Homeಮುಖಪುಟಕೇರಳ ಐತಿಹಾಸಿಕ ನಿರ್ಧಾರ: ದೇವಸ್ವಂ( ಮುಜರಾಯಿ ಇಲಾಖೆ) ಸಚಿವರಾಗಿ ದಲಿತ ಸಮುದಾಯದ ಶಾಸಕ ಆಯ್ಕೆ

ಕೇರಳ ಐತಿಹಾಸಿಕ ನಿರ್ಧಾರ: ದೇವಸ್ವಂ( ಮುಜರಾಯಿ ಇಲಾಖೆ) ಸಚಿವರಾಗಿ ದಲಿತ ಸಮುದಾಯದ ಶಾಸಕ ಆಯ್ಕೆ

- Advertisement -
- Advertisement -

ಇತ್ತೀಚೆಗೆ ಕೇರಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಒಕ್ಕೂಟ ಭರ್ಜರಿ ವಿಜಯ ಸಾಧಿಸಿದೆ. ಇದೀಗ ರಾಜ್ಯದಲ್ಲಿ ಎಡಪಂಥೀಯವ ಸರ್ಕಾರ ಸತತವಾಗಿ ಎರಡನೆ ಬಾರಿಗೆ ಅಧಿಕಾರಕ್ಕೆ ಹಿಡಿಯುತ್ತಿದೆ. ಪಿಣರಾಯಿ ವಿಜಯನ್ ಅವರ ಎರಡನೇ ಅವಧಿಯ ಸರ್ಕಾರವು ದೇವಸ್ವಂ ಇಲಾಖೆ (ಮುಜರಾಯಿ ಇಲಾಖೆ)ಗೆ ಚೆಲಕ್ಕರ ಕ್ಷೇತ್ರದ ಶಾಸಕರಾಗಿರುವ ದಲಿತ ನಾಯಕ ಕೆ. ರಾಧಾಕೃಷ್ಣನ್ ಅವರನ್ನು ಸಚಿವರನ್ನಾಗಿ ನೇಮಿಸುವ ಮೂಲಕ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ.

1996 ರಲ್ಲಿ ಇ.ಕೆ.ನಯನಾರ್ ಅವರ ಸಂಪುಟದಲ್ಲಿ ಎಸ್‌ಸಿ/ಎಸ್‌ಟಿ ಅಭಿವೃದ್ಧಿ ಸಚಿವರಾಗಿದ್ದ ಪರಿಶಿಷ್ಟ ಜಾತಿಗೆ ಸೇರಿರುವ ಕೆ. ರಾಧಾಕೃಷ್ಣನ್ ಅವರು ಪ್ರಸ್ತುತ ಸಿಪಿಎಂ ಕೇಂದ್ರ ಸಮಿತಿ ಸದಸ್ಯರಾಗಿದ್ದು, ದಲಿತ ಶೋಷನ್ ಮುಕ್ತಿ ಮಂಚ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.

ಇದನ್ನೂಓದಿ: ಕಳೆದ ಬಾರಿಗಿಂತ ಕೊರೊನಾ ಆರ್ಥಿಕ ಪ್ಯಾಕೇಜ್ ಪರಿಹಾರ ಮೊತ್ತ ಕಡಿತಗೊಳಿಸಿದ ರಾಜ್ಯ ಸರ್ಕಾರ

2001, 2006 ಮತ್ತು 2011 ರಲ್ಲಿ ಚೆಲಕ್ಕರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಕೆ. ರಾಧಾಕೃಷ್ಣ 2001 ರಲ್ಲಿ ಮುಖ್ಯ ವಿಪ್ ಮತ್ತು 2006 ರಲ್ಲಿ ವಿಧಾನಸಭಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು.

2016 ರ ಚುನಾವಣೆಯಲ್ಲಿ ಅವರು ಸ್ಪರ್ಧಿಸಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಪಕ್ಷವು ಅವರನ್ನು ಚೆಲಕ್ಕರ ಕ್ಷೇತ್ರದಿಂದ ಮತ್ತೇ ಕಣಕ್ಕಿಳಿಸಿತ್ತು. ಪ್ರಸ್ತುತ ಸಚಿವ ಸಂಪುಟದಲ್ಲಿ ಅವರಿಗೆ ದೇವಸ್ವಂ, ಸಂಸದೀಯ ವ್ಯವಹಾರಗಳು, ಎಸ್‌ಸಿ / ಎಸ್‌ಟಿ ಅಭಿವೃದ್ಧಿ ಖಾತೆಗಳನ್ನು ನೀಡಲಾಗಿದೆ.

21 ಸದಸ್ಯರಿರುವ ಕೇರಳ ಸಚಿವ ಸಂಪುಟವು ಮೇ 20 ರ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದೆ. ಬೇಪುರ್‌‌ ಕ್ಷೇತ್ರದಿಂದ ಮೊದಲ ಆಯ್ಕೆಯಾಗಿರುವ ಡಿವೈಎಫ್‌ಐ ರಾಷ್ಟ್ರಾಧ್ಯಕ್ಷ ಪಿ.ಎ. ಮೊಹಮ್ಮದ್ ರಿಯಾಜ್ ಲೋಕೋಪಯೋಗಿ ಇಲಾಖೆ ಸಚಿವರಾಗಿ ಆಯ್ಕೆಯಾಗಿದ್ದು, ಕೆ.ಎನ್. ಬಾಲಗೋಪಾಲ್ ಅವರು ಹೊಸ ಹಣಕಾಸು ಸಚಿವರಾಗಲಿದ್ದಾರೆ.

