಕೆ ಕಾರಣವಾಗುತ್ತದೆ ಮತ್ತು ಕ್ರಮೇಣ ನಿರಂಕುಶ ಆಡಳಿತಕ್ಕೆ ಎಡೆ ಮಾಡಿಕೊಡುತ್ತದೆ”. ಹಾಗೆಯೇ ಮಾಧ್ಯಮಗಳ ಕುರಿತು ವಿಶೇಷವಾಗಿ ಹೇಳಬೇಕಾದ್ದು ಏನೂ ಇಲ್ಲ. ಸಾಮಾನ್ಯ ಪ್ರಜೆಗೆ ಲಭಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳು ಮಾಧ್ಯಮಕ್ಕೂ ಅನ್ವಯವಾಗುತ್ತದೆ. ಸಂವಿಧಾನದ ವಿಧಿ 19(2) ರಲ್ಲಿ ಕಾಣಿಸಿರುವ ನಿಭಂದನೆಗಳು ಎಲ್ಲರಿಗೂ ಅನ್ವಯವಾಗಲಿವೆ ಎಂಬ ಮಾತುಗಳನ್ನು ಅಂಬೇಡ್ಕರ್ ಅವರು ಹೇಳಿದ್ದರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮತ್ತು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿ ಮತ್ತು ಅವರ ಸಾಗಬೇಕಾದ ಹಾದಿಯನ್ನು ಬೊಟ್ಟು ಮಾಡಿ ತೋರಿದ್ದರು.

ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಕುರಿತು ಪ್ರಜೆಗಳಿಗೆ ಅಪಾರವಾದ ನಂಬಿಕೆಯಿದೆ. ಪ್ರಜಾಪ್ರಭುತ್ವದ ಕಾವಲು ನಾಯಿ ಎಂದೇ ಭಾವಿಸಲಾದ ಮಾಧ್ಯಮಗಳು ಬೊಗಳುವುದನ್ನು ಬಿಟ್ಟು ಆಳ್ಮೆಗಾರರ ತಲೆಕಾಯುವ ಸಾಕುನಾಯಿಯಾದರೆ ಮತ್ಯಾವ ಕಾವಲುಗಾರನನ್ನು ಹುಡುಕಿ ತರಬೇಕು. ದೇಶವೊಂದು ಕರೋನಾದಂತಹ ಅಸಾಧಾರಣ ಪಿಡುಗನ್ನು ಮಣಿಸಲು ಪ್ರಯತ್ನಿಸುವ ಸನ್ನಿವೇಶದಲ್ಲಿ ಮಾಧ್ಯಮಗಳು ತುಳಿದಿರುವ ಹಾದಿಯನ್ನು ನೋಡಿದಾಗ ಈ ಕೆಳಗಿನ ಸಂಗತಿ ನೆನಪಿಗೆ ಬರುತ್ತದೆ.

ವಯಕ್ತಿಕ ಬದುಕಿಗೋ, ಕೌಟುಂಬಿಕ ನೆಮ್ಮದಿಗೋ ಅಥವಾ ಸಾಮಾಜಿಕ ನೆಮ್ಮದಿಗೋ ಕಂಟಕನಾದವನ ಕುರಿತು ದೂಷಿಸುವಾಗ ‘ದೊಡ್ಡ ರೋಗ’ ಬಂದು ಒರಗಿ ಹೋಗಲಿ ಎಂದು ಹೇಳುವುದು ಜನಪದದಲ್ಲಿದೆ.

ಮನೆಯ ನೆಮ್ಮದಿಗೆ ಬೇಡವೆನಿಸಿದ ಸಂಗತಿಗಳನ್ನು ಎತ್ತಿ ತಲೆಬುಡವಿಲ್ಲದೇ ಚರ್ಚಿಸಿ ಆರ್ಭಟಿಸಿ ನಿತ್ಯನಿರಕವನ್ನು ಉಂಟುಮಾಡುವ  ಕುಟುಂಬದ ಸದಸ್ಯನ  ಅಥವಾ ಇತರರ ಆರ್ಭಟ ಕುರಿತು ಹೇಳುವಾಗಲೂ ಏನ್ ‘ದೊಡ್ಡ ರೋಗ’ ಇವನಿಗೆ ಎಂದು ಪ್ರಾಸಂಗಿಕವಾಗಿ ಹೇಳುವುದು ವಾಡಿಕೆಯಲ್ಲಿದೆ.

