Homeಮುಖಪುಟಕೇರಳ ಸಂಪುಟದಿಂದ ಶೈಲಜಾ ಟೀಚರ್ ಕೈಬಿಟ್ಟಿದ್ದು ಏಕೆ? ಅವರೇ ಸಿಎಂ ಆಗಬೇಕಿತ್ತಲ್ಲವೆ?: ಜಾಲತಾಣದಲ್ಲಿ ಭಾರೀ ಚರ್ಚೆ

ಕೇರಳ ಸಂಪುಟದಿಂದ ಶೈಲಜಾ ಟೀಚರ್ ಕೈಬಿಟ್ಟಿದ್ದು ಏಕೆ? ಅವರೇ ಸಿಎಂ ಆಗಬೇಕಿತ್ತಲ್ಲವೆ?: ಜಾಲತಾಣದಲ್ಲಿ ಭಾರೀ ಚರ್ಚೆ

ಹೊಸಬರಿಗೆ ಅವಕಾಶ ನೀಡುತ್ತಿದ್ದೇವೆ. ಇದು ನಮ್ಮ ಪಕ್ಷದ ನೀತಿ ನಿರ್ಧಾರ. ಇದರಿಂದ ನನಗ್ಯಾವ ಬೇಸರವಿಲ್ಲ ಎಂದು ಕೆ.ಕೆ ಶೈಲಜಾರವರು ಪ್ರತಿಕ್ರಿಯಿಸಿದ್ದಾರೆ.

- Advertisement -
- Advertisement -

ಕೇರಳದಲ್ಲಿ ಭರ್ಜರಿ ಜಯ ಸಾಧಿಸಿದ ಎಲ್‌ಡಿಎಫ್ ಮೈತ್ರಿ ಕೂಟದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಸಂಪುಟವನ್ನು 11 ಹೊಸ ಮುಖಗಳೊಂದಿಗೆ ಪರಿಷ್ಕರಿಸಿದ್ದಾರೆ. ವಿಜಯನ್ ಬಿಟ್ಟರೆ ಎಲ್ಲರೂ ಹೊಸಬರೇ. ಆದರೆ ಕೋವಿಡ್ ನಿರ್ವಹಣೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಶೈಲಜಾ ಟೀಚರ್ ಅವರನ್ನೂ ಕೈಬಿಟ್ಟಿದ್ದು ಈಗ ಟೀಕೆಗೆ ಕಾರಣವಾಗಿದೆ.

‘ಇದು ಪಾರ್ಟಿಯ ನಿರ್ಧಾರ’ ಎಂದು ಹೇಳುವ ಗುಂಪುಗಳು, ‘ಅವರಿಗೆ ಚೀಫ್ ವಿಪ್ ಸ್ಥಾನ ನೀಡಲಾಗಿದೆ. ಹೊಸಬರಿಗೆ ಸಚಿವ ಸ್ಥಾನ ನೀಡಲಾಗಿದೆ ಎನ್ನುತ್ತಿದ್ದರೆ, ಇದನ್ನು ವಿರೋಧಿಸುವವರು, ಇದು ಎಲ್ಲ ಪಕ್ಷಗಳಂತೆ ಸಿಪಿಎಂನಲ್ಲಿ ಅಂತರ್ಗತವಾಗಿರುವ ಪುರುಷಾಧಿಪತ್ಯದ ಲಕ್ಷಣ. ಎಲ್ಲ ಬದಲು ಮಾಡುವುದಿದ್ದರೆ ಪಿಣರಾಯಿ ವಿಜಯನ್ ಅವರನ್ನೂ ಬದಲಿಸಬೇಕಿತ್ತು’ ಎಂದು ಕೆಲವರು ಹೇಳಿದರೆ, ಇನ್ನೂ ಹಲವರು ಶೈಲಜಾ ಟೀಚರ್ ಅವರಿಗೇ ಮುಖ್ಯಮಂತ್ರಿ ಸ್ಥಾನ ನೀಡಬೇಕಾಗಿತ್ತು ಎನ್ನುತ್ತಿದ್ದಾರೆ.