ಮತ್ತೊಬ್ಬ ಮಹಿಳಾ ಶಾಸಕಿ ಆರ್. ಬಿಂದು ಅವರು ಕೇರಳದ ಹೊಸ ಉನ್ನತ ಶಿಕ್ಷಣ ಸಚಿವರಾಗಲಿದ್ದಾರೆ. ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ಕೇರಳದ ಎಡ ಪಕ್ಷಗಳು ಹೊಸಬರಿಗೆ, ಯುವಕರಿಗೆ ಮತ್ತು ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಿದ್ದವು. ಹಲವಾರು ಕಡೆ ಮಹಿಳೆಯರಿಗೇ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಸ್ಥಾನ ಅಥವಾ ಮೇಯರ್ ಸ್ಥಾನ ನೀಡಿದ್ದವು.

ಇದನ್ನೂಓದಿ: ಕೇರಳ ಸಂಪುಟದಿಂದ ಶೈಲಜಾ ಟೀಚರ್ ಕೈಬಿಟ್ಟಿದ್ದು ಏಕೆ? ಅವರೇ ಸಿಎಂ ಆಗಬೇಕಿತ್ತಲ್ಲವೆ?: ಜಾಲತಾಣದಲ್ಲಿ ಭಾರೀ ಚರ್ಚೆ

ಆರೋಗ್ಯ ಸಚಿವರಾಗಿ ಶೈಲಜಾ ಅವರೇ ಮುಂದುವರೆಯಬೇಕಿತ್ತು ಎಂಬ ವಾದಗಳ ನಡುವೆ, ಅರಣ್ಮುಲ ಕ್ಷೇತ್ರದ ಶಾಸಕಿ ವೀಣಾ ಜಾರ್ಜ್ ಅವರನ್ನು ಆರೋಗ್ಯ ಸಚಿವರಾಗಿ ಆಯ್ಕೆ ಮಾಡಲಾಗಿದೆ.

ಉಳಿದಂತೆ ಸಚಿವರ ಪಟ್ಟಿ ಕೆಳಗಿನಂತಿದೆ.

  1. ಪಿಣರಾಯಿ ವಿಜಯನ್ – ಸಾರ್ವಜನಿಕ ಆಡಳಿತ, ಗೃಹ, ವಿಜಿಲೆನ್ಸ್‌, ಐಟಿ, ಪರಿಸರ
  2. ಕೆ.ಎನ್. ಬಾಲಗೋಪಾಲ್ – ಹಣಕಾಸು
  3. ವೀಣಾ ಜಾರ್ಜ್ – ಆರೋಗ್ಯ
  4. ವಿ ಶಿವಂಕುಟ್ಟಿ – ಶಿಕ್ಷಣ, ಕಾರ್ಮಿಕ
  5. ಪಿ ರಾಜೀವ್ – ಕೈಗಾರಿಕೆ
  6. ಕೆ ರಾಧಾಕೃಷ್ಣನ್ – ದೇವಸ್ವಂ, ಸಂಸದೀಯ ವ್ಯವಹಾರಗಳು, ಎಸ್‌ಸಿ / ಎಸ್‌ಟಿ ಅಭಿವೃದ್ಧಿ
  7. ಆರ್ ಬಿಂದು – ಉನ್ನತ ಶಿಕ್ಷಣ
  8. ಆಂಟನಿ ರಾಜು – ಸಾರಿಗೆ
  9. ಎಂ.ವಿ.ಗೋವಿಂದನ್ – ಸ್ಥಳೀಯ ಸ್ಥಂಸ್ಥಗಳು, ಅಬಕಾರಿ
  10. ಪಿಎ ಮೊಹಮ್ಮದ್ ರಿಯಾಸ್ – ಪಿಡಬ್ಲ್ಯೂಡಿ, ಪ್ರವಾಸೋದ್ಯಮ
  11. ವಿ.ಎನ್.ವಾಸವನ್ – ಸಹಕಾರ, ನೋಂದಣಿ
  12. ಕೆ. ಕೃಷ್ಣನ್‌ಕುಟ್ಟಿ – ವಿದ್ಯುತ್
  13. ಅಹಮದ್ ದೇವರ್‌‌ಕೋವಿಲ್ – ಬಂದರು
  14. ಸಾಜಿ ಚೆರಿಯನ್ – ಮೀನುಗಾರಿಕೆ, ಸಂಸ್ಕೃತಿ
  15. ವಿ. ಅಬ್ದುರಹಿಮನ್ – ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಎನ್‌ಆರ್‌ಐ
  16. ಜೆ. ಚಿಂಚು ರಾಣಿ – ಪಶುಸಂಗೋಪನೆ, ಡೈರಿ
  17. ಎ.ಕೆ. ಸಸೀಂದ್ರನ್- ಅರಣ್ಯ
  18. ಪಿ. ಪ್ರಸಾದ್- ಕೃಷಿ
  19. ರೋಶಿ ಅಗಸ್ಟೀನ್ – ಜಲ ಸಂಪನ್ಮೂಲಗಳು
  20. ಕೆ. ರಾಜನ್ – ಕಂದಾಯ
  21. ಜಿ. ಆರ್. ಅನಿಲ್- ನಾಗರಿಕ ಸರಬರಾಜು

ಇದನ್ನೂಓದಿ: ಕೇರಳದ ‘ಆರೋಗ್ಯ’ ಮತ್ತೆ ಮಹಿಳೆಯ ಕೈಗೇ!: ಟೀಚರ್ ಜಾಗಕ್ಕೆ ಬಂದರು ಪತ್ರಕರ್ತೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....