ಈ ದೊಡ್ಡ ರೋಗವೆಂದರೆ ಏನು ಎಂಬುದರ ಕುರಿತು ಜನಪದದಲ್ಲಿ ಅಧ್ಯಯನಗಳು ನೆಡದ ಬಗ್ಗೆ ಮಾಹಿತಿ ಲಭ್ಯವಿಲ್ಲ. ದೊಡ್ಡ ರೋಗವೆಂದರೆ ಮದ್ದು ಸಿಗದ, ವಾಸಿಯಾಗದ ಕಾಯಿಲೆ. ವೈದ್ಯಶಾಸ್ತ್ರ ಪರಿಣಿತರ ಅರಿವಿಗೆ ನಿಲುಕದ ಕಾಯಿಲೆ, ಅದರ ಸ್ವರೂಪವೇನು ಮತ್ತು ಉಂಟು ಮಾಡುವ ಪರಿಣಾಮಗಳೇನು ಎಂಬುದಲ್ಲ. ದೊಡ್ಡ ರೋಗವೆಂಬುದು ಪೀಡಕನ ಕೆಟ್ಟ ಮನಸ್ಥಿತಿಯನ್ನು ಸೂಚಿಸುವ ಗುಣವಾಚಕ.

ಇದೆಂತಹ ವಿಚಿತ್ರ ರೋಗವೆಂದರೆ ರೋಗದಿಂದ ಬಳಲುತ್ತಿರುವವನಿಗಿಂತಲೂ ಅವನ ಸುತ್ತು ಮುತ್ತಲಿನವರಿಗೆ ಮಾನಸಿಕ ನೋವು, ಮುಜುಗರವನ್ನು ಉಂಟು ಮಾಡುತ್ತದೆ.

ಈ ದೂಷಣೆಯ ಹಿಂದೆ ಕಂಟಕಪ್ರಾಯನಾದವನನ್ನು ಹೋಗಲಾಡಿಸುವುದಕ್ಕಿಂತಲೂ ಎದೆಯೊಳಗಿನ ಸಂಕಟವನ್ನು ಹೊರಗೆ ಹಾಕಿ ಎದೆಗೂಡನ್ನು ಹಗುರ ಮಾಡಿಕೊಳ್ಳುವ ಭಾವವೇ ಹೆಚ್ಚು. ಸಂಕಟಗಳ ಹೊರತಾಗಿಯೂ ನಮ್ಮ ಸಮಾಜ ತೊಂದರೆಗೆ ಕಾರಣನಾದ ವ್ಯಕ್ತಿಯ ಸಾವನ್ನು ಬಯಸುವುದಿಲ್ಲ. ಪೀಡಕನು ತನ್ನ ಧೋರಣೆಯನ್ನು ಬದಲಿಸಿದರೆ ಅವನನ್ನು ಮನ್ನಿಸುವ ದೊಡ್ಡ ಗುಣವೂ ಈ ಮಣ್ಣಿನೊಳಗೆ ಮಿಳಿತವಾಗಿದೆ. ಇಂತಹ ಸಾತ್ವಿಕ ಕೋಪವನ್ನು ನಮ್ಮ ಸಮಾಜವು ತಲತಲಾಂತರದಿಂದ ಸಲಹಿಕೊಂಡು ಬಂದಿದೆ.

ಈ ಮೇಲಿನದ್ದು ಕೌಟುಂಬಿಕ ಹಿನ್ನೆಲೆಯ ಚಿತ್ರಣವಾದರೆ.
ನಂಜುಪೂರಿತ ಮಾತುಗಳನ್ನಾಡಿ, ಸಮಾಜದ ನೆಮ್ಮದಿಗೆ ಧಕ್ಕೆ ತರುವ, ಟಿವಿ ನಿರೂಪಕರ, ರಾಜಕೀಯ ಮುಂದಾಳುಗಳ, ಧಾರ್ಮಿಕ ನಾಯಕರ ಚಿತ್ರಣವೇನೂ ಬೇರೆಯಲ್ಲ! ಈ ಪಾತ್ರಗಳೆಲ್ಲವೂ  ಕುಟುಂಬದ ನೆಮ್ಮದಿ ಕಲಕುವವನ ಪಾತ್ರಕ್ಕಿಂತ ಭಿನ್ನವಾಗಿಲ್ಲ. ಜನರ ಬವಣೆಗಳನ್ನು ಎತ್ತಿ ತೋರಿ ಆಳ್ಮೆಗಾರರ ಕಣ್ಣ ತೆರಸಬೇಕಾದವರೇ ಆಳ್ಮೆಗಾರರಿಗೆ ಜೋಗುಳವಾಡಿದರೆ, ಧಮನಿತರು ಯಾರ ಮೊರೆಯೋಗಬೇಕು ಎಂಬ ಪ್ರಶ್ನೆಗೆ ಉತ್ತರವಿದೆಯೇ!