ಈ ಕುರಿತು ಎನ್‌ಡಿಟಿವಿ ಜೊತೆ ಮಾತನಾಡಿ ಕೆ.ಕೆ ಶೈಲಜಾರವರು “ಇದು ನಮ್ಮ ಪಕ್ಷದ ನೀತಿ ನಿರ್ಧಾರ. ಆದ್ದರಿಂದ ಆ ನಿರ್ಧಾರದ ಪ್ರಕಾರ, ನಾನು ಸಹ ತ್ಯಜಿಸಲು ನಿರ್ಧರಿಸಿದ್ದೇನೆ. ಇದರಿಂದ ನನಗ್ಯಾವ ಬೇಸರವಿಲ್ಲ. ಹೊಸಬರಿಗೆ ಅವಕಾಶ ನೀಡುತ್ತಿದ್ದೇವೆ” ಎಂದಿದ್ದಾರೆ.

ಲೇಖಕರಾದ ಕೆ.ಪಿ. ಸುರೇಶ್, ಪೀರ್ ಭಾಷಾ, ಆದಿತ್ಯ ಭಾರದ್ವಾಜ್ ಮುಂತಾದವರು ಸಿಪಿಎಂ ನಡೆಯನ್ನು ಟೀಕಿಸಿದ್ದರೆ, ಮುರಳಿ ಕೃಷ್ಣ ಮುಂತಾದವರು, ಅದು ಪಕ್ಷದ ಆಂತರಿಕ ತೀರ್ಮಾನ ಎಂದು ಸಮರ್ಥಿಸಿಕೊಂಡಿದ್ದಾರೆ.

‘ಎಲ್ಲವನ್ನೂ ಬದಲು ಮಾಡುವುದಿದ್ದರೆ ಮುಖ್ಯಮಂತ್ರಿಯನ್ನೂ ಬದಲಿಸಬೇಕಿತ್ತು’ ಎಂದು ಕೆ.ಪಿ ಸುರೇಶ್ ಫೇಸ್‌ಬುಕ್‌ನಲ್ಲಿ ಬರೆದಿದ್ದು ಈ ಕುರಿತಾಗಿ ಅವರ ವಾಲ್‌ನಲ್ಲಿ ಜೋರಾದ ಚರ್ಚೆ ನಡೆದಿದೆ.

ಪತ್ರಕರ್ತ ಆದಿತ್ಯ ಭಾರದ್ವಾಜ್ ಕೂಡ ಶೈಲಜಾರನ್ನು ಕೈ ಬಿಟ್ಟ ಕ್ರಮವನ್ನು ವಿರೋಧಿಸುತ್ತ, ಎಲ್ಲ ಪಕ್ಷಗಳಲ್ಲೂ ಇರುವ ಇಂತಹ ಸ್ವಹಿತಾಸಕ್ತಿ ನಿಲುವುಗಳನ್ನು ನಾವು ವಿರೋಧಿಸಬೇಕು. ಕೇವಲ ಮೋದಿ-ಶಾಗಳನ್ನಷ್ಟೇ ಅಲ್ಲ, ಸ್ಟಾಲಿನ್, ಮಮತಾ ಮತ್ತು ಪಿಣರಾಯಿ ಅಂತಹ ಎಲ್ಲರ ಏಕಸ್ವಾಮ್ಯವನ್ನು ವಿರೋಧಿಸಬೇಕು’ ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ.

“ಕೇರಳದಲ್ಲಿ ಪಕ್ಷರಾಜಕಾರಣ, ವ್ಯಕ್ತಿ ರಾಜಕಾರಣವಲ್ಲ. #ಕೇರಳ_ರಾಜಕೀಯ_ಮಾದರಿ” ಎಂದು ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಎಡಪಂಥಿಯ ಹಿನ್ನೆಲೆಯ ಚಳುವಳಿಗಳಿಂದಲೇ ಬಂದ ಬರಹಗಾರ ಬಿ. ಪೀರ್‌ಬಾಷಾ, ‘ಶೈಲಜಾ ಟೀಚರ್ ಮುಖ್ಯಮಂತ್ರಿಯಾಗಿದ್ದರೆ ಈ ಸ್ಥಾನಕ್ಕೂ ಒಬ್ಬ ಹೊಸಬರು ಬಂದಂತಾಗುತ್ತಿತ್ತು. ಅವರಿಗೂ ರಾಜ್ಯ ಪರ್ಯಾಯ/ ಹೊಸ ತಲೆಮಾರಿನ ನಾಯಕತ್ವ ಬೆಳೆಸಲು ಅವಕಾಶ ನೀಡಿದಂತಾಗುತ್ತಿತ್ತು. ಪಿಣರಾಯ್ ವಿಜಯನ್ ಅವರು ರಾಜ್ಯ ಸರಕಾರದ ಪ್ರಧಾನ ಉಸ್ತುವಾರಿ/ ಮಾರ್ಗದರ್ಶಕರಾಗಿದ್ದು ರಾಷ್ಟ್ರೀ ಯ ಮಟ್ಟದಲ್ಲಿ ಅಥವಾ ದಕ್ಷಿಣ ಭಾರತ ಮಟ್ಟಕ್ಕಾದರೂ ಅಧಿಕಾರ ರಾಜಕಾರಣದ ನೆಲೆಯಲ್ಲಿ ಪಕ್ಷವನ್ನು ಸಂಘಟಿಸಲು ಜವಾಬ್ದಾರಿ ವಹಿಸಿಕೊಂಡಿದ್ದರೆ ನಿರಾಶೆ ಕವಿಯುತ್ತಿರುವ ರಾಷ್ಟ್ರೀಯ ಸಂದರ್ಭದಲ್ಲಿ ಹೊಸ ಸಾಧ್ಯತೆಯೊಂದು ತೆರೆದುಕೊಳ್ಳುವ ಅವಕಾಶವಿತ್ತು’ ಎಂದಿದ್ದಾರೆ.

ಮುಂದುವರಿದು “ಜನ ಎಂದರೆ ಪಕ್ಷದ ಸದಸ್ಯರು ಮಾತ್ರ ಎಂದೇ ಪರಿಗಣಿಸಿದಲ್ಲಿ ‘ಜನತಾ ಪ್ರಜಾಪ್ರಭುತ್ವ’ ವೆಂಬುದು ದ್ವೀಪ‌ ಅಥವಾ ನಡುಗಡ್ಡೆ ಮಾತ್ರವಷ್ಟೆ.
ಪಿಣರಾಯರ ಮರು ಆಯ್ಕೆ, ಶೈಲಜಾರನ್ನು ಬಿಟ್ಟಿದ್ದಕ್ಕೆ ಅವರದೇ ಆದ ಕಾರಣ ವಿಶ್ಲೇಷಣೆಗಳಿರಬಹುದು. ಆದರೆ “ಬೇರೆಯವರ ಉಸಾಬರಿಯೇ ಬೇಡ, ಪ್ರತಿಕ್ರಿಯಿಸುವವರ ಅನಗತ್ಯ ಆಸಕ್ತಿ, ಧಾವಂತ, ಇವುಗಳನ್ನು ನಾವು ಲೆಕ್ಕಕ್ಕೇ ತಗಳ್ಳಲ್ಲ, ಒಟ್ಟಿನಲ್ಲಿ “ಇವರ್ಯಾರು ಹೇಳೋಕೆ” ಎಂಬ ದನಿ ಇವರ ಬರೆಹದಲ್ಲಿದೆ. ಇದು ದಾರ್ಷ್ಟ್ಯದ ಮಾತಾಯಿತು.
ವ್ಯಕ್ತಿಯೊಬ್ಬರ ನಿಲುವಾಗಿದ್ದರೆ “ಆತ್ಮಹತ್ಯೆ ಮಾಡಿಕೊಳ್ಳುವುದಿದ್ದರೆ ನಿಮ್ಮಿಷ್ಟ” ಎನ್ನಬಹುದಿತ್ತು. ಆದರೆ ಜನ ಚಳುವಳಿಯ ನಾಯಕತ್ವ ಹೀಗೆ ಮಾತಾಡುವುದನ್ನು ಕಠಿಣ ಶಬ್ದಗಳಿಂದಲೇ ಇದಿರುಗೊಳ್ಳುವುದು ಅನಿವಾರ್ಯವೇನೋ. ಇಂತಹ ಸಂದರ್ಭ ಮುಂದುವರಿಯದಿರಲಿ.
ಬೇಸರದಿಂದ ಇಷ್ಟನ್ನು ಬರೆಯುತ್ತಿದ್ದೇನೆ, ವಿಷಾದಗಳೊಂದಿಗೆ… ಎಂದು ಪೀರ್‌ಭಾಷಾ ಅಭಿಪ್ರಾಯಪಟ್ಟಿದ್ದಾರೆ.