ದೇಶದ ಹೊಸ್ತಿಲನ್ನು ದಾಟಿ ಒಳನುಸುಳುಕೋರನಂತೆ ಬಂದೆರಗಿದ ಸಾಂಕ್ರಾಮಿಕ ಪಿಡುಗು ಯಾವುದೇ ಮತ, ಜಾತಿ ಭೇದವಿಲ್ಲದೆ ಎಲ್ಲರ ಎದೆಗೂಡೊಳಗೆ ಸೇರಲು ಹವಣಿಸಿದೆ‌. ಇಂತಹ ವಿಷಮ ಪರಿಸ್ಥಿತಿಯಲ್ಲಿ ಒಂದೆಡೆ ಆಳ್ಮೆಗಾರರನ್ನು ಅಗತ್ಯಕ್ಕಿಂತಲೂ ಹೆಚ್ಚು ವೈಭವೀಕರಿಸಿ ಮೈಮರೆಯಲು ಬಿಡುವುದು. ಮತ್ತೊಂದೆಡೆ ಸಾಂಕ್ರಾಮಿಕ ರೋಗದ ಸೊಂಕಿಗೆ ಒಂದು ಜನಾಂಗವನ್ನು ತಳಕು ಹಾಕುವುದು.

ಧರ್ಮ, ಜನಾಂಗ, ಜಾತಿ, ಲಿಂಗಾಧಾರಿತ ದೂಷಣೆಗಳೂ ಮತ್ತು ತಾರತಮ್ಯಗಳು ಬೆಳಕಿಗೆ ಬಂದೊಡನೆಯೇ ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳಲು ಆಳ್ಮೆಗಾರರರು ತಮ್ಮ ಅಧಿಕಾರವನ್ನು ಬಳಸಿ ಪ್ರಜಾಸತ್ತೆಯ ಸಾರ್ವಭೌಮತೆಯನ್ನು ಎತ್ತಿ ಹಿಡಿಯಬೇಕು. ಕಷ್ಟ ಕಾಲದಲ್ಲಿ ದನಿಯಿಲ್ಲದವರ, ಧಮನಿತರ ಪರವಾಗಿ ನಿಲ್ಲದೇ ಹೋಗುವ ಆಳ್ಮೆಗಾರರ ಸಾಮಾಜಿಕ ಬದ್ಧತೆಯೂ ಪ್ರಶ್ನಾರ್ಹವಾದದ್ದು.

ಇಂತಹ ಮನಸ್ಥಿತಿಯನ್ನು ಕುರಿತು ನೆನದಾಗಲೆಲ್ಲ
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ
ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ
ಎಂಬ ಅಣ್ಣನ ಕುಹಕ ನೆನಪಿಗೆ ಬರುತ್ತದೆ.

ವಸ್ತುನಿಷ್ಠ ಮತ್ತು ರಚನಾತ್ಮಕ ವಿಮರ್ಶೆಯನ್ನು ಕೈಬಿಟ್ಟು ಸರ್ಕಾರದ ಧ್ವನಿವರ್ಧಕವಾದ ಮಾಧ್ಯಮಗಳಿಗೆ ಅಂದು ಸಂವಿಧಾನ ರಚನಾ ಸಭೆಯಲ್ಲಿ ಉಲ್ಲೇಖಿಸಿದಂತೆ “ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳ ಸ್ವೇಚ್ಛಾಚಾರದ ಬಳಕೆ ಒಳಿತಿಗಿಂತಲೂ ಕೆಡುಕನ್ನು ಮಾಡಬಲ್ಲದು ಎಂಬ ಅಂಬೇಡ್ಕರ್ ಅವರ ನಿಲುವು ಎಲ್ಲಾ ಕಾಲಕ್ಕೂ ಸಲ್ಲುತ್ತದೆ. ತನ್ನ ಪಾಲಿನ ನೈತಿಕ ಹೊಣೆಗಾರಿಕೆಯನ್ನು ಮನಗಾಣದೇ, ಅಂಕೆ ಮೀರಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಬಳಸುವ ಮಾಧ್ಯಮಗಳು ಮತ್ತು ಪ್ರಜೆಗಳ ಮಹಾಮೌನವೇ ಪ್ರಜಾಪ್ರಭುತ್ವದ ಮಹಾಪಾತಕಿಗಳು. ಇದನ್ನು  ಅರಿಯದೇ ಹೋದರೆ ನಾವೆಲ್ಲರೂ ನಾಗರಿಕತೆಯ ತಿರುಗು ಚಕ್ರಕ್ಕೆ ತಡೆದಿಮ್ಮೆಯಾಗಬಲ್ಲೆವು! .

ಕೆ.ಬಿ.ಕೆ.ಸ್ವಾಮಿ

(ಲೇಖಕರು ಯುವ ಬರಹಗಾರರು. ಅಭಿಪ್ರಾಯಗಳು ವಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...