ಆದಿತ್ಯ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿರುವ ಮುರುಳಿ ಕೃಷ್ಣ ಅವರು, ‘ಎಲ್ಲ ಹೊಸಬರಿಗೂ ಅವಕಾಶ ನೀಡಿದ್ದರಿಂದ ಶೈಲಜಾ ಅವರನ್ನು ಸಹಜವಾಗಿ ಕೈ ಬಿಡಲಾಗಿದೆ. ಆದರೆ ಅವರಿಗೆ ಚೀಫ್ ವಿಪ್ ಸ್ಥಾನ ನೀಡಲಾಗಿದೆ’ ಎಂದಿದ್ದಾರೆ.

“ಶೈಲಜಾ ಟೀಚರ್ ರಾಷ್ಟ್ರ ರಾಜಕಾರಣಕ್ಕೆ ಬರಲಿ. ನಮಗೆಲ್ಲರಿಗೆ ಪ್ರಯೋಜನವಾಗಲಿ” ಎಂದು ವೈದ್ಯರಾದ ಸಂದೀಪ ಸಮತಡ್ಕ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.

ಕೇರಳವಲ್ಲದೇ ದೇಶದ ಎಲ್ಲ ರಾಜ್ಯಗಳ ಜನರೂ ಶೈಲಜಾ ಅವರು ಆರೋಗ್ಯ ಸಚಿವರಾಗಿ ಮಾಡಿದ ಕೆಲಸವನ್ನು ಮೆಚ್ಚಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೂ ಅದನ್ನು ಮೆಚ್ಚಿದೆ. ಅವರು ಈ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಿ ಮುಂದುವರೆಯಬೇಕಿತ್ತು ಅಥವಾ ಅವರೇ ಸಿಎಂ ಆಗಬೇಕಿತ್ತು ಎಂಬ ಸಮರ್ಥನೆಗಳು ಕೇಳಿ ಬರುತ್ತಿವೆ.

ವಿಚಿತ್ರವೆಂದರೆ, ಕೆಲವು ಬಿಜೆಪಿ ಬೆಂಬಲಿಗರು ಈ ವಿಷಯವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಶೈಲಜಾ ಟೀಚರ್ ಪರ ಪೋಸ್ಟ್‌ಗಳನ್ನು ಹಾಕುತ್ತಿರುವುದು.


ಇದನ್ನೂ ಓದಿ:  ಪಿಣರಾಯಿ 2.0 – ಸಿಪಿಐ(ಎಂ)ನಿಂದ ಹೊಸ ಮುಖಗಳಿಗೆ ಮಂತ್ರಿ ಸ್ಥಾನ; ಕೆ.ಕೆ. ಶೈಲಜಾ ಔಟ್‌!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸೈಲಜ ಟೀಚರನ್ನು ಕೈ ಬಿಟ್ಟಿರೋದು ತುಂಬಾನೆ ಬೇಸರದ ವಿಷಯ ಪಕ್ಷದಲ್ಲಿ ನಾನು ೨೦ವರ್ಷ ದುಡಿದಿದ್ದೇನೆ. ಪಕ್ಷದ ತೀರ್ಮಾನವೇ ಅಂತಿಮ.
    ಟೀಚರ್ ರವರ ಮತ್ತಷ್ಟು ಗಟ್ಟಿಯಾಗಿ ಕೆಲಸ ಮಾಡುವುದನ್ನ ಪಕ್ಷ ಬೇಕೊ ಬೇಡವೋ ಮತ್ತೊಮ್ಮೆ ಚೆರ್ಚಿಸಿದರೆ ಒಳಿತು ಎಂದು ನನ್ನ ಅಭಿಪ್ರಾಯ.

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...